Connect with us

    LATEST NEWS

    ಮನೆಕೆಲಸ ಮಾಡಿ ಪತ್ರ ಬರೆದಿಟ್ಟ ವಿಚಿತ್ರ ಕಳ್ಳ – ನೋಡಿದ್ರೆ ನೀವೆ ಶಾಕ್ ಆಗ್ತೀರ !!

    Published

    on

    ಮಂಗಳೂರು/ಲಂಡನ್: ಕಳ್ಳನೊಬ್ಬ ಮನೆಗೆ ನುಗ್ಗಿ ಕಳ್ಳತನ ಮಾಡುವ ಬದಲು ಮನೆ ಕೆಲಸ ಮಾಡಿ, ಊಟ ತಯಾರಿಸಿ ಪತ್ರ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ಲಂಡನ್‌ನ ಪ್ರತಿಷ್ಠಿತ  ನಗರದಲ್ಲಿ ನಡೆದಿದೆ.


    ಮನೆಗಳ್ಳತನದ ಬಗ್ಗೆ ಪ್ರತಿನಿತ್ಯ ಹಲವಾರು ದೂರುಗಳು ದಾಖಲಾಗುತ್ತಿರುತ್ತವೆ. ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಸೇರಿದಂತೆ ಕೈಗೆ ಸಿಗೋ ಬೆಲೆಬಾಳುವ ವಸ್ತುಗಳನ್ನು ಸಹ ಹೊತ್ತಯ್ಯುವುದನ್ನು ನೋಡುತ್ತಿರುತ್ತೇವೆ. ಆದರೆ ಇದೊಂದು ವಿಚಿತ್ರ ಘಟನೆಯೇ ಸರಿ.
    ಬ್ರಿಟನ್‌ ಕಳ್ಳನೊಬ್ಬ ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ, ಪಾತ್ರೆ ಮತ್ತು ಬಟ್ಟೆಯನ್ನು ತೊಳೆದಿದ್ದಾನೆ. ನಂತರ ಮನೆಯಲ್ಲಿನ ಎಲ್ಲಾ ಕೆಲಸಗಳನ್ನು ಮಾಡಿ, ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾನೆ.
    ಪತ್ರದಲ್ಲಿ ಅಂತಹದ್ದು ಏನಿತ್ತು?
    ಭಯಭೀತಳಾಗಿದ್ದ ಮಹಿಳೆ ನಿಧಾನಕ್ಕೆ ಪತ್ರವನ್ನು ತೆರೆದಾಗ ಅವಳಿಗೆ ವಿಸ್ಮಯವೇ ಕಾದಿತ್ತು. ‘ಚಿಂತೆ ಮಾಡಬೇಡಿ, ಖುಷಿಯಾಗಿ ಹೊಟ್ಟೆ ತುಂಬಾ ಊಟ ಮಾಡಿ ಆರಾಮಾಗಿರಿ’ ಎಂದು ಬರೆದಿರುವುದನ್ನು ಕಂಡು ಅಚ್ಚರಿಗೊಂಡುಳು.
    ಕಳ್ಳ ಯಾರು ಗೊತ್ತಾ?
    36 ವಯಸ್ಸಿನ ಡೇಮಿಯನ್ ವೊಜನಿಲೊವಿಚ್ ಕಳ್ಳನೆಂಬುವುದು ಖಚಿತವಾಗಿದೆ. ಹಾಗಾಗಿ ಕಾರ್ಡಿಫ್ ನ್ಯಾಯಾಲಯ ಕಳ್ಳನಿಗೆ 22 ತಿಂಗಳ ಜೈಲು ಶಿಕ್ಷೆ ನೀಡಿ ಆದೇಶಿಸಿದೆ. ಮಹಿಳೆ ಹೇಳಿಕೆ ಪ್ರಕಾರ, “ಕಳ್ಳತನ ನಡೆದ ಎರಡು ವಾರದ ಬಳಿಕ ಕಳ್ಳನನ್ನ ಹಿಡಿಯಲಾಯ್ತು. ಕಳ್ಳ ಸಿಗೋವರೆಗೂ ನನ್ನಲ್ಲಿ ಒಂದು ರೀತಿಯ ವಿಚಿತ್ರ ಭಯ ಉಟಾಗಿತ್ತು. ಈ ರೀತಿಯ ಅನುಭವ ಇದೇ ಮೊದಲ ಬಾರಿ ಆಗಿತ್ತು” ಎಂದು ಹೇಳಿದ್ದಾರೆ.
    ಕಳ್ಳನ ಮನೆಕೆಲಸ ಹೇಗಿತ್ತು ಗೊತ್ತಾ?
    ಮಹಿಳೆ ಇಲ್ಲದ ವೇಳೆ ಮನೆಯೊಳಗೆ ಬಂದ ಕಳ್ಳ ಡೇಮಿಯನ್ ವೊಜನಿಲೊವಿಚ್, ಮನೆಗೆಲಸ ಮಾಡಿದ್ದಾನೆ. ಬಂದಿದ್ದ ಆರ್ಡರ್ ತೆಗೆದುಕೊಂಡು ಅನ್‌ಬಾಕ್ಸ್ ಮಾಡಿ ಶೂಗಳನ್ನು ಅವುಗಳ ಸ್ಥಾನದಲ್ಲಿರಿಸಿ, ಪ್ಯಾಕಿಂಗ್ ಕವರ್ ಡಸ್ಟ್‌ಬಿನ್‌ಗೆ ಹಾಕಿದ್ದಾನೆ. ಅಡುಗೆಮನೆಯಲ್ಲಿದ್ದ ಎಲ್ಲಾ ಪಾತ್ರೆಗಳನ್ನು ತೊಳೆದು ಕ್ರಮಬದ್ಧವಾಗಿ ಜೋಡಿಸಿದ್ದಾನೆ. ನಂತರ ಕೊಳೆಯಾಗಿದ್ದ ಬಟ್ಟೆಗಳನ್ನು ತೊಳೆದಿದ್ದಾನೆ. ಶಾಪಿಂಗ್‌ ಬ್ಯಾಗ್‌ನಲ್ಲಿದ್ದ ಎಲ್ಲಾ ಆಹಾರ ಸಾಮಾಗ್ರಿಗಳನ್ನು ಫ್ರಿಡ್ಜ್‌ನಲ್ಲಿ ಸರಿಯಾಗಿರಿಸಿದ್ದಾನೆ. ನಂತರ ಪಕ್ಷಿಗಳಿಗೆ ಕಾಳುಗಳನ್ನು ಹಾಕಿ, ಮನೆಯಲ್ಲಿದ್ದ ಪ್ಲಾಂಟ್‌ ಕುಂಡದಲ್ಲಿನ ಮಣ್ಣು ಸಡಿಲಗೊಳಿಸಿ ನೀರು ಹಾಕಿ ಪೋಷಿಸಿದ್ದಾನೆ. ಕೊನೆಗೆ ಮನೆಯ ನೆಲವನ್ನು ಸ್ವಚ್ಛವಾಗಿ ತೊಳೆದಿದ್ದಾನೆ.
    ಮನೆಯಿಂದ ಹೊರಡುವ ಮುನ್ನ ಅಡುಗೆ ತಯಾರಿಸಿದ್ದಾನೆ. ಮಹಿಳೆ ಮನೆಗೆ ಬಂದಾಗ ಡೈನಿಂಗ್ ಟೇಬಲ್ ಮೇಲೆ ಆಹಾರದ ಗ್ಲಾಸ್‌ನಲ್ಲಿ ರೆಡ್ ವೈನ್ ಹಾಕಿ, ಪಕ್ಕದಲ್ಲಿಯೇ ಬಾಟೆಲ್ ಇರಿಸಲಾಗಿತ್ತು. ಲಿವಿಂಗ್ ರೂಮ್‌ ಮೇಜಿನ ಮೇಲೆ ಸಿಹಿ ತಿಂಡಿಯನ್ನು ಇರಿಸಲಾಗಿತ್ತು. ಇದೆಲ್ಲವನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ. ಪಕ್ಕದ್ಮನೆಯವರು ಯಾರೋ ಬಟ್ಟೆ ತೊಳೆಯುತ್ತಿರೋದು ತಮ್ಮ ಗಮನಕ್ಕೆ ಬಂದಿರೋದರ ಬಗ್ಗೆ ಮಹಿಳೆಗೆ ತಿಳಿಸಿದ್ದಾರೆ.
    ಕಳ್ಳ ಬರೆದಿಟ್ಟ ಚೀಟಿ ನೋಡಿದ ಮಹಿಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆ ನಡೆದ ಬಳಿಕ ಕಳ್ಳನನ್ನು ಬಂಧಿಸಲಾಗಿದೆ. ಆದರೆಯಾಕೆ ಹೀಗೆಲ್ಲಾ ಮಾಡಿದ ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

    LATEST NEWS

    ಹಸೆಮಣೆ ಏರಿದ ಸಹೋದರ ಸಹೋದರಿ…! ಯಾಕೆ ಗೊತ್ತಾ ??

    Published

    on

    ಮಂಗಳೂರು/ಉತ್ತರ ಪ್ರದೇಶ: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎನ್ನುವಂತೆ, ಸರ್ಕಾರದ ಯೋಜನೆಯ ಲಾಭ ಪಡೆಯಲು ಅಣ್ಣ-ತಂಗಿಯೇ ಸಾಮೂಹಿಕ ವಿವಾಹವೊಂದರಲ್ಲಿ ಹಸೆಮಣೆ ಏರಿರುವ ಅಸಹ್ಯ ಘಟನೆ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ.


    ನವವಿವಾಹಿತರಿಗೆ ಸರ್ಕಾರದಿಂದ 35,000 ರೂ. ನೀಡಲಾಗಿದ್ದು, ಆ ಹಣವನ್ನು ಪಡೆಯುವ ದುರಾಸೆಯಿಂದ ಅಣ್ಣ-ತಂಗಿಯೇ ಮದುವೆಯಾಗಿದ್ದಾರೆ. ಸಾಮೂಹಿಕ ವಿವಾಹವಾದರೆ, 10,000 ರೂ ಮೌಲ್ಯದ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ ಮತ್ತು ಮದುವೆಯ ವೆಚ್ಚಕ್ಕಾಗಿ ರೂ 6,000 ನಿಗದಿಪಡಿಸಲಾಗಿದೆ. ಈಗಾಗಲೇ ವಿವಾಹಿತ ದಂಪತಿಗಳು ಮರು ಮದುವೆಯಾಗುವ ಮೂಲಕ ಯೋಜನೆಯ ಲಾಭವನ್ನು ಪಡೆದಿರುವರು ಎಂದು ಕೆಲವರು ಆರೋಪಿಸಿದ್ದಾರೆ.
    ಆದರೆ, ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಸಹೋದರ ಮತ್ತು ಸಹೋದರಿಯರು ಮದುವೆಯಾಗಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಸಮಯದಲ್ಲಿ 217 ಜೋಡಿಗಳು ವಿವಾಹವಾಗಿದೆ. ನಿಜವಾದ ಫಲಾನುಭವಿಗಳನ್ನು ಬೆಂಬಲಿಸಲು ಕಲ್ಯಾಣ ಕಾರ್ಯಕ್ರಮವನ್ನು ರೂಪಿಸಿದ್ದು, ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವ ತಪ್ಪಿತಸ್ಥರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Continue Reading

    LATEST NEWS

    ಎಕ್ಸಿಟ್ ಪೋಲ್‌ ನಿಜವಾದ್ರೆ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಕಾದಿದೆ ಸಂಕಷ್ಟ..!

    Published

    on

    ಅಕ್ಟೋಬರ್ 8 ರಂದು ಹರಿಯಾಣ ಮತ್ತು ಜಮ್ಮು- ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಎಕ್ಸಿಟ್‌ ಪೋಲ್ ಫಲಿತಾಂಶಗಳ ಪ್ರಕಾರ ಎಲ್ಲಾ ಸಂಸ್ಥೆಗಳೂ ಹರಿಯಾಣದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ ಎಂದು ವರದಿ ಮಾಡಿದೆ. ಹಾಗೆ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿ ಮುನ್ನಡೆ ಸಾಧಿಸಲಿದೆ ಎಂದಿದ್ದಾರೆ. ಹಾಗಂತ ಇತ್ತೀಚಿಗೆ ಈ ಸಮೀಕ್ಷೆಗಳೆಲ್ಲವೂ ಹಲವಾರು ಬಾರಿ ಉಲ್ಟಾ ಹೊಡೆದಿದೆ. ಹಾಗೊಂದು ವೇಳೆ ಈ ಭಾರಿಯ ಎಕ್ಸಿಟ್ ಪೋಲ್ ಫಲಿತಾಂಶ ಸರಿ ಆದ್ರೆ ಅದು ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ.

    ಎಲ್ಲಾ ಎಕ್ಸಿಟ್‌ ಪೋಲ್‌ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್ 44 ರಿಂದ 65 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದೆ. 2019 ರಲ್ಲಿ ಬಿಜೆಪಿ ಇಲ್ಲಿ 40 ಸ್ಥಾನ ಪಡೆದುಕೊಂಡಿದ್ದರೆ ಕಾಂಗ್ರೆಸ್ 31 ಸ್ಥಾನ ಪಡೆದುಕೊಂಡಿತ್ತು. ಅಕ್ಟೋಬರ್ 8 ರ ಫಲಿತಾಂಶ ಇದೇ ಎಕ್ಸಿಟ್ ಪೋಲ್ ಪ್ರಕಾರ ಬಂದ್ರೆ ಅದು ರಾಜಕೀಯವಾಗಿ ಬಿಜೆಪಿಗೆ ದೊಡ್ಡ ಹಿನ್ನಡೆ ಆಗುವ ಎಲ್ಲಾ ಲಕ್ಷಣ ಇದೆ. ಯಾಕಂದ್ರೆ ಲೋಕ ಸಭಾ ಚುನಾವಣೆಯಲ್ಲೂ ನಿಚ್ಚಳ ಬಹುಮತ ಪಡೆಯದ ಬಿಜೆಪಿ ಲೋಕಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ಈ ಚುನಾವಣೆಯಲ್ಲೂ ಅದೇ ಹಿನ್ನಡೆ ಅನುಭವಿಸಿದಂತಾಗಲಿದೆ.

    2014 ರಲ್ಲಿ ಮೋದಿ ಅಲೆಯ ಆರಂಭಿಕ ಹಂತದಲ್ಲಿ ಬಿಜೆಪಿ ಹರಿಯಾಣದಲ್ಲಿ ಅಧಿಕಾರ ಹಿಡಿದುಕೊಂಡಿತ್ತು. 2014 ರಲ್ಲಿ ಶೇಕಡಾ 33.3 ಮತಗಳನ್ನು ಪಡೆದು ಬಿಜೆಪಿ 47 ಸ್ಥಾನಗಳನ್ನು ಪಡೆದಿತ್ತು. ಬಳಿಕ 2019 ರಲ್ಲಿ ಕಾಂಗ್ರೆಸ್ ಶೇಕಡಾ 36.5 ಮತಗಳನ್ನು ಪಡೆದಿದ್ದರೂ ಬಿಜೆಪಿ 7 ಸ್ಥಾನ ಕಳೆದುಕೊಂಡು 40 ಸ್ಥಾನಕ್ಕೆ ಕುಸಿದಿತ್ತು. 1987 ಮತ್ತು 2005 ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಇಲ್ಲಿ ಶೇಕಡಾವಾರು ಮತಗಳಿಕೆಯಲ್ಲಿ ಎರಡಂಕಿ ದಾಟಿದ್ದು ದಾಖಲೆಯಾಗಿತ್ತಾದ್ರೂ 2014 ರಲ್ಲಿ ಮೋದಿ ಅಲೆಯಲ್ಲಿ ಅದು 33.3 ಶೇಕಡಾ ಮತಗಳಿಕೆಯೊಂದಿಗೆ ಅಧಿಕಾರ ಹಿಡಿದಿತ್ತು.

    2024 ರ ಎಕ್ಸಿಟ್ ಪೋಲ್ ನಿಜವಾದಲ್ಲಿ ಅದು ಬಿಜೆಪಿ ತನ್ನ ಜನಪ್ರಿಯತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಅನ್ನೋದನ್ನು ತೋರಿಸಲಿದೆ. ರೈತರು , ಅಗ್ನಿವೀರ್ ಮತ್ತು ಕುಸ್ತಿಪಟುಗಳ ವಿಚಾರದಲ್ಲಿ ಬಿಜೆಪಿಯ ನಿರ್ಧಾರಗಳು ಕಾಂಗ್ರೆಸ್‌ಗೆ ವರದಾನವಾಗಿರುವ ಎಲ್ಲಾ ಸಾಧ್ಯತೆ ಇದೆ.

    ಚುನಾವಣೆಗೂ ಕೆಲವು ತಿಂಗಳ ಮೊದಲು ಬಿಜೆಪಿ ಸಿಎಂ ಬದಲಾವಣೆ ಮಾಡಿರುವುದು ಹಾಗೂ ಪಕ್ಷದಲ್ಲಿನ ಬಂಡಾಯಗಳು ಬಿಜೆಪಿಗೆ ದೊಡ್ಡ ಹೊಡೆತ ನೀಡಿರುವ ಸಾಧ್ಯತೆ ಇದೆ. ಶಿಸ್ತಿನ ಪಕ್ಷವಾಗಿ ಹೆಸರು ಮಾಡಿದ್ದ ಬಿಜೆಪಿಗೆ ಹರಿಯಾಣದಲ್ಲಿ ಪಕ್ಷದಲ್ಲಿನ ಅಶಿಸ್ತು ದೊಡ್ಡ ಹೊಡೆತ ನೀಡಿದೆ ಅನ್ನೋದು ಸತ್ಯ.

    ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೂ ಕೂಡ ಪಕ್ಷಕ್ಕೆ ಸಿಎಂ ಹುದ್ದೆ ವಿಚಾರದಲ್ಲಿ ದೊಡ್ಡ ಸವಾಲು ಎದುರಾಗಲಿದೆ. ಈಗಾಗಲೇ ಪಕ್ಷದಲ್ಲಿ ಗುಂಪುಗಾರಿಕೆ ಇದ್ದು, ಅದರ ಶಮನಕ್ಕೆ ಹೈ ಕಮಾಂಡ್ ಹರಸಾಹಸ ಪಡ್ತಾ ಇದೆ. ಇನ್ನು ದಲಿತರೊಬ್ಬರನ್ನು ಸಿಎಂ ಮಾಡಲಿದ್ದಾರೆ ಎಂದು ಕುಮಾರಿ ಸೆಲ್ಜಾ ಹೇಳಿದ್ರೆ , ಹುಡಾ ತನಗೆ ಸಿಎಂ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಹರಿಯಾಣದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಲ್ಲಿ ಮಹಾರಾಷ್ಟ್ರದಲ್ಲೂ ಬಿಜೆಪಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸೀಟು ಹಂಚಿಕೆ ವಿಚಾರದಲ್ಲಿ ಏಕನಾಥ್ ಶಿಂಧೆಯ ಶಿವಸೇನೆಯ ಜೊತೆ ಮಾತುಕತೆಗೆ ತೊಡಕಾಗಬಹುದು. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದ್ದು, ಅದು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮರುಕಳಿಸಬಹುದು.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಎರಡೂ ಪ್ರಮುಖ ಪಕ್ಷಗಳು ಚುನಾವಣಾ ತಯಾರಿಯಲ್ಲಿ ನಿರತವಾಗಿವೆ. ನವೆಂಬರ್ 26ರೊಳಗೆ ಚುನಾವಣೆ ನಡೆಯಬೇಕಿದ್ದು ಶೀಘ್ರವೇ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳಲ್ಲಿ 105 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಬಿಜೆಪಿ 288 ಸ್ಥಾನಗಳ ಪೈಕಿ 160ರಲ್ಲಿ ಸ್ಪರ್ಧಿಸಲು ಬಯಸಿದೆ.

    ಹರಿಯಾಣದ ಎಕ್ಸಿಟ್ ಪೋಲ್‌ ಫಲಿತಾಂಶ ಕಾಂಗ್ರೆಸ್ ಪರವಾಗಿರುವ ಕಾರಣ ರಾಹುಲ್ ಗಾಂಧಿ ಮಹಾರಾಷ್ಟ್ರದತ್ತ ಮುಖ ಮಾಡಿದ್ದಾರೆ. ಸಂವಿಧಾನ ರಕ್ಷಣೆಯ ವಿಚಾರವನ್ನೇ ಮುಂದಿಟ್ಟು ಮಹಾರಾಷ್ಟ್ರದ ಜನರ ಮುಂದೆ ಹೋಗುತ್ತಿದ್ದಾರೆ. ಸೀಟು ಹೊಂದಾಣಿಕೆಯಲ್ಲೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ತನ್ನ ಮೇಲುಗೈ ಉಳಿಸಿಕೊಳ್ಳುವ ಸ್ಥಿತಿಯಲ್ಲಿದೆ.

    ಎಕ್ಸಿಟ್ ಪೋಲ್‌ನ ಫಲಿತಾಂಶಗಳು ಸರಿಯಾಗಿವೆ ಎಂದು ಸಾಬೀತಾದರೆ, ಹರಿಯಾಣವನ್ನು ದೀರ್ಘಕಾಲ ಆಳಿದ ‘ಲಾಲ್’ ಮತ್ತು ‘ಚೌತಾಲಾ’ ಕುಟುಂಬಗಳನ್ನು ಜನರು ತಿರಸ್ಕಾರ ಮಾಡಿದ್ದಾರೆ ಎಂದಾಗುತ್ತದೆ. ಅಷ್ಟೇ ಅಲ್ಲದೇ, ಆಮ್‌ ಆದ್ಮಿ ಪಕ್ಷದ ಮೇಲೂ ಜನರು ಭರವಸೆ ಇಟ್ಟುಕೊಂಡಿಲ್ಲ ಎಂಬುದನ್ನು ತೋರಿಸಲಿದೆ.

    Continue Reading

    LATEST NEWS

    ಮಂಗಳೂರು: ಕಾರಿಗೆ ಏಕಾಏಕಿ ಬೆಂಕಿ – ಸಂಪೂರ್ಣ ಸುಟ್ಟು ಹೋದ ಕಾರು.!

    Published

    on

    ಕಿನ್ನಿಗೋಳಿ: ಕಾರಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಪೇಟೆಯಲ್ಲಿ ಸಂಭವಿಸಿದೆ.

    ಕಾರೊಂದಕ್ಕೆ ಆಕಸ್ಮತ್ ಬೆಂಕಿ ತಗುಲಿದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರುಕಟ್ಟೆ ಮುಂಭಾಗ ನಡೆದಿದೆ. ಮಕ್ಕಳು ಹಾಗೂ ತಾಯಿಯನ್ನು ಕಾರಿನಲ್ಲಿ ಕೂರಿಸಿ AC ಹಾಕಿ ಬೇಕರಿಗೆ ಹೋದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ನಿವಾಸಿ ಜಾಸ್ಮಿನ್ ಅವರು ಮತ್ತೊರ್ವ ಮಹಿಳೆ‌ ಮತ್ತು ಎರಡು‌ ಮಕ್ಕಳೊಂದಿಗೆ ಕಿನ್ನಿಗೋಳಿ‌ ಮಾರುಕಟ್ಟೆ ಮುಂಭಾಗ ಕಾರು ನಿಲ್ಲಿಸಿ ಹೋದ ಸಂದರ್ಭ ಕಾರಿನಲ್ಲಿ ಹೊಗೆ ಬರಲಾರಂಭಿಸಿದೆ.

     

    ಕಾರಿನಲ್ಲಿದ್ದ ಮಹಿಳೆ ಮತ್ತು ಎರಡು ಮಕ್ಕಳು ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ಅಪಾಯದಿಂದ ಪಾರು‌ಮಾಡಿದ್ದಾರೆ. ಸ್ಥಳಿಯ ಅಂಗಡಿ‌ಮಾಲಿಯ ರಾಘವೇಂದ್ರ ಪ್ರಭು ಸ್ಥಳೀಯ ಪ್ರೆಟ್ರೋಲ್ ಪಂಪ್ ನಿಂದ ಅಗ್ನಿ ಶಮನದ ಸಾಧನದ ಮೂಲಕ, ಸ್ಥಳಿಯರೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

     

    Continue Reading

    LATEST NEWS

    Trending