Connect with us

    LATEST NEWS

    ಆಭಯ ಪ್ರಿಯರಿಗೆ ಶಾಕ್..! ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟು ರೂಪಾಯಿ ಏರಿಕೆ ಆಗಿದೆ ಗೊತ್ತಾ..?

    Published

    on

    ಮಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ನಿಧಾನವಾಗಿ ಏರಿಕೆಯಾಗುತ್ತಲೇ ಇದ್ದು ಆಭರಣ ಪ್ರಿಯರಿಗೆ ಕೈ ಸುಡುವಂತಾಗುತ್ತಿದೆ.

    ಇನ್ನು ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ ಏನಿಲ್ಲವೆಂದರೂ 20 ರೂ ಗಳಷ್ಟು ಇಂದು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 69,800 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.69,800, ರೂ. 69,800, ರೂ. 69,800 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 69,950 ರೂ. ಆಗಿದೆ.

    ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.5,711 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,980 ಆಗಿದೆ.24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ.7,615 ಆಗಿದೆ. ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.45,688 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.55,840 ಆಗಿದೆ.24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 60,920 ಆಗಿದೆ.

    LATEST NEWS

    ತಿರುಪತಿ ಲಡ್ಡು ಸೂಪರ್‌.. ಲಡ್ಡು ತಿಂದು ಖುಷಿ ಹಂಚಿಕೊಂಡ ಭಕ್ತರು..!

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿಯಲ್ಲಿ ಶ್ರೀ ವೆಂಕಟರಮಣನ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಕಲಬೆರಕೆ ವಿಚಾರದ ಬಳಿಕ ಕರ್ನಾಟಕದ ಕೆಎಮ್‌ಎಫ್‌ನಿಂದ ನಂದಿನಿ ತುಪ್ಪವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದೀಗ ನಂದಿನಿ ತುಪ್ಪ ಬಳಸಿ ತಯಾರಾಗುತ್ತಿರುವ ಲಡ್ಡು ತಿಂದು ಭಕ್ತಾದಿಗಳು ಖುಷಿಪಟ್ಟಿದ್ದಾರೆ.

    ಪ್ರಸಾದಕ್ಕೆ ಕಲಬೆರಕೆ ಬೆನ್ನಲ್ಲೇ ದೇವಸ್ಥಾನವನ್ನು ಶುದ್ದೀಕರಿಸಲಾಗಿದೆ. ಜೊತೆಗೆ ನಂದಿನಿ ತುಪ್ಪವನ್ನು ಪ್ರಸಾದಕ್ಕೆ ಬಳಸುತ್ತಿರುವ ಬಳಿಕ ಭಕ್ತಾಧಿಗಳು  ತಿರುಪತಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯಲ್ಲಿ ಲಡ್ಡು ಪ್ರಸಾದವನ್ನು ಸ್ವೀಕಾರ ಮಾಡುತ್ತಿದ್ದಾರೆ.

     

    ಈ ಬಗ್ಗೆ ಭಕ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ನಾವು ಲಡ್ಡು ತೆಗೆದುಕೊಂಡು ತಿಂದೆವು. ಟೇಸ್ಟ್‌ ಸೂಪರ್‌ ಆಗಿದೆ. ನಮ್ಮ ಕೆಎಂಎಫ್‌.. ನಮ್ಮ ಬೆಂಗಳೂರು. ನಮಗೂ ಖುಷಿ ತಂದಿದೆ. ತುಂಬಾ ಚೆನ್ನಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ. ನಮ್ಮ ನಾಡಿನ ನಂದಿನಿ ತುಪ್ಪ ಬಳಸಿ ಲಡ್ಡು ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಮಧ್ಯದಲ್ಲಿ ಈ ರೀತಿಯ ವಿವಾದ ಎದ್ದಿದ್ದಕ್ಕೆ ಬೇಜಾರಾಯ್ತು. ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ನಂದಿನಿ ನಮ್ಮ ಹೆಮ್ಮೆ. ನಂದಿನಿ ಬಳಸಿ ಸ್ವಾಧಿಷ್ಟಕರವಾದ ಲಡ್ಡು ಸವಿಯಿರಿ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಆಟದ ಮೈದಾನದ ಗೇಟ್ ಬಿದ್ದು ಬಾಲಕ ಸಾ*ವು; ಕುಟುಂಬಕ್ಕೆ ಪರಿಹಾರ ಘೋಷಣೆ

    Published

    on

    ಮಂಗಳೂರು/ಬೆಂಗಳೂರು : ಮಲ್ಲೇಶ್ವರಂನಲ್ಲಿ ಬಿಬಿಎಂಪಿ ವ್ಯಾಪ್ತಿಯ ಆಟದ ಮೈದಾನದ ಗೇಟ್​ ಬಿದ್ದು ಬಾಲಕ ಸಾ*ವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವಿಜಯಕುಮಾರ್ ಮತ್ತು ಪ್ರಿಯಾ ದಂಪತಿ ಪುತ್ರ ನಿರಂಜನ್(10) ಮೃ*ತ ಬಾಲಕ. ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಮಗುವಿನ ಮೇಲೆಯೇ ಗೇಟ್ ಬಿದ್ದಿದೆ.  ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಆದರೆ, ​ ಚಿಕಿತ್ಸೆ ಫಲಿಸದೇ ಬಾಲಕ ಕೊನೆ*ಯುಸಿರೆಳೆದಿದ್ದಾನೆ.

    ಮೃ*ತ ನಿರಂಜನ್​ ಮಲ್ಲೆಶ್ವರಂನ ಬಿಬಿಎಂಪಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ. ಜೊತೆಗೆ ತಂದೆ ವಿಜಯಕುಮಾರ್ ಆಟೋ ಚಾಲಕರಾಗಿದ್ದು, ಮಲ್ಲೇಶ್ವರನ ಪೈಪ್‌ಲೈನ್​ನಲ್ಲಿ ಈ ಕುಟುಂಬ ವಾಸವಾಗಿತ್ತು. ಇನ್ನು ಘಟನಾಸ್ಥಳಕ್ಕೆ ‌ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಇದನ್ನೂ ಓದಿ : WATCH : ಎಸಿ ಕೋಚ್ನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸಿದ ಹಾವು; ವೀಡಿಯೋ ವೈರಲ್

    ಪರಿಹಾರ ಘೋಷಣೆ :

    ನಿರಂಜನ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ, ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ ಮತ್ತು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ 5 ಲಕ್ಷ ರೂಪಾಯಿ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

     

    Continue Reading

    LATEST NEWS

    ದೆಹಲಿ ಸಿಎಂ ಕಚೇರಿಯಲ್ಲಿ ಎರಡು ಕುರ್ಚಿ..! ನಾನು ಭರತನಂತೆ ಎಂದ ಸಿಎಂ ಅತಿಶಿ

    Published

    on

    ಮಂಗಳೂರು/ನವದೆಹಲಿ : ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಎಪಿ ನಾಯಕಿ ಅತಿಶಿ ಸೋಮವಾರ(ಸೆ.23)ದಂದು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಆದ್ರೆ, ಈ ವೇಳೆ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್‌ ಉಪಯೋಗಿಸುತ್ತಿರುವ ಕುರ್ಚಿಯ ಪಕ್ಕದಲ್ಲಿ ಪ್ರತ್ಯೇಕ ಕುರ್ಚಿಯಲ್ಲಿ ಕುಳಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತನ್ನನ್ನು ರಾಮಾಯಣದ ಭರತನಿಗೆ ಹೋಲಿಸಿಕೊಂಡಿರುವ ಹಾಲಿ ಮುಖ್ಯಮಂತ್ರಿ ಅತಿಶಿ, ರಾಮನ ಅನುಪಸ್ಥಿತಿಯಲ್ಲಿ ಭರತ ಆಡಳಿತ ನಡೆಸಿದಂತೆ ನಾಲ್ಕು ತಿಂಗಳು ನಾನು ಆಡಳಿತ ನಡೆಸುವುದಾಗಿ ಹೇಳಿದ್ದಾರೆ.

    “ಈ ಕುರ್ಚಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲಿಯವರೆಗೆ, ಈ ಕುರ್ಚಿ ಈ ಕಚೇರಿಯಲ್ಲಿ ಉಳಿಯುತ್ತದೆ. ಅವರು ಹಿಂದಿರುಗುವ ವರೆಗೆ ಕಾಯುತ್ತದೆ.” ಎಂದು ಅತಿಶಿ ಹೇಳಿದ್ದಾರೆ.

    ಶನಿವಾರ ದೆಹಲಿಯ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ನಂತರ ಅತಿಶಿ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಐದು ಕ್ಯಾಬಿನೆಟ್ ಸಚಿವರ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದರು.

    ಇದನ್ನೂ ಓದಿ : ಕಾಸರಗೋಡು: ಮೆದುಳು ಜ್ವರಕ್ಕೆ ಯುವಕ ಬಲಿ

    ಅತಿಶಿ ಅವರು ಕೇಜ್ರಿವಾಲ್ ಸರ್ಕಾರದಲ್ಲಿ ಶಿಕ್ಷಣ, ಆದಾಯ, ಹಣಕಾಸು, ವಿದ್ಯುತ್ ಮತ್ತು PWD ಸೇರಿದಂತೆ 13 ಖಾತೆಗಳನ್ನು ನಿಭಾಯಿಸಿದ್ದರು.

    ದೆಹಲಿ ಹೊಸ ಸಿಎಂ ವರ್ತನೆಗೆ ಬಿಜೆಪಿ ಟೀಕೆ :

    ನೂತನ ಮುಖ್ಯಮಂತ್ರಿ ಅತಿಶಿಯ ಈ ನಡೆಯನ್ನು ಬಿಜೆಪಿ ಟೀಕಿಸಿದ್ದು, ಇದು ಸಾಂವಿಧಾನಿಕ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ಸಿಎಂ ಕಚೇರಿಗೆ ಮಾಡಿದ ಅವಮಾನ ಎಂದು ಹೇಳಿದೆ. ಈ ವಿಚಾರವಾಗಿ ಬಿಜೆಪಿ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಿಎಂ ಕಚೇರಿಯಲ್ಲಿ ಎರಡು ಕುರ್ಚಿಗಳನ್ನು ಇಡುವುದು ನಿಯಮಗಳಿಗೆ ವಿರೋಧವಾಗಿದೆ. ಇದು ಆದರ್ಶವಲ್ಲ. ಇದು ನಿಯಮಕ್ಕೆ ತೋರಿದ ಅಗೌರವ ಎಂದಿದ್ದಾರೆ. ಫೆಬ್ರವರಿಯಲ್ಲಿ ದೆಹಲಿಯ ಚುನಾವಣೆ ನಡೆಯಲಿದ್ದು, ಇದರಲ್ಲಿ ಜನ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ

    Continue Reading

    LATEST NEWS

    Trending