LATEST NEWS
ವರ್ಷದ ಹಿಂದೆ ಸ್ಥಾಪಿಸಿದ ಶಿವಲಿಂಗ ಕಾಣಲು ಬರುತ್ತಿರುವ ಜನಸಾಗರ; ಯಾಕೆಂದರೆ….. !!
ಮಂಗಳೂರು/ಕಲಬುರಗಿ: ಪುಟ್ಟ ಶಿವಲಿಂಗವನ್ನು ಕಂಡು ಕಣ್ತುಂಬಿಕೊಳ್ಳಲು ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಕಲಬುರಗಿ ತಾಲೂಕಿನ ಕಡಣಿ ಗ್ರಾಮಕ್ಕೆ ಭಕ್ತರು ಧಾವಿಸುತ್ತಿದ್ದಾರೆ.
ಕೇವಲ ಒಂದೇ ಒಂದು ವರ್ಷದ ಹಿಂದಷ್ಟೇ ಅಲ್ಲಿ ಶಿವಲಿಂಗ ಸ್ಥಾಪನೆಯೊಂದಿಗೆ ಸರ್ಪದ ಆಕೃತಿ ಕೆತ್ತನೆಯನ್ನು ಮಾಡಲಾಗಿದೆ. ಆ ನಾಗನ ಕೆತ್ತನೆ ತಲೆ ಮೇಲೆ ಕೂದಲು ಬೆಳೆದಿರುವುದೇ ಈಗ ಜನರ ವಿಸ್ಮಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 27ನೇ ಮಹಡಿಯಿಂದ ಬಿದ್ದ 3 ವರ್ಷದ ಮಗು; ಬದುಕಿದ್ದೇ ಪವಾಡ!
ಇಲ್ಲಿ ಪೂಜೆ ಪುನಸ್ಕಾರಗಳು ಮತ್ತಷ್ಟು ಹೆಚ್ಚಾಗಿದ್ದು, ಹವಾ ಮಲ್ಲಿನಾಥ ಮುತ್ಯಾ ಪವಾಡ ಎಂದು ಜನ ಕೊಂಡಾಡುತ್ತಿದ್ದಾರೆ. ಆದರೆ, ವಿಜ್ಞಾನ ಲೋಕ ಇದನ್ನು ನಂಬಲು ಸಿದ್ದವಿಲ್ಲ. ಇದು ಪಾಚಿ ಇರಬಹುದು. ಇಲ್ಲವೇ ಕಲ್ಲಿನಲ್ಲಿ ಕಾಣಸಿಗುವ ಎಳೆ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.
DAKSHINA KANNADA
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಿನಲ್ಲಿ ಡ್ರ*ಗ್ ಮಾಫಿಯಾ ಕಿಂಗ್ ಪಿನ್ ಅರೆಸ್ಟ್
ಮಂಗಳೂರು : ಡ್ರ*ಗ್ಸ್ ಜಾಲದ ಬೆನ್ನು ಹತ್ತಿ ಬೇಟೆಯಾಡಿದ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆರು ಕೋಟಿ ರೂ. ಮೌಲ್ಯದ ಡ್ರ*ಗ್ಸ್ ವಶಪಡಿಸಿಕೊಂಡಿದ್ದಾರೆ. ಡ್ರ*ಗ್ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೈಗೊಂಡ ಕಟ್ಟು ನಿಟ್ಟಿನ ಕ್ರಮಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. ಈ ಕಾರ್ಯಾಚರಣೆಯ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸೆಪ್ಟಂಬರ್ 29 ರಂದು ಪಂಪ್ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರ*ಗ್ ಪೂರೈಕೆ ಮಾಡುವ ಜಾಲದ ತನಿಖೆ ಆರಂಭಿಸಿದ್ದರು.
ಆರೋಪಿಯಿಂದ ಹಲವು ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಇದನ್ನೂ ಓದಿ : ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ; 5 ವರ್ಷದ ಮಗು ದಾರುಣ ಸಾ*ವು
ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ಕೂಡ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾ*ದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿದೆ.
BIG BOSS
ಇತಿಹಾಸದಲ್ಲೇ ಮೊದಲು.. ಬಿಗ್ಬಾಸ್ ಕಂಟೆಸ್ಟಂಟ್ ಆಗಿ ಮನೆಗೆ ಎಂಟ್ರಿ ಕೊಟ್ಟ ಕತ್ತೆ; ಏನಿದರ ಗುಟ್ಟು?
ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್ಬಾಸ್ನದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್ಬಾಸ್ ಸೀಸನ್ ಮುಕ್ತಾಯಗೊಂಡಿದೆ. ಹೀಗೆ ಬಿಗ್ಬಾಸ್ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.
ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್ಬಾಸ್ ಸೀಸನ್ 18 ಶುರುವಾಗಿದೆ. ಹೌದು, ಹಿಂದಿ ಬಿಗ್ಬಾಸ್ ಸೀಸನ್ 18 ಶುರುವಾಗಿದೆ. ಆದರೆ ಬಿಗ್ಬಾಸ್ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ.
ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್ಬಾಸ್ ಸೀಸನ್ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್ಬಾಸ್ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
LATEST NEWS
iPhone 16 Pro Max: 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ಸ್ ಸೀಜ್! ಯಾಕೆ?
ಇತ್ತೀಚೆಗೆ ಐಫೋನ್ 16 ಪ್ರೊ ಮ್ಯಾಕ್ಸ್ ಬಿಡುಗಡೆಗೊಂಡಿದ್ದು, ಭಾರೀ ಬೇಡಿಕೆ ಪಡೆದುಕೊಂಡಿದೆ. ಭಾರತಕ್ಕೆ ಹೋಲಿಸಿದರೆ ಕೆಲವು ದೇಶಗಳಲ್ಲಿ ಕೊಂಚ ಕಡಿಮೆ ಬೆಲೆಗೆ ನೂತನ ಐಫೋನ್ ಖರೀದಿಗೆ ಸಿಗುತ್ತಿದೆ. ಇದನ್ನೇ ಲಾಭವಾಗಿ ಇಟ್ಟುಕೊಂಡು ಕೆಲವು ಕಳ್ಳಸಾಗಾಣಿಕೆ ನಡೆಯುತ್ತಿದೆ. ಅದರಂತೆಯೇ ಇದೀಗ ಕಳ್ಳಸಾಗಣಿಕೆ ಮಾಡುವ ವೇಳೆ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ 16 ಪ್ರೊ ಮ್ಯಾಕ್ಸ್ ಮಾಡೆಲನ್ನು ಸೀಜ್ ಮಾಡಲಾಗಿದೆ.
ಭಾರತದಲ್ಲಿ ಸ್ಟ್ಯಾಂಡರ್ಸ್ ಐಫೋನ್ ಮಾಡಲ್ಗಳನ್ನು ತಯಾರಿಸಲಾಗುತ್ತದೆ. ಅದಕ್ಕಾಗಿ ದೇಶದಲ್ಲಿ ಆಮದು ಮಾಡಿಕೊಳ್ಳುವ ಪ್ರೊ ಮಾದರಿಗಳಿಂತ ಕಡಿಮೆ ವೆಚ್ಚಕ್ಕೆ ಸಿಗುತ್ತಿದೆ. ಬಹುತೇಕರು ದುಬೈ, ಕೆನಡಾ ಇತರ ದೇಶಗಳಿಂದ ಐಫೋನ್ ಖರೀದಿಸಲು ಬಯಸುತ್ತಾರೆ. ಇದರ ನಡುವೆ ಕಳ್ಳಸಾಗಾಣಿಯೂ ಹೆಚ್ಚಾಗುತ್ತಿದ್ದು, ಕಳೆದ ವಾರ ದೆಹಲಿ ವಿಮಾನ ನಿಲ್ದಾಣದಲ್ಲಿ 2 ಪ್ರತ್ಯೇಕ ಪ್ರಕರಣ ಬೆಳಕಿಗೆ ಬಂದಿದೆ. 28 ಐಫೋನ್ 16 ಪ್ರೊ ಮ್ಯಾಕ್ಸ್ ಮಾದರಿಯನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಆಗಮಿಸಿದ ಪ್ರಯಾಣಿಕರೊಬ್ಬರು ಕಸ್ಟಮ್ಸ್ ಮೂಲಕ 12 ಐಫೋನ್ 16 ಪ್ರಿ ಮ್ಯಾಕ್ಸ್ ಹಿಡಿದುಕೊಂಡು ಬಂದಿದ್ದರು. ತಪ್ಪಿಸಿಕೊಳ್ಳುವ ಸಲುವಾಗಿ ಟಿಶ್ಯೂ ಪೇಪರ್ನಲ್ಲಿ ಸುತ್ತಿಕೊಂಡು ಬಂದಿದ್ದರು. ಈ ವೇಳೆ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹಾಂಗ್ಕಾಂಗ್ನಿಂದ ಬಂದ ಮಹಿಳೆಯೊಬ್ಬಳು ತನ್ನ ಬ್ಯಾಗ್ ಮೂಲಕ 26 ಐಫೋನನ್ನ ಕಳ್ಳಸಾಗಣಿಕೆ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಸಿಕ್ಕಿಬಿದ್ದಿದ್ದಾಳೆ.
- BIG BOSS3 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS6 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
- LATEST NEWS4 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS5 days ago
ರಾಜ್ಯ ಹೆದ್ದಾರಿಯಲ್ಲೇ ಖ್ಯಾತ ಉದ್ಯಮಿ ಶ*ವ ಪತ್ತೆ