Thursday, September 29, 2022

ಈ ಪುಟ್ಟ ಹುಡುಗನಿಗಿರುವಷ್ಟು ಕಾಳಜಿಯೂ ಜನಪ್ರತಿನಿಧಿ, ಅಧಿಕಾರಿಗಳಿಗೆ ಇಲ್ವಾಲ್ಲಾ ಛೇ..!

ಮಂಗಳೂರು: ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರೀಕರಣಗೊಳಿಸಲಾಗುತ್ತಿದೆ. ಆದರೆ ಹೊಂಡಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.

ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರರ ಕಷ್ಟ ಹೇಗೆ ಗೊತ್ತಾಗಬೇಕು?. ನಗರದಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡಗುಂಡಿ ಇಲ್ಲದ ರಸ್ತೆಯೇ ಇಲ್ಲ. ಸಾರ್ವಜನಿಕರು ಹಲವು ಬಾರಿ ಪ್ರತಿಭಟನೆ ಮಾಡಿದರೂ ಅದಕ್ಕೆ ಮುಕ್ತಿ ಸಿಗುವುದು ದೂರದ ಮಾತೇ ಆಗಿದೆ.

ಆದರೆ ಮಂಗಳೂರಿನಲ್ಲಿ ಶಾಲೆಗೆ ತೆರಳುವ ಪುಟ್ಟ ಬಾಲಕನೊಬ್ಬ ರಸ್ತೆ ಪಕ್ಕ ಬಿದ್ದ ಗುಂಡಿಗಳನ್ನು ಮುಚ್ಚಲು ಯತ್ನ ಕೈಲಾದ ಪ್ರಯತ್ನ ಮಾಡಿದ್ದಾನೆ.

ಈತ ರಸ್ತೆ ಪಕ್ಕದಲ್ಲೇ ಇರುವ ಚಿಕ್ಕ ಚಿಕ್ಕ ಕಲ್ಲುಗಳನ್ನು ಹೆಕ್ಕಿ ತಂದು ಅದನ್ನು ಹೊಂಡಕ್ಕೆ ಹಾಕುವ ವಿಡಿಯೋವನ್ನು ಸಾರ್ವಜನಿಕರೊಬ್ಬರು ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದೀಗ ಭಾರೀ ವೈರಲ್‌ ಆಗಿದೆ. ಅಂದ ಹಾಗೆ ಮಂಗಳೂರಿನ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ಕಾಂಕ್ರಿಟ್‌ ರಸ್ತೆಯಂಚಿನಲ್ಲಿ ದೊಡ್ಡ ಹೊಂಡವಾಗಿದ್ದು, ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದನ್ನು ಕಂಡ ವಿದ್ಯಾರ್ಥಿ ಚಿಕ್ಕ ಚಿಕ್ಕ ಕಲ್ಲುಗಳನ್ನು ತಂದು ಹೊಂಡ ಮುಚ್ಚಲು ಪ್ರಯತ್ನಿಸಿದ್ದಾನೆ.

ರಸ್ತೆಯ ಹೊಂಡದಲ್ಲಿ ಬೈಕ್‌ ಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ, ಅದನ್ನು ತಡೆಯಲು ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುವ ಪ್ರಯತ್ನ ಮಾಡುತ್ತಿದ್ದೇನೆ.

ಹೊಂಡಗಳಿಂದ ಅಪಘಾತ ಸಂಭವಿಸಬಾರದು ಎಂದು ಬಾಲಕ ಹೇಳಿದ್ದಾರೆ. ಒಟ್ಟಾರೆ ಬಾಲಕ ಸಮಯಪ್ರಜ್ಞೆ, ಕಾಳಜಿಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Hot Topics

ಮೂರು ದಿನ ಕಳೆದರೂ ಇನ್ನೂ ಪತ್ತೆಯಾಗದ ಫಾದರ್ ಮುಲ್ಲರ್ ಆಸ್ಪತ್ರೆ ಡೀನ್ ಉರ್ಬನ್ ಡಿಸೋಜಾ..!

ಮಂಗಳೂರು : ಮಂಗಳೂರಿನ ಫಾದರ್ ಮುಲ್ಲರ್  ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಡೀನ್ ಉರ್ಬನ್ ಡಿಸೋಜಾ ನಾಪತ್ತೆಯಾಗಿ ಮೂರು ದಿನ ಕಳೆದಿದೆ.ಆದ್ರೆ ಇದುವರೆಗೂ ಅವರ ಇರುವಿಕೆ ಖಾತ್ರಿ ಪಡಿಸಲು ಮಂಗಳೂರು ಪೊಲೀಸರಿಗೆ ಸಾಧ್ಯವಾಗಿಲ್ಲ.ಮಂಗಳೂರು ನಗರದ ಪಾಂಡೇಶ್ವರ...

ತುಳು ಭಾಷೆಗೆ ಸ್ಥಾನಮಾನ: ನವರಾತ್ರಿ ಮುಗಿದ ಕೂಡಲೇ ಮೀಟಿಂಗ್

ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್‌ರವರು...

ಮಂಗಳೂರು: ಮಾರ್ನಮಿಕಟ್ಟೆ ದೇವಿ ಪ್ರತ್ಯಂಗಿರಾ ಕ್ಷೇತ್ರದಲ್ಲಿ ಶರನ್ನವರಾತ್ರಿ ಸಂಭ್ರಮ, ದುರ್ಗಾ ನಮಸ್ಕಾರ ಪೂಜೆ

ಮಂಗಳೂರು: ಕರಾವಳಿಯಲ್ಲೀಗ ನವರಾತ್ರಿ ಸಂಭ್ರಮ. ದೇವಿ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.ಕಾರಣಿಕದ ಶಕ್ತಿಗೆ ಮನೆಮತಾಗಿರುವ ಹಾಗೂ ದೇವಿಯ ಸನ್ನಿಧಾನಕ್ಕೆ ಬಂದು ಪ್ರಾರ್ಥಿಸಿ ಹರಕೆ ಹೇಳಿದವರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವಂತಹ ಮಂಗಳೂರು ಮಾರ್ನಮಿಕಟ್ಟೆಯ ತಾಯಿ...