LATEST NEWS
ಹೆಬ್ರಿ : ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃ*ತ್ಯು
Published
3 hours agoon
By
NEWS DESK4ಹೆಬ್ರಿ : ಮರದಿಂದ ಬಿ*ದ್ದು ಪ್ರಗತಿಪರ ಕೃಷಿಕರೊಬ್ಬರು ಮೃ*ತಪಟ್ಟಿರುವ ಘಟನೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಹೊನ್ನ ಕೊಪ್ಪಲ ಎಂಬಲ್ಲಿ ನಡೆದಿದೆ. 62 ವರ್ಷದ ಜ್ಞಾನೇಶ್ವರ ಹೆಬ್ಬಾರ್ ಮೃ*ತ ಕೃಷಿಕ.
ಮರದ ಗೆಲ್ಲು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿ*ದ್ದು ಜ್ಞಾನೇಶ್ವರ್ ಮೃ*ತಪಟ್ಟಿದ್ದಾರೆ. ಕೃಷಿ ಕೆಲಸಕ್ಕೆ ಹೋದ ಜ್ಞಾನೇಶ್ವರ್ ಮನೆಗೆ ಊಟಕ್ಕೆ ಬಾರದಿರುವುದನ್ನು ಗಮನಿಸಿದ ಪತ್ನಿ ಹಾಗೂ ಮಗಳು ಹುಡುಕುತ್ತಾ ಹೋದಾಗ ಮರದಡಿ ಬಿದ್ದಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮೂರು ತಿಂಗಳ ಹಿಂದೆ ಪ್ರೀತಿಸಿ ಮದುವೆ.. ಮಗಳು ಕೈಹಿಡಿದ ಅಳಿಯನ ಜೀವವನ್ನೇ ತೆಗೆದ ಪೋಷಕರು..!
ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್ ಡಿಎಂಸಿ ಅಧ್ಯಕ್ಷರಾಗಿ, ಕಬ್ಬಿನಾಲೆ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಜ್ಞಾನೇಶ್ವರ್ ಹೆಬ್ಬಾರ್ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅ*ಗಲಿದ್ದಾರೆ.
FILM
ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ
Published
19 minutes agoon
28/11/2024By
NEWS DESK2‘ಲಕ್ಷ್ಮಿ ನಿವಾಸ’ ನಟಿ ಚಂದನಾ ಅನಂತಕೃಷ್ಣ ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.
ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ.
ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.
DAKSHINA KANNADA
ಮಂಗಳೂರು : ನ. 30 ರಂದು ‘ಇಸ್ಕಾನ್’ ನಶಾಮುಕ್ತಿ ಅಭಿಯಾನ; ಅಮೋಘ್ ಲೀಲಾ ದಾಸ್ ಭಾಷಣ
Published
28 minutes agoon
28/11/2024By
NEWS DESK4ಮಂಗಳೂರು : ಇಸ್ಕಾನ್ ಕುಡುಪುಕಟ್ಟೆವತಿಯಿಂದ ನಡೆಯಲಿರುವ ನಶಾ ಮುಕ್ತಿ ಅಭಿಯಾನಕ್ಕೆ ನ. 30ರಂದು ಅಪರಾಹ್ನ 3.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಇಸ್ಕಾನ್ ಕುಡುಪು ಕಟ್ಟೆಯ ಕಾರ್ಯದರ್ಶಿ ಎಚ್.ಜಿ. ಪ್ರೇಮಾ ಭಕ್ತಿದಾಸ್ ಮತ್ತು ಯುವ ಘಟಕದ ಸದಸ್ಯ ಎಚ್.ಜಿ. ದೇವಧರ್ಮ ದಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಶಾ ವ್ಯಸನದ ವಿರುದ್ದ ಜಾಗೃತಿ ಮೂಡಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದ್ಘಾಟನೆಯ ಬಳಿಕ ‘ಉಮಂಗ್ 3.0 : ಮೆಗಾ ಯೂತ್ ಫೆಸ್ಟ್‌ವಲ್’ ನಡೆಯಲಿದ್ದು, ಇಸ್ಕಾನ್ ಹೊಸದಿಲ್ಲಿಯ ಉಪಾಧ್ಯಕ್ಷ ಪ್ರೇರಕ ಭಾಷಣಕಾರ ಅಮೋಘ್ ಲೀಲಾ ದಾಸ್ ಪಾಲ್ಗೊಳ್ಳಲಿದ್ದಾರೆ. ದೇಶಾದ್ಯಂತದ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಸ್ಕಾನ್ ಯೂತ್‌ವಿಂಗ್‌ನ್ನು ಯುವ ಪ್ರಭಾವದ ಉಪಕ್ರಮಗಳಿಗಾಗಿ ಶ್ಲಾಘಿಸಿದ್ದು, ವ್ಯಸನ ಮತ್ತು ಮಾದಕ ದ್ರವ್ಯಗಳ ವಿಷಯದ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ಎಂಒಯುಗೆ ಸಹಿ ಹಾಕಿದೆ. ಕರ್ನಾಟಕದಲ್ಲಿ ಸುಮಾರು ಶೇ.30ರಷ್ಟು ನಶಾ ವ್ಯಸನ ಪ್ರಕರಣಗಳು ಮಂಗಳೂರು ನಗರದಲ್ಲಿಯೇ ಕಂಡುಬಂದಿದ್ದು ಇಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಚ್.ಜಿ. ಪ್ರೇಮಾ ಭಕ್ತಿದಾಸ್ ತಿಳಿಸಿದರು.
LATEST NEWS
ಸಿಎಸ್ ಕೆ ವಿರುದ್ದ ಗಂಭೀರ ಆರೋಪ; ಐಪಿಎಲ್ ಮ್ಯಾಚ್ ನ ಅಂಪೈರ್ ಗಳೊಂದಿಗೆ ಫಿಕ್ಸಿಂಗ್ ಮಾಡ್ತಿದ್ರು !
Published
2 hours agoon
28/11/2024By
NEWS DESK3ಮಂಗಳೂರು: ಚೆನ್ನ್ಯೆ ಸೂಪರ್ ಕಿಂಗ್ಸ್ ವಿರುದ್ದ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪ ಕೇಳಿ ಬಂದಿತ್ತು. ಈ ಕಾರಣದಿಂದ ಸಿಎಸ್ ಕೆ ಫ್ರಾಂಚೈಸಿಯು 2 ವರ್ಷಗಳ ನಿಷೇಧಕ್ಕೆ ಒಳಗಾಗಿತ್ತು. ಇದೀಗ, ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗಂಭೀರ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ದೇಶ ಬಿಟ್ಟು ತೆರಳಿರುವ ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ವಿರುರದ್ದ ಗಂಭೀರ ಫಿಕ್ಸಿಂಗ್ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಾಜ್ ಶರ್ಮಾ ಅವರ ಯೂಟ್ಯೂಬ್ ಚಾನಲ್ ‘ಫಿಗರಿಂಗ್ ಔಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತ್ ಮೋದಿ, ಬಿಸಿಸಿಐ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ವಿರುದ್ದ ಸ್ಪೋಟಕ ಆರೋಪಗಳನ್ನು ಮಾಡಿದ್ದಾರೆ.
ಎನ್ ಶ್ರೀನಿವಾಸನ್ ಅವರು ಸಿಎಸ್ ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್ ಗಳನ್ನು ನೇಮಿಸುತ್ತಿದ್ದರು. ಅವರಿಗೆ ಐಪಿಎಲ್ ಏಳಿಗೆಗಿಂತ ತಮ್ಮ ಮಾಲೀಕತ್ವದ ಸಿಎಸ್ ಕೆ ತಂಡದ ಯಶಸ್ಸು ಮುಖ್ಯವಾಗಿತ್ತು. ಅದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
ಮೊದ ಮೊದಲು ಅವರು ಅಂಪೈರ್ ಗಳನ್ನು ಬದಲಿಸುತ್ತಿದ್ದಾಗ ಅದರ ಬಗ್ಗೆ ನಾನು ಗಮನ ಹರಿಸಿರಲಿಲ್ಲ. ಸಿಎಸ್ ಕೆ ಪಂದ್ಯಗಳಿಗೆಲ್ಲಾ ಚೆನ್ನೈನ ಅಂಪೈರ್ ಗಳೇ ಇರುತ್ತಿದ್ದರು. ಸಿಎಸ್ ಕೆ ಪರವಾಗಿ ತೀರ್ಪು ಬರಲೆಂದು ತಮಗೆ ಬೇಕಾದ ಅಂಪೈರ್ ಗಳನ್ನು ನೇಮಿಸುತ್ತಿದ್ದರು. ಅದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಅದನ್ನು ನಾನು ಬಹಿರಂಗಪಡಿಸಲು ಪ್ರಯತ್ನಿಸಿದಾಗ ಸಂಪೂರ್ಣವಾಗಿ ನನ್ನ ವಿರೋಧಿಯಾಗಿದ್ದರು ಎಂದು ಲಲಿತ್ ಹೇಳಿದ್ದಾರೆ.
ಇದನ್ನೂ ಓದಿ: ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !
ಐಪಿಎಲ್ ಅನ್ನು ಶ್ರೀನಿವಾಸನ್ ಇಷ್ಟಪಡುತ್ತಿರಲಿಲ್ಲ. ಐಪಿಎಲ್ ಸಕ್ಸಸ್ ಆಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಅದು ಸಕ್ಸಸ್ ಆದಾಗ ಎಲ್ಲರೂ ಲಾಭ ಪಡೆಯಲು ಶುರು ಮಾಡಿದರು. ಬಿಸಿಸಿಐ ಸದಸ್ಯ ಹಾಗೂ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್, ನನ್ನ ದೊಡ್ಡ ವಿರೋಧಿಯಾಗಿದ್ದರು. ಅಂಪೈರ್ ಫಿಕ್ಸಿಂಗ್ ಸೇರಿದಂತೆ ಹಲವು ಅಕ್ರಮ ಎಸಗಿದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.
2013ರಲ್ಲಿ ಸಿಎಸ್ ಕೆ ವಿರುದ್ದ ಹಗರಣಗಳ ಆರೋಪ :
2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗಂಭೀರ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳ ಕಾರಣದಿಂದಾಗಿ 2016 ಮತ್ತು 2017ರಲ್ಲಿ ಐಪಿಎಲ್ ನಿಂದ ಸಿಎಸ್ ಕೆ ಫ್ರಾಂಚೈಸಿಯನ್ನು ಬ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲಾಗಿತ್ತು.
ಐಪಿಎಲ್ ಪ್ರಾರಂಭವಾಗುವ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ದ ಅಂಪೈರ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಚಾಂಪಿಯನ್ ಪಟ್ಟದ ಮೇಲೇಯೆ ಪ್ರಶ್ನೆಗಳೆದ್ದಿವೆ.
LATEST NEWS
ಖ್ಯಾತ ಕಿರುತೆರೆ ನಟಿ ದೀಪಿಕಾ ದಾಸ್ ತಾಯಿಗೆ ಬೆ*ದರಿಕೆ ಕರೆ
ಆರ್ಥಿಕ ಸಮಸ್ಯೆಯಿಂದ 40,000ಕ್ಕೆ 4 ವರ್ಷದ ಹೆಣ್ಣುಮಗು ಮಾರಾಟ – ಪೋಷಕರು ಸೇರಿ 6 ಮಂದಿ ಅರೆಸ್ಟ್
ಪೋಷಕರೇ ಗಮನಿಸಿ : 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಈ ‘ಆಹಾರ’ ನೀಡಿ.!
ಹೆಬ್ರಿ : ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃ*ತ್ಯು
ಮೂರು ತಿಂಗಳ ಹಿಂದೆ ಪ್ರೀತಿಸಿ ಮದುವೆ.. ಮಗಳು ಕೈಹಿಡಿದ ಅಳಿಯನ ಜೀವವನ್ನೇ ತೆಗೆದ ಪೋಷಕರು..!
ನಾನ್ ವೆಜ್ ತಿನ್ನಬೇಡ ಎಂದ ಪ್ರಿಯತಮ: ಆ*ತ್ಮಹತ್ಯೆಗೆ ಶರಣಾದ ಏರ್ ಇಂಡಿಯಾ ಪೈಲಟ್ !
Trending
- Baindooru6 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- BIG BOSS5 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- Baindooru5 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- LIFE STYLE AND FASHION6 days ago
ಏನಾಶ್ಚರ್ಯ ? ಈ ಡಯಟ್ನಿಂದ 4ನೇ ಸ್ಟೇಜ್ ಸ್ತನ ಕ್ಯಾನ್ಸರ್ ಮಾಯ !!