Connect with us

LATEST NEWS

ಹೆತ್ತಮ್ಮನ ಕಳೇಬರವನ್ನು ಸಾಗಿಸಲು ಆ್ಯಂಬುಲೆನ್ಸ್ ಇಲ್ಲದೆ ಪರದಾಡಿದ ಮಗ..!

Published

on

ಆಂಧ್ರಪ್ರದೇಶ:ಆಂಬುಲೆನ್ಸ್ ಸಿಗದೇ ಇದ್ದುದರಿಂದ ಕೋವಿಡ್ ಸೋಂಕಿತ ಮಹಿಳೆಯ ಮೃತದೇಹವನ್ನು ಆಕೆಯ ಪುತ್ರ ಬೈಕ್ ನಲ್ಲಿ ಸಾಗಿಸಿದ ಕರುಣಾಜನಕ ಘಟನೆ ಆಂಧ್ರಪ್ರದೇಶದ ಶ್ರೀ ಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಎಂಬ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಸೋಂಕು ತನ್ನ ರೌದ್ರ ನರ್ತನವನ್ನು ತೋರಿಸುತ್ತಿದ್ದಂತೆ ಇತ್ತ ಹಲವಾರು ಕರುಳು ಹಿಂಡುವ ಹೃದಯ ವಿದ್ರಾವಕ ಘಟನೆಗಳು ನಡೆಯುತ್ತಿವೆ. ಮಧ್ಯಮ ವರ್ಗದ ಜನತೆಯಂತೂ ಕಂಗಾಲಾಗಿದ್ದಾರೆ.

50ರ ಹರೆಯದ ಮಹಿಳೆಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಕಾಕುಲಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಆರೋಗ್ಯ ಸ್ಥಿತಿ ತುಂಬಾ ಗಂಭೀರಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ಈಕೆಯ ಮೃತ ದೇಹ ಸಾಗಿಸಲು ಆಂಬುಲೆನ್ಸ್ ಸಿಕ್ಕಿಲ್ಲ ಬಹಳ ಸಮಯ ಕಾದರೂ ಆಂಬುಲೆನ್ಸ್ ಸಿಗದೇ ಇದ್ದಾಗ ಶವವನ್ನು ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯ ಸಿಬ್ಬಂದಿ ಒತ್ತಡ ಹೇರಿದ್ದಾರೆ.

ಇದರಿಂದ ದಾರಿ ತೋಚದೆ ಇದ್ದಾಗ ಮೃತ ಮಹಿಳೆಯ ಮಗ ಹಾಗೂ ಅಳಿಯ ಮೃತದೇಹವನ್ನು ಬೈಕ್ ಮೇಲೆ ಹೊತ್ತು ತಮ್ಮೂರಿಗೆ ಸಾಗಿಸಿ ಅಂತ್ಯ ಕ್ರಿಯೆ ನೆರವೇರಿಸಿದ್ದಾರೆ.

LATEST NEWS

ಖಾಸಗಿ ಶಾಲೆಗೆ ನಾಡಗೀತೆ ಅನ್ವಯವಿಲ್ಲ- ಕನ್ನಡ ಸಂಸ್ಕೃತಿ ಇಲಾಖೆ ಆದೇಶ..!

Published

on

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿದ ಸರ್ಕಾರ, ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಆದೇಶಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಆದೇಶ ಹೊರಡಿಸಿದ್ದು ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಎಲ್ಲಾ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕಿತ್ತು. ಇದಲ್ಲದೆ ಸರ್ಕಾರಿ ಇಲಾಖೆ, ಕಚೇರಿ, ಪ್ರಾಧಿಕಾರಗಳು, ಸರ್ಕಾರದ ಸಂಸ್ಥೆಗಳಿಗೂ ಇದು ಅನ್ವಯ ಆಗಿತ್ತು. ಸರ್ಕಾರಿ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ನಾಡಗೀತೆ ಹಾಡಬೇಕು ಎಂದು ಆದೇಶಿಸಲಾಗಿತ್ತು. ಹಿಂದಿನ ಆದೇಶವನ್ನು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಈಗ ಎಲ್ಲಾ ಶಾಲೆಗಳು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.  ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರೀಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕನ್ನಡ ಸಂಸ್ಕೃತಿ ಇಲಾಖೆ ಯಾಕೆ ಈ ನಿರ್ಧಾರ ತಗೆದುಕೊಂಡಿದೆ ಅವರು ಉತ್ತರ ಕೊಡಬೇಕಾಗುತ್ತೆ . ಎಲ್ಲಾ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡುತ್ತೇವೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ ಹಾಗೂ ನಾನು ನಮ್ಮ ಇಲಾಖೆಯಲ್ಲಿ ನಾಡಗೀತೆ ಕಡ್ಡಾಯ ಅಂತ ಮಾಡಿಸುತ್ತೇನೆ ಎಂದು ಪ್ರತಿಕ್ರೀಯೆ ನೀಡಿದ್ದಾರೆ.

Continue Reading

DAKSHINA KANNADA

Kadaba: ಕರ್ತವ್ಯದಲ್ಲೇ ವಿಎಗೆ ಬಸ್ ಸೀಟ್ ಅಡಿಯಲ್ಲಿ ಸಕತ್ ನಿದ್ರೆ..!

Published

on

ಕಡಬ: ಕುಡಿತದ ಚಟಕ್ಕಾಗಿ ಹಲವು ಬಾರಿ ಹಿರಿಯ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ವಿಎ ಫೆ.20ರಂದು ಮತ್ತೆ ಕುಡಿದು ಅವಾಂತರ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿಎ ಕುಡಿದ ಅಮಲಿನಲ್ಲಿ ಬಸ್ ನಲ್ಲಿ ಬಿದ್ದುಕೊಂಡಿದ್ದಾನೆ. ಇದೆಲ್ಲಾ ನಡೆದದ್ದು, ಸುಬ್ರಹ್ಮಣ್ಯ- ಕಡಬ ಬಸ್ ನಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ವಿಎ ನಾಗಸುಂದರ ಕುಡಿದು ಬಸ್ ಸೀಟ್ ಅಡಿಯಲ್ಲಿ ಮಲಗಿ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದ್ದ. ಹೀಗಾಗಿ ಬಸ್ ಚಾಲಕ ನೆರವಾಗಿ ಬಸ್ಸನ್ನು ಕಡಬ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಸ್ಟೇಷನ್ ಪೊಲೀಸರ ಸಹಾಯದಿಂದ ವಿಎ ಯನ್ನು ಇಳಿಸಿ ಬಸ್ ಮುಂದೆ ಹೋಗಿದೆ. ಬಳಿಕ ಹಲವರು ಸೇರಿ ವಿಎಯನ್ನು ಆತನ ನಿವಾಸದ ಹೊರಗೆ ಮಲಗಿಸಿ ಬಂದಿದ್ದಾರೆ. ವಿಎ ನಾಗಸುಂದರ ಈ ಹಿಂದೆಯೂ ಹಲಾವರು ಬಾರಿ ಕುಡಿದು ರಸ್ತೆಯಲ್ಲಿ ಬಿದ್ದು ಇದೇ ರೀತಿ ವರ್ತಿಸಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗಿದ್ದ. ಆದರೆ ಇತ್ತೀಚೆಗೆ ಇದು ಈತನ ನಿತ್ಯ ಕಾಯಕ ಎಂಬಂತಾಗಿದ್ದು ಈತನ ಈ ಚಟದಿಂದ ಹಲವು ದಾಖಲೆ ಪತ್ರ ಕಳೆದು ಹಾಕಿದ್ದಾನೆ ಎಂಬ ಆರೋಪವೂ ಇದೆ. ಈತನ ವಿಚಾರ‌ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ವಿಎಯನ್ನು ವರ್ಗಾವಣೆ ಮಾಡಿ ಇಲ್ಲ ಮದ್ಯವರ್ಜನ ಶಿಬಿರದಲ್ಲಾದ್ರೂ ಬಿಡಿ ಅನ್ನೋದು ಸ್ಥಳಿಯರ ಮನವಿ.

Continue Reading

DAKSHINA KANNADA

Puttur: ಕುಸಿದು ಬಿದ್ದ ರೈಲ್ವೇ ಮೇಲ್ಸೇತುವೆಯ ಸೇಫ್ ಗಾರ್ಡ್- ಅದೃಷ್ಟವಶಾತ್ ಸೇಫ್..!

Published

on

ಕಬಕ: ರೈಲ್ವೇ ಮೇಲ್ಸೇತುವೆಯ ಸುರಕ್ಷತೆಗೆ ಅಳವಡಿಸಿದ್ದ ಸೇಫ್ ಗಾರ್ಡ್ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಫೆ.21ರಂದು ನಡೆದಿದೆ.

ಮಾಣಿ – ಮೈಸೂರು ಹೆದ್ದಾರಿಯ ಕಬಕ ಸಮೀಪದ ಮಿತ್ತೂರು ಎಂಬಲ್ಲಿ ಈ ಘಟನೆ ನಡೆದಿದ್ದು, ರೈಲ್ವೇ ಸೇತುವೆಗೆ ಅಳವಡಿಸಿದ್ದ ಸೇಫ್ ಗಾರ್ಡ್ ಕಂಬ ಹೆದ್ದಾರಿಗೆ ಅಡ್ಡವಾಗಿ ಬಿದ್ದಿದೆ. ಇದರಿಂದ ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎತ್ತರದ ಘನ ವಾಹನಗಳು ಢಿಕ್ಕಿಯಾಗಿ ರೈಲ್ವೆ ಸೇತುವೆಗೆ ಹಾನಿಯಾಗದಂತೆ ತಡೆಯಲು ಈ ಸೇಫ್ ಗಾರ್ಡ್ ಗಳನ್ನು ಸೇತುವೆಯ ಇಕ್ಕೆಲಗಳಲ್ಲಿ ಅಳವಡಿಸಲಾಗುತ್ತದೆ. ಮಂಗಳವಾರ ಸಂಜೆ ವೇಳೆ ಮಿತ್ತೂರಿನ ರೈಲ್ವೇ ಮೇಲ್ ಸೇತುವೆಗೆ ಅಳವಡಿಸಿದ ಸೇಫ್ ಗಾರ್ಡ್‌’ಗೆ ಘನ ವಾಹನವೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಹಾನಿಗೊಳಗಾದ ಕಂಬ ಹೆದ್ದಾರಿಗೆ ಅಡ್ಡವಾಗಿ ಬಿದ್ದಿರುವ ಸಾದ್ಯತೆ ಇದೆ. ಅದೃಷ್ಟವಶಾತ್ ಇದು ಬೀಳುವ ವೇಳೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಗಾರ್ಡ್ ಬೀಳುತ್ತಿದ್ದಂತೆ ಸ್ಥಳೀಯರು ಓಡಿ ಬಂದು ಬರುವ ವಾಹನಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

Continue Reading

LATEST NEWS

Trending