Connect with us

    kerala

    ಮಗುವಿನ ಹ*ತ್ಯೆ ನಡೆಸಿ ತಾಯಿಯೂ ಆತ್ಮಹ*ತ್ಯೆ..!

    Published

    on

    ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಂ*ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ನಡೆದಿದೆ. ಇಡುಕ್ಕಿ ತೊಡುಪುಳ ನಿವಾಸಿ ಶರತ್ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು. ಮಗು ಶ್ರೀನಂದಾಳನ್ನು ಕೊಂದು ಬಳಿಕ ತಾಯಿ ಸಾವಿಗೆ ಶರಣಾಗಿದ್ದಾಳೆ.

    ಪತಿ ಶರತ್ ಇಸ್ರೇಲಿನಲ್ಲಿ ಉದ್ಯೋಗಿಯಾಗಿದ್ದಾರೆ. ಪತಿಯ ಮನೆಯಲ್ಲೇ ಇದ್ದ ಬಿಂದು, ಇಬ್ಬರು ಮಕ್ಕಳಾದ ಪುತ್ರಿ ಶ್ರೀನಂದಾ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ಭಾನುವಾರ ಮುಳ್ಳೇರಿಯ ಬಳಿಯಲ್ಲಿರುವ ತಾಯಿ ಮನೆ ಕೋಪಾಳಕೊಚ್ಚಿ ಬಂದಿದ್ದರು. ಎ.5ರಂದು ಮಧ್ಯಾಹ್ನ ಬಿಂದು ಮನೆ ಪಕ್ಕದ ಮರದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದು, ಅವರ ಕೈಯ ನರ ಕತ್ತರಿಸಲ್ಪಟ್ಟು ರಕ್ತ ಸೋರುತ್ತಿತ್ತು. ಇದೇ ವೇಳೆ ಮಗು ಶ್ರೀನಂದ ಮನೆಯ ಮಲಗುವ ಕೊಠಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಕಂಡು ಬಂದಿದ್ದು, ಅದನ್ನು ಕಂಡ ಮನೆಯವರು ಮಗುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

    ಇದನ್ನೂ ಓದಿ..; ಎದೆ ಹಾಲು ಕುಡಿದು ಉಸಿರು ನಿಲ್ಲಿಸಿದ ಮಗು…! ಮಗುವಿನ ಜೊತೆ ಇಹಲೋಕ ತ್ಯಜಿಸಿದ ತಾಯಿ..!

    ವಿಷಯ ತಿಳಿದ ಕಾಸರಗೋಡು ತಹಶೀಲ್ದಾ‌ರ್ ಪಿ.ಎಂ.ಅಬೂಬಕ್ಕರ್ ಸಿದ್ದಿಕ್, ಕಾಸರಗೋಡು ಡಿವೈಎಸ್‌ಪಿ ಜಯನ್ ಡೊಮಿನಿಕ್ ಹಾಗೂ ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು ಅವರ ನೇತೃತ್ವದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಗೆ ಕಾರಣ ಗೊತ್ತಾಗಿಲ್ಲ.

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    kerala

    ಆತ್ಮಹತ್ಯೆಗೆ ಯತ್ನಿಸುವಾಗ ಹಗ್ಗ ತುಂಡಾಗಿ ಮಹಿಳೆ ಮೃ*ತ್ಯು..!

    Published

    on

    ಕಾಸರಗೋಡು: ಕುಂಬಳೆ ಸನಿಹದ ಅಡ್ಕದಲ್ಲಿ ಆತ್ಮಹ*ತ್ಯೆಗೆ ಯತ್ನಿಸುವ ಸಂದರ್ಭ ಹಗ್ಗ ತುಂಡಾಗಿ ಬಿದ್ದು, ಗಂಭೀರ ಗಾ*ಯಗೊಂಡಿದ್ದ ಮಹಿಳೆ ಮೃ*ತಪಟ್ಟಿದ್ದಾರೆ.

    ಮಂಜೇಶ್ವರ ಬಟ್ಟಯಪದವು ನಿವಾಸಿ ಬಶೀರ್ ಎಂಬುವರ ಪತ್ನಿ ಆಯಿಷತ್ ರಿಯಾನಾ(24) ಜುಲೈ 23 ರಂದು ತಾಯಿ ಮನೆಯ ಸ್ನಾನಗೃಹದಲ್ಲಿ ನೇ*ಣಿಗೆ ಶರಣಾಗುವ ಸಂದರ್ಭ ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾ*ಯವಾಗಿತ್ತು. ತಕ್ಷಣ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಗುರುವಾರ ಮೃ*ತಪಟ್ಟಿದ್ದಾರೆ.

    ಆಯಿಷತ್ ರಿಯಾನಾ ಹಾಗೂ ಬಶೀರ್ ವಿವಾಹ ಮೂರೂವರೆ ವರ್ಷದ ಹಿಂದೆ ನಡೆದಿದ್ದು, ಈ ಸಂದರ್ಭ 15 ಪವನ್ ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷ ಪ್ರಾಯದ ಮಹಮ್ಮದ್ ಬಿಲಾಲ್ ಎಂಬ ಪುತ್ರನಿದ್ದಾನೆ.

    ಬಿಲಾಲ್ ಜನಿಸಿದ ಆರು ತಿಂಗಳಲ್ಲಿ ರಿಯಾನಾಗೆ ಹಲ್ಲೆ ನಡೆಸಿ ತಾಯಿ ಮನೆಗೆ ಕರೆತಂದು ಬಿಡಲಾಗಿದೆ. ಪತಿಯ ಕಿರುಕುಳದಿಂದ ಆಯಿಷತ್ ಆತ್ಮಹ*ತ್ಯೆಗೈದಿರುವುದಾಗಿ ಅವರ ಸಂಬಂಧಿಕರು ಪೊಲೀಸರಲ್ಲಿ ತಿಳಿಸಿದ್ದಾರೆ.

    Continue Reading

    kerala

    ಕುಂಬಳೆ: ತರವಾಡು ಮನೆ, ಕ್ಷೇತ್ರದಿಂದ ಕಳ್ಳತನ..!

    Published

    on

    ಕಾಸರಗೋಡು: ಕಾಸರಗೋಡು ಜಿಲ್ಲೆಯ ಕುಂಬಳೆ ಪೇಟೆಯಲ್ಲಿರುವ ಶಂಕರ ಸೇವಾ ಸಮಿತಿಯ ಕುನ್ನಿಲ್‌ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಕಳ್ಳತನ ನಡೆದಿದೆ. ತರವಾಡು ಮನೆಯಿಂದ ಒಂದೂವರೆ ಪವನಿನ ಚಿನ್ನದ ಹೂ, ಕತ್ತಿ ಮತ್ತು ತರವಾಡು ಕ್ಷೇತ್ರದಿಂದ ಶ್ರಿ ವಯನಾಟು ಕುಲವನ್ ದೈವದ ಬೆಳ್ಳಿಯ ಆಯುಧ, ವಿಷ್ಣುಮೂರ್ತಿ ದೈವದ 2 ಆಯುಧಗಳು, ತೊಂಡಚ್ಚಮಾರ್ ದೈವದ ಆಯುಧ, ಹಿತ್ತಾಳಿಯ 3 ಪಾತ್ರೆಗಳು, 25 ಕಾಲು ದೀಪಗಳು, ಚೆಂಬನ್ನು ಕದ್ದೊಯ್ದಿದ್ದಾರೆ.

    ತರವಾಡು ಕ್ಷೇತ್ರದಲ್ಲಿದ್ದ ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪನ್ನು ಕಳ್ಳತನ ಮಾಡಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂ. ಹಾಗೂ ಮುಡಿಪಿನಲ್ಲಿ 15 ಸಾವಿರ ರೂ. ಗಳು ಇತ್ತೆಂದು ಹೇಳಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಪರಶುರಾಮ ಥೀಂ ಪಾರ್ಕ್‌ ವಿವಾದ : ನಕಲಿ ಪರಶುರಾಮನ ಮೂರ್ತಿ ಸ್ಥಾಪನೆಯಲ್ಲಿ ಮೊದಲ ತಲೆದಂಡ

    Continue Reading

    LATEST NEWS

    Trending