Connect with us

    LATEST NEWS

    ಪಡುಬಿದ್ರಿ : ನೇ*ಣು ಬಿಗಿದು ವ್ಯಕ್ತಿ ಆ*ತ್ಮಹತ್ಯೆ

    Published

    on

    ಪಡುಬಿದ್ರಿ: ನ. 4ರಿಂದ ನ. 5ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಮನೆಯ ಕಬ್ಬಿಣದ ಜಂತಿಗೆ ನೈಲಾನ್‌ ಹಗ್ಗದಿಂದ ನೇ*ಣು ಬಿಗಿದು ಹೆಜಮಾಡಿ ಕಡವಿನ ಬಾಗಿಲು ನಿವಾಸಿಯೊಬ್ಬರು ಆ*ತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

     

    ಇತ್ತೀಚಿನ ದಿನಗಳಲ್ಲಿ ಆ*ತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿನಾಕಾರಣ ಆ*ತ್ಮಹತ್ಯೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿವೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಪ್ರಕಾಶ (43) ನೇ*ಣಿಗೆ ಶರಣಾಗಿದ್ದಾರೆ.

    ಅವರಿಗೆ ವಿಪರೀತ ಮದ್ಯ ಸೇವನೆಯ ಚಟವಿದ್ದು ಪತ್ನಿ ಹಾಗೂ ಮಕ್ಕಳು ಬೇರೆಯೇ ವಾಸವಿದ್ದರು. ಜೀವನದಲ್ಲಿನ ಜುಗುಪ್ಸೆಯಿಂದ ಈ ಕೃತ್ಯವೆಸಗಿರಬಹುದೆಂದು ಪಡುಬಿದ್ರಿ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಾಸಿ ತನಿಖೆ ನಡೆಸುತ್ತಿದ್ದಾರೆ.

    BANTWAL

    ಬಂಟ್ವಾಳ : ಭೀಕರ ಅ*ಪಘಾತ ; ಗಂ*ಭೀರ ಗಾಯಗೊಂಡಿದ್ದ ಸ್ನೇಹಿತ ವಿ*ಧಿವಶ

    Published

    on

    ಬಂಟ್ವಾಳ : ರವಿವಾರ (ನ.3) ರಾತ್ರಿ ಸಂಭವಿಸಿದ ಭೀಕರ ಅ*ಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಂ*ಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಸದ್ಯ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿರುವ ಘಟನೆ ಬಂಟ್ವಾಳದ ಕಡೆಗೋಳಿಯಲ್ಲಿ ನಡೆದಿದೆ.

     

    ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಸಿ.ಸಿ.ಬಸ್ ಗಳು ಅನೇಕ ಅಮಾಯಕರ ಬಲಿ ತೆಗೆದುಕೊಂಡಿದೆ. ಇಂದು ಅಪಘಾತಕ್ಕೆ ಕಾರಣವಾದ ಸೆಲಿನ ಬಸ್ ಸಹಿತ ಅನೇಕ ಖಾಸಗಿ ಬಸ್ ಗಳು ಎಲ್ಲೆ ಮೀರಿ ಸಂಚಾರ ಮಾಡುತ್ತಿದ್ದು, ಇವರ ಮೇಲೆ ಹಿಡಿತ ಸಾಧಿಸುವ ಆರ್.ಟಿ.ಒ.ಇಲಾಖೆ ಹಾಗೂ ಟ್ರಾಫಿಕ್ ಪೋಲೀಸರು ಮೌನಮುರಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತೀ ವೇಗದಿಂದ ಮತ್ತು ಅಜಾಗರೂಕತೆಯಿಂದ ಸಂಚಾರ ಮಾಡುವ ಖಾಸಗಿ ಬಸ್ ಗಳ ಮೇಲೆ ಇಲಾಖೆಗಳು ಹಿಡಿತ ಸಾಧಿಸದಿದ್ದರೆ ಇನ್ನೆಷ್ಟು ಬಲಿಯಾಗಲಿದೆಯೊ ಗೊತ್ತಿಲ್ಲ.

    ನ.03 ಭಾನುವಾರ ಸೆಲಿನಾ ಬಸ್ ಅತಿವೇಗವಾಗಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮಿತ್ರರಿಬ್ಬರು ಸಾ*ವನ್ನಪ್ಪಿದ್ದಾರೆ.

    ಇದನ್ನೂ ಓದಿ : ಬಂಟ್ವಾಳ : ಬಸ್ – ಸ್ಕೂಟರ್ ಮುಖಾಮುಖಿ ; ಸವಾರ ಸಾ*ವು

     

    ಕಡೆಗೋಳಿ ನಿವಾಸಿ ಪ್ರವೀಣ್ ಹಾಗೂ ಸಂದೀಪ್ ಮೃತ ದುರ್ದೈವಿಗಳು. ಇವರು ಇಬ್ಬರು ಚಿಕ್ಕ ವಯಸ್ಸಿನಿಂದಲೇ ಆತ್ಮೀಯ ಗೆಳೆಯರು. ಇಬ್ಬರು ಸೇಲ್ಸ್ ಮ್ಯಾನ್ ಕೆಲಸಗಾರರಾಗಿದ್ದು, ತನ್ನ ಖಾಸಗಿ ಕೆಲಸವನ್ನು ಮುಗಿಸಿ ಮನೆಗೆ ಜೊತೆಯಾಗಿ ಪ್ರಯಾಣಿಸುತ್ತಿದ್ದ ವೇಳೆ ಬಸ್ ಡಿ*ಕ್ಕಿಯಾಗಿದೆ.

    ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಸವಾರರಿಬ್ಬರಿಗೆ ಡಿ*ಕ್ಕಿಯಾಗಿದೆ. ಪರಿಣಾಮ ಇಬ್ಬರು ಪ್ರಾ*ಣ ಕಳೆದುಕೊಂಡಿದ್ದಾರೆ.

    ಖಾಸಗಿ ಬಸ್ ಚಾಲಕನ ಅತಿವೇಗದ ಮತ್ತು ಅಜಾಗರೂಕತೆಯ ಚಾಲನೆಯ ಪರಿಣಾಮ ಇಬ್ಬರು ಆತ್ಮೀಯ ಸ್ನೇಹಿತರು ಬ*ಲಿಯಾಗಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    BIG BOSS

    BBK11: ಅಬ್ಬಾ.. ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್​ ಕೊಟ್ಟ ಬಿಗ್​ಬಾಸ್​; ಏನದು?

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್​ಬಾಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮನೆಯಲ್ಲಿರೋ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್​ ನೀಡಿದ್ದಾರೆ.

    ಹೌದು, 13 ಮಂದಿ ಇರುವ ಬಿಗ್​ಬಾಸ್​ ಸೀಸನ್​ 11ರಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಆಫರ್ ನೀಡಲಾಗಿದೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಯಾವ ಟೀಮ್​ ಗೆಲ್ಲುತ್ತದೆಯೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್​ಬಾಸ್​ ಈ ಟಾಸ್ಕ್​ಗಳನ್ನು ನೋಡಿದ್ದಾರೆ. ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.

    ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಕೊಟ್ಟ ಆಫರ್​ ಏನು?

    1. ಇಮ್ಯೂನಿಟಿ ಕಾರ್ಡ್​: ಈ ವಾರದ ನಾಮಿನೇಷನ್​ನಿಂದ ಇಮ್ಯೂನಿಟಿ.

    2. ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್: ಗೆದ್ದವರಿಗೆ ಕ್ಯಾಪ್ಟನ್ಸಿ ಓಟಕ್ಕೆ ನೇರ ಪ್ರವೇಶ.

    3. ಲಕ್ಷುರಿ ಕಾರ್ಡ್​: ಗೆದ್ದವರಿಗೆ ಬಾಯಿ ಚಪ್ಪರಿಸುವ ಆನಂದ.

    4. ಗುಡ್​ನೈಟ್​ ಕಾರ್ಡ್​: ಗೆದ್ದವರಿಗೆ ಈ ಮನೆಯಲ್ಲಿನ ನಿದ್ದೆ ಹಾಗೂ ಮಂಚಗಳ ಮೇಲಿನ ಅಧಿಕಾರದ ಸುಖ.

    5. ಕಿಕ್​ ಔಟ್​ ಕಾರ್ಡ್​: ಗೆದ್ದವರಿಗೆ ಮುಂದಿನ ಟಾಸ್ಕ್​ನಿಂದ ಒಂದು ತಂಡವನ್ನು ಹೊರಗೆ ಇಡುವ ಅಧಿಕಾರ.

    6. ಪನಿಶ್ಮೆಂಟ್ ಕಾರ್ಡ್​: ಗೆದ್ದವರಿಗೆ ಮನೆ ಕೆಲಸದಿಂದ ಸಂಪೂರ್ಣ ಮುಕ್ತಿ. ಸೋತವರಿಗೆ ಹೆಚ್ಚುವ ಮನೆಕೆಲಸ ಹಾಗೂ ಒಂದು ತಂಡಕ್ಕೆ ಗೆದ್ದ ತಂಡದಿಂದ ಸೇವಾ ಭಾಗ್ಯಾ.

    ಪ್ರತಿ ತಂಡ ತಮ್ಮ ಎದುರಾಳಿ ತಂಡಗಳ ವಿರುದ್ಧ ಮುನ್ನಡೆ ಸಾಧಸುವುದು ತುಂಬಾ ಮುಖ್ಯ ಅಂತ ಬಿಗ್​ಬಾಸ್​ ಅನೌನ್ಸ್​ ಮಾಡಿದ್ದಾರೆ. ಇನ್ನೂ ಬಿಗ್​ಬಾಸ್​ ಕೊಟ್ಟ ತವರಿನ ಸಿರಿ ಟಾಸ್ಕ್​ನಲ್ಲಿ ಗೌತಮಿ ಅವರ ಟೀಮ್​ ಗೆದ್ದಿದೆ. ಹೀಗಾಗಿ ಅವರು ಇಮ್ಯೂನಿಟಿ ಕಾರ್ಡ್ ಆನ್ನು ಆಯ್ಕೆ ಮಾಡಿ ಅನುಷಾ ಅವರನ್ನು ನಾಮಿನೇಷ್​ನಿಂದ ಸೇಫ್ ಮಾಡಿದ್ದಾರೆ. ಅಲ್ಲದೇ ಮನೆಯ ಕ್ಯಾಪ್ಟನ್​ ಹನುಮಂತ ಅವರ ಆಯ್ಕೆ ಅನುಸಾರ ಧನರಾಜ್​, ಗೋಲ್ಡ್​ ಸುರೇಶ್​ ಹಾಗೂ ಮೋಕ್ಷಿತಾ ಪೈ ಈ ವಾರ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಯಾರ ತಂಡ ಯಾವ ಅಧಿಕಾರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಾಗಿದೆ.

    Continue Reading

    LATEST NEWS

    ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆ 10 ರೂ. ಇಳಿಕೆ!

    Published

    on

    ನವದೆಹಲಿ: ವಾಹನ ಸವಾರರಿಗೆ ಸರ್ಕಾರಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ 10 ರೂ. ಇಳಿಕೆಯಾಗುವ ಸಾಧ್ಯತೆ ಇದೆ.

    ಹೌದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲು ಸರ್ಕಾರ ಒಂದು ಮಾರ್ಗವನ್ನು ಕಂಡುಕೊಂಡಿದೆ. ಆದರೆ, ಅದನ್ನು ಆರಂಭಿಸಲು ಸರ್ಕಾರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಆದರೆ ಕ್ರಮೇಣ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ನಿವಾರಣೆಯಾಗುತ್ತಿದೆ. ಇದರಿಂದ ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಬಹುದು. ಆದ್ದರಿಂದ, ಮಿಶ್ರ ಇಂಧನದಿಂದ ಚಲಿಸುವ ಕಾರುಗಳು ಮಾರುಕಟ್ಟೆಯನ್ನು ತಲುಪಿವೆ.

    ಇಂಧನ ಫ್ಲೆಕ್ಸ್ ಜೊತೆಗೆ ಎಥೆನಾಲ್ ನಿಂದ ಚಲಿಸುವ ಕಾರುಗಳೂ ಮಾರುಕಟ್ಟೆಗೆ ಬರಲಿವೆ ಎಂದು ಸಾರಿಗೆ ಸಚಿವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಅದರ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ.

    Continue Reading

    LATEST NEWS

    Trending