LATEST NEWS
ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಗೂಡ್ಸ್ ಲಾರಿ; ಚಾಲಕ ಗಂಭೀರ
ಉಡುಪಿ : ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.
ಮುಂದೆ ಓದಿ..; ಕಾಪು ಬೀಚ್ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ..!
ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ತಾಂತ್ರಿಕ ಸಮಸ್ಯೆಯಿಂದ ರಾಷ್ಟ್ರೀಯ ಹೆದ್ದಾರಿ ನಡುವೆಯೇ ಲಾರಿ ಕೆಟ್ಟು ನಿಂತಿತ್ತು. ಹಿಂದಿನಿಂದ ಬಂದ ಮತ್ತೊಂದು ಲಾರಿಯ ಚಾಲಕ ಇದನ್ನು ಗಮನಿಸದೆ ಎದುರಿನಲ್ಲಿ ಇದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಚೀನಾ ಗಡಿ ಭಾಗದಲ್ಲಿ ನದಿ ದಾಟುವಾಗ ಟ್ಯಾಂಕ್ ಅಪ*ಘಾತ – ಐವರು ಭಾರತೀಯ ಯೋಧರು ಹುತಾ*ತ್ಮ
ನವದೆಹಲಿ: ಲೇಹ್ನ ದೌಲತ್ ಬೇಗ್ ಓಲ್ಡಿ ಪ್ರದೇಶದ ಎಲ್ಎಸಿ ಬಳಿ ನದಿ ದಾಟುವ ಅಭ್ಯಾಸದ ವೇಳೆ ಟ್ಯಾಂಕ್ ಅಪ*ಘಾತದಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾ*ತ್ಮರಾಗಿದ್ದಾರೆ.
ಶನಿವಾರ ಮುಂಜಾನೆ 1 ಗಂಟೆ ಸುಮಾರಿಗೆ ಸಂಭವಿಸಿದ ಅಪ*ಘಾತದಲ್ಲಿ ಹುತಾ*ತ್ಮರಾದ ಐವರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಅಥವಾ ಜೆಸಿಒ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕರು ತರಬೇತಿ ಕಾರ್ಯಾಚರಣೆಯಲ್ಲಿದ್ದರು. ಲೇಹ್ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೋಧಿ ನದಿಯನ್ನು ತಮ್ಮ T-72 ಟ್ಯಾಂಕ್ ಮೂಲಕ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಲು ಪ್ರಾರಂಭಿಸಿತು. ತಕ್ಷಣವೇ ಟ್ಯಾಂಕ್ನೊಂದಿಗೆ ಸೈನಿಕರು ಉಬ್ಬುವ ನದಿಯಲ್ಲಿ ಮುಳುಗಿ ಹೋದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ. ‘ಲಡಾಖ್ನಲ್ಲಿ ಸಂಭವಿಸಿದ ದುರ*ದೃಷ್ಟಕರ ಅಪ*ಘಾತದಲ್ಲಿ ನಮ್ಮ ಐವರು ವೀರ ಭಾರತೀಯ ಸೇನೆಯ ಯೋಧರು ಪ್ರಾಣ ಕಳೆದುಕೊಂಡಿದ್ದಕ್ಕಾಗಿ ತೀವ್ರ ದುಃಖವಾಗಿದೆ. ನಾವು ಎಂದಿಗೂ ಆದರ್ಶಪ್ರಾಯವನ್ನು ಮರೆಯುವುದಿಲ್ಲ. ದೇಶಕ್ಕೆ ನಮ್ಮ ಧೀರ ಸೈನಿಕರ ಸೇವೆ ಅಪಾರ. ದುಃಖದ ಸಮಯದಲ್ಲಿ ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಎಕ್ಸ್ನಲ್ಲಿ ಸಚಿವರು ಪೋಸ್ಟ್ ಮಾಡಿದ್ದಾರೆ.
DAKSHINA KANNADA
ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ
ಶಿರಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾ*ತ ಸಂಭವಿಸಿದೆ. ರಾಜಹಂಸ ಹಾಗೂ ಐರಾವತ ಬಸ್ ಮುಖಾಮುಖಿ ಡಿ*ಕ್ಕಿಯಾಗಿದೆ.
ಈ ವೇಳೆ ಅಪಘಾ*ತ ತಪ್ಪಿಸಲು ಹೋಗಿ ಟೆಂಪೋವೊಂದು ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!
ಇನ್ನು ರಸ್ತೆ ಸಂಚಾರ ಬಂದ್ ಮಾಡಿ, ಬಸ್ ಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಯಿತು.
LATEST NEWS
ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ..! ನಾಲ್ವರ ಸಾ*ವು..!
ತಮಿಳುನಾಡು: ಪಟಾಕಿತಯಾರಿಕಾ ಫ್ಯಾಕ್ಟರಿಯಲ್ಲಿ ಸ್ಫೋ*ಟ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುದನಗರ ಸತ್ತೂರಿನಲ್ಲಿ ನಡೆದಿದೆ.
ಖಾಸಗಿ ಒಡೆತನದ ಪಟಾಕಿ ಫ್ಯಾಕ್ಟರಿಯಲ್ಲಿ ಒಂದಕ್ಕಿಂತ ಹೆಚ್ಚು ರಸಾಯನಿಕಗಳನ್ನು ಬೆರೆಸಿದ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಓರ್ವ ಗಂಭೀರ ಗಾಯಗೊಂಡಿದ್ದು ಆತನನ್ನು ವಿರುದನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ನೇ*ಣಿಗೆ ಶರಣಾದ ಪಾಗಲ್ ಪ್ರೇಮಿ..! ವ್ಯಾಟ್ಸಾಪ್ ಸ್ಟೇಟಸ್ ಹಾಕಿ ಜೀವಾಂ*ತ್ಯ..!!
ಪಟಾಕಿ ಸ್ಫೋಟಗೊಂಡಂತೆ ಬೆಂಕಿ ವ್ಯಾಪಿಸಿದೆ. ಘಟನೆಯಿಂದಾಗಿ ಕಾರ್ಖಾನೆಯ ಒಂದು ಭಾಗದ ಕಟ್ಟಡ ನೆಲಸಮವಾಗಿದೆ. ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯುಂಟಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಭೆಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟಕ್ಕೆ ನಿಖರ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಸಿಎಂ ಸ್ಟಾಲಿನ್ರವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
- LATEST NEWS4 days ago
ಪ್ರೀತಂ ಗೌಡ ಸೇರಿ ನಾಲ್ವರ ಮೇಲೆ ಎಫ್ಐಆರ್..! ಪ್ರಜ್ವಲ್ ಗೆ ಮತ್ತೊಂದು ಸಂಕಷ್ಟ
- DAKSHINA KANNADA5 days ago
ಕರಾವಳಿಯಲ್ಲಿ ಬಿರುಸು ಪಡೆದುಕೊಂಡ ಮಳೆ; ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ
- DAKSHINA KANNADA5 days ago
ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ
- LATEST NEWS6 days ago
ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?
Pingback: ರಸ್ತೆ ಬದಿಯಲ್ಲಿ ಮಲಗಿದ್ದ ದನಗಳಿಗೆ ಇಂಜೆಕ್ಷನ್ ನೀಡಿ ಕಾರಿನಲ್ಲಿ ಸಾಗಾಟ..! ಸಿಸಿಟಿವಿಯಲ್ಲಿ ಕೃತ್ಯ ಸೆರೆ - NAMMAKUD