ಮಧ್ಯ ವಯಸ್ಸಿನ ದಂಪತಿ ಜೀವಾಂತ್ಯ ಮಾಡಿದ ಘಟನೆ ಮಂಗಳೂರು ನಗರದ ಫಳ್ನೀರ್ ಖಾಸಾಗಿ ಹೋಟೇಲ್ ಲಾಡ್ಜ್‌ನಲ್ಲಿ ಸಂಭವಿಸಿದೆ.
ಮಂಗಳೂರು : ಮಧ್ಯ ವಯಸ್ಸಿನ ದಂಪತಿ ಜೀವಾಂತ್ಯ ಮಾಡಿದ ಘಟನೆ ಮಂಗಳೂರು ನಗರದ ಫಳ್ನೀರ್ ಖಾಸಾಗಿ ಹೋಟೇಲ್ ಲಾಡ್ಜ್‌ನಲ್ಲಿ ಸಂಭವಿಸಿದೆ.
ಮೃತರನ್ನ್ನು ರವೀಂದ್ರ (55) ಮತ್ತು ಸುಧಾ (50) ಎಂದು ಗುರುತ್ತಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಈ ದಂಪತಿ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಭ ನಿವಾಸಿಗಳು ಎಂದು ತಿಳಿದು ಬಂದಿದೆ.
ಫೆಬ್ರವರಿ 6 ರಂದು ಮಂಗಳೂರಿಗೆ ಬಂದಿದ್ದ ದಂಪತಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಕಳೆದ 2 ದಿನಗಳಿಂದ ಹೊರ ಬಾರದ ಕಾರಣ ಲಾಡ್ಜ್ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ಲುಂಗಿ ಹಾಕಿ ಒಂದೇ ಕುಣಿಕೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ತನಿಖೆಗೆ ಮಾರ್ಗದರ್ಶನ ಮಾಡಿದ್ದಾರೆ.
ದಂಪತಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಮೃತರ ಬಳಿ ಸಿಕ್ಕಿರುವ ಆಧಾರ್ ಕಾರ್ಡ್ ಆಧಾರದಲ್ಲಿ ಇವರ ವಿಳಾಸ ಪತ್ತೆ ಹಚ್ಚಲಾಗಿದೆ. ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.