Connect with us

    LATEST NEWS

    ಕಾರ್ಕಳ: ಪೆಟ್ರೋಲ್ ತುಂಬಿಸಿ ನಗದು ಪಾವತಿಸದೇ ವಂಚಿಸಿದ್ದ ಕೇಸ್; ಆರೋಪಿ ಪತ್ತೆ

    Published

    on

    ಕಾರ್ಕಳ: ತಾಲೂಕು ಕಚೇರಿ ಜಂಕ್ಷನ್ ಬಳಿಯ ಅನು ಫಿಲ್ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ನಗದು ಪಾವತಿಸದೇ ವಂಚಿಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆಗಸ್ಟ್ 29 ರಂದು ಬೆಳಗಿನ ಜಾವ 2.50 ಗಂಟೆಗೆ ಈ ಘಟನೆ ನಡೆದಿತ್ತು. ಆರೋಪಿಯು ಕೆವಿ 20 ಎಮ್ ಇ 8212 ನೇ ನಂಬರ್‌ನ ಮಹೇಂದ್ರ XUV 300 ನೇ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. ಅದರಂತೆ ಆರೋಪಿಯು 4253.88 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಬಂಕ್‌ನ ಸಿಬ್ಬಂದಿ ಆಕಾಶ್ ಅವರಲ್ಲಿ ಯುಪಿಐ ಸ್ಕ್ಯಾನರ್ ತರುವಂತೆ ಹೇಳಿದ್ದು ಅದರಂತೆ ಯುಪಿಐ ಸ್ಕ್ಯಾನರ್ ಅನ್ನು ತರಲು ಹೋದಾಗ ಆರೋಪಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದನು. ಪೆಟ್ರೋಲ್ ಹಾಕಿದ 4253.88 ರೂಪಾಯಿ ಹಣವನ್ನು ನೀಡದೇ ಮೋಸ ಮಾಡಿದ್ದನು.

    ಸಿಸಿ ಕ್ಯಾಮೆರಾದಿಂದ ಮಾಹಿತಿ:

    ಆರೋಪಿ ಚಲಾಯಿಸಿದ ಕಾರು ಪೆಟ್ರೋಲ್ ಬಂಕ್ ಎದುರುಗಡೆಯ ರಸ್ತೆಯಾಗಿ ಸ್ವಲ್ಪ ಮುಂದಕ್ಕೆ ಹೋಗಿದ್ದು, ಕೆಲವೇ ಕ್ಷಣದಲ್ಲಿ ಮತ್ತೇ ಹಿಂತಿರುಗಿದೆ. ಆ ವೇಳೆಗೆ ನಾಯಿಗಳು ಕಾರನ್ನು ಹಿಂಮ್ಮೆಟ್ಟಿಸಲು ಮುಂದಾಗಿ ಬೊಗಳಿರುವ ದೃಶ್ಯಾವಳಿ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಜೊತೆಗೆ ಪೆಟ್ರೋಲ್ ಹಾಕಿ ಹಣ ಪಾವತಿಸದೇ ಕುಕ್ಕುಂದೂರು ಗಣಿತ ನಗರದ ಮೂಲಕವಾಗಿ ಹಿರಿಯಡ್ಕ ಮಾರ್ಗವಾಗಿ ಹಾದು ಹೋದ ಕಾರಿನ ಕುರಿತು ಎರಡು ಕಡೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

    ಕಾರು ಹೊರಟು ಹೋದ ವೇಳೆ ಹಾಗೂ ಗಣಿತ ನಗರ ಮತ್ತು ಹಿರಿಯಡ್ಕ ಮಾರ್ಗವಾಗಿ ಹಾದೂ ಹೋದ ವಾಹನಗಳ ವಿವರ ಪಡೆದ ಪೊಲೀಸರು ಆರೋಪಿ ಚಲಾಯಿಸಿ ವಾಹನ ಪತ್ತೆ ಹಚ್ಚಲು ಸಹಕಾರಿಯಾಗಿತ್ತು. ಬಂಟಕಲ್ಲು ವ್ಯಕ್ತಿಗೆ ಅಧೀನದಲ್ಲಿ ಇರುವ ವಾಹನವೆಂಬ ಮಾಹಿತಿ ಲಭಿಸಿದೆ.

    BIG BOSS

    ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್​ಬಾಸ್ ಮನೆಯಲ್ಲಿ ಇದೇ ಮೊದಲು

    Published

    on

    ಬಿಗ್​ಬಾಸ್​ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ವಿಷಯಗಳು ಪಕ್ಕಾ ಇರುತ್ತವೆ. ಜನರು ಗಿಫ್ಟ್​ ಕಳಿಸುವುದು, ಕಿಚ್ಚ ಅಡುಗೆ ಕಳಿಸುವುದು, ಪ್ರತಿ ವಾರ ಕ್ಯಾಪ್ಟನ್ ಆಗುವುದು, ಭಾನುವಾರದ ಎಲಿಮಿನೇಷನ್ ಇದೆಲ್ಲವೂ ಒಂದು ರೀತಿ ಫಿಕ್ಸ್​ ಕಾರ್ಯಕ್ರಮಗಳು. ಇದೇ ರೀತಿ ಕಿಚ್ಚನ ಚಪ್ಪಾಳೆ ಸಹ ಕಳೆದ ಕೆಲ ಸೀಸನ್​ನಿಂದ ಫಿಕ್ಸ್ ಕಾರ್ಯಕ್ರಮವಾಗಿದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಜನ ಕಾಯುವಂತೆ ಈ ವಾರ ಕಿಚ್ಚ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಸಹ ಜನ ಕಾಯುತ್ತಾರೆ. ಆದರೆ ಕಳೆದ ವಾರ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಕಳೆದ ವಾರ ಮಾಡದಿದ್ದನ್ನು ಕಿಚ್ಚ ಈ ವಾರ ಮಾಡಿದ್ದಾರೆ.

    ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಮೊದಲ ವಾರ ಮನೆಯಲ್ಲಿ ಸಾಕಷ್ಟು ಜಗಳ, ತರ್ಲೆ ತಾಪತ್ರಯಗಳು ನಡೆದಿದ್ದವು. ಲಾಯರ್ ಜಗದೀಶ್ ಅಂತೂ ಬಿಗ್​ಬಾಸ್​ ಮನೆಯಲ್ಲಿದ್ದುಕೊಂಡೆ ಬಿಗ್​ಬಾಸ್​ಗೆ ಧಮ್ಕಿ ಹಾಕಿದ್ದರು. ಹಲವರು ನಿಯಮ ಮೀರಿದ್ದರು. ಮನೆಯಲ್ಲಿ ಮೊದಲ ದಿನದಿಂದಲೂ ಬರೀ ಜಗಳಗಳೇ ನಡೆದಿದ್ದವು. ಸುದೀಪ್ ಮೊದಲ ವಾರದ ಪಂಚಾಯ್ತಿಯ ಎರಡೂ ದಿನದಲ್ಲಿ ಸುದೀಪ್​ ಮನೆಯವರಿಗೆ ವ್ಯಕ್ತಿತ್ವದ ಪಾಠ ಮಾಡಿ ಸುಸ್ತಾದರು. ಮೊದಲ ವಾರದ ಗಲಾಟೆಯ ನಡುವೆ ಆ ವಾರ ಚೆನ್ನಾಗಿ ಆಡಿದ್ದ ಸ್ಪರ್ಧಿಗೆ ಚಪ್ಪಾಳೆ ಕೊಡುವುದನ್ನೇ ಸುದೀಪ್ ಮರೆತಿದ್ದರು.

    ಎರಡನೇ ವಾರಾಂತ್ಯದ ವಾರದ ಪಂಚಾಯ್ತಿಯ ಆರಂಭದಲ್ಲಿಯೇ ಒಂದು ಚಿತ್ರವೊಂದನ್ನು ಹಂಸ ಅವರಿಗೆ ಹೇಳಿ ಸ್ಟೋರ್ ರೂಂನಿಂದ ತರಲು ಹೇಳಿದರು ಸುದೀಪ್. ಆ ಚಿತ್ರ ಒಂದು ಕಾರ್ಟೂನ್ ಆಗಿತ್ತು, ವ್ಯಕ್ತಿಯೊಬ್ಬನ ತಲೆ ಬಳಿಯ ಏನೇನೋ ಚಿತ್ರಗಳಿದ್ದವು. ತಲೆ ಚಿಟ್ಟು ಹಿಡಿದ ವ್ಯಕ್ತಿಯೊಬ್ಬ ಕಾರ್ಟೂನ್ ಅದು. ಆ ಚಿತ್ರದ ಬಗ್ಗೆ ವಿವರಣೆ ನೀಡಿದ ಸುದೀಪ್, ಅದು ನನ್ನದೇ ಚಿತ್ರ. ಮೊದಲ ವಾರ ಎಪಿಸೋಡ್ ನೋಡಿ, ನಿಮ್ಮ ಬಳಿ ಎರಡು ವಾರ ಮಾತನಾಡಿದ ಬಳಿಕ ಆ ಸ್ಥಿತಿ ಆಗಿತ್ತು ಎಂದರು. ಅಲ್ಲದೆ, ಮೊದಲ ವಾರ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಆದರೆ ಈಗ ನೀಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಕಿಚ್ಚನಿಗೆ ಕಿಚ್ಚನ ಚಪ್ಪಾಳೆ ನೀಡುತ್ತಿದ್ದೇನೆ ಎಂದರು.

    ನಿಮ್ಮ ಮೊದಲ ವಾರದ ಎಪಿಸೋಡ್ ಎಲ್ಲ ನೋಡಿ, ನಿಮ್ಮ ಬಳಿ ಮಾತನಾಡಿ, ನಿಮಗೆ ಅರ್ಥ ಮಾಡಿಸುವುದು, ತಪ್ಪು ತಿದ್ದುವುದು, ಮಾರ್ಗದರ್ಶನ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಹಾಗಾಗಿ ಆ ಚಪ್ಪಾಳೆಗೆ ನಾನೇ ಅರ್ಹ ಎನಿಸಿತು, ಅದಕ್ಕೆ ಇದೇ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಯನ್ನು ನನಗೆ ನಾನೇ ಕೊಟ್ಟುಕೊಳ್ಳುತ್ತಿದ್ದೇನೆ ಎಂದರು. ಆ ಕಾರ್ಟೂನ್ ಚಿತ್ರವನ್ನು ಮನೆಯಲ್ಲಿ ನೇತು ಹಾಕಿಸಿದರು.

    Continue Reading

    BIG BOSS

    ಬಿಗ್‌ಬಾಸ್‌ಗೆ ಪೊಲೀಸ್ ನೋಟಿಸ್; ವಿಚಾರಣೆಗೆ ಹಾಜರಾಗಲು ಸೂಚನೆ

    Published

    on

    ಬೆಂಗಳೂರು: ‘ಬಿಗ್ ಬಾಸ್’ ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಬರುವಂತೆ ‘ಬಿಗ್ ಬಾಸ್’ ಆಯೋಜಕರಿಗೆ ನೋಟಿಸ್ ನೀಡಲಾಗಿದೆ.

    ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

    ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದಿಂದ ದೂರು ದಾಖಲಿಸಿದ್ದು, ಮಹಿಳಾ ಆಯೋಗದ ದೂರು ಆಧರಿಸಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

    ‘ಬಿಗ್ ಬಾಸ್’ ಸೆಟ್ ಗೆ ತೆರಳಿ ಇನ್ ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಸಡ್ಡೆ ತೋರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

    Continue Reading

    LATEST NEWS

    ಪೊದೆಯಲ್ಲಿ ಸಿಕ್ಕ ನವಜಾತ ಶಿಶುವನ್ನು ರಕ್ಷಿಸಿದ ಇನ್ಸ್ಪೆಕ್ಟರ್; ಮುಂದೇನಾಯ್ತು ಗೊತ್ತಾ ??

    Published

    on

    ಮಂಗಳೂರು/ಗಾಜಿಯಾಬಾದ್: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ಇನ್ಸ್ಪೆಕ್ಟರ್ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಬಳಿಕ ಈಗ ಅವರೇ ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ.


    ಪೊದೆಯಲ್ಲಿ ಶಿಶು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ದುಢಿಯಾ ಪೀಪಲ್ ಪುಷ್ಪೇಂದ್ರ ಸಿಂಗ್ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಹೆತ್ತವರು ಪತ್ತೆಯಾಗದ ಕಾರಣ ಸಿಂಗ್ ತಮ್ಮ ಪತ್ನಿ ಬಳಿ ಚರ್ಚಿಸಿ ತಾವೇ ದತ್ತು ಪಡೆಯಲು ಮುಂದಾಗಿದ್ದಾರೆ.

     

    ಇದನ್ನೂ ಓದಿ: 16ನೇ ವಯಸ್ಸಿನಲ್ಲೇ ದ್ವಿಚಕ್ರ ವಾಹನ ಲೈಸೆನ್ಸ್; ಸರ್ಕಾರದ ಹೊಸ ಕಾನೂನು ಯಾವುದು ಗೊತ್ತಾ ??

     

    ಪುಷ್ಪೇಂದ್ರ ಸಿಂಗ್ ದಂಪತಿಗೆ 2018 ರಲ್ಲಿ ವಿವಾಹವಾಗಿದ್ದು, ಇನ್ನೂ ಮಕ್ಕಳಾಗಿರಲಿಲ್ಲ. ಅದಲ್ಲದೇ, ನವರಾತ್ರಿ ವೇಳೆ ಈ ಮಗು ಸಿಕ್ಕಿದ್ದು, ದೇವಿಯ ಆಶಿರ್ವಾದ ಎಂದಿದ್ದಾರೆ. ದತ್ತು ಪಡೆವ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    Trending