Connect with us

    DAKSHINA KANNADA

    ನಾಪತ್ತೆಗೂ ಮುನ್ನ ಖಾಸಗಿ ಬಸ್‌ಗೆ ಗುದ್ದಿದ್ದ ಕಾರು; ಅಲಿ ಪ್ರಕರಣದಲ್ಲಿ ಹೊಸ ಅಪ್ಡೇಟ್..!

    Published

    on

    ಮಂಗಳೂರು: ನಗರದ ಪ್ರಸಿದ್ಧ ಉದ್ಯಮಿ ಬಿ.ಎಂ ಮಮ್ತಾಜ್ ಅಲಿ (52) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಸಿಕ್ಕಿದೆ.


    ಮೋಯ್ದೀನ್ ಬಾವ ಸಹೋದರನ ಕಾರು ನಿನ್ನೆ (ಅ.6) ಮುಂಜಾನೆ 4 ಗಂಟೆ ಸುಮಾರಿಗೆ ಕೂಳೂರಿನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೈಕಂಪಾಡಿಯಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು.
    ಈ ಘಟನೆಯ ಹಿನ್ನಲೆಯಿಂದ ಕಾರಿನ ನಂಬರ್ ಪ್ಲೇಟ್ ಸ್ಥಳದಲ್ಲೇ ಕಳಚಿ ಬಿದ್ದಿತ್ತು. ಅಪಘಾತ ಸಂಭವಿಸಿದ ಬಳಿಕವೂ ಮಮ್ತಾಜ್ ಅಲಿ ಕಾರನ್ನು ನಿಲ್ಲಿಸದೇ ಸಾಗಿದ್ದರು ಎಂದು ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
    ಅಲಿಯ ಕಾರು ಮುಂಜಾನೆ 4.40ರ ಸುಮಾರಿಗೆ ಕೂಳೂರು ಸೇತುವೆಯತ್ತ ಸಾಗಿದ ದೃಶ್ಯಗಳು ಸಿ.ಸಿ. ಟಿ.ವಿ ಕ್ಯಾಮರದಲ್ಲಿ ಸೆರೆಯಾಗಿದೆ. ಮುಂಜಾನೆ 5.09 ರ ಸುಮಾರಿಗೆ ಕೂಳೂರು ಸೇತುವೆಯಲ್ಲಿ ಕಾರು ಇರುವ ಮಾಹಿತಿ ಪೊಲೀಸರಿಗೆ ದೊರಕಿದೆ. ಮುಂಜಾನೆ 4.40 ರಿಂದ 5.09 ರ ಮಧ್ಯದಲ್ಲಿ ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿದೆ.
    ಒಟ್ಟಿನಲ್ಲಿ ಅಲಿಯ ಬಿಎಂಡಬ್ಲ್ಯೂ ಕಾರು ನಗರದ ಹೊರವಲಯ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದ್ದರಿಂದ ನದಿಗೆ ಹಾರಿರುವ ಅನುಮಾನ ವ್ಯಕ್ತವಾಗಿದೆ.

    DAKSHINA KANNADA

    ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು

    Published

    on

    ಮಂಗಳೂರು : ಕಾಮು*ಕ ಉಮೇಶ್ ರೆಡ್ಡಿಯ ಅವತಾರವೊಂದು ಮಂಗಳೂರಿನ ಕದ್ರಿಯಲ್ಲಿ ಕಾಣಿಸಿಕೊಂಡಿದ್ದು ಹಾಸ್ಟೆಲ್ ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ. ಮಂಗಳೂರಿನ ಕೆಪಿಟಿ ಬಳಿ ಇರುವ ದೇವರಾಜ ಅರಸು ಮಹಿಳಾ ವಿದ್ಯಾರ್ಥಿನಿ ನಿಲಯದ ಬಳಿ ಈತನ ಓಡಾಟ ಕಂಡು ಬಂದಿದೆ. ರಾತ್ರಿಯಾಗುತ್ತಿದ್ದಂತೆ ಹಾಸ್ಟೆಲ್ ಆವರಣದಲ್ಲಿ ಬೆತ್ತಲಾಗಿ ಓಡಾಡುವ ಈತ ವಿದ್ಯಾರ್ಥಿನಿಯರು ಗಮನಿಸಿದ್ರೆ ಅವರ ಮುಂದೆ ಅಸಭ್ಯವಾಗಿ ವರ್ತಿಸುತ್ತಾನಂತೆ.

    ಭಯದಲ್ಲಿ ವಿದ್ಯಾರ್ಥಿನಿಯರು :

    ಕಳೆದ ಸೆಪ್ಟಂಬರ್ 16 ರಂದು ಮೊದಲ ಬಾರಿಗೆ ಈತ ಹಾಸ್ಟೆಲ್‌ ಆವರಣಕ್ಕೆ ರಾತ್ರಿ ಸರಿ ಸುಮಾರು 10.30ಕ್ಕೆ ಎಂಟ್ರಿ ಕೊಟ್ಟು ವಿದ್ಯಾರ್ಥಿನಿಯರಿಗೆ ಭಯ ಹುಟ್ಟಿಸಿದ್ದ. ನಸುಕಿನ ಜಾವ ಸುಮಾರು 4.30 ರ ತನಕವೂ ಹಾಸ್ಟೆಲ್ ಸುತ್ತಮುತ್ತ ಓಡಾಡಿ ಕಿಟಕಿಗೆ ಕಲ್ಲೆಸೆದು , ಕಿಟಿಕಿ ಬಾಗಿಲು ಬಡಿದು ಕೀಟಲೆ ಮಾಡಿದ್ದ. ಈ ಬಗ್ಗೆ ಮರುದಿನ ಸಿಸಿ ಟಿವಿ ಫೂಟೇಜ್ ಸಹಿತವಾಗಿ ಕದ್ರಿ ಪೊಲೀಸರಿಗೆ ನಿಲಯ ಪಾಲಕರು ದೂರು ಕೂಡ ನೀಡಿದ್ದಾರೆ. ಇದಾಗಿ ವಾರಗಳ ಬಳಿಕ ಈತ ಮತ್ತೆ ಹಾಸ್ಟೆಲ್ ಬಳಿ ಪ್ರತ್ಯಕ್ಷವಾಗಿ ಮತ್ತದೇ ತನ್ನ ಹಳೇ ಆಟ ತೋರಿಸಿದ್ದಾನೆ. ಇದೀಗ ಈ ಕಾಮುಕ ಕ್ರಿಮಿಯಿಂದ ಹಾಸ್ಟೆಲ್ ವಿದ್ಯಾರ್ಥಿನಿಯರು ಭಯಗೊಂಡಿದ್ದು ಸಂಜೆಯಾಗುತ್ತಿದ್ದಂತೆ ಕೋಣೆ ಬಾಗಿಲು ಭದ್ರಪಡಿಸಿಕೊಳ್ಳುತ್ತಿದ್ದಾರೆ.

    ವಾರ್ಡನ್ ಇರೋಲ್ಲ…ಸೆಕ್ಯೂರಿಟಿ ಗಾರ್ಡ್ ಇಲ್ಲ:

    ಅಸಲಿಗೆ ವಿದ್ಯಾರ್ಥಿನಿಯರ ಈ ಹಾಸ್ಟೆಲ್‌ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿ ವಿದ್ಯಾರ್ಥಿನಿಯರಿಗೆ ಕಟ್ಟು ನಿಟ್ಟಿನ ಕ್ರಮ ಇದೆಯಾದ್ರೂ ಸಿಬಂದಿಯನ್ನು ಕೇಳೋರಿಲ್ಲ. ಹಾಸ್ಟೆಲ್ ವಾರ್ಡನ್‌ ರಾತ್ರಿ ಹೊತ್ತು ಹಾಸ್ಟೆಲ್‌ನಲ್ಲೇ ತಂಗಬೇಕಾಗಿದ್ರೂ ಸಂಜೆಯಾಗುತ್ತಿದ್ದಂತೆ ವಾರ್ಡನ್‌ ನಾಪತ್ತೆಯಾಗುತ್ತಾರೆ. ಇನ್ನು ವಾರ್ಡನ್‌ ಇಲ್ಲದ ಈ ಹಾಸ್ಟೆಲ್‌ನಲ್ಲಿ ಕನಿಷ್ಟ ಸೆಕ್ಯುರಿಟಿ ಗಾರ್ಡ್‌ ಇದ್ದಾರಾ ಅಂದ್ರೆ ಅವರು ಕೂಡ ಇಲ್ಲ.

    ಇದನ್ನೂ ಓದಿ : ಪುಣ್ಯ ಕ್ಷೇತ್ರದ ಕಲ್ಯಾಣ ಮಂಟಪ ಬಳಿ ದನದ ಮಾಂಸ ಮಾರಾಟ; ಆರೋಪಿ ನವೀನ್ ಅರೆಸ್ಟ್.!

    ಟೋಟಲ್‌ ಆಗಿ ಹೇಳೋದಾದ್ರೆ ಈ ಹಾಸ್ಟೆಲ್‌ನಲ್ಲಿರೋ ನೂರಾರು ವಿದ್ಯಾರ್ಥಿನಿಯರಿಗೆ ಇಲ್ಲಿ ಭದ್ರತೆಯೇ ಇಲ್ಲ. ಹೀಗಿರುವಾಗ ಮರಿ ಉಮೇಶ್ ರೆಡ್ಡಿ ಇಲ್ಲಿ ಸುತ್ತಾಡ್ತಾ ಇದ್ದಾನೆ ಅನ್ನೋ ವಿಚಾರ ತಿಳಿದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರಾ ಅಂದ್ರೆ ಅದೂ ಕೂಡಾ ಇಲ್ಲ. ಸದ್ಯಕ್ಕೆ ಆತ ಹಾಸ್ಟೆಲ್‌ ಒಳಗೆ ಎಂಟ್ರಿಕೊಡುವ ಪ್ರಯತ್ನ ಮಾಡಿಲ್ಲ. ಅಂತಹ ಒಂದು ಅಚಾತುರ್ಯ ನಡೆಯುವ ಮೊದಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಾಗಿದೆ.

    ವಿಡಿಯೋ ನೋಡಿ:

     

    Continue Reading

    DAKSHINA KANNADA

    ಕಿನ್ನಿಗೋಳಿ : ಬಾವಿಗೆ ಹಾರಿ ಮಹಿಳೆ ಆ*ತ್ಮಹತ್ಯೆ

    Published

    on

    ಕಿನ್ನಿಗೋಳಿ : ಮಹಿಳೆಯೋರ್ವರು ಬಾವಿಗೆ ಹಾರಿ ಅ*ತ್ಮಹತ್ಯೆಗೈದ ಘಟನೆ ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆಯಲ್ಲಿ ನಡೆದಿದೆ.

    ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ಆ*ತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿವೆ. ಯಾವದೇ ಸಂದರ್ಭ ಬಂದರೂ ಎದುರಿಸಬಲ್ಲೇ ಎಂಬ ಆತ್ಮವಿಶ್ವಾಸವು ಕುಂಠಿತವಾಗುತ್ತಿವೆ. ಇಧೀಗ ಅಂತಹದ್ದೇ ಒಂದು ಆ*ತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಅತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಾದಾಮಿ ಮೂಲದ ಸುನೀತಾ (31) ಎಂದು ಗುರುತಿಸಲಾಗಿದೆ.

     

    ಇದನ್ನೂ ಓದಿ:ಜಮೀನಿನಲ್ಲಿ ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ಗಲಾಟೆ; ಕೊ*ಲೆಯಲ್ಲಿ ಅಂತ್ಯ 

     

    ಆ*ತ್ಮಹತ್ಯೆಗೆ ನಿಖರ ಕಾರಣ ಏನೆಂಬುವುದು ತಿಳಿದುಬಂದಿಲ್ಲ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಎಂ.ಆರ್.ಪಿ.ಎಲ್ ಮತ್ತು ಮಾಂಡೋವಿ ಮೋಟರ್ಸ್ ಸಂಯೋಜನೆಯಲ್ಲಿ ಎಂ.ಆರ್.ಪಿ.ಎಲ್ ಹೈಕ್ಯೂ ಮೈಲೇಜ್ ಚಾಲೆಂಜ್ ಕಾರ್ಯಕ್ರಮ

    Published

    on

    ಮಂಗಳೂರು; ಎಂ.ಆರ್.ಪಿ.ಎಲ್ ಮತ್ತು ಮಾಂಡೋವಿ ಮೋರ್ಸ್ನ ಸಂಯುಕ್ತ ಆಶ್ರಯದಲ್ಲಿ ಎಂ.ಆರ್.ಪಿ.ಎಲ್ ಹೈಕ್ಯೂ ಮೈಲೇಜ್ ಚಾಲೆಂಜ್ ಕಾರ್ಯಕ್ರಮ ಕದ್ರಿಯ ಪೆಟ್ರೋಲ್ ಪಂಪ್ ನಲ್ಲಿ ನಡೆಯಿತು. ಎಂ.ಆರ್.ಪಿ.ಎಲ್ ನ ಗ್ರೂಪ್ ಜನರಲ್ ಮ್ಯಾನೇಜರ್ ಸುಭಾಷ್ ಪೈ ಚಾಲನೆ ನೀಡಿ ಮಾತನಾಡಿ, ಒ.ಎನ್.ಜಿ.ಸಿ ಯ ಅಂಗ ಸಂಸ್ಥೆಯಾದ ಎಂ.ಆರ್.ಪಿ ಎಲ್ ಉತ್ತಮ ಗುಣಮಟ್ಟದ ಇಂಧನವನ್ನು ರಾಜ್ಯದಲ್ಲಿ ಮಾತ್ರವಲ್ಲ ದೇಶದ ಜನತೆಗೆ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿವೆ. ಕರ್ನಾಟಕದಲ್ಲಿ ಅತೀ ದೊಡ್ಡ ಸಂಸ್ಥೆ ಎಂ.ಆರ್.ಪಿ.ಎಲ್ ಆಗಿದ್ದು, ಒಂದು ಮಾದರಿ ಸಂಸ್ಥೆಯಾಗಿದೆ. ಈ ಕಾರ್ಯಕ್ರಮದಿಂದ ಜನರಲ್ಲಿ ಇಂಧನದ ಸಂರಕ್ಷಣೆ ಮತ್ತು ವಾಹನ ಚಾಲನೆಯಲ್ಲಿ ಜಾಗೃತಿ ಉಂಟಾಗುತ್ತದೆ, ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ” ಎಂದರು.


    ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರಾದ ಸ್ವಾಮಿ ಪ್ರಸಾದ್ ಮಾತನಾಡಿ, “ದಕ್ಷಿಣ ಬಾರತದಲ್ಲಿ ಎಂ.ಆರ್.ಪಿ ಎಲ್ ನ 111 ಪೆಟೋಲ್ ಪಂಪ್ ಚಾಲನೆಯಲ್ಲಿದ್ದು ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಮುಂದಿನ ದಿನದಲ್ಲಿ ಅಂಧ್ರ ಪ್ರದೇಶಕ್ಕೆ ಕೂಡ ನಮ್ಮ ಪೆಟ್ರೋಲ್ ಪಂಪ್ ಗಳು ಕಾಲಿಡಲಿದೆ ಸಂಸ್ಥೆಯ ಇಂಧನ ಕ್ವಾಲಿಟಿಯನ್ನು ಗಮನಿಸಿದ ಗ್ರಾಹಕರು ಮತ್ತೆ ಮತ್ತೆ ನಮ್ಮ ಸಂಸ್ಥೆಯ ಇಂಧನವನ್ನು ಬಳಸುತ್ತಿದ್ದಾರೆ, ಗ್ರಾಹಕರು ನಮ್ಮ ಸೇವೆಯನ್ನು ಕೂಡ ಶ್ಲಾಘಿಸುತ್ತಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.


    ಕಾರ್ಯಕ್ರಮದಲ್ಲಿ ಸುಮಾರು 4೦ ವಾಹನ ಮಾಲಕರು ಪಾಲ್ಗೊಂಡಿದ್ದರು. ಎಂ.ಆರ್.ಪಿ.ಎಲ್ ನ ಮ್ಯಾನೇಜರ್ ಕಾಶಿನಾಥ್, ಮಂಗಳೂರು ಸ್ಪೋರ್ಸ್ ಅಸೋಶಿಯೇಶನ್ ನ ಸುಧೀರ್, ಮಾಂಡೋವಿ ಮೋಟರ್ಸ್ ನ ಎ,ಜಿ.ಎಂ ಕೃಷ್ಣ ಶೆಟ್ಟಿ, ವರ್ಕ್ ಶಾಪ್ ಮ್ಯಾನೇಜರ್ ಗ್ರೇಷಿಯನ್ ಪಿಂಟೋ, ಸೇಲ್ಸ್ ಮ್ಯಾನೇಜರ್ ಮುರಳೀಧರ್, ಎಂ.ಆರ್.ಪಿ.ಎಲ್ ನ ಹೈಕ್ಯೂ ಡೀಲರ್ ರಾಘವೇಂದ್ರ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

    Continue Reading

    LATEST NEWS

    Trending