Saturday, November 27, 2021

90 ರ ದಶಕದಲ್ಲಿ ಸಿನಿರಸಿಕರ ಮನಗೆದ್ದ ಪ್ರೇಮ ಮತ್ತೆ ಬೆಳ್ಳಿತೆರೆಗೆ

ಬೆಂಗಳೂರು: ಓಂ ಸಿನಿಮಾದ ಮೂಲಕ ಸಿನಿ ರಸಿಕರ ಮನಗೆದ್ದಿದ್ದ ಪ್ರೇಮ ಮತ್ತೆ ಬೆಳ್ಳಿತೆರೆಗೆ ಎಲ್ಲರನ್ನು ಮನರಂಜಿಸಲು ಬರುತ್ತಿದ್ದಾರೆ. ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ರು.

ಆದ್ರೆ ಈಗ ಕರಿಕೋಟು ಹಾಕೋಂಡು ಲಾಯರ್ ಗೆಟಪ್ನಲ್ಲಿ ಪ್ರೇಕ್ಷಕರ ಮುಂದೆ ಮನರಂಜಿಸಲು ಮುಂದಾಗಿದ್ದಾರೆ. ಚಿತ್ರರಂಗದಿಂದ ನಟಿ ಪ್ರೇಮ ದೂರ ನಿಂತಿದ್ರು ಪ್ರೇಮ ಅವರನ್ನ ಇವತ್ತಿಗೂ ಪ್ರೇಕ್ಷಕ ಆರಾಧಿಸುತ್ತಿದ್ದಾರೆ.

ಇವತ್ತಿಗೂ ಪ್ರೇಮ ಅವರು ಅಭಿನಯ ಮಾಡಿದ್ದ ಸಿನಿಮಾಗಳು ಸಿನಿಮಾದ ಹಾಡುಗಳು ಪ್ರೇಕ್ಷಕರನ್ನ ರಂಜಿಸುತ್ತಿವೆ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ದ ಓಂ ಸಿನಿಮಾದ ಮೂಲಕ ಕನ್ನಡ ಸಿನಿಮಾ ಜಗತ್ತಿ ಚಿರಪರಿಚಿತವಾದ ಸುಂದ್ರಿ ಪ್ರೇಮ.

ಕನ್ನಡದ ಜೊತೆ ತಮಿಳು, ತೆಲುಗು ಸಿನಿಮಾ ಭೂಮಿಯಲ್ಲಿಯೂ ಪ್ರೇಮ ಚಂದ್ರಿಕೆ ಅಭಿನಯ ಬೆಳದಿಂಗಳನ್ನ ಹರಿಸಿದ್ದಾರೆ. ಮದುವೆ ನಂತರ ಕೊಂಚ ಸಿನಿಮಾ ರಂಗದಿಂದ ದೂರ ಉಳಿದ ನಟಿ ಪ್ರೇಮ 2017ರಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾದ ಮೂಲಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ರು.

ಒಳ್ಳೆ ಪಾತ್ರಗಳಿಗೆ ಕಾಯತ್ತಿದ್ದ ನಟಿ ಪ್ರೇಮ ಅವರು ಈಗ ಕರಿಕೋಟು ಹಾಕೊಂಡು ಲಾಯರ್ ಲುಕ್ನಲ್ಲಿ ಖಡಕ್ ಪೋಸ್ ಕೊಟ್ಟಿದ್ದಾರೆ.  ಅಷ್ಟಕ್ಕೂ ಪ್ರೇಮ ಅವರ ಹೊಸ ಸಿನಿಮಾದ ಹೆಸರು ವೆಡಿಂಗ್ ಗಿಫ್ಟ್.

ಇದು ವಿಕ್ರಂ ಪ್ರಭು ನಿರ್ದೇಶನದ ಸಿನಿಮಾ. ಈ ಸಿನಿಮಾದಲ್ಲಿ ಲಾಯರ್ ಪಾತ್ರವನ್ನ ಫಸ್ಟ್ ಟೈಮ್ ಪ್ರೇಮ ನಿಭಾಯಿಸುತ್ತಿದ್ದಾರೆ. ಸೋನು ಗೌಡ ಹಾಗೂ ನಿಶಾಂತ್ ನಾಣಯ್ಯ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಇದೊಂದು ಮೇಲೋಡ್ರಾ ಸಿನಿಮಾವಾಗಿದ್ದು ಮದುವೆ ನಂತರ ಗಂಡ ಹೆಂಡತಿಯ ಸಂಭಂದದಲ್ಲಿ ಪ್ರೀತಿ ಜಗಳ ಬಿನ್ನಭಿಪ್ರಾಯ ಇತ್ಯಾದಿಗಳು ಹೇಗೆ ಬರುತ್ತವೆ ಅವುಗಳನ್ನ ಹೇಗೆ ಸರಿಪಡಿಸಿ ಕೊಳ್ಳಬೇಕು ಅನ್ನೋದೆ ಈ ಸಿನಿಮಾ ತತ್ಪರ್ಯವಾಗಿದೆ.

ಒಟ್ಟಿನಲ್ಲಿ ಹಿರಿಯ ನಟಿ ಪ್ರೇಮ ಅವರ ಕಂಬ್ಯಾಕ್ ಆಗ್ತಿರೋ ವೆಡಿಂಗ್ ಗಿಫ್ಟ್ ಸಿನಿಮಾ ಫೋಟೋ ಶೂಟ್ನಲ್ಲೇ ಸದ್ದು ಮಾಡಿದೆ. ಇನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಅಡ್ಡಕ್ಕೆ ಇಳಿಯುತ್ತಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...