Connect with us

    BELTHANGADY

    9ವರ್ಷದ ಹಿಂದೆ ಕಾರು ಸುಟ್ಟ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ನ್ಯಾಯಾಲಯ

    Published

    on

    ಬೆಳ್ತಂಗಡಿ: ಒಂಭತ್ತು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ನ ರಾಮಚಂದ್ರ ಭಟ್ ಎಂಬವರ ಮನೆ ಅಂಗಳದಲ್ಲಿದ್ದ ಮೋಟಾರು ಸೈಕಲ್ ಮತ್ತು ಮಾರುತಿ ಆಮ್ನಿ ಕಾರನ್ನು ಮಾವೋವಾದಿ ಸಂಘಟನೆಯವರು ಎನ್ನಲಾದ ವ್ಯಕ್ತಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದ ಆರೋಪಿ ಚಿನ್ನಿ ರಮೇಶ್ ಯಾನೆ ರಮೇಶ್ ಯಾನೆ ಶಿವಕುಮಾರ್‌ನನ್ನು ಮಂಗಳೂರಿನ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ.


    ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದನೆನ್ನಲಾದ ಚಿನ್ನಿ ರಮೇಶ್ ಯಾನೆ ರಮೇಶ್ ಯಾನೆ ಶಿವಕುಮಾರ್ ತನ್ನ ಸಹಚರರಾದ ವಿಕ್ರಂ ಗೌಡ, ಸಾವಿತ್ರಿ, ಸುಂದರಿ, ವಿಜಯ್, ಜಯಣ್ಣ ಮತ್ತು ಇತರರೊಂದಿಗೆ ಸೇರಿಕೊಂಡು

    2013 ನವೆಂಬರ್‌ 9 ರಂದು ಬೆಳಗಿನ ಜಾವ 2 ಗಂಟೆಗೆ ರಾಮಚಂದ್ರ ಭಟ್ ಅವರ ಮನೆ ಅಂಗಳಕ್ಕೆ ಪ್ರವೇಶಿಸಿ ಮನೆಯ ಬಾಗಿಲನ್ನು ಬಡಿದು ರಾಮಚಂದ್ರ ಭಟ್‌ ಅವರನ್ನು ಹೊರಗೆ ಬರುವಂತೆ ಕರೆದಿದ್ದು, ಭಟ್‌ ಅವರು ಮನೆಯಿಂದ ಹೊರಗಡೆ ಬಾರದೆ ಇದ್ದಾಗ ಅವರ ಮನೆಯ ಅಂಗಳದಲ್ಲಿ ಇದ್ದ ಮೋಟಾರು ಸೈಕಲ್ ಮತ್ತು ಮಾರುತಿ ಆಮ್ನಿ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.

    ಹಾಗೂ ಇದರಿಂದ ರಾಮಚಂದ್ರ ಭಟ್ ಅವರಿಗೆ 2,69,555 ರೂ. ನಷ್ಟ ಸಂಭವಿಸಿತ್ತು ಎಂದು ಆರೋಪಿಸಲಾಗಿತ್ತು. ತನಿಖೆ ನಡೆಸಿದ ಬಂಟ್ವಾಳ ಡಿವೈಎಸ್‌ಪಿ ರವೀಶ್ ಸಿ.ಆರ್‌. ಇದೊಂದು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ‘ಸಿ’ ಅಂತಿಮ ವರದಿಯನ್ನು 2017 ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಆ ಬಳಿಕ ಉಡುಪಿಯಲ್ಲಿ ಎಸ್‌ಪಿ ಯಾಗಿದ್ದ ಅಣ್ಣಾಮಲೈ ಅವರು ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್‌ ನನ್ನು ವಶಕ್ಕೆ ಪಡೆದು ಈ ಪ್ರಕರಣದ ಆರೋಪಿ ಎಂದು ಗುರುತಿಸಿ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿದ್ದರು.

    ಮರು ತನಿಖೆಯನ್ನು ನಡೆಸಿದ ಡಿವೈಎಸ್‌ಪಿ ರವೀಶ್ ಸಿ.ಆರ್‌. ಆರೋಪಿ ಚಿನ್ನಿ ರಮೇಶ್‌ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಯುಎಪಿಎ ಸೆಕ್ಷನ್ 10(B), ಮತ್ತು 13 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್‌ 3,25,, ಐಪಿಸಿ ಸೆಕ್ಷನ್ 143,147,148,447,435,427 ಜತೆಗೆ 149 ಅನ್ವಯ ದೋಷಾರೋಪಣ ಪಟ್ಟಿಯನ್ನು 2017 ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    2013 ರ ಸಮಯದಲ್ಲಿ ಕುತ್ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿತ್ತು. ರಾಮಚಂದ್ರ ಭಟ್ ಅರಣ್ಯ ವಾಸಿಗಳನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತಿದ್ದರೆಂಬ ಸಂಶಯದ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

    ವಿಚಾರಣೆ ಆರಂಭಿಸಿದ ಜಿಲ್ಲಾ ನ್ಯಾಯಾಲಯವು ನಿನ್ನೆ ಅಂತಿಮ ತೀರ್ಪು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತಗೊಳಿಸಿದೆ.

    ಚಿನ್ನಿ ರಮೇಶ್ ವಿರುದ್ಧ ಚಿಕ್ಕ ಮಗಳೂರಿನಲ್ಲಿ 4 ಕೇಸ್‌ಗಳು ವಿಚಾರಣೆಯಲ್ಲಿ ಇದ್ದು ಪ್ರಸ್ತುತ ಬೆಂಗಳೂರು ಜೈಲಿನಲ್ಲಿದ್ದಾನೆ.

    ಉಳಿದ ಆರೋಪಿಗಳು ತಲೆಮರೆಸಿಕೊಂಡ ಆರೋಪಿಗಳು ಎಂಬುದಾಗಿ ಕಾಣಿಸಲಾಗಿದೆ. ಆರೋಪಿ ಪರವಾಗಿ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು ವಾದಿಸಿದ್ದರು.

    BELTHANGADY

    ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

    Published

    on

    ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಫ್ಲಾಯ್ಡ್ ಮಿಸ್ಕಿತ್ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ಜರುಗಿದ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

    ಫ್ಲಾಯ್ಡ್ ಮಿಸ್ಕಿತ್ ಮಡಂತ್ಯಾರು ನಿವಾಸಿ ಬೇಬಿ ಡಯಾನ ಮಿಸ್ಕಿತ್ ಹಾಗೂ ಕ್ಲೌಡಿ ಫ್ರಾನ್ಸಿಸ್ ಮಿಸ್ಕಿತ್ ದಂಪತಿಗಳ ಪುತ್ರರಾಗಿದ್ದು, ಸಿದ್ಧಾರ್ಥ್ ಎಂ.ಸಿ ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿ.ಸಿ.ರೋಡ್ ನ ನ್ಯಾಯವಾದಿ ಪಿ.ಚೆನ್ನಪ್ಪ ಸಾಲಿಯಾನ್ ದಂಪತಿಗಳ ಪುತ್ರರಾಗಿದ್ದಾರೆ.

    ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ವಿಟ್ಲ ತರಬೇತಿ ನೀಡಿರುತ್ತಾರೆ.

    Continue Reading

    BELTHANGADY

    ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

    ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

    Continue Reading

    BELTHANGADY

    ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

    Published

    on

    ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

    ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

    ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

    Continue Reading

    LATEST NEWS

    Trending