LATEST NEWS
800 ವರ್ಷಗಳ ಹಿಂದೆ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ ಗುಂಡುಗಳು ಪತ್ತೆ
Published
3 years agoon
By
Adminಬಳ್ಳಾರಿ: 800 ವರ್ಷಗಳ ಹಿಂದೆ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ ಗುಂಡುಗಳು ಕುಮಾರರಾಮನ ಕೋಟೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪತ್ತೆಯಾಗಿವೆ.
ಒಟ್ಟು 39 ಕಲ್ಲಿನ ಫಿರಂಗಿ ಗುಂಡುಗಳು ಕಾಣಸಿಕ್ಕಿದೆ.
ಕುಮಾರರಾಮನ ಕೋಟೆಯಲ್ಲಿ ಕೋಟೆ ಪ್ರವೇಶ ದ್ವಾರದ ಸಂರಕ್ಷಣಾ ಕಾಮಗಾರಿ ವೇಳೆ ಸಣ್ಣ ಪ್ರಮಾಣದ ಕಲ್ಲಿನ ಫಿರಂಗಿ ಗುಂಡುಗಳು ಪತ್ತೆಯಾಗಿವೆ.
ಕಲ್ಲಿನ ಗುಂಡುಗಳು ಒಂದೇ ಕಡೆ ಮಣ್ಣಲ್ಲಿ ಹುದುಗಿದ್ದ ರೀತಿಯಲ್ಲಿ ಪತ್ತೆಯಾಗಿದ್ದು ಪ್ರತೀ ಗುಂಡು 150 ಗ್ರಾಮಗ ತೂಕ ಇದೆ.
ಸದ್ಯ ಫಿರಂಗಿ ಗುಂಡುಗಳು ಪುರಾತತ್ವ ಸಂರಕ್ಷಣಾ ಇಲಾಖೆ ವಶದಲ್ಲಿವೆ.
LATEST NEWS
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
Published
2 minutes agoon
22/12/2024ಮಂಗಳೂರು/ಕೋಲ್ಕತಾ: ದೇಗುಲಗಳ ಮೇಲೆ, ಹಿಂದೂಗಳ ಮೇಲೆ ಅಲ್ಲಿನ ಮ*ತಾಂಧರು ದಾಳಿ ನಡೆಸುತ್ತಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಇದೀಗ ನಿಷೇಧಿತ ಉ*ಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹ*ತ್ಯೆ ಮತ್ತು ರಸ್ತೆ ಕಾರಿಡಾರ್ ಸ್ಫೋ*ಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕಳೆದ ಕೆಲ ಹಿಂದೆ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಅನ್ಸರ್ ಅಲ್ ಇಸ್ಲಾಂ ಸಂಘಟನೆಗೆ ಸೇರಿದ 8 ಶಂಕಿತ ಉ*ಗ್ರರನ್ನು ಬಂಧಿಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಹಿಂದೂ ನಾಯಕರ ಹ*ತ್ಯೆಯ ಉದ್ದೇಶವನ್ನು ಉ*ಗ್ರರು ಹೊಂದಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದ ಸಿಲಿಗುರಿಗೆ ಈಶಾನ್ಯ ರಾಜ್ಯಗಳ ನಂಟು ಬೆಸೆಯುವ ‘ಚಿಕನ್ ನೆಕ್’ ಎಂದು ಕರೆಯಲಾಗುವ ಸಿಲಿಗುರಿ ಕಾರಿಡಾರ್ ರಸ್ತೆ ಸ್ಫೋ*ಟಗೊಳಿಸುವ ಮೂಲಕ ಇಡೀ ಪ್ರದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಈಶಾನ್ಯ ರಾಜ್ಯಗಳಿಗೆ ಭಾರತವನ್ನು ಬೆಸೆಯುವ ಏಕೈಕ ರಸ್ತೆ ಮಾರ್ಗವಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವಧಿಯಲ್ಲಿ ನಡೆದಿದ್ದ ಬಾಂಗ್ಲಾ ಪ್ರಜೆಗಳ ಬಲವಂತದ ನಾಪತ್ತೆ ಹಿಂದೆ ಭಾರತದ ಕೈವಾಡವಿದೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರ ರಚಿಸಿರುವ ಸಮಿತಿಯ ವರದಿ ಹೇಳಿದೆ.ಬಾಂಗ್ಲಾದ ಸುದ್ದಿ ಸಂಸ್ಥೆ ಬಾಂಗ್ಲಾದೇಶದ ಸಂಗ್ಬಾದ್ ಸಂಸ್ಥೆಯು ಬಲವಂತದ ನಾಪತ್ತೆಯ ಕುರಿತಾದ ತನಿಖಾ ವರದಿಯನ್ನು ಉಲ್ಲೇಖಿಸಿ ವರದಿ ನೀಡಿದ್ದು, ‘ಬಾಂಗ್ಲಾದೇಶದ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಸಾರ್ವಜನಿಕ ದಾಖಲೆಯ ವಿಷಯವಾಗಿದೆ. ಭಾರತದಲ್ಲಿ ಇನ್ನೂ ಬಂಧಿಯಾಗಿರುವ ಯಾವುದೇ ಬಾಂಗ್ಲಾದೇಶದ ನಾಯಕರನ್ನು ಗುರುತಿಸಲು ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಗೆ ಶಿಫಾರಸ್ಸು ಮಾಡುತ್ತೇವೆ. ಬಾಂಗ್ಲಾದೇಶದ ಹೊರಗೆ ಈ ಜಾಡು ಅನುಸರಿಸುವುದು ನ್ಯಾಯದ ವ್ಯಾಪ್ತಿಯನ್ನು ಮೀರುತ್ತದೆ’ ಎಂದು ತನಿಖಾ ಆಯೋಗದ ವರದಿ ಉಲ್ಲೇಖಿಸಿದೆ.
International news
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
Published
48 minutes agoon
22/12/2024By
NEWS DESK3ಮಂಗಳೂರು/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿವೃತ್ತಿಯಾಗುವುದಕ್ಕೂ ಮುನ್ನ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !
4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.
LATEST NEWS
ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !
Published
1 hour agoon
22/12/2024By
NEWS DESK3ಮಂಗಳೂರು/ಬೆಂಗಳೂರು: ಅರೆಸ್ಟ್ ವಾರೆಂಟ್ ಜಾರಿಯಾದ ಬೆನ್ನಲ್ಲೇ ಭಾರತ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಸ್ತುತ ಆರೋಪ ಕೇಳಿ ಬಂದಿರುವ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಕೆಲ ವರ್ಷಗಳ ಹಿಂದೆ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದಾರೆ.
ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬಿನ್ ಉತ್ತಪ್ಪ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು. ಇದೀಗ ಈ ವಿಚಾರವಾಗಿ ಮಾಧ್ಯಮ ಪ್ರಕಟನೆಯ ಮೂಲಕ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದು, ಆರೋಪ ಹೊತ್ತ ಕಂಪನಿಗೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೇನೆ. ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ತಮ್ಮ ಮೇಲೆ ಬಂದಿರುವ ಆರೋಪ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಬಾಕಿಯಿರುವ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗಳಿಗೆ ನನ್ನ ಕಾನೂನು ಸಲಹಾ ತಂಡ ಪ್ರತಿಕ್ರಿಯಿಸಿದೆ. ಆ ಕಂಪನಿಗಳಲ್ಲಿ ನನ್ನ ಪಾತ್ರವಿಲ್ಲ ಎಂದು ದೃಢೀಕರಿಸುವ ದಾಖಲೆ ನೀಡಿದ್ದೇನೆ.
ಅದರ ಹೊರತಾಗಿ ಪಿಎಫ್ ಅಧಿಕಾರಿಗಳು ಪ್ರಕ್ರಿಯೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸಲು ನನ್ನ ಪರ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ಅರೆಸ್ಟ್ ವಾರೆಂಟ್ ಜಾರಿ !
2018-19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಇದಕ್ಕಾಗಿ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕ ಮಾಡಿದ್ದವು. ಆದರೆ ಇವುಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ. ಇದರ ಜೊತೆ ಕಂಪನಿಗಳ ನಿತ್ಯದ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ವೃತ್ತಿಪರ ಕ್ರಿಕೆಟಿಗ, ಬಳಿಕ ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ಇದ್ದಿದ್ದರಿಂದ ಕಂಪನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಮಯವಿರಲಿಲ್ಲ. ಇದುವರೆಗೂ ಹಣ ಹೂಡಿಕೆ ಮಾಡಿದ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕನಾಗಿ ಕೆಲಸ ಮಾಡಿಲ್ಲ. ಆದರೆ ಈಗ ಕೇಳಿ ಬಂದಿರುವ ಆರೋಪ ಇರುವ ಕಂಪನಿಗಳು ಸಾಲದ ರೂಪದಲ್ಲಿ ನೀಡಿದ ಹಣವನ್ನು ನನಗೆ ಮರುಪಾವತಿಸಲು ವಿಫಲವಾಗಿವೆ. ಹೀಗಾಗಿ ಹಲವು ವರ್ಷಗಳ ಹಿಂದೆ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಬಗ್ಗೆ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದ್ದಾರೆ.
LATEST NEWS
ಬಾರತೀಯ ಕಾರ್ಮಿಕರೊಂದಿಗೆ ಕುವೈತ್ನಲ್ಲಿ ಮೋದಿ ಸಂವಾದ
ತೆಲಂಗಾಣ ಸರ್ಕಾರದಿಂದ ಟಾಲಿವುಡ್ಗೆ ಭಾರೀ ದೊಡ್ಡ ಹೊಡೆತ !!
ಕ್ರಿಸ್ಮಸ್ ಸ್ಪೆಷಲ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು ಸಂಚಾರ
ಕಾನ್ ಸ್ಟೆಬಲ್ ಮನೆಯಲ್ಲಿ ಭರ್ಜರಿ ಬೇಟೆಯಾಡಿದ ಲೋಕಾಯುಕ್ತ ಪೊಲೀಸರು !
ಮುಂಬೈ ಬೋಟ್ ದುರಂತ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ, ಸಾವಿನ ಸಂಖ್ಯೆ 15ಕ್ಕೆ ಏರಿಕೆ
ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA7 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- BIG BOSS7 days ago
ದಿಢೀರ್ ನಿರ್ಧಾರ ಕೈಗೊಂಡ ಗೋಲ್ಡ್ ಸುರೇಶ್; ಕಿಚ್ಚ ಸುದೀಪ್ ಶಾಕ್ !
- LATEST NEWS4 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್