Connect with us

BANTWAL

ಬಂಟ್ವಾಳ: ಮೃತ ಹಿಂದೂ ಕಾರ್ಯಕರ್ತನ ಕುಟುಂಬಕ್ಕೆ ಮಿಡಿದ ಕಾವಿ ಹೃದಯ..!

Published

on

ಬಂಟ್ವಾಳ: ಮಂಗಳೂರಿನಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್-ಬಜರಂಗ ದಳದ ಕಾರ್ಯಕರ್ತ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮ ನಿವಾಸಿ ದಿ. ವಿಜಯ ಪುಣ್ಕೆದಡಿ ಅವರ ಕುಟುಂಬಕ್ಕೆ ದಾನಿಗಳ ನೆರವಿನಿಂದ ನೂತನ ಮನೆ ನಿರ್ಮಾಣಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದರು.


ಸ್ವಾಮೀಜಿಯವರು ಆಶೀರ್ವಚನ ನೀಡಿ, ಸಂಘಟನೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ ವಿಜಯ್ ಅವರ ಅಗಲುವಿಕೆ ಸಮಾಜ, ಅವರ ಕುಟುಂಬ ದೊಡ್ಡ ನಷ್ಟವನ್ನೇ ತಂದಿದ್ದು, ಅವರಿಗೊಂದು ಸೂರು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ.

ಜತೆಗೆ ಅವರ ಸಹೋದರಿಗೆ ಮಾಣಿಲ ಕ್ಷೇತ್ರದಲ್ಲೇ ಎಲ್ಲಾ ವ್ಯವಸ್ಥೆಗಳನ್ನು ಕೈಗೊಂಡು ವಿವಾಹ ಮಾಡಿಸಲು ಬದ್ಧವಾಗಿದ್ದು, ಯಾವುದೇ ದುಶ್ಚಟವಿಲ್ಲದ ವರನನ್ನು ಹುಡುಕುವ ಕಾರ್ಯ ಮಾಡಬೇಕು ಎಂದರು.

ಪುರೋಹಿತ ಸಾಯಿ ಶಾಂತಿ ಕೋಕಲ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಮನೆ ನಿರ್ಮಾಣಕ್ಕೆ ತಿಂಗಳಾಡಿಗುತ್ತಿನವರು 10 ಸೆಂಟ್ಸ್ ಜಾಗ ನೀಡಿದ್ದು, ವಿಹಿಂಪ-ಬಜರಂಗ ದಳ ಜೈ ಹನುಮಾನ್ ಶಾಖೆ ಅಜಿಲಮೊಗರಿನ ಮನವಿಯಂತೆ ಉದ್ಯಮಿ ಸತೀಶ್ ಶೆಟ್ಟಿ ಪಡೀಲು ಅವರು ಪೂರ್ತಿ ಮನೆಯನ್ನು ನಿರ್ಮಿಸಿಕೊಡಲಿದ್ದಾರೆ.

ಈ ಸಂದರ್ಭದಲ್ಲಿ ದಿ.ವಿಜಯ ಪುಣ್ಕೆದಡಿ ಅವರ ತಂದೆ-ತಾಯಿಯರಾದ ಗುರುವ- ವಿಮಲ ದಂಪತಿ, ವಿಹಿಂಪ ತಾಲೂಕು ಅಧ್ಯಕ್ಷ ಪ್ರಸಾದ್‌ಕುಮಾರ್ ರೈ ತಿಂಗಳಾಡಿಗುತ್ತಿನ ಸೀತಾರಾಮ ಪೂಜಾರಿ ತಿಂಗಳಾಡಿ, ಸಂಜೀವ ಪೂಜಾರಿ ತಿಂಗಳಾಡಿ, ಕೇಶವ ಪೂಜಾರಿ ತಿಂಗಳಾಡಿ, ಗುತ್ತಿಗೆದಾರ ಮುರಳೀಧರ್, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ,

ಸದಸ್ಯರಾದ ಸಾಂತಪ್ಪ ಪೂಜಾರಿ ಹಟ್ಟದಡ್ಕ, ಪುರುಷೋತ್ತಮ ಪೂಜಾರಿ ಮಜಲು, ದಯಾನಂದ ಸುಳ್ಯ, ಬಜರಂಗ ದಳದ ಪ್ರಮುಖರಾದ ಗುರುಪ್ರಸಾದ್ ಬಂಟ್ವಾಳ, ಸಂತೋಷ್ ನೇಲ್ಯಪಲ್ಕೆ, ಬೆಂಗಳೂರಿನ ಉದ್ಯಮಿ ಕೆ.ಟಿ.ಪೂಜಾರಿ, ನಾರಾಯಣ ಪೂಜಾರಿ ತಿಂಗಳಾಡಿ, ವಸಂತ ಪೂಜಾರಿ ಡೆಚ್ಚಾರ್, ನಟರಾಜ್ ಕುಟ್ಟಿಕಳ, ಪ್ರಕಾಶ್ ಅಂಚನ್, ದಯಾನಂದ ಮುಂಡ್ರೇಲ್ ಮೊದಲಾದವರು ಉಪಸ್ಥಿತರಿದ್ದರು.

BANTWAL

Bnatwala: ಡಿ.3ರಂದು ಅಕ್ಷಯ ಪಾತ್ರ ಪ್ರತಿಷ್ಠಾನದ ಕೇಂದ್ರೀಕೃತ ಅಡುಗೆ ಮನೆ ಉದ್ಘಾಟನೆ

Published

on

ಬಂಟ್ವಾಳ: ಅಕ್ಷಯ ಪಾತ್ರ ಫೌಂಡೇಶನ್ ಇದರ ಅಡುಗೆ ಮನೆಯ ಉದ್ಘಾಟನಾ ಸಮಾರಂಭವು ಡಿ. 3 ರಂದು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ಸಮೀಪ ನಡೆಯಲಿದೆ.

ಅಕ್ಷಯ ಫೌಂಡೇಶನ್ ಮಕ್ಕಳ ಹಸಿವನ್ನು ಹೋಗಲಾಡಿಸುವ ತನ್ನ ಅಚಲವಾದ ಕಾರ್ಯಕ್ಕೆ ಹೆಸರುವಾಸಿಯಾಗಿದ್ದು, ಮಂಗಳೂರಿನಲ್ಲಿ ತನ್ನ ಕೇಂದ್ರೀಕೃತ ಅಡುಗೆ ಮನೆಯ ಉದ್ಘಾಟನೆಯೊಂದಿಗೆ ಮಹತ್ವದ ಮೈಲಿಗಲ್ಲು ತಲುಪಿದೆ. ದಾನಿಗಳಾದ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ.ಲಿ. ಲಿಮಿಟೆಡ್‌ನ ವಿಜಯ್ ಮತ್ತು ಶಾಮ ಕೇಡಿಯಾ, ದಿವಂಗತ  ಡಾ. ವಿ ರವಿಚಂದ್ರನ್ ಅವರ ನಿರಂತರ ಬೆಂಬಲ ಮತ್ತು ದೂರದೃಷ್ಟಿ ಕೊಡುಗೆಯೇ ಈ ಅಡುಗೆ ಮನೆಯಾಗಿದೆ. ಈ ಸಮಾರಂಭವು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್,  ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಗ್ರೂಪ್‌ನ ಅಧ್ಯಕ್ಷ ಡಾ. ಪಿ ದಯಾನಂದ ಪೈ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ ಕೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಮತ್ತು ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ಉಪಸ್ಥಿತರಿರುವರು.

124 ಸರ್ಕಾರಿ ಮತ್ತು 41 ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25,000 ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದೆ. ಅಡುಗೆಮನೆಯ ವೈವಿಧ್ಯಮಯ ಮೆನುವು ಸಮತೋಲಿತ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ. ಸೌರಶಕ್ತಿ ಮತ್ತು ಸ್ವಚ್ಛ ಎಲ್ಪಿಜಿ ಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

BANTWAL

Bantwala: ಅಕ್ಕಪಕ್ಕ ಮನೆಯ ಯುವಕ-ಯುವತಿ ಒಂದೇ ದಿನ ನಾಪತ್ತೆ..!

Published

on

ಬಂಟ್ವಾಳ: ಅಕ್ಕ ಪಕ್ಕದ ಮನೆಯ ಯುವಕ ಮತ್ತು ಯುವತಿ ಒಂದೇ ದಿನ ನಾಪತ್ತೆ ಯಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದ್ದು, ಈ ಕುರಿತಂತೆ ಎರಡೂ ಮನೆಯವರು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಜೀಪಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಆಯಿಷತ್‌ ರಸ್ಮಾ (18) ಮತ್ತು  ಮಹಮ್ಮದ್‌ ಸಿನಾನ್‌ (23) ನಾಪತ್ತೆಯಾದವರು. ರಸ್ಮಾ ನಡುಪದವು ಖಾಸಗಿ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾರ್ಥಿನಿಯಾಗಿದ್ದಾರೆ. ಅವರು ನ. 23ರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದು, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿದ್ದರು. ಸಿನಾನ್‌ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರು ನ. 23ರ ರಾತ್ರಿ ಊಟ ಮಾಡಿ ಮಲಗಿದವರು ಮರುದಿನ ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಎರಡೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Continue Reading

BANTWAL

Bantwala: ಅಕ್ರಮ ಮರ ಸಾಗಾಟ-ಇಬ್ಬರು ಆರೋಪಿಗಳು ವಶ..!

Published

on

ಬಂಟ್ವಾಳ: ಅಕ್ರಮ ಮರ ಸಾಗಟ ಮಾಡುತ್ತಿದ ಸ್ಥಳಕ್ಕೆ ಖಚಿತ ಮಾಹಿತ ಪಡೆದ ಬಂಟ್ವಾಳ ಅರಣ್ಯ ಇಲಾಖೆಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಹಾಗೂ ಉಳ್ಳಾಲ ತಾಲೂಕಿನ ಸಜೀಪಪಡು ಗ್ರಾಮದ ಕೋಟೆಕಣಿಯಲ್ಲಿ ನಡೆದಿದೆ.

ಮರ ಹಾಗೂ ವಿವಿಧ ಜಾತಿಯ ದಿಮ್ಮಿಗಳನ್ನು ಪಿಕಪ್ ಮೂಲಕ ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ 2 ಪಿಕಪ್ ವಾಹನ,6 ಲಕ್ಷ ರೂ ಮೌಲ್ಯದ ದಿಮ್ಮಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಲು ಪಾಲ್ಗೊಂಡಿದ್ದರು. ವಲಯ ಅರಣ್ಯ ಅಧಿಕಾರಿ ಪ್ರಪುಲ್ ಶೆಟ್ಟಿ ಪಿ.ಅವರು ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Continue Reading

LATEST NEWS

Trending