ಮಂಗಳೂರು: ನಗರದಲ್ಲಿ ಎರಡು ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನು ಬಂಧಿಸಿ ನಗರದ ಇಕೋನಾಮಿಕ್ ಹಾಗೂ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಅತ್ತಾವರ ಮಾರ್ನಮಿಕಟ್ಟೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ಪೆಡ್ಲರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂದರು ಮಿಶನ್ ಸ್ಟ್ರೀಟ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ತೋಟ ಬೆಂಗ್ರೆ ನಿವಾಸಿ ಅಬ್ದುಲ್ ರೆಹಮಾನ್ ಹಾಗೂ ಮಂಗಳೂರು ಬಂದರು ನಿವಾಸಿ ಸಾದಿಕ್ ಎಂಬುವವನ್ನು ವಶಕ್ಕೆ ಪಡೆದು 2 ಕೆ.ಜಿ 275 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರ ಮಾರ್ನೆಮಿಕಟ್ಟೆ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಾಟಕ್ಕೆ ಪ್ರಯತ್ನಿಸುತ್ತಿದ್ದ ಬಿಜೈನ ಮಹಮ್ಮದ್ ಅಮೀನ್, ರೋಶನ್ ಯೂಸುಫ್ ಹಾಗೂ ಮಹಮ್ಮದ್ ಅಪ್ವಾನ್ ಎಂಬುವವರನ್ನು ವಶಕ್ಕೆ ಪಡೆದ ಪೊಲೀಸರು 2 ಕೆ.ಜಿ 168 ಗ್ರಾಂ ಹಾಗೂ 9 ಎಂ.ಡಿಎಂ.ಎ ಫಿಲ್ಸ್, 2ಗ್ರಾಂ ಬ್ರೌನ್ ಶುಗರ್ ಹಾಗೂ ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರ ವಿಚಾರಣೆಯ ಆಧಾರದ ಮೇಲೆ ಅತ್ತಾವರ ಫ್ಲಾಟ್ ಒಂದಕ್ಕೆ ದಾಳಿ ಮಾಡಿ ಬೀದರ್ ಮೂಲದ ಪ್ರಜ್ವಲ್, ತಮೀಮ್, ಅಬ್ದುಲ್ ಅರ್ಮಾನ್, ಮಹಮ್ಮದ್ ರಾಯಿಸ್ ಎಂಬುವವರನ್ನು ದಸ್ತಗಿರಿ ಮಾಡಿ 1 ಕೆ.ಜಿ ಗಾಂಜಾ ವಶಪಡಿಸಿಕೊಂಡು 3 ಬೈಕ್ ವಶಪಡಿಸಿಕೊಂಡಿದ್ದಾರೆ.