Connect with us

  FILM

  ‘ಸಾಹಸಸಿಂಹ’ನಿಗೆ ಹ್ಯಾಪಿ ಬರ್ತ್‌ಡೇ ಎಂದ ಕೋಟಿ ಅಭಿಮಾನಿಗಳು

  Published

  on

  ಮಂಗಳೂರು: ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ ಖ್ಯಾತಿ ಪಡೆದಿದ್ದ ಡಾ.ವಿಷ್ಣುವರ್ಧನ್ ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರು. ಇಂದು ಅವರ ಜನ್ಮದಿನ.


  ಅಭಿಮಾನಿಗಳ ಪ್ರೀತಿಯ ‘ಯಜಮಾನ’ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 71ನೇ ಜನ್ಮದಿನವನ್ನು ಇಂದು ಆಚರಿಸಿಕೊಳ್ಳುತ್ತಿದ್ದರು.

  ಆದರೆ, ದುರಾದೃಷ್ಟವಶಾತ್ ಡಾ.ವಿಷ್ಣುವರ್ಧನ್ ಇಂದು ನಮ್ಮ ಜೊತೆ ಇಲ್ಲ. ದೈಹಿಕವಾಗಿ ಡಾ.ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಡಾ.ವಿಷ್ಣುವರ್ಧನ್ ಅಜರಾಮರ.


  ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅಭಿಮಾನಿಗಳು ಅವರ ಸ್ಮರಣೆ ಮಾಡುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಕುಟುಂಬಸ್ಥರು ‘ಸಿರಿವಂತ’ನಿಗೆ ಪೂಜೆ ಸಲ್ಲಿಸಿ, ನಮನ ಸಲ್ಲಿಸಿದ್ದಾರೆ.

  Click to comment

  Leave a Reply

  Your email address will not be published. Required fields are marked *

  FILM

  ಅಪ್ಪಂದಿರ ದಿನ : ತಂದೆಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ವಿನೀಶ್ ದರ್ಶನ್

  Published

  on

  ಬೆಂಗಳೂರು : ಇಂದು ವಿಶ್ವ ಅಪ್ಪಂದಿರ ದಿನ. ನಟ ದರ್ಶನ್ ಪುತ್ರ ಕೂಡಾ ತಂದೆಯನ್ನು ನೆನೆದಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಪಾಲಾಗಿದ್ದರೂ ಮಗ ವಿನೀಶ್‌ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾರೆ.
  ತನ್ನ ತಂದೆಯೊಂದಿಗೆ ಅಪಾರ ಪ್ರೀತಿ ಹೊಂದಿರುವ ವಿನೀಶ್‌, ಈ ದಿನ ಅಪ್ಪನನ್ನು ಮಿಸ್‌ ಮಾಡಿಕೊಳ್ಳುತ್ತಾ ಭಾವುಕ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.


  ತಾಯಿ ವಿಜಯಲಕ್ಷ್ಮಿ ಹಾಗೂ ತಂದೆ ದರ್ಶನ್‌ ಜೊತೆಗಿನ ವಿಶೇಷವಾದ ಫೋಟೋಗಳನ್ನು ಹಂಚಿಕೊಂಡಿರುವ ವಿನೀಶ್‌, ನಿಮ್ಮನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐ ಲವ್‌ ಯು, ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.

  ಅತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪೊಲೀಸರ ವಶದಲ್ಲಿದ್ದಾರೆ. ಇತ್ತ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ನೋವು ಅನುಭವಿಸುತ್ತಿದ್ದಾರೆ. ಅತ್ತ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿಕೊಂಡಿದ್ದು, ಇತ್ತ ವಿನೀಶ್ ಇನ್ಸ್ಟಾಗ್ರಾಮ್‌ ಪೋಸ್ಟ್‌ ಹಾಕುವ ಮೂಲಕ ತಮ್ಮ ವೇದನೆ ಹಂಚಿಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ :  ಐಸ್‌ಕ್ರೀಂ ಪ್ರಿಯರೇ ಎಚ್ಚರ! ಆನ್‌ಲೈನ್‌ನಲ್ಲಿ ತರಿಸಿದ ಐಸ್‌ಕ್ರೀಂನಲ್ಲಿ ಸತ್ತ ಹುಳಗಳು ಪತ್ತೆ!

  ನನಗೆ ಶಾಪ ಹಾಕುವುದರಿಂದ ಯಾವ ಪ್ರಯೋಜನವಿಲ್ಲ :

  ತಂದೆ ದರ್ಶನ್‌ ಅರೆಸ್ಟ್ ಆದ ಬಳಿಕ ವಿನೀಶ್ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದರು. ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೀಗ 15 ವರ್ಷ, ನನಗೂ ಮನಸ್ಸಿದೆ. ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲ ಬೇಕಾಗಿದೆ. ನನಗೆ ಶಾಪ ಹಾಕುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

  ವಿನೀಶ್ ಇನ್ಸ್ಟಾಗ್ರಾಮ್‌ನ ಸ್ಟೋರಿ ಸದ್ಯ ಭಾರೀ ವೈರಲ್ ಆಗುತ್ತಿದೆ.

  Continue Reading

  FILM

  ಯಶ್ ಜೊತೆ ಲಂಡನ್‌ಗೆ ಹಾರಿದ ನಯನತಾರಾ-ಕಿಯಾರ..!

  Published

  on

  ಮುಂಬೈ/ಮಂಗಳೂರು:  ಪ್ಯಾನ್ ಇಂಡಿಯಾ ಸ್ಟಾರ್ ಯಶ್ ರವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನೆಮಾ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಕೆಜಿಎಫ್ ಸಿನೆಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ಯಶ್ ಇದೀಗ ಟಾಕ್ಸಿಕ್ ಸಿನೆಮಾ ಮೂಲಕ ನೆಕ್ಸ್ಟ್‌ ಲೆವೆಲ್‌ನಲ್ಲಿ ಸಿನೆಮಾ ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ಕೆಜಿಎಫ್-1, 2 ಸೂಪರ್‌ ಹಿಟ್‌ ಬಳಿಕ ಯಶ್ ಚಿತ್ರರಂಗದಲ್ಲೇ ತನ್ನ ಸ್ಟ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆಗಳೂ ಕೂಡಾ ಹೆಚ್ಚಾಗಿದೆ ಎನ್ನಬಹುದು.

  150 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್..!

  ಇದೀಗ ಯಶ್ ಜೊತೆ ನಯನತಾರಾ-ಕಿಯಾರ ಅಡ್ವಾನಿ ಕೂಡಾ ಲಂಡನ್ ಗೆ ಹಾರಿದ್ದಾರಂತೆ. ಹೌದು, ಸಿನೆಮಾ ಶೂಟಿಂಗ್ ಗಾಗಿ ಯಶ್ ನಿರ್ದೇಶಕಿ ಗೀತಾ ಮೋಹನ್ ದಾಸ್ ಜೊತೆ ಲಂಡನ್‌ಗೆ ತೆರಳಿದ್ದಾರೆ. ಇನ್ನು ಸಿನೆಮಾ ಬರೋಬ್ಬರಿ 200 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತಿದ್ದು ಅದರಲ್ಲಿ 150 ದಿನಗಳ ಕಾಲ ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಹೇಳಲಾಗಿದೆ.

  Read More..;  ಯಶ್ ಅಭಿನಯದ “ಟಾಕ್ಸಿಕ್” ಗೆ ಹಿರೋಯಿನ್‌ ಫಿಕ್ಸ್..!!

  ಯಶ್‌ ಪರಫೆಕ್ಟ್ ಮ್ಯಾನ್ ಎಂಬುದು ಅವರ ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಟಾಕ್ಸಿಕ್ ಚಿತ್ರ ತಂಡದಲ್ಲೂ ಅದು ಮುಂದುವರಿಯಲಿದೆ. ಎಷ್ಟು ಹಂತದ ಚಿತ್ರೀಕರಣ ಆಗಿದೆ ಎಂಬುವುದರ ಬಗ್ಗೆ ಚಿತ್ರ ತಂಡ ಗೌಪ್ಯತೆ ಕಾಪಾಡಿಕೊಂಡು ಬಂದಿದೆ. ಇದು ಅಭಿಮಾನಿಗಳ ಕುತೂಹಲಕ್ಕೂ ಕಾರಣವಾಗಿದೆ. ಚಿತ್ರೀಕರಣದ ನಿಖರ ಸಮಯವನ್ನು ಗೌಪ್ಯವಾಗಿ ಇಡಲಾಗಿದೆ. ಇಂಟರ್‌ನ್ಯಾಷನಲ್ ಡಾನ್ ಪಾತ್ರದಲ್ಲಿ ಯಶ್ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಅನೇಕ ಸಾಹಸಮಯ ದೃಶ್ಯಗಳು ಇರಲಿದ್ದು. ಸಿನಿಮಾ ಅಂದುಕೊಂಡಂತೆ ಶೂಟಿಂಗ್ ಮುಗಿಸಿ ಮುಂದಿನ ವರ್ಷ 2025 ರಂದು ಏ. 10ಕ್ಕೆ ಬಿಡುಗಡೆಗೊಳ್ಳಲಿದೆ. ಇನ್ನೂ ಚಿತ್ರದಲ್ಲಿ ಯಶ್, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಅನೇಕ ಕಲಾವಿದರ ದಂಡೇ ಇರಲಿದೆ. ಅವರೊಂದಿಗೆ ಇತರ ಕೆಲವು ನಟರು ಸಹ ಸೇರಿಕೊಳ್ಳಲಿದ್ದಾರೆ. ಯಶ್ ಟಾಕ್ಸಿಕ್ ಸಿನಿಮಾವು ದೊಡ್ಡ ತಾರಾಗಣ ಹೊಂದಿರುವ ಸಿನಿಮಾ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

  Continue Reading

  FILM

  ‘ನನ್ನಿಂದ ಹೀಗೆ ಆಗೋಯ್ತಲ್ಲ’ ತಂದೆ ಶವದ ಮುಂದೆ ಕಣ್ಣೀರಿಟ್ಟ ದರ್ಶನ್ ಕೇಸ್‌ ಆರೋಪಿ..!

  Published

  on

  ಚಿತ್ರದುರ್ಗ/ಮಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಗ್ಯಾಂಗ್‌ನ ಕೊಲೆ ಆರೋಪಿ  ಎ-7 ಅನಿಲ್ ಅಲಿಯಾಸ್ ಅನು ತಂದೆ ಸಾವನಪ್ಪಿದ್ದು, ಅವರ ಆಂತ್ಯಕ್ರಿಯೆಯನ್ನು ತಡರಾತ್ರಿ ನೆರವೇರಿಸಲಾಗಿದೆ.

  Read More..;  ರೇಣುಕಾಸ್ವಾಮಿ ಹ*ತ್ಯೆ ಪ್ರಕರಣ : ಅನುಕುಮಾರ್ ಬಂಧನದ ಸುದ್ದಿ ಕೇಳಿ ತಂದೆ ಹೃದಯಾ*ಘಾತದಿಂದ ಸಾ*ವು

  ರೇಣುಕಾಸ್ವಾಮಿ ಕೊಲೆಯಿಂದಾಗಿ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ದರ್ಶನ್ ಗ್ಯಾಂಗ್‌ನಲ್ಲಿದ್ದ ಎ-7 ಕೊಲೆ ಆರೋಪಿ ಅನಿಲ್ ಅಲಿಯಾಸ್ ಅನು ರೇಣುಕಾಸ್ವಾಮಿ ಕೊಲೆ ನಡೆದ ಮರುದಿನವೇ ಪೊಲೀಸರಿಗೆ ಸರಂಡರ್‌ ಆಗಿದ್ದ. ಈ ವಿಷಯ ತಿಳಿದ ಅನು ತಂದೆ ಚಂದ್ರಪ್ಪ ಆಘಾತಕ್ಕೊಳಗಾಗಿ ನಿಂತಲ್ಲೇ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನಪ್ಪಿದ್ದರು. ಸಾವನ್ನಪ್ಪಿದ 24 ಗಂಟೆಗಳ ಬಳಿಕ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅನು ಬಂದ ಬಳಿಕವೇ ಶವ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತೀರ್ಮಾನಿಸಿದ್ದರು. ಶವದ ಮುಂದೆ ಕುಟುಂಬಸ್ಥರು ಅನು ಬರುವಿಕೆಗಾಗಿ ಕಾದು ಕುಳಿತಿದ್ದರು.

  ನ್ಯಾಯಾಧೀಶರ ಆದೇಶದಂತೆ ಆರೋಪಿ ಅನಿಲ್‌ನನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆತಂದರು.  ಮಗ ಬರುತ್ತಿದ್ದಂತೆಯೇ ಅನು ತನ್ನ ತಾಯಿ, ಅಕ್ಕನನ್ನು ತಬ್ಬಿ ಕಣ್ಣೀರು ಇಟ್ಟಿದ್ದಾನೆ. ತಂದೆಯ ಶವದ ಮುಂದೆ ಕೂತು ನನ್ನಿಂದ ಹೀಗೆ ಆಗೋಯ್ತಲ್ಲ ಎಂದು ಕಣ್ಣೀರು ಇಟ್ಟಿದ್ದಾನೆ.

  Continue Reading

  LATEST NEWS

  Trending