Saturday, August 20, 2022

ಲಿಬಿಯಾದಲ್ಲಿ ಉಗ್ರರಿಂದ 7 ಭಾರತೀಯರ ಅಪಹರಣ..!

ಲಿಬಿಯಾದಲ್ಲಿ ಉಗ್ರರಿಂದ 7 ಭಾರತೀಯರ ಅಪಹರಣ..!

ಟ್ರಿಪೋಲಿ : ಉತ್ತರ ಆಫ್ರಿಕಾದ ಲಿಬಿಯಾದಲ್ಲಿ ಏಳು ಭಾರತೀಯರನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ.ಅಪಹೃತ ಭಾರತೀಯರು ನಿರ್ಮಾಣ ಮತ್ತು ತೈಲ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದರು.

ಭಾರತಕ್ಕೆ ಹಿಂದಿರುಗಲು ಲಿಬಿಯಾ ರಾಜಧಾನಿ ಟ್ರಿಪೋಲಿಯ ವಿಮಾನನಿಲ್ದಾಣಕ್ಕೆ ಬರುತ್ತಿದ್ದಾಗ  ಅಶ್ವೆರಿಫ್ ಎಂಬ ಸ್ಥಳದಲ್ಲಿ ಕಿಡ್ನಾಪ್ ಮಾಡಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ  ವಕ್ತಾರ ಅನುರಾಗ್ ಶ್ರೀವಾಸ್ತವ  ಈ ವಿಷಯವನ್ನು ಧೃಡಪಡಿಸಿದ್ದು,, ಅವರ ಸುರಕ್ಷಿತ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಸಕಲ ಪ್ರಯತ್ನಗಳನ್ನು ಮುಂದುವರಿಸಿದೆ.

ಆಂಧ್ರಪ್ರದೇಶ, ಗುಜರಾತ್, ಬಿಹಾರ ಮತ್ತು ಉತ್ತರಪ್ರದೇಶದ ಏಳು ಭಾರತೀಯರು ಅಪಹೃತವಾಗಿದ್ದು, ಅವರ ಸುರಕ್ಷಿತ ಬಿಡುಗಡೆಗಾಗಿ ಅಲ್ಲಿನ ಸರ್ಕಾರೊಂದಿಗೆ ಮಾತುಕತೆ ಮುಂದುವರಿಸಿದ್ದು, ಅಲ್ಲಿನ ಅಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅಪಹೃತ ಏಳು ಭಾರತೀಯರ ಕುಟುಂಬಗಳೊಂದಿಗೆ ನಾವು ಸಮಾಲೋಚನೆ ನಡೆಸಿದ್ದೇವೆ. ಅವರೆಲ್ಲರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉಗ್ರಗಾಮಿಗಳು ಅಥವಾ ಸ್ಥಳೀಯ ಬಂಡುಕೋರರು ಭಾರತೀಯರನ್ನು ಅಪಹರಿಸಿರುವ ಸಾಧ್ಯತೆಗಳಿವೆ.

ಉತ್ತರ ಆಫ್ರಿಕಾದ ತೈಲ ಸಮೃದ್ಧ ದೇಶವಾದ ಲಿಬಿಯಾದಲ್ಲಿ ಸರ್ವಾಧಿಕಾರಿ ಮಮ್ಮುರ್ ಗಡಾಫಿ ಅವರ 40 ವರ್ಷಗಳ ಆಡಳಿತ ಪತನದ ನಂತರ ಅಲ್ಲಿ ರಾಜಕೀಯ ಅರಾಜಕತೆ,ಉಗ್ರರ ಉಪಟಳ, ವ್ಯಾಪಕ ಹಿಂಸಾಚಾರ, ಮತ್ತು ಅಶಾಂತಿಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

Hot Topics