Connect with us

    LATEST NEWS

    60,000 ದುಡಿದರೂ, 30 ಲಕ್ಷ ಜೀವನಾಂಶ ಕೋರಿಕೆ; ವೈರಲ್ ಆಯ್ತು ಪೋಸ್ಟ್…!!!!

    Published

    on

    ವ್ಯಕ್ತಿಯೊಬ್ಬರು ಪತ್ನಿಯ ಕ್ರೌರ್ಯದಿಂದ ಬೇಸತ್ತು, 2014 ರಲ್ಲಿ ಕಾನೂನು ಹೋರಾಟಕ್ಕೆ ಇಳಿದು ಕೊನೆಗೂ ಇದೀಗ ಪತ್ನಿಯ ಕ್ರೌರ್ಯತೆಯ ಆಧಾರದ ಮೇಲೆ ಡಿವೋರ್ಸ್‌ ಪಡೆದುಕೊಂಡಿದ್ದಾರೆ. ಆದರೆ ಮಕ್ಕಳಿಲ್ಲದಿದ್ದರೂ, ಆಕೆ ತಿಂಗಳಿಗೆ 60 ಸಾವಿರ ಸಂಪಾದನೆ ಮಾಡಿ, ಆರ್ಥಿಕವಾಗಿ ಸಬಲೆಯಾಗಿದ್ದರೂ 30 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಕೋರ್ಟ್‌ ಆದೇಶಿಸಿದೆ.


    ಇಂದಿನ ಕಾಲದಲ್ಲಿ ವಿಚ್ಛೇದನದ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಆಸ್ತಿ, ಹಣ ಕಸಿದುಕೊಳ್ಳುವ ಸಲುವಾಗಿಯೂ ಡಿವೋರ್ಸ್‌ ಪಡೆದುಕೊಳ್ಳುವವರಿದ್ದಾರೆ. ಹೀಗೆ ಪತಿ ಪತ್ನಿಯರ ನಡುವೆ ಡಿವೋರ್ಸ್‌ ಆದರೆ ಪತಿಯಾದವನು ಮಾಜಿ ಪತ್ನಿಗೆ ಇಂತಿಷ್ಟು ಜೀವನಾಂಶ ನೀಡಬೇಕು ಎಂಬ ಕಾನೂನು ಇದೆ. ಈ ಕಾನೂನುಗಳು ಕೆಲ ಅಮಾಯಕ ಪುರುಷರನ್ನು ಕಷ್ಟಕ್ಕೆ ತಳ್ಳುತ್ತವೆ ಮತ್ತು ಅವರನ್ನು ಶೋಷಿಸುತ್ತಿವೆ ಎಂದು ಮಹಿಳೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
    ಮದುವೆಯಾದ ಬಳಿಕ ಬೇಕಂತಲೇ ಮೋಸ ಮಾಡಿ ಹೋಗುವವರಿಗೆ, ಆರ್ಥಿಕವಾಗಿ ಸಬಲವಾಗಿರುವ ಹೆಣ್ಣಿಗೆ ದೊಡ್ಡ ಮೊತ್ತದ ಜೀವನಾಂಶ ಕೊಡಬೇಕಾಗಿಲ್ಲ ಎಂದು ಹಲವರು ಹೇಳುತ್ತಾರೆ. ಆದ್ರೆ ವಿಚ್ಛೇದನದ ಬಳಿಕ ಪತ್ನಿಗೆ ಇಂತಿಷ್ಟು ಜೀವನಾಂಶ ಕೊಡಲೇಬೇಕು ಎಂಬುದು ಕಾನೂನಿನಲ್ಲಿದೆ. .
    ದೀಪಿಕಾ ನಾರಾಯಣ ಭಾರದ್ವಾಜ್‌ (DeepikaBhardwaj) ಎಂಬವರು ಈ ಕುರಿತ ವಾಟ್ಸಾಪ್‌ ಚಾಟ್‌ ಸ್ಕ್ರೀನ್‌ ಶಾಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು, ‘ಈ ವ್ಯಕ್ತಿ 10 ವರ್ಷಗಳ ಕಾನೂನು ಹೋರಾಟ ಮಾಡಿ ಕೊನೆಗೂ ಪತ್ನಿಯ ಕ್ರೌರ್ಯತೆಯ ಆಧಾರದ ಮೇಲೆ ಡಿವೋರ್ಸ್‌ ಪಡೆದುಕೊಂಡ. ಆದ್ರೆ ಆತನ ಮಾಜಿ ಪತ್ನಿ ತಿಂಗಳಿಗೆ 60 ಸಾವಿರ ದುಡಿದರೂ ಆಕೆಗೆ 30 ಲಕ್ಷ ರೂಪಾಯಿ ಜೀವನಾಂಶ ಕೊಡಬೇಕಂತೆ. ಮಹಿಳೆಯರ ಸಬಲೀಕರಣಕ್ಕಾಗಿ ರಚಿಸಲಾದ ಕಾನೂನುಗಳು ಪುರುಷರನ್ನು ದುರ್ಬಲಗೊಳಿಸುತ್ತಿವೆ ಮತ್ತು ಶೋಷಿಸುತ್ತಿವೆ’ ಎಂದು ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ಮೂಲಕ ಪುರುಷರಿಗೂ ಸಮಾನ ನ್ಯಾಯವನ್ನು ನೀಡಬೇಕು ಎಂಬುದನ್ನು ಕೇಳಿಕೊಂಡಿದ್ದಾರೆ.

     

    watch this :

    Click to comment

    Leave a Reply

    Your email address will not be published. Required fields are marked *

    kerala

    ಬಾವಿಗೆ ಬಿದ್ದ ಕಾರು..! ಪವಾಡ ಸದೃಶ ರೀತಿಯಲ್ಲಿ ದಂಪತಿ ಪಾರು..!

    Published

    on

    ರಾತ್ರಿ ಹೊತ್ತಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಕಾರು ಬಾವಿಗೆ ಉರುಳಿ ಬಿದ್ದಿದೆ. ನೀರಿದ್ದ ಬಾವಿಗೆ ಬಿದ್ದ ಕಾರು ನೀರಿನಲ್ಲಿ ಮುಳುಗುವ ಮೊದಲೇ ದಂಪತಿ ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ.  ಕೇರಳ ರಾಜ್ಯದ ಎರ್ನಾಕುಲಂ ಕೊಳಂಚೇರಿಯಲ್ಲಿ ಈ ಘಟನೆ ನಡೆದಿದ್ದು, ಮಳೆಯ ಕಾರಣದಿಂದ ರಸ್ತೆ ಕಾಣದೆ ಈ ಅಪಘಾತ ಸಂಭವಿಸಿದೆ. ಕೊಟ್ಟಾರಕ್ಕರದಿಂದ ಅಲುವಾ ಕಡೆಗೆ ಬರುತ್ತಿದ್ದ ಕಾರ್ತಿಕ್ ಹಾಗೂ ಅವರ ಪತ್ನಿ ವಿಸ್ಮಯ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕಾರ್ತಿಕ್ ಕಾರು ಚಲಾಯಿಸುತ್ತಿದ್ದು ಕೊಳಂಚೇರಿ ಸಮೀಪ ರಸ್ತೆ ಸರಿಯಾಗಿ ಕಾಣದೆ ತಿರುವಿನಲ್ಲಿ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆಗೆ ಕಾರಿನ ಬ್ರೇಕ್‌ ಒತ್ತಿದ್ದರೂ ಆ ವೇಳೆಗಾಗಲೇ ಕಾರು ಬಾವಿಯ ಆವರಣ ಗೋಡೆಗೆ ಡಿಕ್ಕಿ ಹೊಡೆದು ನಿಧಾನವಾಗಿ ಬಾವಿಯೊಳಗೆ ಜಾರಿದೆ. ಕಾರು ನೀರಿನಲ್ಲಿ ಮುಳುತ್ತಿರುವುದನ್ನು ಗಮನಿಸಿದ ದಂಪತಿ ತಕ್ಷಣ ಹಿಂಬದಿ ಡೋರ್ ತೆಗೆದು ಕಾರಿನ ಮೇಲ್ಬಾಗಕ್ಕೆ ಬಂದಿದ್ದಾರೆ. ಈ ವೇಳೆ ಸ್ಥಳೀಯರು ಕೂಡಾ ಆಗಮಿಸಿದ್ದು, ಇಬ್ಬರ ರಕ್ಷಣೆ ಮಾಡಿದ್ದಾರೆ.

    ರಾತ್ರಿ ಸರಿ ಸುಮಾರು 8.45ಕ್ಕೆ ಈ ಅಪಘಾತ ನಡೆದಿದ್ದು, ಸ್ಥಳೀಯರು ಕಾರು ಬಾವಿಗೆ ಬೀಳುವುದನ್ನು ಕಂಡಿದ್ದಾರೆ. ತಕ್ಷಣ ಹಗ್ಗ ಹಾಗೂ ಏಣಿಯ ಸಹಾಯದಿಂದ ಬಾವಿಯಲ್ಲಿದ್ದ ದಂಪತಿಯನ್ನು ಮೇಲಕ್ಕೆ ಕರೆತಂದಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಬಾವಿಯಲ್ಲಿದ್ದ ಕಾರನ್ನು ಮೇಲೆತ್ತಿದ್ದಾರೆ

    Continue Reading

    LATEST NEWS

    ಅನೈತಿಕ ಫೋಟೋ ವೈರಲ್; ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

    Published

    on

    ಮಂಗಳೂರು/ಕೊಪ್ಪ: ಸಾಮಾಜಿಕ ಜಾಲತಾಣದಲ್ಲಿ ಅನೈತಿಕ ಫೋಟೋಗಳು ವೈರಲ್ ಆಗುತ್ತಿದ್ದ ಅವಮಾನ ತಾಳಲಾರದೆ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

     

    ಏನಿದು ಪ್ರಕರಣ?

    ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೊಪ್ಪ ಕಾಲೇಜೊಂದರ ವಿದ್ಯಾರ್ಥಿನಿ ಕೆಲ ಅನ್ಯಧರ್ಮೀಯ ಯುವಕರ ಜೊತೆ ಕಾಡೊಂದರಲ್ಲಿ ಸಿಕ್ಕಿಬಿದ್ದಳೆಂದು ಫೋಟೋಗಳು ರಾಜ್ಯಾದ್ಯಂತ ದಿಢೀರ್ ವೈರಲ್ ಆಗಿದ್ದವು. ಘಟನೆ ಕುರಿತಂತೆ ಮಾಹಿತಿ ನೀಡಿದ್ದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾಟೆ ವಿಕ್ರಂ ‘ಈ ಘಟನೆ ನಡೆದು ವಾರಗಳು ಕಳೆದಿವೆ. ಸಾಮಾಜಿಕ ಜಾಲತಾಣದಲ್ಲಿ ಹರಡತ್ತಿರುವಂತೆ ಯಾವುದೇ ಘಟನೆ ಸಂಭವಿಸಿರಲಿಲ್ಲ’ ಎಂದಿದ್ದರು.

    ಅಸಲಿ ಕಥೆ ಏನು?

    ಕೊಪ್ಪ ತಾಲ್ಲೂಕಿನ ಕಪಿನ ಎಂಬಲ್ಲಿ 15 ದಿನದ ಹಿಂದೆ ಈ ಘಟನೆ ನಡೆದಿತ್ತು. ಮೂವರು ಮುಸ್ಲಿಂ ಯುವಕರ ಜೊತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಹಾಗೂ ಯುವಕರ ಮೇಲೆ ಸ್ಥಳೀಯ ಸಂಘಟನೆಯವರು ಎನ್ನಲಾದ ಕೆಲವರು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದಾದ ಬಳಿಕ ಕಳೆದ ಮೂರು ದಿನಗಳಿಂದ ಆಕೆ ಯುವಕರ ಜೊತೆಗಿರುವ ಫೋಟೋಗಳು ರಾಜ್ಯಾದ್ಯಂತ ವೈರಲ್ ಆಗಿತ್ತು. ಈ ಹಿನ್ನಲೆ ಅವಮಾನ ತಾಳಲಾರದೆ ವಿದ್ಯಾರ್ಥಿನಿ ಕಾಲೇಜು ಆವರಣದಲ್ಲೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಬಳಿಕ ಎಚ್ಚೆತ್ತ ಪೊಲೀಸರು ಇದೀಗ ನೈತಿಕ ಪೊಲೀಸ್ ಗಿರಿ ನಡೆಸಿದವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    Continue Reading

    LATEST NEWS

    ಗೋಕರ್ಣ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರಿಬ್ಬರ ರಕ್ಷಣೆ

    Published

    on

    ಕಾರವಾರ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.

    ಮೈಸೂರು ಮೂಲದ ಅಭಿ ಹಾಗೂ ಇನ್ನೋರ್ವ ಪ್ರವಾಸಿಗನನ್ನು ಇಲ್ಲಿನ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಇವರಿಬ್ಬರು ರಜೆಯ ಹಿನ್ನಲೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು. ಸಮುದ್ರದಲ್ಲಿ ಈಜಾಡುವ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ್, ಮೋಹನ್, ಶಿವಪ್ರಸಾದ್ ಅಂಬಿಗ ಎನ್ನುವವರು ಯುವಕರನ್ನು ರಕ್ಷಿಸಿದ್ದಾರೆ.

    ಇನ್ನು ರಕ್ಷಿಸಲ್ಪಟ್ಟ ಇನ್ನೊರ್ವ ಪ್ರವಾಸಿಗ ಲೈಫ್‌ಗಾರ್ಡ್ ಸಿಬ್ಬಂದಿಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending