Wednesday, October 5, 2022

ಬಂಟ್ವಾಳ: 355 ಗ್ರಾಂ ಗಾಂಜಾ ಪತ್ತೆ- ಇಬ್ಬರ ಬಂಧನ

ಬಂಟ್ವಾಳ: ಮಾರಾಟ ಮಾಡುವ ಉದ್ದೇಶದಿಂದ ಗಾಂಜಾದ ಜೊತೆ ತಿರುಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎ.ಎಸ್.ಪಿ. ನೇತೃತ್ವದ ತಂಡ ಬಂಟ್ವಾಳದ ಮೆಲ್ಕಾರ್‌ನಲ್ಲಿ ವಶಕ್ಕೆ ಪಡೆದುಕೊಂಡಿದೆ.

ಕಬಕ ಸಮೀಪದ ಪರನೀರು ಕಟ್ಟೆ ಮನೆ ನಿವಾಸಿ ಮಹಮ್ಮದ್ ರಫೀಕ್, ಹಾಗೂ ಪುತ್ತೂರು ಕೆಮ್ಮಿಂಜ ಗ್ರಾಮದ ಮುಕ್ರಂಪಾಡಿ ನಿವಾಸಿ ತಾರಾನಾಥ ಪೂಜಾರಿ ಬಂಧಿತ ಆರೋಪಿಗಳು.

ಬಂಧಿತರಿಂದ 7.500 ಮೌಲ್ಯದ 355 ಗ್ರಾಂ ಗಾಂಜಾವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೆಲ್ಕಾರ್ ಸಮೀಪದ ನರಹರಿ ಪರ್ವತದ ಸಮೀಪದಲ್ಲಿ ಪೋಲೀಸರನ್ನು ನೋಡಿದ ಆರೋಪಿಗಳು ಓಡಿ ಹೋಗಲು ಯತ್ನಿಸಿದ ವೇಳೆ ಸಂಶಯಗೊಂಡ ಪೋಲೀಸರು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಅವರ ಬಳಿ ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದ ಗಾಂಜಾ ಪತ್ತೆಯಾಗಿದೆ.

ಎ.ಎಸ್.ಪಿ.ಶಿವಾಂಶು ರಜಪೂತ ಅವರ ನಿರ್ದೇಶನದಂತೆ ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಅವರ ನೇತ್ರತ್ವದಲ್ಲಿ ಎ‌ಎಸ್.ಐ.ಶಿವರಾಮ ನಾಯ್ಕ್, ಸಿಬ್ಬಂದಿ ಗಳಾದ ಉದಯ ರೈ, ಕುಮಾರ್, ನಾಗರಾಜ್, ಇರ್ಶಾದ್, ಮೋಹನ್ ಕಾರ್ಯಚರಣೆ ನಡೆಸಿದ್ದರು.

LEAVE A REPLY

Please enter your comment!
Please enter your name here

Hot Topics

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ಮಂಗಳೂರು: ಹೆಲಿಕಾಪ್ಟರ್‌ನಲ್ಲಿ ವೈಷ್ಣೋದೇವಿ ಮಂದಿರಕ್ಕೆ ಕರೆದೊಯ್ಯುವುದಾಗಿ 38 ಸಾವಿರ ರೂ. ವಂಚನೆ

ಮಂಗಳೂರು: ವೈಷ್ಣೋದೇವಿ ಮಂದಿರ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುತ್ತೇನೆಂದು ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ರೂ.38 ಸಾವಿರ ವಂಚನೆಗೈದ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಂಚನೆಗೊಳಗಾದ ವ್ಯಕ್ತಿ ಬೆಂಗಳೂರಿನಲ್ಲಿ IT consultant...

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...