Connect with us

International news

32 ಅಸ್ತಿ ಪಂಜರಗಳ ನಡುವೆ ಚಿನ್ನದ ಖಜಾನೆ…! ಗೋರಿಯೊಳಗೆ ಅಡಗಿತ್ತು ನಿಗೂಢ ರಹಸ್ಯ…!

Published

on

ಪುರಾತನ ಗೋರಿಯೊಂದರ ಉತ್ಖನನದ ವೇಳೆ 32 ಅಸ್ತಿ ಪಂಜರಗಳ ಜೊತೆಯಲ್ಲಿ ಅಪಾರ ಪ್ರಮಾಣದ ಚಿನ್ನದ ಖಜಾನೆ ಪತ್ತೆಯಾಗಿದೆ. ಗೋರಿಯೊಳಗೆ ಚಿನ್ನದ ಶಾಲು , ಆಭರಣಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಅಮೂಲ್ಯವಾದ ಚಿನ್ನಾಭರಣಗಳ ಖಜಾನೆ ಗೋರಿಯ ಒಳಗೆ ಕಂಡು ಬಂದಿದೆ.

ಉತ್ಖನನ ನಡೆದಿದ್ದು ಎಲ್ಲಿ..?

ಅಮೇರಿಕಾದ ಪನಾಮದಲ್ಲಿ 1200 ವರ್ಷಗಳಷ್ಟು ಹಳೆಯದಾದ ಗೋರಿಯನ್ನು ಪುರಾತತ್ವ ಶಾಸ್ತ್ರಜ್ಞರು ಉತ್ಖನನ ನಡೆಸುವಾಗ ಈ ನಿಗೂಢ ರಹಸ್ಯ ಬಯಲಾಗಿದೆ. ಪನಾಮ ಸಿಟಿಯಿಂದ 110 ಮೈಲ್‌ ದೂರದ ಎಲ್‌ಕ್ಯಾನೋ ಆರ್ಕಿಯಾಲಾಜಿಕಲ್ ಪಾರ್ಕ್‌ನಲ್ಲಿ ಇದ್ದ ಸಮಾಧಿಯೊಂದರ ಉತ್ಖನನ ನಡೆಸಲಾಗುತ್ತಿತ್ತು. ಈ ವೇಳೆ ಗೋರಿಯ ಒಳಗೆ 32 ಜನರ ಅಸ್ತಿ ಪಂಜರ ದೊರಕಿದ್ದು, ಅಲ್ಲೇ ಈ ಚಿನ್ನದ ನಿಕ್ಷೇಪಗಳೂ ಪತ್ತೆಯಾಗಿದೆ. ಇದೊಂದು ನರ ಬಲಿಯ ಕಾರಣದಿಂದ ಜೀವಾಂತ್ಯಗೊಂಡ ವ್ಯಕ್ತಿಗಳಾಗಿರಬಹುದು ಎಂದು ಪುರತಾತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

 

ಗೋರಿಯ ಒಳಗೆ ಇರುವ ಅಸ್ತಿ ಪಂಜರ ಯಾರದ್ದು..?

 

ಈ ಗೋರಿಯನ್ನು ಸುಮಾರು ಕ್ರಿ.ಶ.750 ರಲ್ಲಿ ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದ್ದು, ಆಗಿನ ಕೋಕಲ್ ಸಂಸ್ಕೃತಿಯ ರಾಜ ಅಥವಾ ಮುಖ್ಯಸ್ಥನ ಪಾರ್ಥಿವ ಶರೀರಕ್ಕೆ ಮಾಡಿರುವ ಸಮಾಧಿ ಆಗಿರುವ ಸಾಧ್ಯತೆಯನ್ನು ತಜ್ಞರು ಊಹಿಸಿದ್ದಾರೆ.

ಆ ಕಾಲದಲ್ಲಿ ನಾಯಕ ಅಥವಾ ಮುಖ್ಯಸ್ಥ ಇಹಲೋಕ ತ್ಯಜಿಸಿದರೆ ಅಂತವರ ಪತ್ನಿ ಅಥವಾ ಮಹಿಳಾ ಸಂಗಾತಿಯ ಜೊತೆಗೆ ಕೆಳಮುಖವಾಗಿ ಮಾಡಿ ಹೂಳುವ ಸಂಪ್ರದಾಯ ಇತ್ತು. ಇಲ್ಲೂ ಕೂಡಾ ಅದೇ ರೀತಿಯಾಗಿ ಅಸ್ತಿ ಪಂಜರ ಕಂಡು ಬಂದಿದೆ. ಇನ್ನು ಮುಖ್ಯಸ್ಥನ ಜೀವಾಂತ್ಯಕ್ಕೆ ಆತನ ಜತೆಯಾಗಿ ಸಾಗಲು ಆತನ ಸಹಚರರನ್ನು ಬ*ಲಿ ಕೊಡುವ ಸಂಪ್ರದಾಯ ಕೂಡಾ ಇತ್ತು. ಕೆಲವೊಂದು ನಿರ್ದಿಷ್ಟ ಸಂಖ್ಯೆಯಲ್ಲಿ ಜನರ ಬ*ಲಿ ನೀಡಲಾಗುತ್ತಿತ್ತು. ಹೀಗಾಗಿ ಇದು ಕೋಕಲ್ ಸಂಸ್ಕೃತಿಯ ಅತ್ಯುನ್ನತ ನಾಯಕನ ಗೋರಿಯಾಗಿರಬಹುದು ಎಂದು ಉತ್ಖನನ ವಿಭಾಗದ ನಿರ್ದೇಶಕಿ ಜೂಲಿಯಾ ಮಾಯೋ ಮಾಹಿತಿ ನೀಡಿದ್ದಾರೆ. ಆದರೆ ನಿಜಕ್ಕೂ ಎಷ್ಟು ಜನರನ್ನು ಹೀಗೆ ಬ*ಲಿ ನೀಡಿರಬಹುದು ಎಂದು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಗೋರಿಯ ಒಳಗೆ ಅಸ್ತಿ ಪಂಜರದ ಜೊತೆಗೆ ಸಿಕ್ಕ ವಸ್ತುಗಳು ಯಾವುದು ?

ಗೋರಿಯೊಳಗೆ ಸಿಕ್ಕ ಖಜಾನೆಯು ಲೆಕ್ಕಕ್ಕೆ ಸಿಗದಷ್ಟು ಅಮೂಲ್ಯ ಸಂಪತ್ತು ಹೊಂದಿದೆ ಎಂದು ಪನಾಮಾದ ಸಂಸ್ಕೃತಿ ಸಚಿವಾಲಯದ ಲಿನೆಟ್ ಮಾಂಟೆನೆಗೊ ತಿಳಿಸಿದ್ದಾರೆ. ಇಲ್ಲಿ ಚಿನ್ನದ ಶಾಲು, ಒಡ್ಯಾಣಗಳು, ಆಭರಣಗಳು ಮತ್ತು ತಿಮಿಂಗಿಲದ ಹಲ್ಲಿಗೆ ಅಲಂಕರಿಸಿದ ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳು, ಮಾನವ ಆಕೃತಿಯ ಕಿವಿಯೋಲೆ, ಮೊಸಳೆ ಕಿವಿಯೋಲೆ, ಗಂಟೆಗಳು, ನಾಯಿಯ ಹಲ್ಲುಗಳಿಂದ ಮಾಡಿದ ಸ್ಕರ್ಟ್, ಮೂಳೆಯ ಕೊಳಲುಗಳು ಮತ್ತು ಸೆರಾಮಿಕ್ ವಸ್ತುಗಳು ಕೂಡ ಕಂಡುಬಂದಿರುವುದಾಗಿ ಉತ್ಪನನದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎಲ್ ಕಾನೋದಲ್ಲಿ 2008ರಿಂದಲೂ ಉತ್ಪನನಗಳು ನಡೆಯುತ್ತಿದ್ದು ಅಮೆರಿಕಾಕ್ಕೆ ಯೂರೋಪಿಯನ್ನರ ಆಗಮನಕ್ಕೂ ಮೊದಲು ಇದ್ದ ಬುಡಕಟ್ಟು ಜನರ ಜೀವನ ಪದ್ಧತಿಯ ಬಗ್ಗೆ ಅನ್ವೇಷಣೆ ನಡೆಸಲಾಗುತ್ತಿದೆ. ಉತ್ಖನನ ನಡೆದ ಗೋರಿಯು ನೆಕ್ರೋಪೋಲಿಸ್ ಅಥವಾ ಸಿಟಿ ಆಫ್ ಡೆಡ್ ಎಂದು ಕರೆಯಲಾಗುವ ಸ್ಮ*ಶಾ*ನದಲ್ಲಿ ಇದೆ. ಇದನ್ನು ಕ್ರಿ.ಶ 700ರ ಸುಮಾರಿಗೆ ನಿರ್ಮಿಸಲಾಗಿದ್ದು, ಕ್ರಿ.ಶ 1000ದ ಬಳಿಕವೂ ಅನಾಥವಾಗಿದ್ದವು ಎಂದು ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ.

International news

ನಿರ್ಮಾಪಕರಾಗುತ್ತಿದ್ದಾರಂತೆ ರಾಕಿಂಗ್ ಸ್ಟಾರ್ ಯಶ್..!? ಯಾವ ಸಿನೆಮಾ.. ಇಲ್ಲಿದೆ ಡೀಟೈಲ್ಸ್

Published

on

ಬಾಲಿವುಡ್: ಪಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಬಗ್ಗೆ ನಿತ್ಯ ಹೊಸ ಹೊಸ ಸುದ್ದಿಗಳು ಹರಿದಾಡುತ್ತಾ ಇವೆ. ‘ಕೆಜಿಎಫ್ 2’ ಸಿನಿಮಾ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಮುಂದಿನ ವರ್ಷ ಏಪ್ರಿಲ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ ಅವರ ನಟನೆಯ ‘ರಾಮಾಯಣ’ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ. ಈ ಚಿತ್ರಕ್ಕಾಗಿ ಅವರು ಸಂಭಾವನೆ ಪಡೆಯದೇ ಇರಲು ನಿರ್ಧರಿಸಿದ್ದಾರಂತೆ. ಇದರ ಬದಲು ಅವರು ನಿರ್ಮಾಪಕರಾಗುತ್ತಿದ್ದಾರೆ!

ಹೌದು, ರಾಮಾಯಣ ಸಿನಿಮಾಗಾಗಿ 80 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ ಯಶ್, ಸಂಭಾವನೆ ತೆಗೆದುಕೊಂಡಿಲ್ಲ. ಬದಲಿಗೆ ಆ ಹಣವನ್ನು ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿದ್ದಾರಂತೆ. ಸಿನಿಮಾ ಲಾಭದಲ್ಲಿ ಯಶ್ ಅವರಿಗೂ ಪಾಲು ಸಿಗಲಿದ್ದು, ಈ ಮೂಲಕ ನಿರ್ಮಾಪಕರಾಗುತ್ತಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ‘ರಾಮಾಯಣ’ ಸಿನಿಮಾಗೆ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ಮುಂಬೈನ ಸ್ಟುಡಿಯೋ ಒಂದರಲ್ಲಿ ದೊಡ್ಡ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ. ಸೆಟ್​ನ ಫೊಟೋಗಳು ಲೀಕ್ ಆಗಿದ್ದು ಚಿತ್ರತಂಡ ಬೇಸರ ಹೊರಹಾಕಿದ್ದಾರೆ. ಈ ಸಿನೆಮಾಗೆ ನಿತೇಶ್ ತಿವಾರಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Continue Reading

International news

ದುಬೈನಲ್ಲಿ ಕೈಬೀಸಿ ಕರೆಯುತ್ತಿದೆ ಕಡಲ ಮೇಲೆ ತೇಲಾಡುವ ‘ಕ್ವೀನ್ ಎಲಿಜಬೆತ್ 2’ ಅರಮನೆ; ಹೇಗಿದೆ ವೈಭವ?

Published

on

ದುಬೈನ ಕಡಲತೀರ ಪೋರ್ಟ್ ರಾಶೀದ್ ನಲ್ಲಿ ತೇಲಾಡುವ ಬೃಹತ್ ಐಶಾರಾಮಿ ಹಡಗೊಂದು ಗಮನಸೆಳೆಯುತ್ತಿದೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಈ ಹಡಗು ಅರಮನೆಯಂತೆ ಕಂಗೊಳಿಸುತ್ತಿದೆ. ಅದುವೇ ಕ್ವೀನ್‌ ಎಲಿಝಬೆತ್‌-2.

ದಾಖಲೆ ಬರೆದಿದ್ದ ಹಡಗು :

2008ರಲ್ಲಿ ಕ್ವೀನ್‌ ಎಲಿಝಬೆತ್‌-2 ತನ್ನ ಪ್ರಯಾಣಿಕರ ಕೊನೆಯ ಪ್ರಯಾಣದ ಅನಂತರ ಡಿ ಕಮಿಷನ್‌x ಎಂದು ಘೋಷಣೆ ಮಾಡಿತ್ತು. ಕೊನೆಯ ಪ್ರಯಾಣ ದುಬೈಗೆ ಪ್ರಯಾಣಿಸುವ ಸಲುವಾಗಿ ಮುಂಗಡ ಕಾಯ್ದಿರಿಸುವ ಟಿಕೆಟ್‌ ಕೇವಲ 20 ನಿಮಿಷದಲ್ಲಿಯೇ ಭರ್ತಿಯಾಗಿತ್ತು. ಇದು ದಾಖಲೆಯನ್ನೇ ಬರೆದಿತ್ತು.
ರಾಯಲ್‌ ನೇವಿ, ಎಚ್‌.ಎಂ.ಎಸ್‌. ಲಾಂಚೆಸ್ಟರ್‌ ಡ್ನೂಕ್‌ ಕ್ಲಾಸ್‌ ಬೋಟ್‌ಗಳು ಕ್ವೀನ್‌ ಎಲಿಝಬೆತ್‌-2ನ್ನು ಬೆಂಗಾವಲು ಪಡೆಗಳಾಗಿ ಎಸ್ಕಾರ್ಟ್‌ ಮಾಡಿಕೊಂಡು ದುಬೈಯ ಪೋರ್ಟ್‌ ರಾಶೀದ್‌ನಲ್ಲಿ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು.

ನವೀಕರಣಗೊಂಡ ಕ್ವೀನ್‌ ಎಲಿಝಬೆತ್‌-2 :

2018ರಲ್ಲಿ ದುಬೈಯ ಪೋರ್ಟ್‌ ರಾಶೀದ್‌ನಲ್ಲಿ ನಿಲುಗಡೆಯಾಗಿದ್ದ ಕ್ವೀನ್‌ ಎಲಿಝಬೆತ್‌-2 ಹಡಗನ್ನು ನವೀಕರಣಗೊಳಿಸಲಾಯಿತು. ಅತ್ಯಾಧುನಿಕವಾಗಿ ಹಾಗೂ ಆಕರ್ಷಣೀಯವಾಗಿ ತೇಲಾಡುವ ಐಶಾರಾಮಿ ವಿಲಾಸಿ ಹೊಟೇಲ್‌ನ್ನಾಗಿ ಪರಿವರ್ತಿಸಲಾಯಿತು.
ಅರಮನೆಯಂತೆ ಕಂಗೊಳಿಸಿದ ಐಷಾರಾಮಿ ಕ್ವೀನ್‌ ಎಲಿಝಬೆತ್‌-2 ಹಡಗು ವಿಶ್ವದಾದ್ಯಂತ ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇನ್ನು ಇದರ ಒಳಾಂಗಣ ಪ್ರವೇಶಿಸುವಾಗ ಭವ್ಯ ವಾಸ್ತುಶಿಲ್ಪಗಳ ವೈಭವ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ.

ಹೇಗಿದೆ ಹಡಗು?

ವೀಕ್ಷಿಸಲು ಬರುವ ವೀಕ್ಷಕರು ಮತ್ತು ಹೆರಿಟೆಜ್‌ ಟೂರ್‌ ಪ್ಯಾಕೇಜ್‌ನಲ್ಲಿ ಬರುವ ಪ್ರವಾಸಿಗರು ನಿಗದಿತ ದರದಲ್ಲಿ ಒಳಾಂಗಣ ಪ್ರವೇಶ ಪಡೆದು ಒಂದೆರಡು ಗಂಟೆಯಲ್ಲಿ ಸಂಪೂರ್ಣವಾಗಿ ವೀಕ್ಷಿಸಬಹುದಾಗಿದೆ. ರಾತ್ರಿ ಉಳಿದುಕೊಳ್ಳಲು ಹೆಚ್ಚಿನ ದರ ಪಾವತಿಸಿ ಕೊಠಡಿಯನ್ನು ಪಡೆದುಕೊಳ್ಳಬಹುದಾಗಿದೆ. ರಾತ್ರಿಯ ಭೋಜನ ಮತ್ತು ಬೆಳಗಿನ ಉಪಹಾರ ಉಚಿತವಾಗಿ ದೊರೆಯುತ್ತದೆ.

ಕ್ವೀನ್‌ ಎಲಿಝಬೆತ್‌-2 ಹಡಗಿನಲ್ಲಿ 447 ಐಷಾರಾಮಿ ಕೊಠಡಿಗಳಿದ್ದು, ಕ್ಲಾಸಿಕ್‌, ಸುಪಿರಿಯರ್‌ ಮತ್ತು ಡಿಲಕ್ಸ್‌ ಹೀಗೆ ವರ್ಗೀಕರಣಗೊಂಡಿದೆ. ಡಿಕಮಿಷನ್ಡ್ ಆಗುವ ಮೊದಲು 515 ಮಂದಿ ಆಸೀನರಾಗಲು ವ್ಯವಸ್ಥೆ ಇದ್ದ ಸಿನೆಮಾ ಹಾಲ್‌ ಇದೀಗ ಯಾವುದೇ ಸಭೆ ಸಮಾರಂಭಗಳನ್ನು, ಕಂಪೆನಿ ಮೀಟಿಂಗ್‌, ಕಾನ್ಫರೆನ್ಸ್‌ ನಡೆಸಬಹುದಾಗಿದೆ.‌

ಅಲ್ಲದೇ ಇಲ್ಲಿ ಹೆಸರಿಗೆ ತಕ್ಕಂತೆ ಕ್ವೀನ್‌ ಹಾಲ್‌ ಸಹ ಇದೆ. ಈ ಹಾಲ್‌ನಲ್ಲಿ ವಿವಾಹ ಸಮಾರಂಭ, ರಾಯಲ್‌ ವೆಡ್ಡಿಂಗ್‌ ಸಹ ನಡೆಯುತ್ತಿರುತ್ತದೆ. ಈ ಕ್ವೀನ್‌ ಹಾಲ್‌ನಲ್ಲಿ ಕೆಲವು ಭಾರತೀಯರ ವಿವಾಹ ಸಹ ನಡೆದಿದೆ. ವಿಶ್ವ ದರ್ಜೆಯ ಭೋಜನ ಹಾಲ್‌ ಮತ್ತು ವೈವಿಧ್ಯಮಯ ಭಕ್ಷ್ಯ ಭೋಜನಗಳು ದೊರೆಯುತ್ತದೆ. ಅತ್ಯಂತ ದುಬಾರಿ ಮದ್ಯಪಾನೀಯಗಳ ಕೌಂಟರ್‌ ಸಹ ಇಲ್ಲಿದೆ.

ಹಡಗಿನ ಸನ್‌ ಡೆಕ್‌ನಲ್ಲಿ ಕ್ಯಾಪ್ಟನ್‌ ಕೊಠಡಿ, ವಿಶಾಲವಾದ ಬಾಲ್ಕನಿ, ಹಡಗಿನ ನೌಕಾ ಅಧಿಕಾರಿಗಳ ಕೊಠಡಿಗಳನ್ನು ವೀಕ್ಷಿಸಬಹುದು. ಹಡಗಿನ ಅಮೂಲ್ಯ ವಸ್ತುಗಳ ಸಂಗ್ರಹಾಲಯ ವಿಭಾಗವಂತೂ ನಿಮಗೆ ಇಷ್ಟವಾಗಲಿದೆ. ಮೊದಲು ಪ್ರಯಾಣಿಸುವ ಸಂದರ್ಭದಲ್ಲಿ ಉಪಯೋಗಿಸಿದ್ದ ಕ್ಯಾಪ್ಟನ್‌ರವರ ಯೂನಿಫಾರ್ಮ್ ನ್ನು ಇಲ್ಲಿ ನೋಡಿ ಖುಷಿಪಡಬಹುದಾಗಿದೆ. ಹಡಗಿನ ಬೃಹತ್‌ ಎಂಜಿನ್‌ ರೂಮ್‌ ಇನ್ನಿತರ ಹಡಗಿಗೆ ಸಂಬಧಿಸಿದ ಸ್ಟೋರ್‌ ರೂಮ್‌ ಇದ್ದು, ಅದನ್ನೂ ವೀಕ್ಷಿಸಬಹುದಾಗಿದೆ.

ಹಲವು ದಾಖಲೆಗಳನ್ನು ನಿರ್ಮಿಸಿರುವ ದುಬೈ, ಕ್ವೀನ್‌ ಎಲಿಝಬೆತ್‌-2 ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದುಬರುತ್ತದೆ, ಅಂತಹ ಅದ್ಭುತ ಸಂಭ್ರಮವನ್ನು ನೀಡುವಲ್ಲಿ ಹಡಗು ಯಶಸ್ವಿಯಾಗಿರೋದು ಸುಳ್ಳಲ್ಲ.

Continue Reading

International news

WATCH VIDEO : ಪ್ರವಾಸಿಗರ ಸಮೀಪದಲ್ಲೇ ದನದ ಮೇಲೆ ಎಗರಿದ ಹುಲಿ; ಎದೆ ಝಲ್ ಎಂದೆನಿಸುವ ಭಯಾನಕ ವಿಡಿಯೋ ವೈರಲ್

Published

on

ವನ್ಯಜೀವಿ ಸಫಾರಿ ಮಾಡಲು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರಾಣಿಗಳನ್ನು ಹತ್ತಿರದಿಂದ ಕಾಣಲು ಬಯಸುವ ಮಂದಿಗೆ ಇದು ಥ್ರಿಲ್ ನೀಡುತ್ತದೆ ಅನ್ನೋದಂತೂ ಸತ್ಯ. ಹಾಗಾಗಿ ಸಫಾರಿ ಹೋಗಲು ಪ್ರಾಣಿ ಪ್ರಿಯರು ಬಯಸುತ್ತಾರೆ. ಈ ಅದ್ಭುತ ಅನುಭವ ಪಡೆಯಲು ಬಯಸುವ ಮಂದಿ ಸಫಾರಿ ಹೋಗಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳೂ ನಡೆಯುವುದಿದೆ. ಭಯ ಬೀಳುವ ಘಟನೆಗಳು ಸಂಭವಿಸುತ್ತದೆ. ಇಂತಹುದೇ ವೀಡಿಯೋ ಒಂದು ವೈರಲ್ ಆಗಿದೆ.

ಏನಿದು ಘಟನೆ?

ಪ್ರಾಣಿಗಳು ಹೇಳಿ ಕೇಳಿ ಬೇಟೆಯಾಡುವುದರಲ್ಲಿ ಹುಷಾರ್. ಅದರಲ್ಲೂ ಹುಲಿ ಅಂದ್ರೆ ಕೇಳ್ಬೇಕಾ..? ಅಬ್ಬಾ! ದಾಳಿ ನಡೆಸಿ ಆರ್ಭಟಿಸೋ ಕ್ರೂ*ರ ಮೃಗ. ಹಾಗಾಗಿ ಈ ಮೈ ಜುಮ್ಮೆನ್ನಿಸುವ ಈ ದೃಶ್ಯ ನಿಜಕ್ಕೂ ಒಮ್ಮೆ ಗಾಬರಿ ಹುಟ್ಟಿಸೋದು ಸುಳ್ಳಲ್ಲ. ಈ ಘಟನೆ ನಡೆದಿರೋದು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ.
ಹುಲಿ ಬೇಟೆಯ ದೃಶ್ಯವನ್ನು ಪ್ರವಾಸಿಗರು ಹತ್ತಿರದಲ್ಲೇ ನೋಡಿದ್ದಾರೆ. ಅಲ್ಲದೇ, ಹೌಹಾರಿರೋದು ಸುಳ್ಳಲ್ಲ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಫಾರಿ ವಾಹನ ಪ್ರವಾಸಿಗರು ವನ್ಯಜೀವಿಗಳ ವೀಕ್ಷಣೆಯಲ್ಲಿರುತ್ತಾರೆ. ಪೊದೆಯಲ್ಲಿ ಹುಲಿಯೊಂದು ಅಡಗಿ ಕುಳಿತಿರುತ್ತದೆ. ಅಷ್ಟರಲ್ಲಿ ದನವೊಂದು ಅದೇ ಜಾಗದಲ್ಲಿ ಮುಂದೆ ಸಾಗುತ್ತೆ. ಅದನ್ನ ಹುಲಿ ನೋಡಿದ್ಮೇಲೆ ಕೇಳ್ಬೇಕಾ…!? ದನದ ಮೇಲೆ ಎಗರುತ್ತೆ. ಅದರ ಮೇಲೆ ದಾಳಿ ನಡೆಸಿ ಬೇಟೆಗೆ ಯತ್ನಿಸುತ್ತದೆ. ಈ ವೇಳೆ ಹುಲಿಯಿಂದ ತಪ್ಪಿಸಿಕೊಳ್ಳುವ ದನ ಬದುಕಿದ್ಯಾ ಬಡ ಜೀವವೇ ಎಂದುಕೊಂಡು ಓಡಿ ಹೋಗುತ್ತೆ. ಈ ದೃಶ್ಯ ನಡೆಯೋದು ಸಫಾರಿ ವಾಹನದ ಸಮೀಪದಲ್ಲೇ. ವಾಹನದ ಬಳಿಯೇ ಜಿಗಿದಿದ್ದರಿಂದ ಪ್ರವಾಸಿಗರು ಗಾಬರಿ ಬಿದ್ದಿದ್ದಾರೆ. ಈ ವಿಡಿಯೋವನ್ನು ರಣಥಂಬೋರ್ ಪಾರ್ಕ್ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

‘ದನದ ಮೇಲೆ ಹುಲಿಯ ಅನಿರೀಕ್ಷಿತ ಎನ್ಕೌಂಟರ್ ದೃಶ್ಯ ಕ್ಯಾಮೆರಾದಲ್ಲಿ ಸೆರೆ’ ಎಂದು ಬರೆದುಕೊಂಡಿದೆ. ರಾಜಸ್ಥಾನದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರತಿವರ್ಷ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ.

 

Continue Reading

LATEST NEWS

Trending