Connect with us

    DAKSHINA KANNADA

    ರೀಲ್‌ನಿಂದ ರಿಯಲ್ ನಾಮ ಇಕ್ಕಿದ ಬಂಟ್ವಾಳದ ರಾಮಪ್ರಸಾದ..! ಎಲ್ಲರೂ ಓದಲೇ ಬೇಕಾದ ಸ್ಟೋರಿ ಇದು..

    Published

    on

    ಮಂಗಳೂರು: ರೀಲ್‌ ಹೆಸ್ರು ಹರೀಶ್‌ ರಿಯಲ್‌ ಹೆಸ್ರು ರಾಮ್‌ಪ್ರಸಾದ್‌, ರೀಲ್‌ ವೃತ್ತಿ ಕೆಎಂಎಫ್‌ ಮಂಗಳೂರು ಇದರ ನಿರ್ದೇಶಕ, ರಿಯಲ್‌ ವೃತ್ತಿ ಅಮಾಯಕರ ದುಡ್ಡು ಹೊಡೆಯೋದು. ಈತನ ಊರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮಲಾರು.

                  ಆರೋಪಿ ರಾಮ್‌ಪ್ರಸಾದ್‌ ಯಾನೆ ಹರೀಶ್‌

    ಈತನ ತಂದೆ ಮಲಾರು ಮೋಹನ್ ರಾವ್, ಅವರು ವೃತ್ತಿಯಲ್ಲಿ ಶಿಕ್ಷಕ, ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇರಳ ಸರ್ಕಾರವು ಅವರಿಗೆ ಅತ್ಯುತ್ತಮ ರಾಜ್ಯ ಶಿಕ್ಷಕ ಎಂಬ ಪ್ರಶಸ್ತಿ ನೀಡಿ ಗೌರವಿಸದ್ದರು. ಆದರೆ ಮಗ ಮಾತ್ರ ಪಕ್ಕ 420.

    ಕೆಎಂಎಫ್‌ನಲ್ಲಿ ಕೆಲಸ ಕೊಡ್ತೇನೆ ಎಂದು ಬರೋಬ್ಬರಿ 150 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ನಾಮ ಎಳೆದಿದ್ದಾನೆ. ರಾಮ್‌ಪ್ರಸಾದ್‌ ಯಾನೆ ಹರೀಶ್‌ ನನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರ ನೇತೃತ್ವದಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರಿಗೊಪ್ಪಿಸಿದ್ದಾರೆ.

     ಫೇಕ್‌ ವಿಸಿಟಿಂಗ್‌ ಕಾರ್ಡ್

    ರಾಮ್‌ಪ್ರಸಾದ್‌ ಯಾನೆ ಹರೀಶ್‌ ಅಮಾಯಕರಿಗೆ ಕೆಎಂಎಫ್‌ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕೆಎಂಎಫ್‌ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವಾದಲ್ಲಿ 15 ದಿನಗಳ ಟ್ರೈನಿಂಗ್‌ ಕೊಟ್ಟಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಈತ ಪ್ರತೀ ವ್ಯಕ್ತಿಯಿಂದ ಕಡಿಮೆ ಎಂದರೆ 50 ಸಾವಿರದಿಂದ ಹಿಡಿದು 3.50 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ.

     ಸಿಸಿಬಿ ಕಚೇರಿ ಮುಂದೆ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಸಂತ್ರಸ್ತರು

    ಅದು ಗೂಗಲ್‌ ಪೇ, ಕ್ಯಾಶ್‌, ಬ್ಯಾಂಕ್‌ ಟ್ರಾನ್ಸಫರ್‌ ಸೇರಿ ಹಲವು ವಿಧಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕ್ರಿಮಿನಲ್ ಆರೋಪಿಯ ವಂಚನೆ ತಿಳಿಯದ ಹಲವಅರ ಅಮಾಯಕರು ಮೋಸ ಹೋಗಿದ್ದಾರೆ.

    ಒಂದೇ ಕುಟುಂಬದ 15 ಮಂದಿ ಸದಸ್ಯರಿಗೆ ಕೆಲಸ ಕೊಡಿಸುವ ಭರವಸೆ ನೀಡಿ ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ಜೇಬಿಗಿಳಿಸಿದ್ದು ಇದೀಗ  ಈ 15 ಮಂದಿ ಸದಸ್ಯರು ಇತ್ತ ದುಡ್ಡೂ ಇಲ್ಲ ಅತ್ತ ಕೆಲಸವೂ ಇಲ್ಲದೆ ಅತಂತ್ರರಾಗಿದ್ದಾರೆ.

    ಇಷ್ಟೆ ಅಲ್ಲದೆ ಅಮಾಯಕ ನಿರುದ್ಯೋಗಿ ಯುವತಿಯರಿಗೂ ವಂಚನೆ ಮಾಡಿದ್ದಾರೆ. ಹಲವು ಮಂದಿಯಿಂದ ದುಡ್ಡು ಪಡೆದುಕೊಂಡು ಯುವತಿಯರನ್ನು ಬ್ಲ್ಯಾಕ್‌ ಮೇಲ್‌ ಕೂಡಾ ಮಾಡುತ್ತಿದ್ದ. ಬೆಂಗಳೂರಿನ ಕೆಎಂಎಫ್‌ಗೂ ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ.

    ನೂರಾರು ಅಮಾಯಕರು ಈ ಮಹಾ ಮೋಸಗಾರನಿಂದ ವಂಚನೆಯಾಗಿದ್ದುದ್ದನ್ನು ತಿಳಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ಪೂರ್ಣ ಮಾಹಿತಿ ಪಡೆದು ಆತನನ್ನು ಕರೆಸಿಕೊಂಡು ವಿಷಯ ಕೇಳಿದಾಗ ವಂಚನೆಯನ್ನು ಬಾಯ್ಬಿಟ್ಟಿದ್ದಾನೆ.

     ನಕಲಿ ಬ್ಯಾಂಕ್‌ ಸ್ಟೇಟ್‌ಮೆಂಟ್‌

    ಮತ್ತೊಬ್ಬನಿಗೂ ಕೊಟ್ಟಿದ್ದಾನಂತೆ ವಂಚನೆ ಪಾಲು
    ಹರೀಶ್‌ ಯಾನೇ ರಾಮ್‌ಪ್ರಸಾದ್‌ ಹೇಳಿರುವಂತೆ ಈ ದಂಧೆಯಲ್ಲಿ ಚಿಕ್ಕಮಗಳೂರಿನ ಕೊಪ್ಪ ಮೂಲದ ನಿವಾಸಿ ಮಲ್ಲೇಶ್ ಯಾನೆ ಹೇಮಂತ್‌ ಎಂಬಾತನೂ ಸೇರಿಕೊಂಡು ವಂಚನೆ ಮಾಡಿದ್ದಾನೆ. ಈ ಹಿಂದೆ ಇವರಿಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯ ಆಗಿದೆ. ಇದೀಗ ಈ ದಂಧೆಯಲ್ಲಿ ಆತನಿಗೆ 1.50 ಕೋಟಿ ರೂ ಕೊಟ್ಟಿದ್ದಾನೆ.

    ಈತನ ಹತ್ತಿರವಿದೆ 10 ಕ್ಕೂ ಹೆಚ್ಚು ಬ್ಯಾಂಕ್‌ ಅಕೌಂಟ್‌
    ಈತನ ಬಳಿ 10-14 ಬೇರೆ ಬೇರೆ ಬ್ಯಾಂಕ್‌ನ ಅಕೌಂಟ್‌ಗಳಿವೆ. ಇದರ ಮೂಲಕ ಹಲವರ ಹಣ ಈ ಅಕೌಂಟ್‌ಗೆ ತಲುಪುವಂತೆ ಮಾಡುತ್ತಿದ್ದ. ಸಹಕಾರಿ ಬ್ಯಾಂಕ್‌, ಖಾಸಗಿ ಬ್ಯಾಂಕ್‌, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲೂ ಹರೀಶನ ಅಕೌಂಟ್‌ ಇದೆಯಂತೆ.

     

    ನಕಲಿ ಚೆಕ್‌

    ಈತನ ಬಳಿ ಇರುವುದೆಲ್ಲ ಫೇಕ್‌ ಫೇಕ್‌ ಫೇಕ್‌
    ವಿಶೇಷ ಅಂದ್ರೆ ಈತನ ಬಳಿ ತಾನು ಕೆಎಂಎಫ್‌ ನಿರ್ದೇಶಕ ಎಂಬ ಹೆಸರಿನ ವಿಸಿಟಿಂಗ್‌ ಕಾರ್ಡ್‌ ಇದೆ. ಜೊತೆಗೆ ಬ್ಯಾಂಕ್‌ ಟ್ರಾನ್ಸ್‌ಎಕ್ಷನ್‌ಗಳನ್ನು ಸಾಫ್ಟ್‌ವೇರ್ ಉಪಯೋಗಿಸಿ ನಕಲಿ ತಯಾರು ಮಾಡುತ್ತಿದ್ದ. ಬ್ಯಾಂಕ್‌ ಸ್ಟೇಟ್‌ಮೆಂಟ್‌, ಬ್ಯಾಂಕ್‌ ಚೆಕ್‌ ಹೀಗೆ ಎಲ್ಲವೂ ಈತನ ಬಳಿಯಿದೆ ಆದ್ರೆ ಅದೆಲ್ಲವೂ ಫೇಕ್‌ ಫೇಕ್‌ ಪೇಕ್‌.!!

    ಹಲವರಿಗೆ ನಾಮ ಇಕ್ಕಿದ ಭೂಪ
    ರಾಮ್‌ಪ್ರಸಾದ್‌ ಕೆಎಂಎಫ್‌ ಮಾತ್ರವಲ್ಲ ಈ ಹಿಂದೆ ಆರ್‌ಡಿಪಿಆರ್‌, ಎಂಆರ್‌ಪಿಎಲ್‌ ಅಧೀನದ ಒಎಂಪಿಎಲ್‌, ಎಸ್‌ ಡಿ ಎ, ಎಫ್‌ಡಿಎ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯದೇ ಕೆಲಸ ಕೊಡಿಸುತ್ತೇನೆಂದು ನಂಬಿಸಿ ವಂಚಿಸಿದ್ದ ಆರೋಪಗಳಿವೆ ಈ ಹರೀಶನ ಮೇಲೆ.

    ಬಜ್ಪೆಯಲ್ಲಿ ಕಂಬಿ ಎಣಿಸಿದ್ದ ಆರೋಪಿ
    ಈ ಹಿಂದೆ ಆರ್‌ಡಿಪಿಆರ್‌, ಒಎಂಪಿಎಲ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ಇದೇ ರೀತಿ ಫ್ರಾಡ್‌ ಮಾಡಿದ್ದ ಅದರಲ್ಲಿ ಕೆಲವರು ದೂರು ನೀಡಿದ್ದ ಹಿನ್ನೆಲೆ ಮೂಡುಬಿದಿರೆ ಠಾಣೆಗೆ ಕರೆಸಿಕೊಂಡು ಅದನ್ನು ಅಲ್ಲೇ ಮುಗಿಸಿದ್ದರು.

    ಅದಾದ ನಂತರ ಬಜ್ಪೆ ಠಾಣೆಯಲ್ಲಿ ಆತನ ವಿರುದ್ಧ ವಂಚನೆ ಕೇಸ್‌ ದಾಖಲಾಗಿ 6 ದಿನ ಕಂಬಿ ಎಣಿಸಿದ್ದ. ಆದ್ರೆ ಅಲ್ಲನೂ ಈ ಅಸಮಿ ಜಾಮೀನು ಪಡೆದು ಹೊರಗೆ ಬಂದಿದ್ದ.

                      ಸಂತ್ರಸ್ತನೊಬ್ಬನಿಗೆ ಕೊಟ್ಟ ಫೇಕ್‌ ಐಡಿ

    ಸಂತ್ರಸ್ಥರು ತಾಯಿಯ ಪಿಎಫ್‌ ಹಣ, ಫೈನಾನ್ಸ್‌ನಿಂದ ಸಾಲ ತೆಗೆದು ಹಣ ಕೊಟ್ಟಿದ್ದಾರೆ
    ಕೆಲಸ ಸಿಗುತ್ತದೆ ಎಂಬ ಖುಷಿಯಲ್ಲಿ ಕೆಲ ಸಂತ್ರಸ್ಥರು ಇದ್ದ ಕೆಲಸವನ್ನು ಬಿಟ್ಟು ಈಗ ನಿರುದ್ಯೋಗಿಗಳಾಗಿದ್ದಾರೆ.

    ಕೊಣಾಜೆ ಮೂಲದ ಯುವಕನೊಬ್ಬ 20 ವರ್ಷ ತಾಯಿ ದುಡಿದು ಕೂಡಿಟ್ಟ ಪಿಎಫ್‌ ಹಣ ಜೊತೆಗೆ ಬ್ಯಾಂಕ್‌ನಿಂದ ಸಾಲ ತೆಗೆದು ಒಟ್ಟು 3.50 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದೇನೆ ಎನ್ನುವಾಗ ಆತನ ಕಣ್ಣಾಲಿಗಳು ತೇವವಾಗಿದ್ದವು.

    ಮತ್ತೊಬ್ಬರು ಫೈನಾನ್ಸ್‌ನಿಂದ 60 ಸಾವಿರ ಹಾಗೂ ತಾಯಿ ಚಿನ್ನವನ್ನು ಅಡವಿಟ್ಟು ಈತನಿಗೆ 1.80 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ, ಮತ್ತೊಬ್ಬ ನವ ವಿವಾಹಿತ ಯುವಕ ಮದುವೆಯಾಗಿ 3 ತಿಂಗಳಲ್ಲೇ ಹೆಂಡತಿಯ ಚಿನ್ನವನ್ನು ಅಡವಿಟ್ಟು 1.90 ಲಕ್ಷ ರೂಪಾಯಿ ಕೊಟ್ಟಿದ್ದಾನೆ.

    ಮತ್ತೊಬ್ಬ ಅಮಾಯಕ ಮಹಿಳೆ ಪತಿಗೆ ತಿಳಿಯದಂತೆ 80 ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆಂದು ಮಾಧ್ಯಮಗಳಿಗೆ ಮಾಹಿತಿ ನೀಡುವ ವೇಳೆ ಕಣ್ಣೀರು ತುಂಬಿಹೋಗಿತ್ತು.

    ಫೇಕ್‌ ಅಪಾಯಿಂಟ್‌ ಮೆಂಟ್‌ ಲೆಟರ್‌

    ಎಲ್ಲಿಯವರೆಗೂ ಮೋಸ ಹೋಗ್ತಾರೋ ಅಲ್ಲಿಯವರೆಗೂ ಮೋಸ ಮಾಡ್ತಾರೆ
    ಇಂತಹ ಮೋಸ, ವಂಚನೆ ಪ್ರಕರಣಗಳು ಆಗಾಗ ಕಂಡುಬಂದರೂ ಸರಕಾರಿ ಅಥವಾ ಹೆಚ್ಚಿನ ಸಂಬಳದ ಆಸೆಗಾಗಿ ಕಳ್ಳದಾರಿಯ ಮೂಲಕ ಇಂತಹವರಿಗೆ ಹಣ ನೀಡಿ ಕೈ ಸುಟ್ಟುಕೊಳ್ಳುತ್ತಾರೆ. ಈ ವಂಚನೆಯಲ್ಲಿ ಹಣ ಕಳೆದುಕೊಂಡವರು ಹೆಚ್ಚಿನವರು ಪದವಿ ತರಗತಿ ಕಲಿತು ಉತ್ತಮ ಉದ್ಯೋಗದಲ್ಲಿದ್ದವರೇ ಎಂಬುವುದು ವಿಶೇಷ.

    ಆದರೆ ಹೆಚ್ಚಿನ ವೇತನದ ಮತ್ತು ಸರಕಾರಿ ಉದ್ಯೋಗಕ್ಕೆ ಆಸೆ ಬಿದ್ದು ಈ ರೀತಿ ಹಣ ಕೊಟ್ಟು ಸಾರ್ಟ್ ಕಟ್ ನಲ್ಲಿ ನುಳುಸಲು ಯತ್ನಿಸುತ್ತಾರೆ . ಇದರಿಂದ ಪ್ರತಿಭಾವಂತರೂ ಕೆಲಸ ಕಳೆದುಕೊಳ್ಳುವ ಭೀತಿ ಇದೆ. ಇನ್ನಾದರೂ ಇಂತಹ ಕೆಲಸ ಕೊಡುತ್ತೇನೆ.

    ಚೈನ್‌ ಲಿಂಕ್‌ ವ್ಯವಹಾರ, ಪುಟಗಟ್ಟಲೇ ಬರೆದುಕೊಡುವ ಉದ್ಯೋಗ ಸೇರಿ ಹೀಗೆ ಹಲವು ಸಂಸ್ಥೆಗಳಿಗೆ ಸೇರುವ ಮುನ್ನ ಯೋಚಿಸಿ ಯೋಚಿಸಿ, ಎಲ್ಲಿಯವರೆಗೂ ನಾಮ ಇಕ್ಕಿಸಿಕೊಳ್ಳುವವರು ಇರ್ತಾರೋ ಅಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರು ಇದ್ದೇ ಇರುತ್ತಾರೆ ಎಂಬುವುದು ಕಟು ಸತ್ಯ..

    1 Comment

    Leave a Reply

    Your email address will not be published. Required fields are marked *

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು

    Published

    on

    ಮಂಗಳೂರು: ಗುಜರಾತ್‌ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.

     

     

    ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್‌ ಗಾರ್ಡ್‌ ತಂಡ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್‌ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್‌ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.

    ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್‌ ಗಾರ್ಡ್‌ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!

    Published

    on

    ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.

    ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.

    ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

    ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.

    ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.

    Continue Reading

    LATEST NEWS

    Trending