Connect with us

    LATEST NEWS

    2025 ರಲ್ಲಿ ಕೆಲವರಿಗೆ ಸಿಹಿ…ಇನ್ನೂ ಕೆಲವರಿಗೆ ಕಹಿ…!

    Published

    on

    ಮಂಗಳೂರು : 2025 ರಲ್ಲಿ ಹಲವು ಹೊಸ ವಿಚಾರಗಳು ಆರಂಭವಾಗಲಿದ್ದು, ಸರ್ಕಾರ ಹೊಸ ಹೊಸ ವಿಚಾರಗಳನ್ನು ಜಾರಿಗೆ ತರಲಿದೆ. ಅದರಲ್ಲಿ ಪ್ರಮುಖ 10 ವಿಚಾರಗಳು ಇಲ್ಲಿದೆ. 2025 ರ ಜನವರಿ 1 ರ ಬಳಿಕ ದೇಶದಲ್ಲಿ ಯಾವೆಲ್ಲ ಕಾನೂನುಗಳು ಬದಲಾಗಲಿವೆ ಹಾಗೂ ಯಾವ ಕ್ಷೇತ್ರದಲ್ಲಿ ಏನಾಗಲಿದೆ ಎಂಬ ಮಾಹಿತಿ ಇಲ್ಲಿದೆ.

    • ಜನವರಿ ಒಂದರಿಂದ ಎಲ್ಲಾ ಟೆಲಿಕಾಂ ಕಂಪೆನಿಗಳು ಹೊಸ ಪ್ಯಾಕ್ ಪರಿಚಯ ಮಾಡಲಿವೆ. ಜನವರಿ ಬಳಿಕ ವಾಯ್ಸ್ ಮತ್ತು ಎಸ್‌ ಎಮ್‌ ಎಸ್ ಪ್ಯಾಕ್‌ ಬರಲಿದ್ದು, ಇಂಟರ್‌ನೆಟ್ ಉಪಯೋಗಿಸದ ಬಳಕೆದಾರರಿಗೆ ಇದು ಉಪಯುಕ್ತವಾಗಲಿದೆ.
    • ಜನವರಿಯ ಬಳಿಕ ಯುಪಿಐ ಮೂಲಕ ಹಣ ವರ್ಗಾವಣೆಯ ಲಿಮಿಟ್ ಹೆಚ್ಚಳವಾಗಲಿದ್ದು, ಇದುವರೆಗೆ ಇದ್ದ 5 ಸಾವಿರ ಲಿಮಿಟ್‌ನಿಂದ ಹತ್ತು ಸಾವಿರಕ್ಕೆ ಏರಿಕೆ ಮಾಡಲಾಗುತ್ತದೆ.
    • ಮೊಬೈಲ್ ಬಳಕೆದಾರರು ಅಂಡ್ರಾಯ್ಡ್ 4.4 ಮತ್ತು ಅದಕ್ಕೂ ಮೊದಲಿನ ಆವೃತ್ತಿಯ ಮೊಬೈಲ್ ಯೂಸ್ ಮಾಡುತ್ತಿದ್ದರೆ, ಅವರಿಗೆ ಜನವರಿ ಬಳಿಕ ವ್ಯಾಟ್ಸ್ಯಾಪ್ ಸೇವೆ ಲಭ್ಯವಾಗುವುದಿಲ್ಲ.
    • ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರು ಜನವರಿ ಬಳಿಕ ಯಾವುದೇ ಬ್ಯಾಂಕ್‌ಗಳಿಂದ ತಮ್ಮ ಪಿಂಚಣಿಯನ್ನು ಇಪಿಎಫ್‌ಒ ಖಾತೆಯಿಂದ ಪಡೆಯಬಹುದಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಯಾವುದೇ ಹೊಸ ಪರಿಶೀಲನೆ ಇಲ್ಲದೆ ಈ ಸೌಲಭ್ಯ ಜಾರಿಗೆ ಬರಲಿದೆ.
    • ರೈತರಿಗೆ ಇದುವರೆಗೆ ಯಾವುದೇ ದಾಖಲೆ ಪತ್ರಗಳು ಇಲ್ಲದೆ ನೀಡಲಾಗುತ್ತಿದ್ದ 1.5 ಲಕ್ಷ ಸಾಲ ಸೌಲಭ್ಯವು ಜನವರಿ ಬಳಿಕ 2 ಲಕ್ಷಕ್ಕೆ ಏರಿಕೆಯಾಗಲಿದೆ.
    • ಬಹುತೇಕ ಎಲ್ಲಾ ಕಾರು ಕಂಪೆನಿಗಳು ತಮ್ಮ ವಾಹನಗಳ ಬೆಲೆಯನ್ನು ಏರಿಕೆ ಮಾಡಿದ್ದು, ಟ್ರಕ್ ಗಳು ಕೂಡ ದುಬಾರಿಯಾಗಲಿದೆ.
    • ಎಪ್ರಿಲ್ 1 ರಿಂದ ಹೊಗೆ ತಪಾಸಣೆಯಲ್ಲಿ ಹೊಸ ಕಾನೂನು ಜಾರಿಯಾಗಲಿದ್ದು, ಭಾರತ್ ಸ್ಟೇಜ್ 7 ( ಬಿಎಸ್‌ 7 ) ನಿಯಮಗಳು ಜಾರಿಗೆ ಬರಲಿವೆ.
    • ಶಿಕ್ಷಣ ಕ್ಷೇತ್ರದಲ್ಲೂ ಹಲವು ಬದಲಾವಣೆಗಳ ಬಗ್ಗೆ ಸರ್ಕಾರ ಚಿಂತಿಸಿದ್ದು, 16 ವರ್ಷದ ಮಕ್ಕಳನ್ನು ಕೋಚಿಂಗ್‌ ಸೆಂಟರ್ ಸೇರಿಸಿಕೊಳ್ಳದಂತೆ ಹಾಗೂ ಯೂನಿವರ್ಸಿಟಿಗಳಲ್ಲಿ ವರ್ಷದಲ್ಲಿ ಎರಡು ಬಾರಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಅವಕಾಶಗಳನ್ನು ಮಾಡಲಾಗುತ್ತಿದೆ.
    • ಭದ್ರತೆಯನ್ನು ಹೆಚ್ಚಿಸಲು ಎಲ್ಲಾ ತೆರಿಗೆದಾರರು ಜಿಎಸ್‌ಟಿ ಪೋರ್ಟಲ್‌ ಲಾಗ್ ಇನ್ ಆಗಲು ಮೊಬೈಲ್ ಮೂಲಕ ಒಟಿಪಿಯನ್ನು ಪಡೆಯುವುದು ಕಡ್ಡಾಯವಾಗಲಿದೆ.
    • ಇದಲ್ಲದೆ, ಯುಎಸ್ ವಿಸಾ , ಎಲ್‌ಪಿಜಿ ದರ ಹೆಚ್ಚಳ, ಷೇರು ಮಾರುಕಟ್ಟೆಯ ಅವಧಿ ಮುಗಿಯುವ ದಿನದ ನಿಯಮಗಳಲ್ಲೂ ಬದಲಾವಣೆ ಆಗಲಿದೆ.

    LATEST NEWS

    ರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ ಪ್ರಕರಣ: ಬೆಂಗಳೂರೇ ನಂಬರ್ 1

    Published

    on

    ಮಂಗಳೂರು/ಮೈಸೂರು : ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಪುರುಷರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತಿದೆ.

    ರಾಜ್ಯದಲ್ಲಿ 2021ರಿಂದ 2023ರವರೆಗೆ ಮೂರು ವರ್ಷಗಳಲ್ಲಿ 28,324 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳಿಗಿಂತ ಮೂರು ಪಟ್ಟಿಗೂ ಹೆಚ್ಚಿದೆ. ಈ ಅವಧಿಯಲ್ಲಿ 8,159 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷ-ಮಹಿಳೆಯರ ಆತ್ಮಹತ್ಯೆಯಲ್ಲಿ ರಾಜಧಾನಿ ಬೆಂಗಳೂರೇ ಮುಂದಿದೆ.

    ಬೆಂಗಳೂರು ನಗರದ ನಂತರ, ಕ್ರಮವಾಗಿ ಬೆಳಗಾವಿ, ಬೆಂಗಳೂರು ಜಿಲ್ಲೆ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ದಾಖಲಾಗಿವೆ. ಚಿಕ್ಕಮಗಳುರು, ಹಾವೇರಿ, ಉಡುಪಿ, ವಿಜಯಪುರ, ದಾವಣಗೆರೆ, ಮೈಸೂರಿನಲ್ಲೂ ಹೆಚ್ಚಿವೆ.

    ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ವಿಮಾನ ದುರಂತ !

    ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ, ರಾಜ್ಯ ಅಪರಾಧ ದಾಖಲಾತಿ ವಿಭಾಗವು ಎಲ್ಲ ಜಿಲ್ಲೆಗಳು, ಪ್ರಮುಖ ನಗರಗಳು, ಕರ್ನಾಟಕ ರೈಲ್ವೆ ಮತ್ತು ಕೆಜಿಎಫ್ ಪೊಲೀಸ್ ಹಾಗೂ 38 ವಿಭಾಗಗಳ ಅಡಿ ನೀಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಇದೆ.

    ಮೂರು ವರ್ಷದಲ್ಲಿ, ಪುರುಷರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿದರೆ, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದೂ ಅಂಕಿ ಅಂಶದಿಂದ ಗೊತ್ತಾಗುತ್ತದೆ.

    Continue Reading

    BIG BOSS

    BBK11: ಈ ವಾರ ಬಿಗ್ ಬಾಸ್‌ ಮನೆಯಿಂದ ಆಚೆ ಬರೋದು ಯಾರು? ಎಲಿಮಿನೇಷನ್‌ನಲ್ಲಿ ಬಿಗ್​ ಟ್ವಿಸ್ಟ್!

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 96ನೇ ದಿನಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳು ಯಾರು ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕುತೂಹಲ ಮೂಡಿದೆ.

    ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು. ಆದ್ರೆ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಹೋಗುವುದಿಲ್ಲ. ಏಕೆಂದರೆ ಈ ವಾರ ಫ್ಯಾಮಿಲಿ ರೌಂಡ್​ ಆಗಿದ್ದ ಕಾರಣ ನಾಮಿನೇಷನ್​ ಪ್ರಕ್ರಿಯೆ ನಡೆದಿಲ್ಲ.

    ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವುದಿಲ್ಲ. 9 ಸ್ಪರ್ಧಿಗಳು ಈ ವಾರ ಸೇಫ್​ ಆಗಿದ್ದಾರೆ. ಮುಂದಿನ ವಾರಕ್ಕೆ ಈ 9 ಜನರಲ್ಲಿ ಯಾರು ಬಿಗ್​ ಮನೆಯಿಂದ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.​

    ಇನ್ನೂ ಬಿಗ್​ಬಾಸ್​ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ವಾರ ಕಳೆದಂತೆ ಬಿಗ್​ಬಾಸ್​ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಬಂದಿದ್ದರು. ಸದ್ಯ ಈಗ ಬಿಗ್​ಬಾಸ್​ ಮನೆಗೆ ಈ 9 ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ ಚೆನ್ನಾಗಿ ಆಡು ಅಂತ ಕಿವಿ ಮಾತನ್ನು ಹೇಳಿದ್ದಾರೆ. ಇನ್ಮುಂದೆ ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಯಾವ ರೀತಿ ಟೇಕ್ ಆಫ್ ಆಗಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

    Continue Reading

    BIG BOSS

    BIGG BOSS: ಬಿಗ್​​ಬಾಸ್​​ ಮನೆಯಲ್ಲಿ ಕಿಸ್ಸಿಂಗ್ ಟಾಸ್ಕ್​.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!

    Published

    on

    ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್​ ಸೀಸನ್ 11 ಕೊನೆ ಹಂತಕ್ಕೆ ತಲುಪುತ್ತಿದೆ. ಕಳೆದ ವಾರ ಐಶ್ವರ್ಯ ಹೊರಗಡೆ ಬಂದಿದ್ದರು. ಈಗ ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಮಾತ್ರ ಉಳಿದಿದ್ದು ಇದರಲ್ಲಿ ಈ ವಾರ ಹೊರಗಡೆ ಬರುವವರು ಯಾರು ಎಂಬುದು ಕುತೂಹಲ ಇದೆ. ಇದರ ನಡುವೆ ಬಿಗ್​ಬಾಸ್​​ ಮನೆಯಲ್ಲಿ ಕಿಸ್ ಕೊಡುವ ಟಾಸ್ಕ್ ಕೊಡಲಾಗಿದ್ದು ಯಾವ್ಯಾವ ಸ್ಪರ್ಧಿ ಏನೆಲ್ಲಾ ಮಾಡಿದರು ಎನ್ನುವುದು ಇಲ್ಲಿದೆ.

    ಕ್ಯಾಪ್ಟನ್ ಆಗಿರುವ ಭವ್ಯ ಮಧ್ಯೆದಲ್ಲಿ ನಿಂತು ಟಾಸ್ಕ್ ಅನ್ನು ಗಮನಿಸುತ್ತಿದ್ದಾರೆ. ತ್ರಿವಿಕ್ರಮ್- ಚೈತ್ರಾ, ಗೌತಮಿ- ಧನರಾಜ್, ಮಂಜು- ಹನುಮಂತು ಹೀಗೆ ಇಬ್ಬಿಬ್ಬರ ಟೀಮ್ ಮಾಡಲಾಗಿದೆ. ಮೂವರು ಕೋಲಿನಿಂದ ಲಿಫ್ಟ್​​ಸ್ಟಿಕ್ ಅನ್ನು ಚೈತ್ರಾ, ಧನರಾಜ್ ಹಾಗೂ ಹನುಮಂತು ತುಟಿಗೆ ಹಚ್ಚಬೇಕು. ತಕ್ಷಣ ಈ ಮೂವರು ಓಡಿ ಹೋಗಿ ವೈಟ್​ ಬೋರ್ಡ್​ ಮೇಲೆ ಕಿಸ್​ ಕೊಡಬೇಕು. ಯಾರು ಹೆಚ್ಚು ಕಿಸ್ ಕೊಡುತ್ತಾರೋ ಅವರೇ ಇದರಲ್ಲಿ ಗೆಲುವು ಸಾಧಿಸುವವರು ಎಂದು ಹೇಳಬಹುದು.

    ಈ ರೀತಿ ಟಾಸ್ಕ್​​ ಆಡುವಾಗ ಧನರಾಜ್​ಗೆ ರಜತ್ ಕರೆಕ್ಟ್​ ಆಗಿ ಕಿಸ್​ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಖತ್ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್​ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚೈತ್ರಾ ತಂಗಿ ಸೇರಿ ಎಲ್ಲ ಸ್ಪರ್ಧಿಗಳು ಕೂಡ ಕುಳಿತಲ್ಲೇ ನಕ್ಕಿದ್ದಾರೆ.

    ಇನ್ನು ಈ ಟಾಸ್ಕ್​ನಲ್ಲಿ ಧನರಾಜ್, ಹನುಂತು ಗೆಲುವು ಸಾಧಿಸಿರಬಹುದೆಂದು ವಿಡಿಯೋದಲ್ಲಿ ಕಾಣುತ್ತೆ. ಈ ವೇಳೆ ಧನರಾಜ್, ಹನುಮಂತುನ ಹಿಡಿದು ಕಿಸ್ ಕೊಡಲು ಹೋಗಿ ತಬ್ಬಿಕೊಂಡಿದ್ದಾರೆ. ಕಿಸ್ ಕೊಡುವ ಟಾಸ್ಕ್​ನಲ್ಲಿ ರಜತ್ ಅವರು ಎಲ್ಲ ಸ್ಪರ್ಧಿಗಳನ್ನು ಕಿಚಾಯಿಸಿ, ತಮಾಷೆ ಮಾಡಿದ್ದಾರೆ. ಚೈತ್ರಾ, ಧನು, ಹನುಮಂತು ಅವರ ತಂದೆ, ತಾಯಿರಿಗೂ ಕೂಡ ರಜತ್ ಕಾಮಿಡಿ ಮಾಡಿದ್ದಾರೆ.

    Continue Reading

    LATEST NEWS

    Trending