Connect with us

    FILM

    200 ಕೋಟಿ ಅಕ್ರಮ ಹಣ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ED ವಶಕ್ಕೆ

    Published

    on

    ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ನನ್ನು ವಲಸೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.


    ಲುಕ್‌ಔಟ್ ನೊಟೀಸ್ ಹಿನ್ನೆಲೆ ಜಾಕ್ವೆಲಿನ್‌ರನ್ನು ವಶಕ್ಕೆ ಪಡೆಯಲಾಗಿದೆ. ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿಯ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್‌ಔಟ್ ನೊಡೀಸ್ ಹೊರಡಿಸಿತ್ತು.

    ಕಾರ್ಯಕ್ರಮವೊಂದಕ್ಕಾಗಿ ಜಾಕ್ವೆಲಿನ್ ದುಬೈಗೆ ಹೊರಡಲು ಏರ್‌ಪೋರ್ಟ್‌ಗೆ ಬಂದಿದ್ದರು. ಅಲ್ಲಿಯೇ ಅಧಿಕಾರಿಗಳು ತಡೆದಿದ್ದು, ದೆಹಲಿಗೆ ವಿಚಾರಣೆಗಾಗಿ ಕರೆತರಲಿದ್ದಾರೆ.

    200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಜತೆ ಜಾಕ್ವೆಲೀನ್ ಹೆಸರು ಕೇಳಿಬಂದಿದೆ.

    ವಾರದ ಹಿಂದಷ್ಟೆ ಇವರಿಬ್ಬರ ವೈಯಕ್ತಿಕ ಫೋಟೊಗಳು ಕೂಡ ವೈರಲ್ ಆಗಿದ್ದವು.

    FILM

    ಸೈಫ್ ಮೇಲೆ ಹ*ಲ್ಲೆ ಪ್ರಕರಣ; ಪ್ರಮುಖ ಆರೋಪಿ ಬಾಂಗ್ಲಾ ಪ್ರಜೆ ಅರೆಸ್ಟ್

    Published

    on

    ಮಂಗಳೂರು/ಥಾಣೆ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾ*ಳಿಯ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ . ಮಹಾರಾಷ್ಟ್ರದ ಥಾಣೆಯಲ್ಲಿ ಆರೋಪಿ ಮೊಹಮ್ಮದ್‌ ಇಲಿಯಾಸ್ ಅಲಿಯಾಸ್‌ ವಿಜಯ್‌ ದಾಸ್‌‌ ಯಾನೆ ಬಿಜೋಯ್‌ ದಾಸ್‌ನನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿ ಬಾಂಗ್ಲಾದೇಶದವನಾಗಿದ್ದು,  ಭಾರತಕ್ಕೆ ಬಂದ ಮೇಲೆ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನಿಂದ ಜಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ, ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಇಲಿಯಾಸ್‌ಗಳನ್ನು ಆತ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಕೃ*ತ್ಯ ಎಸಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.  ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಆತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

    ಇದನ್ನೂ ಓದಿ : ಮೊಬೈಲ್‌ಗೆ ಸಿಮ್‌ ಹಾಕಿದಾಕ್ಷಣ ಬ್ಯಾಂಕ್ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಮಾಯ

    ಕಳೆದ ಗುರುವಾರ(ಜ.16) ಬೆಳಗಿನ ಜಾವ 2 ಗಂಟೆಗೆ ನಟ ಸೈಫ್ ಅಲಿ ಖಾನ್‌ ನಿವಾಸಕ್ಕೆ ನುಗ್ಗಿದ್ದ ಆರೋಪಿ ನಟನ ಮೇಲೆ ಹ*ಲ್ಲೆ ನಡೆಸಿದ್ದ. ಈ ಹ*ಲ್ಲೆಯಿಂದ ಸೈಫ್‌ ಅವರ ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿದೆ.

    Continue Reading

    FILM

    ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

    Published

    on

    ಮಂಗಳೂರು: ತುಳು ಚಲನ ಚಿತ್ರಗಳಿಗೆ ಸಬ್ಸಿಡಿ, ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಪ್ರಶಸ್ತಿ, ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ನೀಡುವಂತೆ ಶೇಕಡಾವಾರು ಷೇರು, ತುಳುಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ನೇತೃತ್ವದಲ್ಲಿ ಮನವಿ  ಸಲ್ಲಿಸಲಾಯಿತು.

    ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ, ಸಚಿನ್ ಎ.ಎಸ್, ಪ್ರೀತಂ ಸಾಗರ್ ಉಪಸ್ಥಿತರಿದ್ದರು.‌

    Continue Reading

    FILM

    ಮಂಥರೆಯಾಗಿ ಮೊದಲ ಬಾರಿ ಯಕ್ಷಗಾನದಲ್ಲಿ ಮಿಂಚಿದ ನಟಿ ಉಮಾಶ್ರೀ

    Published

    on

    ಮಂಗಳೂರು/ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶುಕ್ರವಾರ (ಜ.17) ರಾತ್ರಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ ಉಮಾಶ್ರೀಯವರು ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಮಂಥರೆ ಪಾತ್ರದಲ್ಲಿ ಅಭಿನಯಿಸಿದರು.

    ಯಕ್ಷಗಾನ ರಂಗದಲ್ಲಿ ಹಾಸ್ಯಗಾರರು ನಿರ್ವಹಿಸುವ ಪಾತ್ರಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗದಲ್ಲಿ ಉಮಾಶ್ರೀಯವರು ಪಾತ್ರ ನಿರ್ವಹಿಸಿದರು.
    ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗ ನಡೆಯಿತು.

    ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ತನ್ನ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾ ರಂಗಸ್ಥಳವೇರಿದ ನಟಿಗೆ ಕೂತುಹಲಕಾರಿಯಾಗಿ ಕಾಯುತ್ತಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಉಮಾಶ್ರೀಯವರೊಂದಿಗೆ ಸಂಭಾಷಣೆಯಲ್ಲಿ ಗಮನ ಸೆಳೆದರು.

    ಇದನ್ನೂ ಓದಿ: ಧರ್ಮಸ್ಥಳ : ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಮಂಥರೆ ಪಾತ್ರವನ್ನು ಉಮಾಶ್ರೀ ಅವರು ತುಂಬಾನೇ ಚೆನ್ನಾಗಿ ಮಾಡಿದ್ದಾರೆ. ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರೋ ಉಮಾಶ್ರೀ ಅವರು, ಈ ಒಂದು ಮಂಥರೆ ಪಾತ್ರದ ಮೂಲಕವೇ ಹೊನ್ನಾವರದ ಜನರ ಹೃದಯ ಗೆದ್ದಿದ್ದಾರೆ ಅಂತಲೂ ಹೇಳಬಹುದು.

    ಉಮಾಶ್ರೀ ಮಂಥರೆ ಪಾತ್ರ ಮಾಡಲು ಕಾರಣ ಏನು?
    ಉಮಾಶ್ರೀ ಅವರಿಗೆ ಮಂಥರೆ ಪಾತ್ರ ಹೊಸದೇ ಆಗಿದೆ. ಇಲ್ಲಿವರೆಗೂ ಈ ರೀತಿಯ ಪಾತ್ರ ಮಾಡಿದ್ದೇ ಇಲ್ಲ. ಆದರೆ, ಈ ಒಂದು ಪಾತ್ರ ಮಾಡೋಕೆ ಕಾರಣವೂ ಇದೆ. ಆ ಕಾರಣದ ಹೆಸರು ರಾಮಚಂದ್ರ ಚಿಟ್ಟಾಣಿ ಅಂತಲೇ ಹೇಳಬೇಕಾಗುತ್ತದೆ.

    ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂದಿತ್ತಂತೆ. ಮಂಥರೆ ಪಾತ್ರ ಮಾಡುವಂತೆ ಕೇಳಿದಾಗ ಉಮಾಶ್ರೀ ನನಗೆ ಯಕ್ಷಗಾನದಲ್ಲಿ ಅನುಭವವಿಲ್ಲ. ಹೀಗಾಗಿ ಹೇಗೆ ಮಾಡಲಿ ಎಂದು ಹಿಂದೇಟು ಹಾಕಿದ್ದರಂತೆ.

    ಇತ್ತೀಚೆಗೆ ಅವರ ಮಗ ಸುಬ್ರಹ್ಮಣ್ಯ ಚಿಟ್ಟಾಣಿಯವರು ಮಂಥರೆಯ ಪಾತ್ರ ಮಾಡಲು ಕೋರಿಕೊಂಡಾಗ ರಾಮಚಂದ್ರ ಚಿಟ್ಟಾಣಿಯವರ ಮೇಲಿನ ಗೌರವದಿಂದ ಪಾತ್ರ ಮಾಡಲು ಒಪ್ಪಿಕೊಂಡರಂತೆ. ಈ ಮೂಲಕ ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪಾತ್ರ ಮಾಡಲು ಒಪ್ಪಿಕೊಂಡೆ ಎಂದಿದ್ದಾರೆ.

    ನಿನ್ನೆ ರಾತ್ರಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

    Continue Reading

    LATEST NEWS

    Trending