Connect with us

FILM

200 ಕೋಟಿ ಅಕ್ರಮ ಹಣ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ED ವಶಕ್ಕೆ

Published

on

ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ನನ್ನು ವಲಸೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.


ಲುಕ್‌ಔಟ್ ನೊಟೀಸ್ ಹಿನ್ನೆಲೆ ಜಾಕ್ವೆಲಿನ್‌ರನ್ನು ವಶಕ್ಕೆ ಪಡೆಯಲಾಗಿದೆ. ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿಯ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್‌ಔಟ್ ನೊಡೀಸ್ ಹೊರಡಿಸಿತ್ತು.

ಕಾರ್ಯಕ್ರಮವೊಂದಕ್ಕಾಗಿ ಜಾಕ್ವೆಲಿನ್ ದುಬೈಗೆ ಹೊರಡಲು ಏರ್‌ಪೋರ್ಟ್‌ಗೆ ಬಂದಿದ್ದರು. ಅಲ್ಲಿಯೇ ಅಧಿಕಾರಿಗಳು ತಡೆದಿದ್ದು, ದೆಹಲಿಗೆ ವಿಚಾರಣೆಗಾಗಿ ಕರೆತರಲಿದ್ದಾರೆ.

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ಜತೆ ಜಾಕ್ವೆಲೀನ್ ಹೆಸರು ಕೇಳಿಬಂದಿದೆ.

ವಾರದ ಹಿಂದಷ್ಟೆ ಇವರಿಬ್ಬರ ವೈಯಕ್ತಿಕ ಫೋಟೊಗಳು ಕೂಡ ವೈರಲ್ ಆಗಿದ್ದವು.

Click to comment

Leave a Reply

Your email address will not be published. Required fields are marked *

FILM

‘ಲಕ್ಷ್ಮೀ ನಿವಾಸ’ ಧಾರವಾಹಿ ನಟ ದೀಪಕ್ ಸುಬ್ರಹ್ಮಣ್ಯ ಎಷ್ಟು ಕ್ಯೂಟ್ ಅಲ್ವಾ?

Published

on

FILM : ದಾಸ ಪುರಂದರ ಧಾರವಾಹಿ ಯಾರಿಗೆಲ್ಲಾ ಗೊತ್ತು? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿ ವಿಭಿನ್ನ ಚಿತ್ರಕಥೆ ಮೂಲಕ ಹಾಗೂ ಕಲಾವಿದರ ಅಭಿನಯದ ಮೂಲಕ ಜನ ಮನ ಗೆದ್ದ ಧಾರವಾಹಿ ಆಗಿತ್ತು.ಇದೇ ಧಾರವಾಹಿಯಲ್ಲಿ ಪುರಂದರದಾಸರ ಪಾತ್ರ ಮಾಡಿದ್ದ ದೀಪಕ್ ಸುಬ್ರಹ್ಮಣ್ಯ ತಮ್ಮ ಪಾತ್ರದಲ್ಲಿ ತಲ್ಲೀನರಾಗಿ ಅಭಿನಯಿಸಿ ಮನೆ ಮಾತಾಗಿದ್ರು.

ಆದ್ರೆ ಈಗ ಸಂಪೂರ್ಣವಾಗಿ ಬದಲಾಗಿ ಮಾರ್ಡನ್ ಆಗಿ ಬದಲಾಗಿದ್ದಾರೆ. ಅವರೇ ಇವರ ಎಂಬ ಅನುಮಾನ ಮೂಡಿದೆ. ಅಷ್ಟು ಬದಲಾವಣೆಯಾಗಿದ್ದಾರೆ.

ಇದೀಗ ಹೊಚ್ಚ ಹೊಸ ಧಾರವಾಹಿ ಲಕ್ಷ್ಮೀ ನಿವಾಸ ಧಾರವಾಹಿ ಮೂಲಕ ಎಂಟ್ರಿ ಕೊಟ್ಟಿರುವ ದೀಪಕ್ ಸುಬ್ರಹ್ಮಣ್ಯ ಹ್ಯಾಂಡ್ಸಂ ಆಗಿ ಕಾಣುತ್ತಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿರುವ ದೀಪಕ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಪುರದಂರನಾಗಿ ನೋಡಿದ ದೀಪಕ್ ಅವರಿಗೂ ಸೂಟು ಬೂಟು ಹಾಕಿ ಟಿಪ್ ಟಾಪ್ ಆಗಿ ಕಾಣಿಸಿಕೊಂಡಿರುವ ದೀಪಕ್ ಅವರನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.ಇದ್ಯಾರೋ K ಡ್ರಾಮಾ ನಟನ ರೀತಿ ಇದ್ದಾರಲ್ವಾ? ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

Continue Reading

FILM

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ

Published

on

Film: ಬಾಲಿವುಡ್ ನ ರಣವೀರ್ ಸಿಂಗ್ – ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರಗ್ನೆನ್ಸಿ ಖಚಿತ ಪಡಿಸಿ. ಸೆಪ್ಟಂಬರ್ ನಲ್ಲಿ ಮಗುವಿನ ಆಗಮನ ಎಂದು ಬರೆದುಕೊಂಡಿದ್ದಾರೆ. ದೀಪಿಕಾ ಈಗ 2 ತಿಂಗಳ ಗರ್ಭಿಣಿ ಎನ್ನಲಾಗಿದೆ. ದೀಪಿಕಾ ಕುಟುಂಬ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿರಲಿಲ್ಲ. ಅಧಿಕೃತವಾಗಿ ಇಂದು ಅನೌನ್ಸ್ ಮಾಡಿದ್ದಾರೆ.

Continue Reading

FILM

ಸ್ಯಾಂಡಲ್​ವುಡ್​ ಹಿರಿಯ ನಟ ಕೆ. ಶಿವರಾಮ್ ಇನ್ನಿಲ್ಲ..!

Published

on

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ, ರಾಜಕಾರಣಿ ಮತ್ತು ಮಾಜಿ ಐಎಎಸ್​ ಅಧಿಕಾರಿ ಕೆ ಶಿವರಾಮ್​ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶಿವರಾಮ್ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದರು. ಇವರ ಸಾವು ಸಾಕಷ್ಟು ಅಭಿಮಾನಿಗಳಿಗೆ ನೋವು ತರಿಸಿದೆ.

Continue Reading

LATEST NEWS

Trending