Saturday, July 2, 2022

ಡ್ರಗ್ಸ್‌ ಮಾರಾಟ ಪ್ರಕರಣ: ನೈಜೀರಿಯಾ ಪ್ರಜೆಗಳ ಬಂಧನ

ಮಂಗಳೂರು: ನಗರದ ಕೋಣಾಜೆ ಠಾಣಾ ವ್ಯಾಪ್ತಿಯಲ್ಲಿ 2 ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.‌ಶಶಿಕುಮಾರ್ ತಿಳಿಸಿದ್ದಾರೆ.


ಬಂಧಿತ ನೈಜೀರಿಯಾ ಪ್ರಜೆಗಳನ್ನು ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ. ಜೂ.3ರಂದು ಮನಾಫ್ ಮುಝಾಂಬಿಲ್, ಅಹಮ್ಮದ್ ಮಸೂಕ್ ಎಂಬವರನ್ನು ವಶಕ್ಕೆ ಪಡೆದು 170 ಗ್ರಾಂ ಎಂ.ಡಿ.ಎಂ.ಎಂ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.

ಜೂ.13ರಂದು ಉಪ್ಪಳ ನಿವಾಸಿಗಳಾಸ ಶಫೀಕ್ ಕೆ.ಎಸ್. ಮತ್ತು ಅಲ್ತಾಫ್ ರನ್ನು ವಶಕ್ಕೆ ಪಡೆದು 65 ಗ್ರಾಂ ಎಂ.ಡಿ.ಎಂ.ಎಂ ಡ್ರಗ್ಸ್ ವಶಕ್ಕೆ ಪಡೆಲಾಗಿತ್ತು. ವಿಚಾರಣೆ ಸಂದರ್ಭ ತಮಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಟ್ಯಾನ್ಲಿ ಚಿಮಾ ಮತ್ತು ಉಪ್ಪಳದ ರಮೀಜ್  ಬಗ್ಗೆ ಮಾಹಿತಿ ನೀಡಿದ್ದು ಅವರನ್ನು ಬಂಧಿಸಲಾಗಿತ್ತು.
ಸ್ಟ್ಯಾನ್ಲಿ ಮತ್ತು ರಮೀಜ್ ನನ್ನು ವಿಚಾರಣೆ ಮಾಡಿದಾಗ ಬೆಂಗಳೂರಿನಲ್ಲಿರುವ ನೈಜೀರಿಯಾ ಮೂಲದ ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ರಿಂದ ಡ್ರಗ್ಸ್ ಖರೀದಿಸಿದ್ದಾಗಿ ಹೇಳಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಿದ ನಗರ ಪೊಲೀಸರು ಬಿದರಹಳ್ಳಿಯಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸೆಕೆಂಡರಿ ಸ್ಕೂಲ್ ಉದ್ಘಾಟಿಸಿದ ಶಿಕ್ಷಣ ಸಚಿವ

ಬಂಟ್ವಾಳ: ಬ್ರಿಟಿಷರ ಶಿಕ್ಷಣ ನೀತಿ ನಮ್ಮ ನೆಲಕ್ಕೆ ಪೂರಕವಾಗಿಲ್ಲ ಎಂದು ಬದಲಾವಣೆ ತೀರ್ಮಾನಿಸಿ ಎನ್ ಇಪಿ ಜಾರಿಗೆ ತರಲಾಗಿದೆ. ವ್ಯಕ್ತಿಯನ್ನು ಸ್ವಾವಲಂಬಿ ಮಾಡಬೇಕಾದ ಶಿಕ್ಷಣ ಎಲ್ಲಿಗೆ ಬಂದಿದೆ.ಸ್ವಾಭಿಮಾನಿ ಬದುಕುವ ಧೈರ್ಯ ಕಲ್ಪಿಸುವುದು ಶಿಕ್ಷಣದಿಂದ...

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ: ವಾಹನ ಸವಾರರ ಪರದಾಟ

ಸುಳ್ಯ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಇದರಿಂದ ಹೆದ್ದಾರಿಯಲ್ಲಿ ಸ್ವಲ್ಪ ಪ್ರಮಾಣದ ಟ್ರಾಫಿಕ್‌ ಜಾಂ ಉಂಟಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವೆ ರಸ್ತೆಗೆ ಮಣ್ಣು ಕುಸಿದಿದೆ.ಚರಂಡಿಗೆ ಮಣ್ಣು ಬಿದ್ದಿದ್ದರಿಂದ...

ಮಂಗಳೂರು: ಒಡೆದು ಹೋದ ನೀರಿನ ಪೈಪ್‌ ಪತ್ತೆ, ದುರಸ್ತಿ ಕಾಮಗಾರಿಗೆ ವೇಗ

ಮಂಗಳೂರು: ತುಂಬೆಯಿಂದ ಮಂಗಳೂರು ನಗರದ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬೃಹತ್ ಭೂಗತ ಪೈಪ್‌ಲೈನ್ ಜೂನ್ 28ರಂದು ಪಂಪ್ವೆಲ್ ಫ್ಲೈಓವರ್‌ ಬಳಿ ಒಡೆದು ಹೋಗಿತ್ತು.ಇದೀಗ ಒಡೆದು ಹೋಗಿದ್ದ ಪೈಪನ್ನು ಪತ್ತೆ...