Connect with us

BANTWAL

ವಿಟ್ಲ: ಹೊಡೆದಾಟ ಪ್ರಕರಣ-ಇತ್ತಂಡಗಳ 19 ಮಂದಿ ವಿರುದ್ಧ ಎಫ್‌ಐಆರ್‌

Published

on

ಬಂಟ್ವಾಳ: ವಿಟ್ಲದ ಸಾಲೆತ್ತೂರಿನಲ್ಲಿ ನಿನ್ನೆ ಸಂಜೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ಒಟ್ಟು 19 ಮಂದಿ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
ಆರೋಪಿಗಳನ್ನು ಪ್ರಶಾಂತ, ತೇಜಸ್‌, ಗೀರಿಶ, ಗಣೇಶ್ , ಶರತ್‌, ಧನು, ಮುನ್ನಾ, ಚೇತನ, ವಿನಿತ, ದಿನೇಶ್‌, ಶಶಿಕುಮಾರ ಹಾಗೂ ಇತರ ಇಬ್ಬರು ಹಾಗೂ ಇದೇ ಪ್ರಕರಣದಲ್ಲಿ ಎದುರಾಳಿ ತಂಡದ ಚಂದ್ರಹಾಸ, ನಾಗೇಶ್‌, ದೇವದಾಸ ಹಾಗೂ ಇತರ 03 ಜನರು ಎಂದು ಗುರುತಿಸಲಾಗಿದೆ.


ಘಟನೆ ವಿವರ
ಅಡ್ಯನಡ್ಕ ನಿವಾಸಿ ಗಿರೀಶ್, ಪ್ರಶಾಂತ್ ಸುರತ್ಕಲ್ ಸೇರಿ ಸುಮಾರು 12 ಜನರ ತಂಡ ಸಾಲೆತ್ತೂರಿನಲ್ಲಿ ಬಂದು ನಾಗೇಶ್ ಸಾಲೆತ್ತೂರು ಅವರಲ್ಲಿ ಚಂದ್ರಹಾಸ ಕನ್ಯಾನ ಜತೆಗೆ ಸೇರಬಾರದೆಂದು ಹೇಳಿದ್ದು,

ಬಳಿಕ ಬೈಠಕ್ ಹೋಗುವ ನಿಟ್ಟಿನಲ್ಲಿ ಚಂದ್ರಹಾಸ ಕನ್ಯಾನ ನಾಗೇಶ್ ಸಾಲೆತ್ತೂರು ಅವರ ಮನೆಗೆ ಬರುತ್ತಿದ್ದ ಸಮಯ ಈ ದಾಳಿ ನಡೆದಿದೆ ಎನ್ನಲಾಗಿದೆ.
ಚಂದ್ರಹಾಸ ಕನ್ಯಾನ ಅವರ ತಲೆಗೆ ಏಟಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಶಾಂತ್ ಸುರತ್ಕಲ್‌ ಬೆನ್ನಿಗೆ ಏಟಾಗಿದ್ದು, ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂಡಗಳ ನಡುವಿನ ದ್ವೇಷ ಎಂದು ಹೇಳಲಾಗುತ್ತಿದೆಯಾದರೂ,

ಹಣದ ವಿಚಾರದಲ್ಲಿ ಈ ಹೊಡೆದಾಟ ನಡೆದಿದೆ ಎಂಬ ಮಾಹಿತಿಯಿದೆ. ಸದ್ಯ ವಿಟ್ಲ ಪೊಲೀಸರು ಶಶಿಕುಮಾರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಂದ್ರಹಾಸ ಕನ್ಯಾನ ಹಾಗೂ ಪ್ರಶಾಂತ್ ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

Bantwala:ನಿಯಂತ್ರಣ ತಪ್ಪಿ ಮೈಲು ಕಲ್ಲಿಗೆ ಕಾರು ಢಿಕ್ಕಿ..!

Published

on

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯ ಬದಿಯಲ್ಲಿ ಹಾಕಿದ ಮಣ್ಣಿನ ಮೇಲೆ ಹತ್ತಿ ಮೈಲು ಕಲ್ಲಿಗೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳದ ಮಾಣಿ ಸಮೀಪದ ಪೆರಾಜೆ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಮಾಣಿ ಕಡೆಗೆ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮಣ್ಣಿನ ರಾಶಿ ಮೇಲೆ ಏರಿತ್ತು. ಈ ವೇಳೆ ಕಾರನ್ನು ನಿಯಂತ್ರಣಕ್ಕೆ ತರುವಲ್ಲಿ ಚಾಲಕ ಯಶಸ್ವಿ ಆದ ಕಾರಣ ದೊಡ್ಡ ಅನಾಹುತ ತಪ್ಪಿತ್ತು. ಆದರೆ ರಸ್ತೆ ಬದಿಯಲ್ಲಿದ್ದ ಮೈಲು ಕಲ್ಲಿಗೆ ಢಿಕ್ಕಿ ಹೊಡೆದು ಕಾರು ನಿಂತ ಕಾರಣ ಕಾರಿಗೆ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಕಾರು ಚಾಲಕನಿಗೂ ಸಣ್ಣ ಪುಟ್ಟ ಗಾಯವಾಗಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರಯಾಗಿದ್ದು, ಕಾರು ನಿಯಂತ್ರಣ ತಪ್ಪಿದ ದೃಶ್ಯ ಕಂಡು ಬಂದಿದೆ.

Continue Reading

BANTWAL

Bantwala: ತುಂಬೆ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಡಿಸಿಎಂ ಡಿ.ಕೆ.ಶಿ ಭೇಟಿ

Published

on

ಬಂಟ್ವಾಳ: ಮಂಗಳೂರು ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತುಂಬೆಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ತುಂಬೆಯ ಪ್ರಕಾಶ್ ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ತುಂಬೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮ ಕಲಶ ನಡೆಯುತ್ತಿದ್ದು, ಈ ಸುಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.

ವಿಶೇಷವಾಗಿ ತುಂಬೆ ಚಂದ್ರ ಪಕಾಶ್ ಶೆಟ್ಟಿಯವರಿಗೆ ಕನಸಿನಲ್ಲಿ ಗೋಚರಿಸಿದ ಶಿವಲಿಂಗ ಪಕ್ಕದಲ್ಲೇ ಇರುವ ನೇತ್ರಾವತಿ ನದಿಯಲ್ಲಿ ಇರುವುದಾಗಿ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯಲ್ಲಿ ಕನಸಿನಲ್ಲಿ ಕಂಡಿದ್ದು ಸತ್ಯ ಎಂದು ಗೋಚರವಾಗಿತ್ತು. ಹೀಗಾಗಿ ನದಿಯ ಮರಳಿನಲ್ಲಿ ಹುದುಗಿದ್ದ ಬೃಹತ್ ಶಿವಲಿಂಗಕ್ಕೆ ನೂತನ ಗುಡಿ ಕಟ್ಟಿ ಸ್ಥಳಿಯರು ಆರಾಧಿಸಲು ಆರಂಭಿಸಿದ್ದರು. ಇದೀಗ ಈ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆಯುತ್ತಿದ್ದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ತುಂಬೆ ಪ್ರಕಾಶ್ ಶೆಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಒಂದು ಕಡೆ ಹಾಗೂ ಮತ್ತೊಂದು ಕಡೆ ನೇತ್ರಾವತಿ ನದಿ ಇದ್ದು, ಕ್ಷತ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರುಶನ ಪಡೆದು ಪುನೀತರಾಗುತ್ತಿದ್ದಾರೆ. ಇಂತಹ ಕ್ಷೇತ್ರದಲ್ಲಿ ಬ್ರಹ್ಮಕಲಶದ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿನ ಚಂದ್ರ ಪ್ರಕಾಶ್ ಶೆಟ್ಟಿ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading

BANTWAL

Bantwala: ಖಿನ್ನತೆಗೊಳಗಾದ ಯುವಕ ಆತ್ಮಹತ್ಯೆಗೆ ಯತ್ನ..!

Published

on

ಬಂಟ್ವಾಳ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಪದವೀಧರನಾಗಿದ್ದರೂ ಉದ್ಯೋಗ ಸಿಗದೆ ಖಿನ್ನತೆಗೆ ಒಳಗಾಗಿದ್ದ ಪುತ್ತೂರಿನ ನಿಶ್ಚಿತ್  (25)ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಬಂಟ್ವಾಳ ಪೊಲೀಸರ ವಶದಲ್ಲಿದ್ದಾನೆ. ಫೆ.19ರಂದು  ಪುತ್ತೂರಿನಿಂದ ತನ್ನ ದ್ವಿಚಕ್ರ ವಾಹನದಲ್ಲಿ ಪಾಣಮಂಗಳೂರು ಆಗಮಿಸಿದ್ದ ನಿಶ್ಚಿತ್ ನೇತ್ರಾವತಿ ನದಿ ಬಳಿ ನಿಲ್ಲಿಸಿದ್ದಾನೆ. ಬಳಿಕ ಸೇತುವೆ ಮೇಲೆ ನಡೆದುಕೊಂಡು ಹೋಗಿದ್ದಾನೆ. ಈ ವೇಳೆ ಈತನ ಬಗ್ಗೆ ಅನುಮಾನಗೊಂಡ ಸ್ಥಳೀಯ ನಿವಾಸಿಗಳು ತಕ್ಷಣ ಸೇತುವೆಗೆ ದಾವಿಸಿ ಬಂದಿದ್ದಾರೆ. ಇನ್ನೇನು ನಿಶ್ಚಿತ್ ನದಿಗೆ ಹಾರಬೇಕು ಅನ್ನುವಷ್ಟರಲ್ಲೇ ಸ್ಥಳಕ್ಕೆ ಬಂದ ಯುವಕರು ಆತನನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಪದವಿ ಪಡೆದರೂ ನಿರೋದ್ಯೋಗಿ ಆಗಿರುವ ಕಾರಣಕ್ಕೆ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾಗಿ ಆತ ಹೇಳಿದ್ದಾನೆ. ತಕ್ಷಣ ಬಂಟ್ವಾಳ ಪೊಲೀಸರಿಗೆ ಕರೆ ಮಾಡಿದ ಯುವಕರು ನಿಶ್ಚಿತ್‌ನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗೂಡಿನ ಬಳಿ ನಿವಾಸಿಗಳಾದ ಹನೀಫ್, ಸಲ್ಮಾನ್, ಇರ್ಫಾನ್‌, ನೌಫಲ್‌ ಹಾಗೂ ತಸ್ಲೀಂ ನಿಶ್ಚಿತ್ ನನ್ನು ರಕ್ಷಿಸಿದ್ದಾರೆ. ಇವರ ಸಮಯ ಪ್ರಜ್ಞೆಗೆ ಸ್ಥಳಿಯರು ಹಾಗೂ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

Trending