Connect with us

    STATE

    ಮಲೆಮಹದೇಶ್ವರ ಮಾದಪ್ಪನ ಹುಂಡಿಯಲ್ಲಿ 2.33 ಕೋಟಿ ರೂ. ಸಂಗ್ರಹ

    Published

    on

    ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ‌ ಹಣ ಎಣಿಕೆ ಕಾರ್ಯ ನಡೆದಿದ್ದು, ಬರೋಬ್ಬರಿ 2.33 ಕೋಟಿ ರೂ. ಸಂಗ್ರಹವಾಗಿದೆ.


    47 ದಿನದಲ್ಲಿ 2.33 ಕೋಟಿ ರೂ. ಸಂಗ್ರಹಕೇವಲ 47 ದಿನಗಳಲ್ಲಿ 2,33,57,28 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಬಹುದು. ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದು, ಹುಂಡಿಯಲ್ಲಿ 155 ಗ್ರಾಂ ಚಿನ್ನ, 2.2 ಕೆಜಿ ಬೆಳ್ಳಿಯನ್ನು ದೇವರಿಗೆ ಅರ್ಪಿಸಿದ್ದಾರೆ. 122 ದಿನಗಳ ಬಳಿಕ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಇದರಲ್ಲಿ ಕೊರೊನಾ ಲಾಕ್​ಡೌನ್​​ ಪರಿಣಾಮ 75 ದಿನಗಳ ಕಾಲ ದೇವಾಲಯ ಬಂದ್ ಮಾಡಲಾಗಿತ್ತು ಎಂಬುದು ವಿಶೇಷ. ಮಲೆಮಹದೇಶ್ವರ ಬೆಟ್ಟದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ, ಲಾಡು ವಿತರಣೆ, ವಿಶೇಷ ಸೇವೆಗಳು, ಮುಡಿ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ.

    LATEST NEWS

    ಖತರ್ನಾಕ್‌ ಕಿಲಾಡಿ ದಂಪತಿ ಸೆರೆ.. ನಿಟ್ಟುಸಿರು ಬಿಟ್ಟ ಪೊಲೀಸರು..! ಅಷ್ಟಕ್ಕೂ ದಂಪತಿ ಮಾಡಿದ್ದಾದರೂ ಏನು?

    Published

    on

    ದೆಹಲಿ/ಮಂಗಳೂರು: ಹನ್ನೊಂದು ವರ್ಷಗಳಿಂದ ಪೊಲೀಸರು ಹಾಗೂ ಸಿಬಿಐ ತಂಡಗಳ ಬೆವರಿಳಿಸಿದ ಖತರ್ನಾಕ್‌ ದಂಪತಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ದಂಪತಿ ವಿರುದ್ಧ ಸಿಬಿಐ ಸೇರಿದಂತೆ ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ವಿವಿಧ ಪೊಲೀಸ್‌ ಠಾಣೆಯಲ್ಲಿ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು.

    criminals

    ಹನ್ನೊಂದು ವರ್ಷದಿಂದ ಬ್ಯಾಂಕ್‌ಗಳಿಂದ, ವಾಹನ ಸಾಲ , ಗೃಹ ಸಾಲ ಹಾಗೂ ಇತರ ಸಾಲಗಳ ರೂಪದಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದರು. ಆದ್ರೆ ಪೊಲೀಸರ ಕೈಗೆ ಸಿಗದಂತೆ ಮೂರು ರಾಜ್ಯಗಳಲ್ಲಿ ಓಡಾಡಿಕೊಂಡು ತಲೆಮರೆಸಿಕೊಂಡಿದ್ದರು. ಹೀಗಾಗಿ ಆರೋಪಿಗಳ ಪತ್ತೆ ಕಾರ್ಯವನ್ನು ಸಿಬಿಐಗೂ ಒಪ್ಪಿಸಲಾಗಿತ್ತು. ಆರೋಪಿಗಳಾದ ದೀಪಕ್‌ ಗೋಯಲ್‌ ಹಾಗೂ ಆತನ ಪತ್ನಿ ಚಂಚಲ್‌ ಗೋಯಲ್‌ ಸದ್ಯ ದೆಹಲಿ ಉತ್ತರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಎರಡು ವರ್ಷಗಳ ಹಿಂದೆ ದೆಹಲಿಯ ತಿಮಾರ್‌ಪುರ ಪೊಲೀಸ್ ಠಾಣೆಯಲ್ಲಿ ಇವರ ಕೃತ್ಯದ ಬಗ್ಗೆ ದೂರು ದಾಖಲಾಗಿತ್ತು. ಇವರ ವಿರುದ್ಧ ಸಿಬಿಐನಲ್ಲಿ ಒಂದು ಪ್ರಕರಣ ಮತ್ತು ದೆಹಲಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

    ನಕಲಿ ದಾಖಲೆಗಳ ಮೇಲೆ ಬ್ಯಾಂಕ್‌ನಿಂದ ಮೂರು ಕಾರುಗಳ ಸಾಲ ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ವಾಹನ ಸಾಲ ಹಾಗೂ ಗೃಹ ಸಾಲ ಪಡೆದುಕೊಂಡು ದಂಪತಿ ವಂಚಿಸುತ್ತಿದ್ದರು. ಬ್ಯಾಂಕ್‌ ಖಾತೆ ತೆರೆಯುವಾಗಲೂ ನಕಲಿ ದಾಖಲೆ ನೀಡಿದ್ದ ಕಾರಣ ಬ್ಯಾಂಕ್‌ಗಳಲ್ಲೂ ಇವರ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ಆದ್ರೆ ಆರೋಪಿಗಳು ಎರಡು ವರ್ಷದ ಹಿಂದೆ ಮಾಡಿದ್ದ ವಂಚನೆ ಪ್ರಕರಣದ ಬೆನ್ನು ಬಿದ್ದ ದೆಹಲಿ ಪೊಲೀಸರು ಖತರ್ನಾಕ್ ದಂಪತಿಯನ್ನು ಬಂಧಿಸಿದೆ.

    Read More..; “ಕಸ ಎಸೆದವರ ತಿಥಿ ಮಾಡಲಾಗುವುದು”..! ವೈರಲ್ ಆಯ್ತು ತುಳು ಬ್ಯಾನರ್‌..!

    crminals

    2022 ರಲ್ಲಿ ದೆಹಲಿಯಲ್ಲಿ ಈ ಖತರ್ನಾಕ್‌ ದಂಪತಿ 18.25 ಲಕ್ಷ ಮೌಲ್ಯದ ಕಾರು ಖರೀದಿ ಮಾಡಿದ್ದರು. ಇಲ್ಲೂ ವಂಚನೆ ಮಾಡಲಾಗಿತ್ತಾದ್ರೂ ಆರೋಪಿಗಳ ಬೆನ್ನು ಬಿದ್ದ ಸಿಬಿಐ ಹಾಗೂ ಪೊಲೀಸರು ಹಣ ವರ್ಗಾವಣೆಯ ಡಿಟೈಲ್‌ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದೆ. ಈ ಖತರ್ನಾಕ್ ಕಿಲಾಡಿ ದಂಪತಿಯ ಬಂಧನದಿಂದ ಇದೀಗ ಸಿಬಿಐ ಹಾಗೂ ಮೂರು ರಾಜ್ಯಗಳ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

    Continue Reading

    LATEST NEWS

    ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

    Published

    on

    ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

    ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

    Continue Reading

    LATEST NEWS

    ಮೇಲ್ಛಾವಣಿಗೆ ಬಿದ್ದು ಬದುಕುಳಿದ ಮಗು.. ನಿಲ್ಲದ ಟೀಕೆಯಿಂದ ಬೇಸತ್ತು ತಾಯಿ ಆತ್ಮಹತ್ಯೆ

    Published

    on

    ತಮಿಳುನಾಡು: ಕಳೆದ ಏಪ್ರಿಲ್​ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್​ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಆದರೀಗ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನು ಎದುರಿಸಿದ ತಾಯಿ ಸಾವಿನ ದಾರಿ ಹಿಡಿದಿದ್ದಾರೆ.

    ರಮ್ಯಾ ಆತ್ಮಹತ್ಯೆ ಮಾಡಿಕೊಂಡ ತಾಯಿ. ಅನೇಕ ಟೀಕೆಗಳನ್ನು ಎದುರಿಸಿ ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗು ಬಿದ್ದ ಘಟನೆಗೆ ತಾಯಿ ರಮ್ಯಾನೇ ಕಾರಣ ಎಂದು ಟೀಕಿಸಿದ್ದರಿಂದ ನೊಂದಿದ್ದರು ಎಂದು ತಿಳಿದುಬಂದಿದೆ.

    ಏನಿದು ಘಟನೆ?

    ಏಪ್ರಿಲ್ 28 ರಂದು ಚೆನ್ನೆೈ ಅಪಾರ್ಟ್ ಮೆಂಟ್ ನಲ್ಲಿ ಮಗುವೊಂದು ಆಕಸ್ಮಿಕವಾಗಿ ಮೇಲ್ಛಾವಣಿಯಲ್ಲಿ ಸಿಲುಕಿತ್ತು. ಅದನ್ನು ಕಂಡ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮಾತ್ರವಲ್ಲದೆ, ಮಗು ಈ ರೀತಿ ಬೀಳಲು ಮಗುವಿನ ತಾಯಿ ನಿರ್ಲಕ್ಷ್ಯ ಎಂದು ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆಗಳನ್ನು ಮಾಡಿದ್ದರು. ಈ ಟೀಕೆಯಿಂದ ನೊಂದು ಮಗುವಿನ ತಾಯಿ ರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

    Continue Reading

    LATEST NEWS

    Trending