Friday, July 1, 2022

ಚಿತ್ರದುರ್ಗದಲ್ಲಿ 17 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ..!

ಚಿತ್ರದುರ್ಗ: ಚಿತ್ರದುರ್ಗದಲ್ಲಿ 17 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಕಾಶ್ ಆರೋಗ್ಯವಾಗಿಯೇ ಇದ್ದ ಎನ್ನಲಾಗಿದೆ.

ಎಲ್ಲ ಮಕ್ಕಳಂತೆ ಲವಲವಿಕೆಯಿಂದ ಇದ್ದ ಪ್ರಕಾಶ್ ಎಂದಿನಂತೆ ಬೆಳಗ್ಗೆ 8.30ಕ್ಕೆ ತಿಂಡಿ ತಿಂದು ಕಾಲೇಜಿಗೆ ಹೋಗಿದ್ದಾನೆ. ಆದರೆ, ಕಾಲೇಜಿಗೆ ಹೋದವನು ಅಸ್ವಸ್ಥನಾಗಿ ಬಳಿಕ ಉಸಿರೇ ನಿಲ್ಲಿಸಿದ್ದಾನೆ ಎನ್ನುತ್ತಾರೆ ಪ್ರಕಾಶ್ ಪಾಲಕರು.

ಬೆಳಗ್ಗೆ ಕಾಲೇಜಿಗೆ ಬಂದ ಪ್ರಕಾಶ್ ಮೆಟ್ಟಿಲೇರಿಕೊಂಡು ಕ್ಲಾಸ್ ರೂಮ್​ಗೆ ಹೋಗುವ ವೇಳೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ.

ಆಗ ಜೊತೆಯಲ್ಲಿದ್ದ ಸ್ನೇಹಿತರು ಕಾಲೇಜು ಸಿಬ್ಬಂದಿ ಗಮನಕ್ಕೆ ತಂದು ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಷ್ಟರೊಳಗೆ ಪಾಲಕರು ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಚಿಕಿತ್ಸೆ ಆಗೋದಿಲ್ಲ, ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಪಾಲಕರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

ಆದರೆ, ಅಷ್ಟರೊಳಗೆ ಪ್ರಕಾಶ್ ಇಹಲೋಕ ತ್ಯಜಿಸಿದ್ದಾನೆ. ಬಳಿಕ ಪರೀಕ್ಷಿಸಿದ ವೈದ್ಯರು ಇದು ಹೃದಯ ಸ್ತಂಭನ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ರಾಜಸ್ಥಾನ್ ಟೈಲರ್ ಹತ್ಯೆ ಖಂಡಿಸಿ ಬಂಟ್ವಾಳದಲ್ಲಿ ಪ್ರತಿಭಟನೆ

ಬಂಟ್ವಾಳ: ರಾಜಸ್ತಾನದ ಉದಯಪುರದಲ್ಲಿ ಭಯೋತ್ಪಾದಕರಿಂದ ಹಿಂಸಾತ್ಮಕ ರೀತಿಯಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಅವರ ಸಾವಿಗೆ ನ್ಯಾಯ ಸಿಗಬೇಕು ಹಾಗೂ ಹತ್ಯೆ ಮಾಡಿದ ಭಯೋತ್ಪಾದಕ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್...

ಮುಲ್ಕಿ: ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಕೃಷಿ ಗ್ರಾಮಗಳಿಗೆ DYFI ನಿಯೋಗ ಭೇಟಿ

ಮಂಗಳೂರು: ಭೂಸ್ವಾಧೀನದ ಉದ್ದೇಶ, ಪುನರ್ವಸತಿಯ ಕುರಿತಾಗಿ ಸ್ಪಷ್ಟ ಮಾಹಿತಿ ಒದಗಿಸದೆ ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಮುಲ್ಕಿ ತಾಲೂಕಿನ ಕೃಷಿ ಪ್ರಧಾನ ಗ್ರಾಮಗಳಾದ ಬಳ್ಕುಂಜೆ, ಐಕಳ, ಕೊಲ್ಲೂರು, ಕರ್ನಿರೆ ಮೊದಲಾದ ಗ್ರಾಮಗಳಿಗೆ...

ಕ್ಷುಲ್ಲಕ ಕಾರಣಕ್ಕೆ ಮಗುವನ್ನು ಕತ್ತು ಹಿಸುಕಿ ಕೊಂದು ತಾಯಿ ಜೀವಾಂತ್ಯ

ಬೆಂಗಳೂರು: ಮೂರೂವರೆ ವರ್ಷದ ಮಗುವನ್ನು ವೇಲ್‌ನಿಂದ ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ದೀಪಾ (31) ತನ್ನ ಮಗು...