ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಿಂದ 150 ಭಾರತೀಯರನ್ನು ತಾಲಿಬಾನಿಗಳು ಕಿಡ್ನ್ಯಾಪ್ ಮಾಡಿದ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದೆ. ಆದರೆ ಖಚಿತತೆ ಸಿಕ್ಕಿಲ್ಲ.
ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಪುಲ್ ಎ ಚರ್ಕಿ ಅಥವಾ ಬಗ್ರಾಮ ಜಿಲ್ಲೆಯ ಕಡೆಗೆ ಇವರನ್ನು ಕೊಂಡೊಯ್ದಿರುವ ಸಾಧ್ಯತೆ ಇದೆ. ಅವರ ಬಳಿ ಇರುವ ಮೊಬೈಲ್‌ಗಳನ್ನು ತಾಲಿಬಾನಿಗಳು ಕಸಿದುಕೊಂಡಿದ್ದಾರೆ ಎಂದು ಮುಸ್ಲಿಂ ಶಿರಜಾದ್ ಹಾಗೂ ಒಮರ್ ಸಾದರ್ ಮಾಡಿರುವ ಟ್ವೀಟ್ ಲಭ್ಯವಾಗಿದೆ.
ಆದರೆ, ಭಾರತೀಯರ ಕಿಡ್ನ್ಯಾಪ್ ಆಗಿರುವ ಬಗ್ಗೆ ಈವರೆಗೆ ಭಾರತ ಸರ್ಕಾರ ಖಚಿತಪಡಿಸಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿಲ್ಲ.
ಆದರೆ, ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಬಿತ್ತರವಾಗುತ್ತಿದೆ.