Connect with us

    LATEST NEWS

    ಕೋತಿ ದಾಳಿಯಿಂದ 15ಜನರಿಗೆ ಗಾಯ..! ಕೋತಿ ಸೆರೆಗೆ ಮುಂದಾದ ಅರಣ್ಯ ಇಲಾಖೆ

    Published

    on

    ಕುಷ್ಟಗಿ: ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಕೋತಿಯ ಉಪಟಳ ಹೆಚ್ಚಾಗಿದೆ. ಕೋತಿಯ ಹುಚ್ಚಾಟಕ್ಕೆ 15 ಜನ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ.29ರ ಶನಿವಾರ ಶಾಲೆಗೆ ರಜೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಜೂ.27ರಿಂದ ಕೋತಿಯ ಉಪಟಳ ಜಾಸ್ತಿಯಾಗಿದೆ. ಗಿಡ, ಮನೆಯ ಮಾಳಿಗೆಯ ಮೇಲೆ ಕೂರುವ ಕೋತಿ ಜನರ ಮೇಲೆ ಏಕಾಏಕಿ ದಾಳಿ ಮಾಡಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ಗಾಯ ಮಾಡುತ್ತಿದೆ. ಕೋತಿಯಿಂದಾಗಿ ಮಕ್ಕಳು, ವೃದ್ಧರು ಸೇರಿದಂತೆ 15 ಜನ ಗಾಯಗೊಂಡಿದ್ದಾರೆ.

    Read More..; ವಿಮಾನ ಶೌಚಾಲಯದಲ್ಲಿ ಸ್ಮೋಕಿಂಗ್..! ಯುವಕ ಮುಂಬೈ ಪೊಲೀಸರ ವಶ

    ಹುಚ್ಚು ಕೋತಿಯನ್ನು ಸೆರೆ ಹಿಡಿಯಲು ಸಾಧ್ಯವಾಗದೆ ಊರವರು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಮನೆಯಿಂದ ಹೊರ ಬರಲು ಹೆದರುತ್ತಿರುವ ಊರವರು ಕೋಲನ್ನು ಹಿಡಿದುಕೊಂಡೆ ಓಡಾಡುತ್ತಿದ್ದಾರೆ. ಬಹುತೇಕ ಮಕ್ಕಳಿಗೆ ಕೋತಿ ಕಚ್ಚಿ ಗಾಯ ಮಾಡಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳ ಮೇಲೆ ಸಂಭವನೀಯ ದಾಳಿಗೆ ಶಾಲೆಗೆ ರಜೆ ನೀಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನು ಹುಚ್ಚು ಕೋತಿಯ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯ ಕೈಗೆತ್ತಿಕೊಂಡಿದೆ. ಇನ್ನು ಗಾಯಾಳುಗಳನ್ನು ತಾವರಗೇರಾ ಸಮುದಾಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    Click to comment

    Leave a Reply

    Your email address will not be published. Required fields are marked *

    FILM

    ‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು

    Published

    on

    ಮಂಗಳೂರು : ಪೋಸ್ಟರ್, ಟೀಸರ್ ಮೂಲಕ ಕುತೂಹಲ ಹುಟ್ಟು ಹಾಕಿದ್ದ ಸಿನಿಮಾ ‘ಸಾಂಕೇತ್’. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ವಿನೂತನ ಚಿತ್ರ ಅನ್ನೋದನ್ನು ಟ್ರೈಲರ್ ಕೂಡ ಕನ್ಫಮ್ ಮಾಡಿದೆ. ಯಾರು ಈ ಸಾಂಕೇತ್ ಅನ್ನೋ ಕೌತುಕತೆ ಟ್ರೈಲರ್ ನೋಡಿದವರಲ್ಲೂ ಹುಟ್ಟುವಂತೆ ಮಾಡಿದೆ.

    ಟ್ರೈಲರ್ ನೋಡಿದ್ರೆ, ಇದೊಂದು ಹಾರರ್ ಸಿನಿಮಾನಾ? ಅಥವಾ ಮಾಟ, ಮಂತ್ರ ಇತ್ಯಾದಿ ಅಂಶಗಳನ್ನೊಳಗೊಂಡ ಸಿನಿಮಾನಾ? ಅಥವಾ ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾನಾ? ಎಂಬ ಪ್ರಶ್ನೆ ಮೂಡೋದು ಸಹಜ. ಚಿತ್ರದ ನಿರ್ದೇಶನ, ಸೌಂಡ್ ಡಿಸೈನಿಂಗ್, ಸಂಕಲನ ಜ್ಯೋತ್ಸ್ನಾ ಕೆ. ರಾಜ್ ಮಾಡಿದ್ದಾರೆ.

    ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಾಫಿ, ಬಿಜಿಎಂ ಆ್ಯಂಡ್ ವಿಎಫ್ ಎಕ್ಸ್ ರಾಜ್ ಕಾರ್ತಿಕ್ ಮಾಡಿದ್ದಾರೆ. ಸಹಾಯಕ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸನತ್ ಕುಮಾರ್ ಕೆಲಸ ಮಾಡಿದ್ದಾರೆ. ಪ್ರಕಾಶ್ ರಾವ್ ಸಾಹಿತ್ಯ ಚಿತ್ರಕ್ಕಿದೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿ ನಿಶಾನ್ ತೆಲ್ಲಿಸ್ ಕಾರ್ಯ ನಿರ್ವಹಿಸಿದ್ದಾರೆ.

    ಇದನ್ನೂ ಓದಿ : WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್

    ತುಳನಾಡ ಪ್ರತಿಭೆ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರಿಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮೊದಲಾವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಇನ್ನು ಬಿಡುಗಡೆಯಾಗಿರುವ ಟ್ರೈಲರ್ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ವ್ಹಾವ್…ಥ್ರಿಲ್ಲಿಂಗ್ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದು, ಇನ್ನು ಕೆಲವರು ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.

    Continue Reading

    FILM

    ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೆ ‘ಗೋಲ್ಡನ್ ಸ್ಟಾರ್’ ಹಿಂದೇಟು ..! ಇದೇ ಕಾರಣನಾ..!?

    Published

    on

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೌದು, ಜು.2ಕ್ಕೆ ಗಣೇಶ್ ಹುಟ್ಟುಹಬ್ಬವಿದ್ದು 46ನೇ ವಯ್ಸಸಿಗೆ ಕಾಲಿಡುತ್ತಿದ್ದಾರೆ. ಆದರೆ ಕೊರೋನಾ ಹಾವಳಿ ಬಳಿಕ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಿಂದ ಆಚರಿಸಿಕೊಳ್ಳುತ್ತಿಲ್ಲ.

    ನಟರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಮನೆಗೆ ಭೇಟಿ ನೀಡಿ ವಿಶ್ ಮಾಡುತ್ತಾರೆ. ಕೇಕ್, ಸಿಹಿತಿಂಡಿ ಹಂಚಿ ಸಂಭ್ರಮಿಸುತ್ತಾರೆ. ಗಣೇಶ್ ಕೊರೋನಾ ಮಹಾಮಾರಿಯ ಬಳಿಕ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಮಾಡ್ತಾ ಬಂದಿದ್ದಾರೆ. ಈ ಬಾರಿಯಾದರೂ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದರಂತೆ ಗಣೇಶ್. ಪ್ರೀತಿಯ ಅಭಿಮಾನಿಗಳಿಗೆ ಪೋಸ್ಟ್ ಹಾಕಿ ವಿನಂತಿಸಿಕೊಂಡಿದ್ದಾರೆ.

    “ನನ್ನ ಆತ್ಮೀಯ ಅಭಿಮಾನಿಗಳೇ, ಜು. 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ .ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ” ಎಂದು ಪ್ರೀತಿಯಿಂದ ಕೇಳಿಕೊಂಡಿದ್ದಾರೆ.

    “ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

    ‘ಎಲ್ಲಾ ಹಣೆಬರಹ..ನಾವೇನು ಮಾಡೋಕ್ಕಾಗಲ್ಲ…’ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    ಚಿತ್ರರಂಗದಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಂದ ಹಲವಾರು ಸುದ್ದಿಗಳು ಹರಿದಾಡುತ್ತಿದೆ. ಕನ್ನಡ ಚಿತ್ರರಂಗದಲ್ಲೇ ಕಪ್ಪು ಛಾಯೆ ಮೂಡಿದೆ ಅಂತ ಹೇಳಿದ್ರೆ ತಪ್ಪಾಗಲ್ಲ. ಇನ್ನು ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇದರಿಂದಾಗಿ ಈಗಾಗಲೇ ಚಿತ್ರರಂಗ ಮಂಕಾಗಿ ಹೋಗಿದೆ. ಈ ಎಲ್ಲದರ ನಡುವೆ ಗಣೇಶ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಆಸಕ್ತರಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

    ‘ಗಾಳಿಪಟ-2’ ಬಳಿಕ ಗಣೇಶ್ ಸಿನೆಮಾಗಳು ಅಷ್ಟೇನು ಸದ್ದು ಮಾಡುತ್ತಿಲ್ಲ. ಸದ್ಯಕ್ಕೆ ‘ಕೃಷ್ಣಂ ಪ್ರಣಯ ಸಖಿ’ ಸಿನೆಮಾ ರಿಲೀಸ್‌ಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಈ ಸಿನೆಮಾದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.ಇನ್ನು ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

    Continue Reading

    LATEST NEWS

    ಗ್ರಾಹಕರಿಗೆ ಗುಡ್ ನ್ಯೂಸ್ : ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆ ಇಳಿಕೆ

    Published

    on

    ಮಂಗಳೂರು : ಎಲ್​ಪಿಜಿ ಸಿಲಿಂಡರ್ ಬಳಕೆದಾರರಿಗೆ ಜುಲೈ ತಿಂಗಳಾರಂಭದಲ್ಲೇ ಸಿಹಿ ಸುದ್ದಿ ಸಿಕ್ಕಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ 31ರೂ. ಇಳಿಕೆ ಆಗಿದೆ. ಈ ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಯಾವುದೆ ಬದಲಾವಣೆಯಾಗಿಲ್ಲ.


    ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಸಿದ್ದರಿಂದ ಹೋಟೆಲ್​, ರೆಸ್ಟೋರೆಂಟ್ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

    ದರ ಹೀಗಿದೆ :

    ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್​ ಬೆಲೆ 1813 ರೂಪಾಯಿ ಆಗಿದೆ. . ದೆಹಲಿಯಲ್ಲಿ ಪ್ರತಿ ಸಿಲಿಂಡರ್​ ಬೆಲೆ 1,646 ರೂಪಾಯಿ ಇದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್​ ಬೆಲೆ 1,598 ಮತ್ತು 1,809.5 ರೂ. ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ.

    ಇದನ್ನೂ ಓದಿ : WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್

    ಇಂಡಿಯನ್​ ಆಯಿಲ್​ ಪ್ರಕಾರ, 14.5 ಕೆಜಿಯ ಸಬ್ಸಿಡಿ ಅಡುಗೆ ಅನಿಲ ಬೆಲೆ ಕೋಲ್ಕತ್ತಾದಲ್ಲಿ 892 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆ ಕ್ರಮವಾಗಿ 803, 802.5, 818.5 ರೂ. ಆಗಿದೆ.

    Continue Reading

    LATEST NEWS

    Trending