Connect with us

FILM

10 – 15 ನಿಮಿಷಕ್ಕೆ 1 ಲಕ್ಷ ….ಅರ್ಧ ಗಂಟೆಗೆ 2 ಲಕ್ಷ… ಎಂದ ಖ್ಯಾತ ನಿರ್ದೇಶಕ!

Published

on

ಅನುರಾಗ್ ಕಶ್ಯಪ್ ಯಾರಿಗೆ ಗೊತ್ತಿಲ್ಲ. ತಮ್ಮಕ್ರಿಯಾಶೀಲ ಚಿತ್ರಗಳಿಂದಲೇ ಬಾಲಿವುಡ್ ನಲ್ಲಿ ಖ್ಯಾತರಾದವರು. ಬಣ್ಣದ ಬದುಕಿನಾಚೆ, ರಾಜಕೀಯ ಪ್ರಪಂಚದಲ್ಲಿ ಕೆಲ ಕಾಲ ಸದ್ದು ಮಾಡಿದ್ದರು. ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ.
ಇದೀಗ ಇಂಥ ಅನುರಾಗ್ ಕಶ್ಯಪ್ ಇನ್ಮುಂದೆ ಸಿಕ್ಕ ಸಿಕ್ಕವರಿಗೆಲ್ಲ ಸಿಗಲ್ಲವಂತೆ. ಒಂದು ವೇಳೆ ಅನುರಾಗ್ ಕಶ್ಯಪ್ ಅವರನ್ನ ಭೇಟಿಯಾಗಬೇಕು, ಮಾತನಾಡಬೇಕು, ಸಿನಿಮಾದ ಆಳ-ಅಗಲದ ಕುರಿತು ಚರ್ಚೆಯನ್ನ ಮಾಡಬೇಕು ಎಂದು ಯಾರಿಗಾದರೂ ಅನಿಸಿದರೆ ಅವರು ಲಕ್ಷಗಟ್ಟಲೆ ಹಣ ಹೊಂದಿರಬೇಕು.

ಸಿನಿಮಾ ಕನಸು ಹೊತ್ತ ಬಹುತೇಕರು ಅದನ್ನು ನನಸಾಗಿಸಲು ಮೊದಲು ಹೋಗುವುದು ಅನುರಾಗ್ ಕಶ್ಯಪ್ ಅವರ ಬಳಿ. ಯಾಕೆಂದರೆ ಅನುರಾಗ್ ಗೆ ಹೊಸಬರ ಜೊತೆ ಕೆಲಸ ಮಾಡಿ ರೂಢಿ. ಆದರೆ ಈಗೀಗ ಅನುರಾಗ್ ಕಶ್ಯಪ್ ಗೆ ಈ ಹೊಸಬರ ಸಹವಾಸದಿಂದ ಸಿಕ್ಕಾಪಟ್ಟೆ ಕಿರಿಕಿರಿಯಾಗ್ತಿದೆ. ಹೀಗಾಗಿ ಅವರು ತಮ್ಮ ದರವನ್ನ ತಾವೇ ಫಿಕ್ಸ್ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ದರ ಪಟ್ಟಿ ಬಿಡುಗಡೆ :

ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದರ ಪಟ್ಟಿಯನ್ನ ಬಿಡುಗಡೆ ಮಾಡಿರುವ ಅನುರಾಗ್ ಕಶ್ಯಪ್, ನಾನು ಹಲವು ಹೊಸಬರಿಗೆ ಇಲ್ಲಿವರೆಗೆ ಅವಕಾಶ ಕೊಟ್ಟೆ, ಸ್ಟಾರ್ ನಟರಾಗುವಂತೆ ಮಾಡಿದೆ. ಆದರೆ ಅದರಲ್ಲಿ ಅನೇಕರು ಕಳಪೆ ಗುಣಮಟ್ಟದ, ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗೆ ಸೆಟಲ್ ಆಗಿಬಿಟ್ಟಿದ್ದಾರೆ. ಇಂಥಹವರಿಗಾಗಿ ಸಾಕಷ್ಟು ಸಮಯವನ್ನು ನಾನು ಹಾಳು ಮಾಡಿದ್ದೇನೆ. ಹಾಗಾಗಿ ಇನ್ನು ಮುಂದೆ ಯಾರೇ ನನ್ನನ್ನು ಭೇಟಿ ಆಗಬೇಕೆಂದರೂ ಹಣ ನೀಡಬೇಕು ಎಂದಿದ್ದಾರೆ.

10-15 ನಿಮಿಷಗಳ ಕಾಲ ನನ್ನನ್ನು ಭೇಟಿಯಾಗಿ ಮಾತನಾಡಲು 1 ಲಕ್ಷ ರೂಪಾಯಿ ಕೊಡಬೇಕು. ಅರ್ಧ ಗಂಟೆ ಮಾತನಾಡಲು ಎರಡು ಲಕ್ಷ ರೂಪಾಯಿ ಕೊಡಬೇಕು. ಒಂದು ಗಂಟೆ ನನ್ನೊಂದಿಗೆ ಮಾತನಾಡಲು ಐದು ಲಕ್ಷ ರೂಪಾಯಿ ಹಣ ಕೊಡಬೇಕು. ಜನರನ್ನು ಭೇಟಿಯಾಗಿ ಅವರಿಂದ ಸಾಕಷ್ಟು ಸಮಯವನ್ನು ನಾನು ವ್ಯರ್ಥ ಮಾಡಿಕೊಂಡಿದ್ದೇನೆ.

ನನ್ನ ಭೇಟಿಗೆ ಇಷ್ಟು ಹಣ ವ್ಯಯಿಸುವ ಶಕ್ತಿ ನಿಮ್ಮಲ್ಲಿದ್ದರೆ ಮಾತ್ರವೇ ನನಗೆ ಕರೆ ಮಾಡಿ, ಭೇಟಿ ಮಾಡಿ, ಇಲ್ಲವಾದರೆ ಸುಮ್ಮನೆ ನನ್ನಿಂದ ದೂರವಿರಿ ಎಂದಿರುವ ಅನುರಾಗ್ ಕಶ್ಯಪ್, ಭೇಟಿ ಮಾಡುವುದು ಮಾತ್ರ ಅಲ್ಲ ನನಗೆ ಮೆಸೇಜ್ ಮಾಡುವುದು, ಇನ್​ಸ್ಟಾಗ್ರಾಂನಲ್ಲಿ ಖಾಸಗಿ ಸಂದೇಶ ಕಳಿಸುವ ಕೆಲಸವನ್ನೆಲ್ಲ ಮಾಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಅನುರಾಗ್ ಕಶ್ಯಪ್ ಅವರ ಹೊಸ ನಿಯಮದ ಬಗ್ಗೆ ಈಗ ಬಾಲಿವುಡ್ ನಲ್ಲಿ ಚರ್ಚೆಯಾಗ್ತಿದೆ. ಅವರ ನಡೆ ಬಗ್ಗೆ ಹುಬ್ಬೇರಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

FILM

45 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ

Published

on

ಮಂಗಳೂರು(ಮುಂಬೈ): ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿ ನಟಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದಾರೆ. ಐಷಾರಾಮಿ ಮನೆ ಖರೀದಿ ಮಾಡಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗ್ತಿದೆ. ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆ ಖರೀದಿ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲೀಲಾ ಹವಾ ಜಾಸ್ತಿ ಆದ್ಮೇಲೆ ಬಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರುತ್ತಿದ್ದಂತೆ ಈಗ ತೆಲುಗಿನಲ್ಲಿಯೂ ನಟಿಗೆ ಕರೆ ಬರುತ್ತಿದೆ.

ಶಾಹಿದ್ ಕಪೂರ್ ಜೊತೆ ಹೊಸ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ನಾಗಚೈತನ್ಯ ಮುಂಬರುವ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ನಾನಿ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿದೆ.

Continue Reading

FILM

ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

Published

on

ರಾಮ್ ಲೀಲಾ ಚಿತ್ರದ ನಿಮಾರ್ಪಕ ಸೌಂದರ್ಯ ಜಗದೀಶ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸಂಬಂಧಿಸಿದ ಹಿನ್ನಲೆಯಲ್ಲಿ ನಿರ್ಮಾಪಕ ಸೂಸೈಡ್ ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸುಗುಣ ಆಸ್ಪತ್ರೆಯಲ್ಲಿ ಅವರ ಮೃತದೇಹ ಇಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಉದ್ಯಮಿಯಾಗಿದ್ದ ಜಗದೀಶ್‌ ಅವರು ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದರು ಸೌಂದರ್ಯ ಜಗದೀಶ್. ಮಗಳ ಮದುವೆ ಸಂದರ್ಭದಲ್ಲಿ ಖುಷಿ ಖುಷಿಯಾಗಿಯೇ ಇದ್ದರು. ಇದೀಗ ಅವರ ಆತ್ಮಹತ್ಯೆಯ ಸುದ್ದಿ ಕೇಳಿ ಚಿತ್ರರಂಗದ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Continue Reading

FILM

23- 24 ವರ್ಷಕ್ಕೆ ಇದೆಲ್ಲಾ ಬೇಕಿತ್ತಾ…ಸೆರೆಮನೆ ವಾಸದ ಬಗ್ಗೆ ಅನುಭವ ಬಿಚ್ಚಿಟ್ಟ ಸೋನು ಗೌಡ

Published

on

ಬೆಂಗಳೂರು : ಬಾಲಕಿಯನ್ನು ದತ್ತು ಪಡೆದ ಆರೋಪದಡಿ ಜೈಲು ಸೇರಿದ್ದ ಸೋನು ಶ್ರೀನಿವಾಸ್‌ ಗೌಡ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದೀಗ ಯೂಟ್ಯೂಬ್‌ ವಿಡಿಯೋ ಮೂಲಕ ತಾನು ಜೈಲಿನಲ್ಲಿ ಕಳೆದ ಕರಾಳ ದಿನಗಳ ಅನುಭವನ್ನು ಹೊರ ಹಾಕಿದ್ದಾರೆ.

ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜೈಲು ಪಾಲಾಗಿದ್ದ ಸೋನು ಗೌಡ, ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಏಪ್ರಿಲ್‌ 6ರಂದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಸದ್ಯ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಜೈಲು ವಾಸದ ಅನುಭವ ಹಂಚಿಕೊಂಡಿದ್ದಾರೆ.

23- 24 ವರ್ಷಕ್ಕೆ ಇದೆಲ್ಲಾ ಬೇಕಿತ್ತಾ…

ಮೊದಲಿಗೆ ನನ್ನನ್ನು ಲೀಗಲ್ ವಿಚಾರಣೆ ನಡೆಸುತ್ತಿದ್ದರು. ನಾನು ಅದನ್ನು ಫಾಲೋ ಮಾಡುತ್ತಿದೆ. ಬಳಿಕ ನನ್ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ರು. ಅಲ್ಲಿ ಹೋದ ತಕ್ಷಣ ನಂಗೆ ತುಂಬಾ ಬೇಜಾರ್ ಆಯಿತು. ಅಲ್ಲಿನ ವಾತಾವರಣ, ಜನ ಎಲ್ಲರನ್ನು ನೋಡಿ, ಈ 23- 24 ವರ್ಷಕ್ಕೆ ಇದೇಲ್ಲಾ ಬೇಕಿತ್ತಾ ಅನಿಸಿತು ಎಂದಿದ್ದಾರೆ.

ಅನೇಕ ವಿಚಾರ ಕಲಿತೆ :

ಅಲ್ಲಿ ಇದ್ದವರು ಬೇರೆ ಬೇರೆ ಕೇಸ್‌ಗಳಲ್ಲಿ ಇದ್ದವರು. ಮರ್ಡರ್, ಫುಲ್ ಮರ್ಡರ್ ಮಾಡಿದವರೆಲ್ಲಾ ಇದ್ದರು. ಅವರ ಜೊತೆಗೆಲ್ಲಾ ನಾನು ಇರಬೇಕಾಯಿತು. ಆ ಕ್ಷಣನ ಹೇಗೆ ಹೇಳೋದು ನಂಗೆ ಅರ್ಥ ಆಗುತ್ತಿಲ್ಲ. ಇನ್ನು, ಮುಖ್ಯವಾಗಿ ಅಲ್ಲಿ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ರು. 3 ರಿಂದ 4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು. ಇಲ್ಲಿ ನನ್ನ ಬಳಿ ಫೋನ್ ಇತ್ತು, ಅನ್‌ಲಿಮಿಟೆಡ್ ಕಾಲ್ ಇತ್ತು. ಮಾತಾಡಬೇಕಿದ್ದವರು ಪಕ್ಕದಲ್ಲೇ ಇದ್ದರು, ಆದರೂ ನಾನು ಮಾತಾಡುತ್ತಿರಲಿಲ್ಲ. ಅಲ್ಲಿ ಅವರ ಬೆಲೆ ಗೊತ್ತಾಯಿತು. 4 ಗೋಡೆ ಮಧ್ಯೆ ಇದ್ದು ಅನೇಕ ವಿಚಾರ ಕಲಿತೆ ಎಂದಿದ್ದಾರೆ.

ಜೈಲಿನಲ್ಲಿ ತುಂಬಾ ಸೊಳ್ಳೆ ಇರುತ್ತಿತ್ತು. ಈ ಜೀವನ ಬೇರೆ ಅಲ್ಲಿನ ಜೀವನವೇ ಬೇರೆ. ಆದರೆ, ಮನಸ್ಸಿಗೆ ತುಂಬಾ ನೋವಾಗುವುದೇ ಈ 23- 24 ವರ್ಷಕ್ಕೆ ಜೈಲು, ನ್ಯಾಯಾಂಗ ಬಂಧನ ಎಲ್ಲಾ ನೋಡಿಬಿಟ್ಟೆನಲ್ಲಾ ಎಂದು. ನಿಮ್ಮ ಮತ್ತು ಕುಟುಂಬದವರ ಬೆಂಬಲದಿಂದ ಬೇಗ ಹೊರಗೆ ಬಂದಿದ್ದೇನೆ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Continue Reading

LATEST NEWS

Trending