Connect with us

    kerala

    ಕೇರಳ ಲಾಟರಿಯಲ್ಲಿ ಬೀದಿ ವ್ಯಾಪಾರಿ ಮಹಿಳೆಗೆ 1 ಕೋಟಿ ರೂ ಬಂಪರ್..!! ಖದೀಮ ಟಿಕೆಟ್ ಮಾರಾಟಗಾರ ಅಂದರ್‌..! ನಡೆದಿದ್ದೇನು?

    Published

    on

    ತಿರುವನಂತಪುರಂ/ ಮಂಗಳೂರು: ತಿರುವನಂತಪುರಂ ಮ್ಯೂಸಿಯಂ ಜಂಕ್ಷನ್‌ನಲ್ಲಿರುವ 72 ವರ್ಷದ ಬೀದಿಬದಿ ವ್ಯಾಪಾರಿ ಸುಕುಮಾರಿಯಮ್ಮ ಅವರಿಗೆ ಈ ಬಾರಿಯ ಕೇರಳ ರಾಜ್ಯದ ಲಾಟರಿಯಲ್ಲಿ ಪ್ರಥಮ ಬಹುಮಾನ 1 ಕೋಟಿ ರೂಪಾಯಿ ಒಲಿದಿದೆ. ಇದೇ ವೇಳೆ ಈ ಲಾಟರಿ ಟಿಕೆಟನ್ನು ತನ್ನದಾಗಿಸಿ ಲಾಟರಿ ಹಣವನ್ನು ಪಡೆಯಲು ಸುಳ್ಳಿನ ಕಥೆ ಹೆಣೆದು ಮಹಿಳೆಗೆ ವಂಚಿಸಲು ಯತ್ನಿಸಿದ ಲಾಟರಿ ಟಿಕೆಟ್ ಮಾರಾಟಗಾರ ಕಣ್ಣನ್‌ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರ ಸಹಕಾರದಿಂದ ಸುಕುಮಾರಿಯಮ್ಮ ಅವರು ಲಾಟರಿ ಹಣವನ್ನು ಪಡೆಯುವ ಆಶಾವಾದ ಹೊಂದಿದ್ದಾರೆ.

    ಮ್ಯೂಸಿಯಂ ಮತ್ತು ಮೃಗಾಲಯ ಇಲಾಖೆಯಲ್ಲಿ ಸ್ವೀಪರ್ ಆಗಿ ನಿವೃತ್ತರಾದ ಸುಕುಮಾರಿಯಮ್ಮ ಕೆಲವು ವರ್ಷಗಳಿಂದ ಮ್ಯೂಸಿಯಂ ಜಂಕ್ಷನ್‌ ಬಳಿ ಬೀದಿ ವ್ಯಾಪಾರ ನಡೆಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಕೆ ಸ್ವಂತ ನಿವೇಶನವನ್ನು ಹೊಂದಿ  ಮನೆ ಕಟ್ಟಿಸ ಬೇಕೆಂಬ ಕನಸು ಕಾಣುತ್ತಿದ್ದರು. ಇದಕ್ಕೆ ಬೇಕಾದ ಹಣವನ್ನು ಹೊಂದಿಸಲು ಪ್ರಾರ್ಥಿಸಿ ಹಲವು ಸಮಯದಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಮೇ 14 ರಂದು 1,200 ರೂಪಾಯಿ ಕೊಟ್ಟು ಒಂದೇ ಸರಣಿಯ 12 ಟಿಕೆಟ್‌ಗಳನ್ನು ಖರೀದಿಸಿದ್ದರು.

    ಮಹಿಳೆಗೆ ಚಳ್ಳೆಹಣ್ಣು ತನ್ನಿಸಿ.. ಸಿಹಿ ಹಂಚಿದ ಭೂಪ..!!

    ಮೇ 15 ರಂದು ನಡೆದ ಡ್ರಾದಲ್ಲಿ ಅದೃಷ್ಟ ಒಲಿದಿದ್ದು, ಪ್ರಥಮ ಬಹುಮಾನ 1 ಕೋಟಿ ರೂ. ಮತ್ತು ಸಮಾಧಾನಕರ ಬಹುಮಾನ 8000 ರೂ. ಆಕೆಯ ಟಿಕೆಟ್‌ ಗಳಿಗೆ ಲಭಿಸಿತ್ತು. ಆದರೆ ಆಕೆಗೆ ಟಿಕೆಟ್‌ ಮಾರಾಟ ಮಾಡಿದ್ದ ಕಣ್ಣನ್, ಆಕೆಯಿಂದ ಪ್ರಥಮ ಬಹುಮಾನದ ಟಿಕೆಟನ್ನು ಕದಿಯಲು ಸುಳ್ಳಿನ ಕಥೆವನ್ನು ಹೆಣೆದಿದ್ದ. ಆರಂಭದಲ್ಲಿ, ಆಕೆಯ 12 ಟಿಕೆಟ್‌ಗಳಿಗೆ ತಲಾ 500 ರೂ. ಬಂದಿದೆ ಎಂದು ಹೇಳಿದ್ದು, ಆತನ ಮಾತನ್ನು ನಂಬಿದ ಆಕೆ 500 ರೂ. ಗಳನ್ನು ಆತನಿಗೆ ನೀಡುವುದಾಗಿ ಹೇಳಿ ಉಳಿದ 5500 ರೂ. ಗಳನ್ನು ಪಡೆಯಲು ಆತನ ಸಹಾಯ ಕೋರಿದಳು. ಹಾಗೆ ಕಣ್ಣನ್ ಎಲ್ಲಾ 12 ಟಿಕೆಟ್‌ ಪಡೆದು ತೆರಳಿದ್ದಾನೆ. ಆಗ ಇನ್ನೋರ್ವ ಬೀದಿ ಬದಿ ವ್ಯಾಪಾರಿ ಟಿಕೆಟ್‌ ನಂಬರ್‌ಗಳನ್ನು ಪರಿಶೀಲಿಸಿ ಸುಕುಮಾರಿಯಮ್ಮ ಅವರು ತೋರಿಸಿದ ನಂಬರ್‌ಗಳಿಗೆ ಯಾವುದೇ ಬಹುಮಾನ ಬಂದಿಲ್ಲ ಎಂದರು. ಬಳಿಕ ಕಣ್ಣನ್ ಹಿಂದಿರುಗಿ ಬಂದು ಸಣ್ಣ ತಪ್ಪಾಗಿದೆ, 12 ಟಿಕೆಟ್‌ಗಳಿಗೆ ತಲಾ 100 ರೂ.ಮಾತ್ರ ಬಂದಿದೆ ಎಂದು ಇನ್ನೊಂದು ಸುಳ್ಳು ಕಥೆ ಸೃಷ್ಟಿಸಿದ್ದಾನೆ. ಈ ಮಾತನ್ನೂ  ಸುಕುಮಾರಿಯಮ್ಮ ನಂಬಿದರು. ಬಳಿಕ ಕಣ್ಣನ್ ಪಾಳಯಂ ಎಂಬಲ್ಲಿಗೆ ತೆರಳಿ ತನಗೆ 1 ಕೋಟಿ ರೂ. ಲಾಟರಿ ಹೊಡೆದಿದೆ ಎಂದು ಹೇಳಿ ಸಿಹಿ ಹಂಚಲು ಆರಂಭಿಸಿದ್ದಾನೆ.

    Read More.. ; ಮಂಗಳೂರು ವಿಮಾನ ದುರಂತ ಕಹಿ ನೆನಪಿಗೆ ಇಂದು 14 ವರ್ಷ..! ಕೂಳೂರಿನಲ್ಲಿ ಶ್ರದ್ದಾಂಜಲಿ

    ಪಾಳಯಂನ  ಲಾಟರಿ ಮಾರಾಟಗಾರ ರಾಧಾಕೃಷ್ಣನ್ ಅವರು ಮ್ಯೂಸಿಯಂನಲ್ಲಿ ಮತ್ತೊಬ್ಬ ಲಾಟರಿ ಮಾರಾಟಗಾರ್ತಿ ಮತ್ತು ಸುಕುಮಾರಿಯಮ್ಮ ಅವರ ಸ್ನೇಹಿತೆ ಪ್ರಭಾ ಅವರೊಂದಿಗೆ ಈ ವಿಷಯ ಹಂಚಿಕೊಂಡಿದ್ದಾರೆ. ಕುತೂಹಲದಿಂದ ಪ್ರಭಾ ಅವರು ವಿಜೇತ ನಂಬರ್‌ ಕೇಳಿದರು. ಪ್ರಭಾಗೆ ಸರಣಿ ಗೊತ್ತಿತ್ತು. ಸುಕುಮಾರಿಯಮ್ಮ ತೆಗೆದುಕೊಂಡ ನಂಬರಿಗೆ ಪ್ರಥಮ ಬಹುಮಾನ ಬಂದಿರುವುದು ಆಕೆಗೆ ಖಚಿತವಾಯಿತು. ಮರುದಿನ ಬೆಳಗ್ಗೆ ಅವರು ಸುಕುಮಾರಿಯಮ್ಮ ಅವರ ನಂಬರಿಗೇ ಲಾಟರಿ ಹೊಡೆದಿರುವುದನ್ನು ದೃಢೀಕರಿಸಿದರು. ತಾನು ಮೋಸ ಹೋದೆ ಎನ್ನುವುದು ಸುಕುಮಾರಿಯಮ್ಮ ಅವರಿಗೆ ಖಚಿತವಾಯಿತು. ಅಷ್ಟೊತ್ತಿಗಾಗಲೇ ಕಣ್ಣನ್ ಅಜ್ಞಾತವಾಸಕ್ಕೆ ಹೋಗಿದ್ದ. ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸುಕುಮಾರಿಯಮ್ಮ ದೂರಿನೊಂದಿಗೆ ಲಾಟರಿ ನಿರ್ದೇಶನಾಲಯವನ್ನು ಸಂಪರ್ಕಿಸಿದರು. ಪೊಲೀಸ್ ದೂರು ದಾಖಲಿಸಿ ಎಫ್ ಐಆರ್ ಹಾಕಿಕೊಂಡು ಬರುವಂತೆ ಆಕೆಗೆ ತಿಳಿಸಲಾಯಿತು. ಆಕೆ ನೀಡಿದ ದೂರಿನ ಆಧಾರದಲ್ಲಿ ಮ್ಯೂಸಿಯಂ ಠಾಣೆ ಪೊಲೀಸರು ಕಣ್ಣನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತನ ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆಯ ಆರೋಪದ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಕಣ್ಣನ್‌ ಅಷ್ಟರಲ್ಲೇ ಲಾಟರಿ ಟಿಕೆಟನ್ನು ನಗದೀಕರಣಕ್ಕಾಗಿ ಪೆರೂರ್ಕಡದ ಬ್ಯಾಂಕ್ ಗೆ ನೀಡಿದ್ದರು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    lottery

    Read More..; “ಕಸ ಎಸೆದವರ ತಿಥಿ ಮಾಡಲಾಗುವುದು”..! ವೈರಲ್ ಆಯ್ತು ತುಳು ಬ್ಯಾನರ್‌..!

    ಸ್ವಂತ ವಿವೇಶನಕ್ಕಾಗಿ ಲಾಟರಿ ಖರೀದಿ ಮಾಡುತ್ತಿದ್ದರಂತೆ ಈ ಬಡ ಮಹಿಳೆ..!

    ಸುಕುಮಾರಿಯಮ್ಮ ಅವರಿಗೆ ಲಾಟರಿ ಮೂಲಕ ಈ ಹಿಂದೆ 30,000 ರೂ. ಮತ್ತು 60,000 ರೂ.ಗಳ ಬಹುಮಾನ ಬಂದಿತ್ತು. ಅವರಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾಳೆ. ‘ನನ್ನ ಪುತ್ರ ಕೇವಲ 5 ವರ್ಷದವನಿದ್ದಾಗ ನನ್ನ ಗಂಡ ತೀರಿಕೊಂಡರು. ನಾನು ನನ್ನ ಮಕ್ಕಳನ್ನು ಹಸುವಿನ ಸೆಗಣಿ ಸಾಗಿಸುವುದರಿಂದ ಹಿಡಿದು ಕಟ್ಟಡ ನಿರ್ಮಾಣ ಸೈಟ್‌ ಗಳಲ್ಲಿ ಸಿಮೆಂಟ್ ಹೊರುವವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಾ ಬೆಳೆಸಿದೆ. ಬಳಿಕ ನನಗೆ ಸ್ವೀಪರ್ ಕೆಲಸ ಸಿಕ್ಕಿತು. ಇಷ್ಟು ವರ್ಷ ಬಾಡಿಗೆಯಲ್ಲೇ ಬದುಕುತ್ತಿದ್ದೆ. ನನ್ನ ಸ್ವಂತ ನಿವೇಶನದೊಂದಿಗೆ ಸಣ್ಣ ನಿವೇಶನವನ್ನು ಹೊಂದುವುದು ನನ್ನ ಕನಸು. ಅದಕ್ಕೆ ಲಾಟರಿ ಟಿಕೆಟ್ ಕೊಳ್ಳುತ್ತಲೇ ಇದ್ದೆ. ಶೀಘ್ರದಲ್ಲೇ ನನ್ನ ಬಹುಮಾನ ಸಿಗುತ್ತದೆ ಎಂದು ಭಾವಿಸುತ್ತೇನೆ,” ಎಂದು ಸುಕುಮಾರಿಯಮ್ಮ ಹೇಳುತ್ತಾರೆ. ಈ ವಿದ್ಯಮಾನದ ಬಗ್ಗೆ ಮಲಯಾಳ ಮನೋರಮ ವರದಿ ಮಾಡಿದೆ.

    1 Comment

    1 Comment

    1. ಗಂಗಾಧರ

      23/05/2024 at 3:42 PM

      ಸೂಪರ್ ಬ್ರದರ್
      ನನಗು ಮೂಸ ಆಗಿದೆ ಸರ್ ಏನು ಮಾಡಬೇಕು
      ನಾನು ಕನಾ೯ಟಕ ದವನು ಅಂತ ಮೂಸ ಮಾಡುತ್ತಾರೆ ಸರ್
      ಇದೇ ತಿಂಗಳ 12-05-2024 ರ೦ದು ನೇಡೇದದ್ದು
      ಅದರಲ್ಲಿ 5ಲಕ್ಷ ಬಂಪರ್ ಬಂದಿದ್ದ ಅಂತಾ ಹೇಳಿ 5ಸಾವಿರ ಕೇಳಿದರು KL23833 ನಂಬರ್ ನಾನು ಆಯ್ಕೆ ಮಾಡಿದ್ದು 3ಘಂಟೇಗೇ ಪೋನ ಮಾಡಿ ನಿಮಗೆ, 5ಲಕ್ಷ ಬಂದಿದೆ ಸರ್ ಅಂತ ಹೇಳಿದರು ನಾನು ತುಂಬಾ ಮೂಸ ಮಾಡಿದ್ದಾರೆ ಸರ್🙏

    Leave a Reply

    Your email address will not be published. Required fields are marked *

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    kerala

    ಆತ್ಮಹತ್ಯೆಗೆ ಯತ್ನಿಸುವಾಗ ಹಗ್ಗ ತುಂಡಾಗಿ ಮಹಿಳೆ ಮೃ*ತ್ಯು..!

    Published

    on

    ಕಾಸರಗೋಡು: ಕುಂಬಳೆ ಸನಿಹದ ಅಡ್ಕದಲ್ಲಿ ಆತ್ಮಹ*ತ್ಯೆಗೆ ಯತ್ನಿಸುವ ಸಂದರ್ಭ ಹಗ್ಗ ತುಂಡಾಗಿ ಬಿದ್ದು, ಗಂಭೀರ ಗಾ*ಯಗೊಂಡಿದ್ದ ಮಹಿಳೆ ಮೃ*ತಪಟ್ಟಿದ್ದಾರೆ.

    ಮಂಜೇಶ್ವರ ಬಟ್ಟಯಪದವು ನಿವಾಸಿ ಬಶೀರ್ ಎಂಬುವರ ಪತ್ನಿ ಆಯಿಷತ್ ರಿಯಾನಾ(24) ಜುಲೈ 23 ರಂದು ತಾಯಿ ಮನೆಯ ಸ್ನಾನಗೃಹದಲ್ಲಿ ನೇ*ಣಿಗೆ ಶರಣಾಗುವ ಸಂದರ್ಭ ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾ*ಯವಾಗಿತ್ತು. ತಕ್ಷಣ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಗುರುವಾರ ಮೃ*ತಪಟ್ಟಿದ್ದಾರೆ.

    ಆಯಿಷತ್ ರಿಯಾನಾ ಹಾಗೂ ಬಶೀರ್ ವಿವಾಹ ಮೂರೂವರೆ ವರ್ಷದ ಹಿಂದೆ ನಡೆದಿದ್ದು, ಈ ಸಂದರ್ಭ 15 ಪವನ್ ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷ ಪ್ರಾಯದ ಮಹಮ್ಮದ್ ಬಿಲಾಲ್ ಎಂಬ ಪುತ್ರನಿದ್ದಾನೆ.

    ಬಿಲಾಲ್ ಜನಿಸಿದ ಆರು ತಿಂಗಳಲ್ಲಿ ರಿಯಾನಾಗೆ ಹಲ್ಲೆ ನಡೆಸಿ ತಾಯಿ ಮನೆಗೆ ಕರೆತಂದು ಬಿಡಲಾಗಿದೆ. ಪತಿಯ ಕಿರುಕುಳದಿಂದ ಆಯಿಷತ್ ಆತ್ಮಹ*ತ್ಯೆಗೈದಿರುವುದಾಗಿ ಅವರ ಸಂಬಂಧಿಕರು ಪೊಲೀಸರಲ್ಲಿ ತಿಳಿಸಿದ್ದಾರೆ.

    Continue Reading

    kerala

    ಕುಂಬಳೆ: ತರವಾಡು ಮನೆ, ಕ್ಷೇತ್ರದಿಂದ ಕಳ್ಳತನ..!

    Published

    on

    ಕಾಸರಗೋಡು: ಕಾಸರಗೋಡು ಜಿಲ್ಲೆಯ ಕುಂಬಳೆ ಪೇಟೆಯಲ್ಲಿರುವ ಶಂಕರ ಸೇವಾ ಸಮಿತಿಯ ಕುನ್ನಿಲ್‌ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಕಳ್ಳತನ ನಡೆದಿದೆ. ತರವಾಡು ಮನೆಯಿಂದ ಒಂದೂವರೆ ಪವನಿನ ಚಿನ್ನದ ಹೂ, ಕತ್ತಿ ಮತ್ತು ತರವಾಡು ಕ್ಷೇತ್ರದಿಂದ ಶ್ರಿ ವಯನಾಟು ಕುಲವನ್ ದೈವದ ಬೆಳ್ಳಿಯ ಆಯುಧ, ವಿಷ್ಣುಮೂರ್ತಿ ದೈವದ 2 ಆಯುಧಗಳು, ತೊಂಡಚ್ಚಮಾರ್ ದೈವದ ಆಯುಧ, ಹಿತ್ತಾಳಿಯ 3 ಪಾತ್ರೆಗಳು, 25 ಕಾಲು ದೀಪಗಳು, ಚೆಂಬನ್ನು ಕದ್ದೊಯ್ದಿದ್ದಾರೆ.

    ತರವಾಡು ಕ್ಷೇತ್ರದಲ್ಲಿದ್ದ ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪನ್ನು ಕಳ್ಳತನ ಮಾಡಿದ್ದಾರೆ. ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂ. ಹಾಗೂ ಮುಡಿಪಿನಲ್ಲಿ 15 ಸಾವಿರ ರೂ. ಗಳು ಇತ್ತೆಂದು ಹೇಳಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಪರಶುರಾಮ ಥೀಂ ಪಾರ್ಕ್‌ ವಿವಾದ : ನಕಲಿ ಪರಶುರಾಮನ ಮೂರ್ತಿ ಸ್ಥಾಪನೆಯಲ್ಲಿ ಮೊದಲ ತಲೆದಂಡ

    Continue Reading

    LATEST NEWS

    Trending