Connect with us

    LATEST NEWS

    1.5 ಲಕ್ಷ ತಲುಪಿದ ನರ್ಸರಿ, ಎಲ್‌ಕೆಜಿ ಸ್ಕೂಲ್ ಫೀಸ್: ವೈರಲ್ ಆಯ್ತು ಫೋಟೊ

    Published

    on

    ಖಾಸಗಿ ಶಾಲೆಗಳ ಸ್ಕೂಲ್ ಫೀಸ್ ಯಾವಾಗೂ ದುಬಾರಿಯಾಗಿರುತ್ತದೆ ಅನ್ನೋ ವಿಚಾರ ಎಲ್ಲಿಗೂ ಗೊತ್ತೇ ಇದೆ. ಸದ್ಯ 2024-25 ರ ನರ್ಸರಿ ಮತ್ತು ಜೂನಿಯರ್ ಕೆಜಿ ಬ್ಯಾಚ್‌ನ ಶಾಲಾ ಶುಲ್ಕ ರಶೀದಿಯ ಫೋಟೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ.

    ಹೌದು, ಖಾಸಗಿ ಶಾಲೆಯೊಂದು ನರ್ಸರಿ ಮತ್ತು ಎಲ್.ಕೆ.ಜಿಯ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಬರೋಬ್ಬರಿ 1.5 ಲಕ್ಷ ರೂ.ಶಾಲಾ ಶುಲ್ಕವನ್ನು ವಿಧಿಸಿದೆ. ಈ ದುಬಾರಿ ಶುಲ್ಕ ವಿವರದ ಫೋಟೋ ಇದೀಗ ವೈರಲ್ ಆಗುತ್ತಿದ್ದು, ಇದನ್ನೆಲ್ಲಾ ನೋಡ್ತಿದ್ರೆ ಸರ್ಕಾರಿ ಶಾಲೆಗಳ ಬೆಸ್ಟ್ ಅನ್ನುತ್ತೆ ಎಂದು ನಟ್ಟಿಗರು ಹೇಳಿಕೊಂಡಿದ್ದಾರೆ.

    ಈ ಕುರಿತ ಪೋಸ್ಟ್ ಒಂದನ್ನು ಬೆಂಗಳೂರಿನ ವೈದ್ಯರಾದ ಡಾ. ಜಗದೀಶ್‌ ಚತುರ್ವೇದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕೇವಲ ಪೇರೆಂಟ್ ಓರಿಯೆಂಟೇಷನ್‌ಗೆ 8400 ಫೀಸ್ ಅಂತೆ, ಇದನ್ನೆಲ್ಲಾ ನೋಡಿ ಈಗ ನಾನು ಒಂದು ಶಾಲೆಯನ್ನು ತೆರೆಯಬೇಕೆಂದು ಪ್ಲಾನ್ ಮಾಡ್ತಿದ್ದೇನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

    ವೈರಲ್ ಆಗುತ್ತಿರುವ ಶಾಲಾ ಶುಲ್ಕ ವಿವರದ ಫೋಟೋದಲ್ಲಿ ಅಡ್ಮಿಶನ್ ಫೀಸ್, ಪೇರೆಂಟ್ ಓರಿಯೆಂಟೇಷನ್ ಫೀಸ್, ವಾರ್ಷಿಕ ಶುಲ್ಕ ಎಲ್ಲವನ್ನು ಸೇರಿಸಿ ಬರೋಬ್ಬರಿ 1,51,656 ರೂ.ಶಾಲಾ ಶುಲ್ಕವನ್ನು ವಿಧಿಸಿರುವ ದೃಶ್ಯವನ್ನು ಕಾಣಬಹುದು.

    DAKSHINA KANNADA

    ಸುರತ್ಕಲ್ : ಯುವತಿಗೆ ಬೆ*ದರಿಕೆ ಪ್ರಕರಣ; ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ : ಶಾಸಕ ಭರತ್ ಶೆಟ್ಟಿ ಆಕ್ರೋಶ

    Published

    on

    ಸುರತ್ಕಲ್ :  ಸುರತ್ಕಲ್  ಇಡ್ಯಾ ನಿವಾಸಿ ಹಿಂದು ಯುವತಿ ಒಬ್ಬಳಿಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಅಶ್ಲೀ*ಲ ಮೆಸೇಜ್  ಹಾಗೂ ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆ*ದರಿಕೆ ಹಾಕಿದ ಯುವಕನ ವಿರುದ್ಧ  ಕ್ಷಿಪ್ರ ಕ್ರಮವನ್ನು  ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ  ಸಂ*ತ್ರಸ್ತ ಯುವತಿ ಆ*ತ್ಮಹ*ತ್ಯೆಗೆ ಯತ್ನ ಮಾಡಿದ್ದಾಳೆ ಎಂದು  ಶಾಸಕ  ಡಾ. ಭರತ್ ಶೆಟ್ಟಿ  ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವತಿ ಕುಟುಂಬಸ್ಥರು ದೂರು ದಾಖಲಿಸುವ ಸಂದರ್ಭವೇ ನಿರ್ಲಕ್ಷ್ಯವಾಗಿ ವರ್ತಿಸಿರುವ ಠಾಣಾ ಪೊಲೀಸರ ಕ್ರಮ ಖಂಡನೀಯ. ಯುವತಿ ಇದೀಗ ಜೀ*ವನ್ಮ*ರಣದ ಸ್ಥಿತಿಯಲ್ಲಿದ್ದು, ಇದರ ಜವಾಬ್ದಾರಿಯನ್ನು ಪೊಲೀಸರೇ ಹೊರಬೇಕು .  ಹಿಂದೂ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುನ್ನ, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ

    Continue Reading

    DAKSHINA KANNADA

    ರಿಕ್ಷಾದಲ್ಲಿ ಅ*ಕ್ರಮ ಗೋ ಸಾ*ಗಾಟ; ಓರ್ವ ಸೆರೆ, ಇಬ್ಬರು ಪರಾರಿ

    Published

    on

    ಮೂಡುಬಿದಿರೆ : ರಿಕ್ಷಾದಲ್ಲಿ ಅಕ್ರಮವಾಗಿ ಗೋವುಗಳನ್ನು ಹಿಂ*ಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಗೋವುಗಳನ್ನು ರಕ್ಷಿಸಿ, ಓರ್ವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಅಳಿಯೂರಿನಲ್ಲಿ ನಡೆದಿದೆ.

    ಮೂಡುಬಿದಿರೆ ತಾಲೂಕಿನ ಅಳಿಯೂರು ಎಂಬಲ್ಲಿ ಅತಿವೇಗವಾಗಿ ಸಾಗುತ್ತಿದ್ದ ರಿಕ್ಷಾವನ್ನು ಕಂಡು ಸಾರ್ವಜನಿಕರಿಗೆ ಸಂಶಯ ಮೂಡಿದ್ದು, ಕೂಡಲೇ ಭಜರಂಗದಳ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿದ್ದಾರೆ. ಅಳಿಯೂರು ಸುಮಂಗಲಿ ಸಭಾ ಭವನದ ಮುಂಭಾಗದಲ್ಲಿ ಆಟೋರಿಕ್ಷಾವನ್ನು ತಡೆದಾಗ ಅದರಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಗೋವು ಪತ್ತೆಯಾಗಿದೆ. ಕೂಡಲೇ, ರಿಕ್ಷಾದಲ್ಲಿದ್ದ ಇಬ್ಬರು ಅಲ್ಲಿಂದ ಪರಾರಿಯಾಗಿದ್ದು, ಜಲಲುದ್ದೀನ್ ಎಂಬಾತನನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

    ಇದನ್ನೂ ಓದಿ : ಕಾರ್ಕಳ : ಪ್ರಿಯಕರನ ಜೊತೆ ಸೇರಿ ಪತಿಯ ಕೊಂ*ದ ಪತ್ನಿ

    ಪಣಪಿಲ ಗುಡ್ಡಲಪಕ್ಕೆಯ ಕಂಬಳ ಓಟಗಾರ ದೀಕ್ಷಿತ್ ಎಂಬಾತ ಅ*ಕ್ರಮವಾಗಿ ಗೋವನ್ನು ಮಾರಾಟ ಮಾಡಿದ್ದಾನೆ ಎಂದು ಜಲಲುದ್ದೀನ್ ಹೇಳಿಕೆ ನೀಡಿದ್ದು ಪೊಲೀಸರು ದೀಕ್ಷಿತ್ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಭಜರಂಗದಳ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದ್ದಾರೆ. ಗೋವಿನ ಸ್ಥಿತಿ ಕಂಡು ಆಕ್ರೋಶ ವ್ಯಕ್ತಪಡಿಸಿದ ಅವರು ಪರಾರಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಲ್ಲಿ ಕೋರಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    Continue Reading

    BIG BOSS

    BBK11: ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ ಗೊತ್ತಾ?

    Published

    on

    ಬಿಗ್​ ಬಾಸ್​​ ಕನ್ನಡ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸದ್ಯ ಮನೆಯಲ್ಲಿ ರಾಜಕೀಯ ಟಾಸ್ಕ್​ ನಡೆಯುತ್ತಿದೆ. ಈಗಾಗಲೇ ಮನೆಯಲ್ಲಿ ಎರಡು ಬಣಗಳಾಗಿದ್ದು, ಇತ್ತಂಡಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಬಿಗ್​ ಬಾಸ್​​ ಟಾಸ್ಕ್​ನಲ್ಲಿ ಕೊಂಚ ಟ್ವಿಸ್ಟ್​ ಕೊಟ್ಟಿದ್ದಾರೆ. ಅದೇನೆಂದರೆ ಬಿಗ್​ ಬಾಸ್​ ಮನೆಗೆ ಜನಸಾಮಾನ್ಯರನ್ನು ಕರೆಸಲಾಗಿದೆ.

    ಹೌದು. ರಾಜಕೀಯ ಎಂದ ಮೇಲೆ ಜನರು ಇರಲೇಬೇಕು. ಜನರಿಂದಲೇ ಪ್ರತಿನಿಧಿಯೊಬ್ಬ ರಾಜಕಾರಣಿಯಾಗಿ ಆಯ್ಕೆಯಾಗುತ್ತಾನೆ. ಆದರೀಗ ಜನರನ್ನೇ ಮನೆಯೊಳಕ್ಕೆ ಕರೆಸಿಕೊಂಡಿರುವ ಬಿಗ್​ ಬಾಸ್​ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್​ ನೀಡಿದ್ದಾರೆ. ಆ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

    ಬಿಗ್​​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಎರಡು ಪಕ್ಷವನ್ನು ರಚಿಸಿದ್ದಾರೆ. ತೋಳ ಮತ್ತು ಹದ್ದು ಎಂಬ ಎರಡು ಪಕ್ಷ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. ಆದರೀಗ ಜನ ಸಾಮಾನ್ಯರ ಮುಂದೆ ತಮ್ಮ ಪಕ್ಷವನ್ನು ಗೆಲ್ಲಿಸುವುದೇ ಪ್ರಮುಖ ಗುರಿಯಾಗಿದೆ.

    ತೋಳ ಪಕ್ಷವು ಧರ್ಮ ಪರ ಸೇನಾ ಪಕ್ಷ ಎಂಬ ಧ್ಯೇಯದೊಂದಿಗೆ ಪ್ರಚಾರ ಮಾಡಿದರೆ, ಇತ್ತ ಹದ್ದು ಪಕ್ಷವು ಪ್ರಮಾಣಿಕ ಸಮರ್ಥ ನ್ಯಾಯವಾದಿ ಪಕ್ಷ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ.

    ಒಟ್ಟಿನಲ್ಲಿ ಮನೆಯೊಳಕ್ಕೆ ಕಾಲಿಟ್ಟ ಜನರ ಮನಗೆಲ್ಲುವುದೇ ರಾಜಕಾರಣಿಗಳ ಪ್ರಮುಖ ಗುರಿಯಾಗಿದೆ. ಜೊತೆಗೆ ಸ್ಪರ್ಧಿಗಳಿಗೆ ಜನಸಾಮಾನ್ಯರು ನಾನಾ ರೀತಿಯ ಪ್ರಶ್ನೆಯನ್ನು ಕೇಳುವ ಅವಕಾಶವನ್ನು ಕೊಡಲಾಗಿದೆ. ಇಂದಿನ ಎಪಿಸೋಡ್​ ಭಾರೀ ಕುತೂಹಲತೆಯಿಂದ ಕೂಡಿದ್ದು, ಜನಸಾಮಾನ್ಯರು ಮತ್ತು ಪಕ್ಷದ ಪ್ರತಿನಿಧಿಗಳ ಜೊತೆಗಿನ ಮಾತುಕತೆಯನ್ನು ಕಾಣಲು ವೀಕ್ಷಕರು ಕಾದು ಕುಳಿತ್ತಿದ್ದಾರೆ.

    Continue Reading

    LATEST NEWS

    Trending