Connect with us

    STATE

    ಪ್ರವಾಸಿಗರನ್ನು ಕೈಬೀಸಿ ಕರೆಯೋ ಕುರುಂಜಿ ಹೂ-12ವರ್ಷಗಳಿಗೊಮ್ಮೆ ಅರಳುವ ಈ ‘ಸುಮ’ದ ಸೊಬಗಿಗೆ ಸಾಟಿಯೇನಿದೆ..?

    Published

    on

    ಚಿಕ್ಕಮಗಳೂರು: ಇಂದು ಪ್ರಕೃತಿಯಲ್ಲಿ ನೂರಾರು ವಿಸ್ಮಯಗಳಿವೆ. ಮನುಷ್ಯನ ಊಹೆಗೂ ನಿಲುಕದ ಅಚ್ಚರಿಗಳಿವೆ. ಮಾನವ ತಾನು ಎಲ್ಲವನ್ನೂ ಸಾಧಿಸುತ್ತೇನೆಂದು ಹೊರಟರೆ ಮಾನವನ ಕೈಗೂ ನಿಲುಕದ ವೈಚಿತ್ರ್ಯಗಳನ್ನು ಈ ಪ್ರಕೃತಿ ಪ್ರದರ್ಶಿಸುತ್ತಿದೆ. ಅದಕ್ಕೆ ಒಂದು ಉದಾಹರಣೆಯೇ ಕುರುಂಜಿ ಹೂ.


    ಬರೋಬ್ಬರಿ 12 ವರ್ಷಗಳಿಗೊಮ್ಮೆ ಈ ನೀಲ ಕುರುಂಜಿ ಹೂ ಅರಳುತ್ತದೆ. ಆದರೆ ಇದನ್ನು ನೋಡಬೇಕೆಂದರೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ದತ್ತಪೀಠ ಮಾಣಿಕ್ಯಧಾರ ಜಲಪಾತದತ್ತ ಸಾಗಬೇಕು.

    ಸರಿಸುಮಾರು 2000ಕ್ಕೂ ಅಧಿಕ ಎಕ್ಕರೆ ಪಶ್ಚಿಮಘಟ್ಟದಲ್ಲಿ ಈ ಅತ್ಯಪರೂಪದ ನೀಲ ಕುರುಂಜಿ ಹೂ ಕಾಣಲು ಸಾಧ್ಯ. ಹೂವುಗಳ ಬೆಟ್ಟವನ್ನು ನೋಡಲೆಂದೇ ದೂರದೂರಿನಿಂದ ಜನತೆ ಪ್ರವಾಸಿಗರಾಗಿ ಆಗಮಿಸುತ್ತಿದ್ದಾರೆ.


    ಬೆಟ್ಟಗಳೆಲ್ಲಾ ನೀಲಿ ಹೊದ್ದಂತೆ ಭಾಸವಾಗುತ್ತಿದ್ದು, ಇಡೀ ಪಶ್ಚಿಮಘಟ್ಟದ ವನ ಸಿರಿಯೇ ನೀಲಿಯ ಚಿತ್ತಾರ ಬಿಡಿಸಿದ ಸೀರೆ ಉಟ್ಟಂತೆ ಕಂಡು ಬರುತ್ತಿದೆ.

    ದಕ್ಷಿಣ ಭಾರತದ ಇತರ ಕಡೆಗಳಲ್ಲಿ ಬಿಡುವ ಈ ಹೂವಿಗೆ ಇಷ್ಟೊಂದು ಗಾಢವಾದ ಬಣ್ಣವಿರುವುದಿಲ್ಲ ಎನ್ನುವುದು ಕೂಡಾ ವಿಶೇಷವಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಯಾಂತಸ್ ಕುಂತಿಯಾನ.

    ನೀಲಗಿರಿ ಬೆಟ್ಟವನ್ನು ಈ ಹೆಸರಿನಲ್ಲಿ ಗುರುತಿಸಲ್ಪಡಲು ಈ ಹೂವೇ ಕಾರಣ ಎಂದೂ ಜನ ಹೇಳುತ್ತಾರೆ.
    2006ರಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗಗಳಲ್ಲಿ ನೀಲಿಕುರುಂಜಿ ಅರಳಿ ನಿಂತಿತ್ತು. ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಬಳ್ಳಾರಿ ಜಿಲ್ಲೆಯ ಸಂಡೂರು, ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮೂನ್ನಾರ್ ಗಳಲ್ಲಿ ನೀಲಿಕುರುಂಜಿ ಅರಳುತ್ತದೆ.


    ಹೂವಾಗಿ ಒಣಗಿ ಬೀಜ ಉದುರಿ ಮತ್ತೆ ಗಿಡವಾಗಿ ಮತ್ತೆ ಹೂವಾಗುವುದಕ್ಕೆ ತೆಗೆದುಕೊಳ್ಳುವ ಅವಧಿ 12 ವರ್ಷ. ಒಮ್ಮೆ ಅರಳಿದರೆ ಸುಮಾರು 30ರಿಂದ 40 ದಿನಗಳ ಕಾಲ ಅರಳಿರುತ್ತದೆ.

    LATEST NEWS

    ದಕ್ಷಿಣ ಭಾರತದ ಜೈನ ಮುಖಂಡ, ಬೆಳಗಾವಿಯ ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲ ಇನ್ನಿ*ಲ್ಲ

    Published

    on

    ಬೆಳಗಾವಿ: ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾವಸಾಹೇಬ ಪಾಟೀಲ ಅವರು ನಿಧ*ನರಾಗಿದ್ದಾರೆ. ರಾವಸಾಹೇಬ ಪಾಟೀಲರು ಜೈನ ಮುಖಂಡರು, ಖ್ಯಾತ ಉದ್ಯಮಿಯೂ ಆಗಿದ್ದರು.

    ಖ್ಯಾತ ಉದ್ಯಮಿ ರಾವಸಾಹೇಬ ಪಾಟೀಲರಿಗೆ 80 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಿರಿಯ ಸಹಕಾರಿ ಧುರೀಣರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಇಂದು ಬೆಳಗ್ಗೆ ಇ*ಹಲೋಕವನ್ನು ತ್ಯ*ಜಿಸಿದ್ದಾರೆ.

    ರಾವಸಾಹೇಬ ಪಾಟೀಲರ ನಿ*ಧನದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳ ಆಂ*ಕ್ರದನ ಮುಗಿಲು ಮುಟ್ಟಿದೆ. ಮೃ*ತರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಪಟ್ಟಣದಲ್ಲಿ ಇಂದು ಸಂಜೆ ಅಂ*ತ್ಯಸಂ*ಸ್ಕಾರ ನಡೆಯಲಿದೆ.

    ರಾವಸಾಹೇಬ ಪಾಟೀಲರು ಅರಿಹಂತ ಉದ್ಯೋಗ ಸಮೂಹ ಸಂಸ್ಥೆಯ ಸಂಸ್ಥಾಪಕ‌ ಅಧ್ಯಕ್ಷರಾಗಿದ್ದರು. ಹಲವಾರು ಉದ್ಯಮ ಜೊತೆಗೆ ಅರಿಹಂತ ಬ್ಯಾಂಕ್‌ ಶಾಖೆಗಳನ್ನ ಹೊಂದಿದ್ದರು. ಸದ್ಯ ದಕ್ಷಿಣ ಭಾರತ ಜೈನ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    Continue Reading

    LATEST NEWS

    ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಮನೆಯಲ್ಲಿ ಅ*ಗ್ನಿ ಅವಘಡ

    Published

    on

    ಮಂಗಳೂರು/ಶಿರಸಿ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮನೆಯಲ್ಲಿ ಮಂಗಳವಾರ(ಜೂ.25) ಅ*ಗ್ನಿ ಅವಘ*ಡ ಸಂಭವಿಸಿದೆ.


    ಶಿರಸಿಯ ಕೆ.ಎಚ್.ಬಿ. ಕಾಲೋನಿಯಲ್ಲಿರುವ ಅನಂತಕುಮಾರ್ ಹೆಗಡೆಯವರ ಮನೆಯೊಳಗಿನ ಜಿಮ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂ*ಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

    ಬೆಂ*ಕಿಯಿಂದ ಜಿಮ್‌ನಲ್ಲಿ ಇದ್ದ ಹಲವು ಉಪಕರಣಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮಾಜಿ ಸಂಸದ ಮತ್ತು ಅವರ ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಘಟನೆ‌ ನಡೆದಿದೆ.

    Continue Reading

    LATEST NEWS

    ಪ್ರೀತಂ ಗೌಡ ಸೇರಿ ನಾಲ್ವರ ಮೇಲೆ ಎಫ್ಐಆರ್..! ಪ್ರಜ್ವಲ್ ಗೆ ಮತ್ತೊಂದು ಸಂಕಷ್ಟ

    Published

    on

    ಬೆಂಗಳೂರು : ಮಹಿಳೆ ಮೇಲೆ ಲೈಂ*ಗಿಕ ದೌರ್ಜ*ನ್ಯ ಆರೋಪದಡಿ ಈಗಾಗಲೇ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಅವರ ಮೇಲೆ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ಅಲ್ಲದೇ, ಬಿಜೆಪಿ ನಾಯಕ ಪ್ರೀತಂ ಗೌಡ ಮತ್ತು ಅವರ ಆಪ್ತರಾದ ಕಿರಣ, ಶರತ್ ವಿರುದ್ಧವೂ ಬೆಂಗಳೂರು ಸೈಬರ್​ ಕ್ರೈಂ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.


    ಐಪಿಸಿ ಸೆಕ್ಷನ್​ 354(A) ಲೈಗಿಂಕ ಕಿರುಕುಳ, 354(D) ಮಹಿಳೆಯ ನಿರಾಸ್ತಕಿ ಹೊರತಾಗಿ ಎಲೆಕ್ಟ್ರಾನಿಕ್ ಸಂಹವನಗಳನ್ನು ಪದೇ ಪದೇ ಅನುಸರಿಸುವ ಮೇಲ್ವಿಚಾರಣೆ ಮಾಡುವ ಅಪರಾಧ, 354(B) ಮಹಿಳೆ ಮೇಲೆ ಆಕ್ರಮಣ ಮಾಡುವ ಕ್ರಿಮಿನಲ್ ಬಲವನ್ನು‌ ಬಳಸುವ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ ಮತ್ತು 66ಇ ಐಟಿ ಆ್ಯಕ್ಟ್​​ ಅಡಿಯಲ್ಲಿ ನಾಲ್ವರ ವಿರುದ್ಧ ಎಫ್​​ಐಆರ್​ ದಾಖಲಾಗಿದೆ.

    ಮಹಿಳೆಯರ ಖಾಸಗಿ ದೃಶ್ಯಗಳ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ಬಹಿರಂಗ ಪಡಿಸಿದಕ್ಕೆ ಐಟಿ ಕಾಯಿದೆ ಸೆಕ್ಷನ್‌ 66ಇ ಎಫ್​ಐಆರ್​​ನಲ್ಲಿ ಸೇರಿಸಲಾಗಿದೆ.

    ಇದನ್ನೂ ಓದಿ : ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯ ಬಂಧನ

    ಸದ್ಯ ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೂನ್ 29ರವರೆಗೂ ಪ್ರಜ್ವಲ್ ರೇವಣ್ಣ ಅವರನ್ನು ಎಸ್​ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ನಡುವೆ ಅವರ ಸಹೋದರ ಸೂರಜ್ ರೇವಣ್ಣ ಅವರನ್ನು ಅಸಹಜ ಲೈಂ*ಗಿಕ ದೌರ್ಜ*ನ್ಯ ಪ್ರಕರಣದಡಿ ಬಂಧಿಸಲಾಗಿದೆ.

    Continue Reading

    LATEST NEWS

    Trending