Connect with us

    ಶಂಕಿತ ಉಗ್ರ ಆದಿತ್ಯನಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿ

    Published

    on

    ಶಂಕಿತ ಉಗ್ರ ಆದಿತ್ಯನಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿ

    ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್ ಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

    ಬೆಂಗಳೂರಿನಿಂದ ನಿನ್ನೆ ರಾತ್ರಿ ಕರೆತಂದಿದ್ದ ಮಂಗಳೂರು ಪೊಲೀಸರು, ಆರೋಪಿಯನ್ನು ಮಂಗಳೂರಿನ ಪ್ರಥಮ ದರ್ಜೆ 6 ನೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಿಚಾರಣೆಗಾಗಿ 15 ದಿನ ವಶಕ್ಕೆ ನೀಡಲು ಮನವಿ ಮಾಡಿದ್ದರು.

    ಪೊಲೀಸರ ಮನವಿಯನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಧೀಶರಾದ ಕಿಶೋರ್ ಕುಮಾರ್ ಕೆ.ಎನ್. 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು : ಭಾರಿ ಮಳೆಗೆ ಧರೆಗುರುಳಿದ ಮರ

    Published

    on

    ಮಂಗಳೂರು : ಬಿರುಬಿಸಿಲಿನಿಂದ ಕಂಗಾಲಾಗಿದ್ದ ಕರಾವಳಿಗರ ಮೇಲೆ ವರುಣ ಕೃಪೆ ತೋರಿದ್ದು, ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು(ಮೇ 21) ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದೆ.

     

    ಸಂಜೆಯಿಂದ ಶುರುವಾದ ಮಳೆಗೆ ಮಂಗಳೂರು ನಗರದ ಕರಂಗಲ್ಪಾಡಿ ಬಳಿ ಇರುವ ರಾಧಾ ಮೆಡಿಕಲ್ಸ್ ಎದುರುಗಡೆ ಭಾರಿ ಗಾತ್ರದ ಮರವೊಂದು ಧರೆಗುರುಳಿದ್ದು, ವಾಹನಗಳು ಜಖಂ ಗೊಂಡಿವೆ.

    ಘಟನೆಯಿಂದ ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮರದ ಕೊಂಬೆಗಳನ್ನು ಸ್ವಲ್ಪ ಮಟ್ಟಿಗೆ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಮಾಹಿತಿ ಲಭಿಸಿದೆ.

    Continue Reading

    DAKSHINA KANNADA

    ಮೊಬೈಲ್ ಇಂಟರ್ನೆಟ್ ಬೇಗ ಖಾಲಿ ಆಗ್ತಿದ್ಯಾ…? ಈ ಟ್ರಿಕ್ಸ್ ಫಾಲೋ ಮಾಡಿ ನೋಡಿ….!!

    Published

    on

    ಮಂಗಳೂರು: ಹೊಸ ಹೊಸ ಮೊಬೈಲ್ ಅಪ್ಲಿಕೇಶನ್ ಬಂದಂತೆ ನಾವು ಮೊಬೈಲ್ ಗೆ ಹೆಚ್ಚೆಚ್ಚು ಎಡಿಕ್ಟ್ ಆಗುತ್ತಿದ್ದೇವೆ. ಅದರ ಜೊತೆಗೆ ನೆಟ್ ಪ್ಯಾಕ್ ಕೂಡಾ ಇದೀಗ ದುಬಾರಿಯಾಗಿಬಿಟ್ಟಿದೆ. ಮೊಬೈಲ್​ನಲ್ಲಿ ಡೇಟಾ ಪ್ಯಾಕ್ ಹಾಕಿಸಿದ್ದರೂ, ಇಂಟರ್​ನೆಟ್ ಬೇಗ ಖಾಲಿ ಆಗ್ತಾ ಇದ್ಯಾ? ಅದಕ್ಕೆ ಕಾರಣವೇನು? ದಿನಕ್ಕೆ 2 ಜಿಬಿ ಡೇಟಾ ಇದ್ದರೂ ಸಾಕಾಗುತ್ತಿಲ್ಲವೇ? ರೀಲ್ಸ್ ನೋಡುತ್ತಲೇ ಡೇಟಾ ಖಾಲಿ ಆಗುತ್ತಿರುವ ಬಗ್ಗೆ ಮೆಸೇಜ್ ಬರುತ್ತಿದೆಯಾ? ಹಾಗಾದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೆಟ್​ ಬೇಗ ಖಾಲಿ ಆಗದಿರಲು ಏನು ಮಾಡಬೇಕು? ಡೇಟಾ ಪ್ಯಾಕ್ ಹೆಚ್ಚು ಇರುವಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ.

    • ಸ್ಮಾರ್ಟ್ಫೋನ್ ಗಳಲ್ಲಿ ಕೆಲವು ಆ್ಯಪ್ ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ. ಆಗ ನೆಟ್ ಬೇಗ ಖಾಲಿಯಾಗುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ ಗೆ ಹೋಗಿ ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಮಾತ್ರ ಅಪ್ಲಿಕೇಶನ್ ಗಳನ್ನು ಅಪ್ಡೇಟ್ ಮಾಡೋದು ಒಳಿತು.
    • ಆಂಡ್ರಾಯ್ಡ್ ಫೋನ್ ಗಳು ಡೇಟಾ ಉಳಿತಾಯ ಮೋಡ್ ಎಂಬ ಆಯ್ಕೆಯನ್ನು ಹೊಂದಿದೆ. ಈ ಆಯ್ಕೆ ನಿಮ್ಮ ಮೊಬೈಲ್ ನಲ್ಲಿದ್ದು ಅದನ್ನು ಸಕ್ರಿಯಗೊಳಿಸಿದ್ರೆ ಡೇಟಾ ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ನಿಮ್ಮ ಫೋನ್ ನಲ್ಲಿ ಅನಗತ್ಯ ಡೇಟಾ ಪೋಲು ಆಗುವುದನ್ನು ತಡೆಯುತ್ತದೆ. ಇದರಿಂದ ನಿಮಗೆ ಬಳಕೆಗೆ ಡೇಟಾ ಹೆಚ್ಚು ಲಭ್ಯ ಆಗುತ್ತದೆ.
    • ಇತ್ತೀಚಿನ ದಿನಗಳಲ್ಲಿ ಗೂಗಲ್ ಮ್ಯಾಪ್ ಆ್ಯಪ್ ಬಳಸೋದು ಹೆಚ್ಚಾಗಿದೆ. ಇದು ಅತ್ಯಂತ ಹೆಚ್ಚು ಡೇಟಾವನ್ನು ಬಳಸಿಕೊಳ್ಳುತ್ತೆ‌. ಹಾಗಿರುವಾಗ ಇಂತಹ ಆ್ಯಪ್ ಗಳನ್ನು ಆಫ್ ಲೈನ್ ನಲ್ಲಿ ಉಪಯೋಗಿಸಬೇಕೇ ಹೊರತು ಆನ್ಲೈನ್ ನಲ್ಲಲ್ಲ. ಈ ಆ್ಯಪ್ ನ ಅಪ್ಡೇಟ್ ನ್ನು ಕೂಡಾ ವೈಫೈನಲ್ಲೇ ಮಾಡೋದು ಉತ್ತಮ.‌
    • ನಾವು ಎಲ್ಲಿಯಾದರೂ ಸಂಚರಿಸುತ್ತಿದ್ದರೆ ಯೂಟ್ಯೂಬ್ ವೀಡಿಯೋಗಳನ್ನು ಅಥವಾ ಇನ್ನಾವುದೋ ಆ್ಯಪ್ ಬಳಸೋದು ಹೆಚ್ಚು. ಸಂಚಾರದ ಸಂದರ್ಭದಲ್ಲಿ ವೈಫೈ ಅನುಕೂಲತೆ ಇದ್ದರೆ ವೀಡಿಯೋ ಆಗಲೇ ಡೌನ್ಲೋಡ್ ಮಾಡಿಡುವುದು ಉತ್ತಮ. ನಂತರ ಆಫ್ಲೈನಲ್ಲೇ ಅದನ್ನು ವೀಕ್ಷಿಸಬಹುದು.
    • ವೀಡಿಯೋ ಮತ್ತು ಫೋಟೋಗಳನ್ನು ಆಟೋಮ್ಯಾಟಿಕ್ ಡೌನ್ ಲೋಡ್ ಆಪ್ಶನ್ ನಿಂದ ತೆಗೆಯಿರಿ. ಆಗ ಡೇಟಾ ಉಳಿತಾಯವಾಗುತ್ತದೆ.
    Continue Reading

    BELTHANGADY

    ಬಸ್ ನಿಲ್ದಾಣಕ್ಕೆ ಬಂಗೇರ ಹೆಸರು ; ನುಡಿನಮನದಲ್ಲಿ ಸಿಎಂ ಘೋಷಣೆ..!

    Published

    on

    ಬೆಳ್ತಂಗಡಿ: ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಮಾಜಿ ಸಚಿವ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಮತ್ತು ವಸಂತ ಬಂಗೇರ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಅವತ್ತಿನಿಂದ ಅವರ ಉಸಿರಿನ ಕೊನೆ ಗಳಿಗೆಯವರೆಗೂ ನನ್ನ ಸ್ನೇಹಿತರಾಗಿದ್ದರು. ಇವರ ಅಗಲಿಕೆ ನನಗೆ ಅಪಾರ ದುಃಖ ತಂದಿದೆ ಎಂದರು.

    ಸತ್ಯ, ಬಡವರ ಪರ ಕಾಳಜಿ, ರಾಜಿ ರಹಿತ ಜನಪರ ಕೆಲಸಗಳ ಮೂಲಕ ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿಕೊಂಡವರು ಬಂಗೇರ ಅವರು ನನ್ನ ಬಳಿಗೆ ಯಾವತ್ತೂ ವೈಯುಕ್ತಿಕ ಕೆಲಸಗಳಿಗಾಗಿ ಬಂದಿಲ್ಲ. ಬಂದಾಗಲೆಲ್ಲಾ ಜನರ ಕೆಲಸಗಳಿಗಾಗಿ ಬೇಡಿಕೆ ಇಟ್ಟಿದ್ದರು. 2023 ರಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಈ ಬಾರಿ ಸ್ಪರ್ಧಿಸಿದ್ದರೆ ಖಂಡಿತಾ ಗೆದ್ದು ಮಂತ್ರಿಯಾಗುತ್ತಿದ್ದರು ಎಂದರು.

    ವಸಂತ ಬಂಗೇರ ಅವರ ಸಾವಿನಿಂದ ರಾಜ್ಯ, ರಾಜಕಾರಣ ಅತ್ಯಂತ ಬಡವಾಗಿದೆ. ಬಂಗೇರ ಅವರ ಆರೋಗ್ಯ ಚೇತರಿಸಿಕೊಳ್ಳುತ್ತದೆ, ಮತ್ತಷ್ಟು ಕಾಲ ನಮ್ಮ ಜೊತೆಗೆ ಇರುತ್ತಾರೆ ಎನ್ನುವ ಆಸೆ ಇತ್ತು. ಆದರೆ ನಮ್ಮನ್ನು ಅಗಲಿಬಿಟ್ಟಿರುವುದು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಮಾಜಿ ಸಚಿವ ಜನಾರ್ಧನ ಪೂಜಾರಿ, ಸ್ಪೀಕರ್ ಯು.ಟಿ.ಖಾದರ್ ಮತ್ತು ವಸಂತ ಬಂಗೇರ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

    ಬೆಳ್ತಂಗಡಿ  ಬಸ್‌ ನಿಲ್ದಾಣಕ್ಕೆ ಬಂಗೇರ ಹೆಸರಿಡಲು ಸರ್ಕಾರ ಸಿದ್ದ

    ಬೆಳ್ತಂಗಡಿ ಬಸ್‌ ನಿಲ್ದಾಣಕ್ಕೆ ವಸಂತ ಬಂಗೇರ ಅವರ ಹೆಸರಿಡಲು ಸರ್ಕಾರ ಸಿದ್ದವಿದೆ. ಜೊತೆಗೆ ಅವರ ಪ್ರತಿಮೆ ನಿರ್ಮಿಸಿ ವೃತ್ತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದು ಸಿಎಂ ಭರವಸೆ ನೀಡಿದರು.

    Continue Reading

    LATEST NEWS

    Trending