Connect with us

    ಕಟೀಲೇಶ್ವರಿಯ ಸನ್ನಿಧಿಯಲ್ಲಿ ಇಮ್ಮಡಿಯಾದ ಸಂಭ್ರಮ : ಭಾನುವಾರ ಲಕ್ಷ ದಾಟಿದ ಭಕ್ತರ ಸಂಖ್ಯೆ..!!

    Published

    on

    ಕಟೀಲೇಶ್ವರಿಯ ಸನ್ನಿಧಿಯಲ್ಲಿ ಇಮ್ಮಡಿಯಾದ ಸಂಭ್ರಮ : ಭಾನುವಾರ ಲಕ್ಷ ದಾಟಿದ ಭಕ್ತರ ಸಂಖ್ಯೆ..!!

    ವರದಿ: ಪವಿತ್ರ ಪೂಜಾರಿ
    ಮಂಗಳೂರು:ನಂಬಿದ ಭಕ್ತರಿಗೆ ಅಮ್ಮನಾಗಿ ಸಲಹೋ ಕಟೀಲು ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಸದಾ ಭಕ್ತಿರಿಂದ ತುಂಬಿರುವ ಪುಣ್ಯ ಸ್ಥಳ. ಕಟೀಲಮ್ಮನ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂಭ್ರಮವನ್ನು ಕಣ್ಣಾರೆ ಕಾಣಲು ರಜಾದಿನವಾದ ಇಂದು ( ಭಾನುವಾರ) ಊರು ಪರವೂರಿನಿಂದ ಭಕ್ತರ ದಂಡು ಸನ್ನಿಧಿಗೆ ಆಗಮಿಸುತ್ತಿದೆ.

    ಭ್ರಾಮರಿ ಅಮ್ಮನ ನೆಲೆ ಬೀಡು ಇಂದು ಭಕ್ತಾದಿಗಳ ಕಲರವಕ್ಕೆ ಸಾಕ್ಷಿಯಾಗಿತ್ತು, ಕುಟುಂಬ ಸಮೇತರಾಗಿ ಭಕ್ತರ ದಂಡು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅಮ್ಮನ ದರ್ಶನಕ್ಕೆ ತಾಳ್ಮೆಯಿಂದ ಸಾಲು ಸಾಲಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

    ಜಿಲ್ಲೆಯವರು ಮಾತ್ರವಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಭಕ್ತರ ಆಗಮನವಾಗಿದ್ದು, ಗಣ್ಯರ ಆಗಮನವೂ ಸಂಭ್ರಮಕ್ಕೆ ಕಳೆಕೊಟ್ಟಿದೆ. ತಾಯಿಯ ಕ್ಷೇತ್ರದ ಮಹಿಮೆ ಅರಿತ ಅವರು, ಬ್ರಹ್ಮಕಲಶೋತ್ಸವದ ಅಚ್ಚುಕಟ್ಟಾದ ವ್ಯವಸ್ಥೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇಂದು ಒಟ್ಟಾರೆ ಕ್ಷೇತ್ರ ಸಂದರ್ಶಿಸಿದ ಭಕ್ತರ ಸಂಖ್ಯೆ ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ.ಇವತ್ತು 75 ಸಾವಿರಕ್ಕೂ ಅಧಿಕ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

    ಭಕ್ತರಲ್ಲಿ ಮನವಿ ಮಾಡಿದ ಅಸ್ರಣ್ಣರು :
    ಸಾಗರೋಪದಿಯಲ್ಲಿ ಕ್ಷೇತ್ರಕ್ಕೆ ಭಕ್ತರು ಆಗಮಿಸುತ್ತಿವುದರಿಂದ ಎಲ್ಲರಿಗೂ ದೇವಿಯ ದರ್ಶನ ಭಾಗ್ಯ ಕಷ್ಟ ಸಾಧ್ಯ ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಜನವರಿ ೩೧ರವರೆಗೆ ಮಧ್ಯಾಹ್ನದ ಬಳಿಕ ಕ್ಷೇತ್ರಕ್ಕೆ ಆಗಮಿಸಿದರೆ ದೇವಿಯ ದರ್ಶನ ಪಡೆಯಬಹುದು ಇಲ್ಲದಿದ್ದರೆ ಭಕ್ತಾಧಿಗಳಿಗೆ ನಿರಾಸೆಯಾಗಬಹುದು. ಫೆಬ್ರವರಿ ೧ರನಂತರ ಮುಂಜಾನೆಯಿಂದಲೇ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹರಿನಾರಾಯಣ ಅಸ್ರಣ್ಣರು ಮನವಿ ಮಾಡಿದ್ದಾರೆ.

    ವಿಡಿಯೋಗಾಗಿ..

    Click to comment

    Leave a Reply

    Your email address will not be published. Required fields are marked *

    BIG BOSS

    BBK11: ಗೋಲ್ಡ್ ಸುರೇಶ್‌ಗೆ ಶಾಪ ಹಾಕಿದ ಅನುಷಾ..ಕಾರಣವೇನು ಗೊತ್ತಾ..?

    Published

    on

    ಕನ್ನಡದ ಬಿಗ್​ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಬಿಗ್​ಬಾಸ್​ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್​ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ರಕ್ಷಕರು ತಮ್ಮ ತಂಡದ ಡ್ರಮ್‍ನಿಂದ ನೀರು ಹೊರಗಡೆ ಹರಿಯದಂತೆ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ಕೊಟ್ಟು ನೀರು ಡ್ರಮ್‍ನಿಂದ ಹೋಗುವಂತೆ ಮಾಡುತ್ತಿದ್ದರು.

    ಆಗ ಗೋಲ್ಡ್​ ಸುರೇಶ್​ ತಮ್ಮ ಡ್ರಮ್‍ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್​ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಮತ್ತೆ ಇದೇ ವಿಚಾರಕ್ಕೆ ಟಾಸ್ಕ್​ ಮುಗಿದ ಬಳಿಕ ಗಲಾಟೆಯಾಗಿದೆ.

    ಇನ್ನೂ, ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ದೊಡ್ಡ ಅವಕಾಶವೊಂದನ್ನು ಕೊಟ್ಟಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್​ಬಾಸ್​ ಈ ಟಾಸ್ಕ್​ಗಳನ್ನು ನೋಡಿದ್ದಾರೆ. ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.

    Continue Reading

    LATEST NEWS

    ಬರೋಬ್ಬರಿ 4ಕೋಟಿ ರೂ.ಗೆ ಹರಾಜಾದ ಈ ನಾಣ್ಯ; ಇದರ ವಿಶೇಷತೆ ಏನು?

    Published

    on

    ಅಮೆರಿಕದ ಗ್ರೇಟ್ ಕಲೆಕ್ಷನ್ ಹೆಸರಿನ ಸಂಸ್ಥೆಯೊಂದು ನಡೆಸಿದ ಹರಾಜಿನಲ್ಲಿ ಅಪರೂಪದ ನಾಣ್ಯವೊಂದು ಸುಮಾರು 4.25 ಕೋಟಿ ರೂ.ಗೆ ಹರಾಜಾಗಿದೆ. ಈ ಬಗ್ಗೆ ಕ್ಯಾಲಿಫೋರ್ನಿಯಾ ಗ್ರೇಟ್ ಕಲೆಕ್ಷನ್ಸ್ ನ ಅಧ್ಯಕ್ಷ ಇಯಾನ್ ರಸೆಲ್ ಮಾಹಿತಿ ನೀಡಿದ್ದು, ಸದ್ಯ ಒಂದು ನಾಣ್ಯ ಬರೋಬ್ಬರಿ 4ಕೋಟಿಗೆ ಹರಾಜಾಗಿರುವುದು ಎಲ್ಲೆಡೆ ಸದ್ದು ಮಾಡುತ್ತಿದೆ.

    ಈ ನಾಣ್ಯವನ್ನು 1975 ರಲ್ಲಿ ತಯಾರಿಸಲಾಗಿದ್ದು, ಇದು 20ನೇ ಶತಮಾನದ ಅಪರೂಪದ ನಾಣ್ಯಗಳಲ್ಲೊಂದು. ಈ ನಾಣ್ಯ ಅಮೆರಿಕದ ಕಾಸಿನದು ಎಂದು ಹರಾಜು ಏಜೆನ್ಸಿ ಹೇಳಿದೆ. ಈ ನಾಣ್ಯದ ಮೇಲೆ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಚಿತ್ರವಿರುವುದನ್ನು ಕಾಣಬಹುದು. ಇದರ ಹೊರತಾಗಿ ಪ್ರತಿ ನಾಣ್ಯದ ಮೇಲೆ ಮಾಡಲಾಗುವ ‘ಎಸ್’ ಚಿಹ್ನೆಯನ್ನು ಈ ನಾಣ್ಯದಲ್ಲಿ ಮಾಡಲಾಗಿಲ್ಲ. ಇಡೀ ಪ್ರಪಂಚದಲ್ಲಿ ಈ ರೀತಿಯ ಎರಡು ನಾಣ್ಯಗಳು ಮಾತ್ರ ಇವೆ, ಅದಕ್ಕಾಗಿಯೇ ಈ ನಾಣ್ಯವು ತುಂಬಾ ಅಪರೂಪವಾಗಿದೆ.

    ಗ್ರೇಟ್ ಕಲೆಕ್ಷನ್ ಹೆಸರಿನ ಹರಾಜು ಸಂಸ್ಥೆಯು ಈ ಅಪರೂಪದ ನಾಣ್ಯದ ಹರಾಜನ್ನು ಆನ್‌ಲೈನ್‌ನಲ್ಲಿ ನಡೆಸಿತು. ಹರಾಜಿನ ಮೊದಲು, ಈ ನಾಣ್ಯವು ಓಹಿಯೋದ ಮೂವರು ಸಹೋದರಿಯರ ಬಳಿ ಇತ್ತು. ಆದರೆ, ಅವರ ಗುರುತನ್ನು ಗೌಪ್ಯವಾಗಿ ಇರಿಸಲಾಗಿದೆ. 1978ರಲ್ಲಿ ಈ ನಾಣ್ಯಗಳಲ್ಲಿ ಒಂದನ್ನು 15 ಲಕ್ಷ ರೂ.ಗೆ ಮಾರಾಟ ಮಾಡಿತ್ತು.

    Continue Reading

    LATEST NEWS

    ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್

    Published

    on

    ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್ ಹಾಗೂ ಟ್ರಂಪ್ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ವಿರುದ್ದ ಟ್ರಂಪ್ ಗೆಲುವು ಸಾಧಿಸಿದ್ದಾರೆ.

    ಅಮೆರಿಕ(ಯುಇಎಸ್‌)ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಂಡ ಮುನ್ನಡೆ ಸಾಧಿಸಿರುವ ಬೆನ್ನಲ್ಲಿ ಇದು ಅಮೆರಿಕನ್ನರಿಗೆ ಅದ್ಭುತ ಗೆಲುವು ನಾವು ಇತಿಹಾಸ ನಿರ್ಮಿಸಿದ್ದೇವೆ ಎಂದು ಟ್ರಂಪ್ ಗೆಲುವನ್ನು ಘೋಷಿಸಿಕೊಂಡಿದ್ದಾರೆ.

    ಫ್ಲೋರಿಡಾದ ಪಾಮ್ ಬೀಚ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಹಿಂದೆಂದೂ ಕಂಡಿರದ ರಾಜಕೀಯ ಗೆಲುವು. ನಾನು ಅಮೆರಿಕಾದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಗೆಲುವು “ಅಮೆರಿಕನ್ ಜನರಿಗೆ ಭವ್ಯವಾದ ಗೆಲುವು” ಎಂದು ಕರೆದರು.ನಾವು ಇತಿಹಾಸ ನಿರ್ಮಿಸಿದ್ದೇವೆ, ಇದು ಅಮೆರಿಕಕ್ಕೆ ಸುವರ್ಣ ಯುಗ.ಈ ವರ್ಷದ ಆರಂಭದಲ್ಲಿ ಹತ್ಯೆಯ ಯತ್ನದಿಂದ ಬದುಕುಳಿದ ಟ್ರಂಪ್, “ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದ್ದಾನೆ ಎಂದು ಹೇಳಿದರು.

    ಇದು ಹಿಂದೆಂದೂ ಯಾರೂ ನೋಡದ ಚಳುವಳಿಯಾಗಿದೆ. ನಾವು ನಮ್ಮ ಗಡಿಗಳನ್ನು ನಮ್ಮ ದೇಶದ ಎಲ್ಲಾ ಸಮಸ್ಯೆಯನ್ನು ಸರಿಪಡಿಸುತ್ತೇವೆ. ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ 25 ರಾಜ್ಯಗಳಲ್ಲಿ ಮತ್ತು ಕಮಲಾ ಹ್ಯಾರಿಸ್ 16 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗೆಲುವಿಗೆ 270 ಸ್ಥಾನಗಳಲ್ಲಿ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ.

    ಡೋನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಟ್ರಂಪ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಮೋದಿ, ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ಸಂಬಂಧ, ವ್ಯಾಪಾರ ವಹಿವಾಟು ಮತ್ತಷ್ಟು ಉತ್ತಮಪಡಿಸಲು ಜಂಟಿಯಾಗಿ ಹೆಜ್ಜೆ ಹಾಕೋಣ ಎಂದಿದ್ದಾರೆ.

    ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರಿಗೆ ಐತಿಹಾಸಿಕ ಚುನಾವಣಾ ಗೆಲುವಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸನ್ನು ಮುಂದುವರೆಸುತ್ತಿದ್ದೀರಿ. ಭಾರತ-ಅಮೆರಿಕ ವ್ಯಾಪಕ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡೋಣ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸೋಣ ಎಂದು ಮೋದಿ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.

    Continue Reading

    LATEST NEWS

    Trending