ಕರಾವಳಿಯಲ್ಲೂ ಪ್ರತಿಧ್ವನಿಸಿದ ಬಿಸಿಯೂಟ ನೌಕರರ ಪ್ರತಿಭಟನೆ
ಮಂಗಳೂರು: ಬಿಸಿಯೂಟ ನೌಕರರ ವೇತನ ಏರಿಕೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಹಾಗೂ ಸಿಐಟಿಯು ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಜಿಲ್ಲಾ ಪಂಚಾಯತ್ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ನಡೆಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಸಿಯೂಟ ನೌಕರರ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮಾತನಾಡಿ, ಬಿಸಿಯೂಟ ನೌಕರರ ವೇತನ ಹೆಚ್ಚು ಮಾಡಬೇಕೆಂದು ಹಲವಾರು ಬಾರಿ ಹೋರಾಟ ಮಾಢಿದ್ದೇವೆ. ಅ ಸಂದರ್ಭದಲ್ಲಿ ಒಂದು ಸಾವಿರ ರೂಪಾಯಿ ಹೆಚ್ಚಿಸುವುದಾಗಿ ನಮಗೆ ಸರಕಾರ ಭರವಸೆಯನ್ನು ಕೊಟ್ಟಿತ್ತು. ಆ ಭರವಸೆ ಭರವಸೆಯಾಗಿಯೇ ಉಳಿದಿದೆ. ಸ್ಥಳೀಯ ಜನಪ್ರತಿನಿಧಿಗಳಿಗೂ ಕೂಡ ಬಜೆಟ್ ನಲ್ಲಿ ನಮ್ಮ ಬೇಡಿಕೆಗೆ ಅನುದಾನ ಒದಗಿಸಬೇಕೆಂಬ ಬಗ್ಗೆ ಕಿಂಚಿತ್ತು ಯೋಚನೆ ಬರಲಿಲ್ಲ. ಸರಕಾರದಲ್ಲಿರುವವರೆಲ್ಲರೂ ಮಾತೆಯರು ಅನ್ನುವ ಪದವನ್ನು ಬಳಸುತ್ತಾರೆ
ಆದರೆ ಅವರ ಕಷ್ಟಗಳನ್ನು ಆಲಿಸುವವರು ಅಲ್ಲಿ ಯಾರು ಇಲ್ಲ ಅಂತ ಸರಕಾರದ ವಿರುದ್ದ ಹರಿಹಾಯ್ದರು..2001 ರಲ್ಲಿ ಪ್ರಾರಂಭವಾದ ಬಿಸಿಯೂಟ ಯೋಜನೆ ಇಂದಿಗೂ ಯಶಸ್ವಿಯಾಗು ನಡೆದುಕೊಂಡು ಬರುತ್ತಿದೆ. ಆದ್ರೆ ಬಿಸಿಯೂಟದ ಪ್ರಾರಂಭದಲ್ಲಿ 300ರಂತೆ ಸಂಬಳ ನೀಡುತ್ತಿದ್ದು, 19 ವರ್ಷಗಳ ಬಳಿಕ 2700 ರೂ ಸಂಭಳ ಮಾಡಿದ್ದಾರೆ.ಪ್ರತಿ ವರ್ಷವೂ ನಾವು ಹೋರಾಟ ಮಾಢುತ್ತಿದ್ದೇವೆ ಆದರೆ ನಮ್ಮ ಹೋರಾಟವನ್ನು ಪರಿಗಣಿಸುತ್ತಿಲ್ಲ ಮಾತ್ರವಲ್ಲದೆ ಯಾವೊಂದು ಬಜೆಟ್ ನಲ್ಲೂ ಸೇರಿಸದಿರುವುದು ವಿಪರ್ಯಾಸ ಅಂತ ಬೇಸರ ವ್ಯಕ್ತಪಡಿಸಿದರು.. ಮಾತ್ರವಲ್ಲದೆ ಪೊಲೀಸ್ ಇಲಾಖೆ ಕೂಡ ನಮ್ಮ ಹೋರಾಟಕ್ಕೆ ಎಡಗಾಲು ಇಟ್ಟಿದೆ ಅಂತ ಆರೋಪಿಸಿದರು..ಈ ಸಮದರ್ಭದಲ್ಲಿ ಸಿಐಟಿಯು ಜಿಲ್ಲಾ ಸದಸ್ಯ ಜಯಂತ್ ಯು.ನಾಯಕ್, ಜಯಂತಿ ಬಿ ಶೆಟ್ಟಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ವಿಡಿಯೋಗಾಗಿ
DAKSHINA KANNADA
ಪತ್ನಿ, ಮಗುವನ್ನು ಕೊಂ*ದು ಪತಿ ಆ*ತ್ಮಹತ್ಯೆ ಪ್ರಕರಣ; ಡೆ*ತ್ ನೋಟ್‌ನಲ್ಲಿ ಏನಿತ್ತು ಗೊತ್ತಾ?
ಮುಲ್ಕಿ : ಕಾರ್ತಿಕ್ ಎಂಬಾತ ಹೆಂಡತಿ ಮತ್ತು ಮಗುವನ್ನು ಗ್ಲಾಸ್ ಚೂರಿನಿಂದ ತಿ*ವಿದು ಕೊ*ಲೆ ಮಾಡಿ ಬಳಿಕ ತಾನು ರೈಲಿಗೆ ತಲೆಕೊಟ್ಟು ಆ*ತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮುಲ್ಕಿ ಬಳಿಯ ಬೆಳ್ಳಾಯರು ಎಂಬಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಪು*ಡಿ ಪು*ಡಿಯಾಗಿದ್ದು, ಯಾರೋ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಮುಲ್ಕಿ ಪೊಲೀಸರಿಗೆ ಲಭಿಸಿತ್ತು. ಯುವಕನ ದೇಹ ಛಿ*ದ್ರಗೊಂಡಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಮುಲ್ಕಿಯ ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದರು. ಯುವಕನ ಮೃ*ತದೇಹ ಸಿಕ್ಕಿದ ತುಸು ದೂರದಲ್ಲೇ ಬೈಕ್ ಒಂದು ಪತ್ತೆಯಾಗಿತ್ತು. ಆತನ ದೇಹದಲ್ಲಿ ಬೇರಾವುದೇ ಗುರುತು ಪತ್ರಗಳಿರಲಿಲ್ಲ. ಶನಿವಾರ ಬೆಳಗ್ಗೆ ಸ್ಥಳದಲ್ಲಿ ಬೈಕ್ ಕೀ ಸಿಕ್ಕಿದ್ದು ಬೈಕನ್ನು ಚೆಕ್ ಮಾಡಿದಾಗ, ಅದರಲ್ಲಿ ಆರ್ ಸಿ ಕಾರ್ಡ್ ಸಿಕ್ಕಿದ್ದರಿಂದ ಪಕ್ಷಿಕೆರೆಯ ವಿಳಾಸ ತೋರಿಸಿತ್ತು. ಪಕ್ಷಿಕೆರೆಯಲ್ಲಿ ಜನಾರ್ದನ ಭಟ್ ಹೊಟೇಲ್ ನಡೆಸುತ್ತಿದ್ದು, ಜನಾನುರಾಗಿ ವ್ಯಕ್ತಿಯಾಗಿದ್ದರು. ಅವರ ಮಗನೇ ಮೃ*ತಪಟ್ಟ ಕಾರ್ತಿಕ್ ಎಂದು ತಿಳಿದು ಪೊಲೀಸರು ಅವರ ಬಳಿಗೆ ತೆರಳಿದ್ದರು.
ಮಧ್ಯಾಹ್ನ 1.30ರ ಸುಮಾರಿಗೆ ಪೊಲೀಸರು ಜನಾರ್ದನ ಭಟ್ ಅವರ ಹೊಟೇಲಿಗೆ ತೆರಳಿ, ಕಾರ್ತಿಕ್ ಬಗ್ಗೆ ಕೇಳಿದಾಗ ನಿನ್ನೆ ಬೆಳಗ್ಗೆ ಮನೆಯಲ್ಲಿದ್ದರು. ಸಂಜೆ ಬಾಗಿಲು ಹಾಕ್ಕೊಂಡಿತ್ತು. ಇವತ್ತು ಬೆಳಗ್ಗೆ ಕಾಣಿಸಿರಲಿಲ್ಲ. ನಾವು ಬೆಳಗ್ಗೆಯೇ ಹೊಟೇಲಿಗೆ ಬಂದಿದ್ದವು ಎಂದು ತಿಳಿಸಿದ್ದಾರೆ. ಫೋನ್ ಮಾಡಿದರೆ ಮಗ ಮತ್ತು ಸೊಸೆಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ಮನೆಗೆ ತೆರಳಿ, ಅವರಿದ್ದ ಕೋಣೆಯ ಬಾಗಿಲು ಒಡೆದು ನೋಡಿದಾಗ ಬೆಡ್ ನಲ್ಲಿ ಮಗು ಕೊ*ಲೆಯಾದ ಸ್ಥಿತಿಯಲ್ಲಿ ಬಿದ್ದಿತ್ತು. ಅಲ್ಲಿಯೇ ಕೆಳಗಡೆ ಸೊಸೆ ಪ್ರಿಯಾಂಕ ಮೃ*ತದೇಹ ಪತ್ತೆಯಾಗಿದೆ. ಕಾರ್ತಿಕನ ವೃದ್ಧ ತಂದೆ, ತಾಯಿ ಅದೇ ಮನೆಯಲ್ಲಿ ನಿನ್ನೆ ರಾತ್ರಿ ಕಳೆದಿದ್ದರೂ, ಮನೆಯಲ್ಲಿ ಸೊಸೆ, ಮಗು ಮೃ*ತಪಟ್ಟಿರುವುದು ಅವರ ಗಮನಕ್ಕೆ ಬಂದಿರಲಿಲ್ಲ.
ಇದನ್ನೂ ಓದಿ : ಮೂಲ್ಕಿ : ಪತ್ನಿ, ಮಗುವನ್ನು ಹ*ತ್ಯೆಗೈದು ಆತ್ಮಹ*ತ್ಯೆ ಮಾಡಿಕೊಂಡ ಪತಿ
ಒಂದೇ ಮನೆಯಲ್ಲಿದ್ದರೂ ಮಗ, ಸೊಸೆ, ದಿನವೂ ಹೊಟೇಲೇ ತಮ್ಮ ಜಗತ್ತು ಅಂದ್ಕೊಂಡಿದ್ದ ಜನಾರ್ದನ ಭಟ್ ಮತ್ತು ಶ್ಯಾಮಲಾ ಜೊತೆಗೆ ಮಾತುಕತೆ ಇರಲಿಲ್ಲ. ಹೀಗಾಗಿ ಕೆಲವೊಮ್ಮೆ ಮಗ, ಸೊಸೆ ಮನೆಯಿಂದ ಹೊರಗೆ ಹೋಗುತ್ತಿದ್ದರೂ, ತಡವಾಗಿ ಮನೆಗೆ ಬರುತ್ತಿದ್ದರೂ, ಇವರು ಚಿಂತೆ ಮಾಡುತ್ತಿರಲಿಲ್ಲ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ (ನ.8) ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿ ಮತ್ತು ಮಗುವನ್ನು ಗ್ಲಾಸಿನ ಚೂರಿನಿಂದ ತಿ*ವಿದು ಹ*ತ್ಯೆ ಮಾಡಲಾಗಿದೆ. ಅಲ್ಲದೆ, ಮನೆಯ ಕೋಣೆಯಲ್ಲಿ ಸೀರೆಯನ್ನು ಬಿಗಿದ ರೀತಿ ಕಂಡುಬಂದಿದ್ದು, ಕಾರ್ತಿಕ್ ಆ*ತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎನ್ನುವ ಸಂಶಯ ವ್ಯಕ್ತವಾಗಿದೆ. ಅಲ್ಲದೆ, ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಸುದೀರ್ಘ ಡೆತ್ ನೋಟ್ ಇದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆದಿಟ್ಟಿದ್ದಾನೆ.
ತಮ್ಮ ಶ*ವಗಳನ್ನು ಪತ್ನಿಯ ತಂದೆ, ತಾಯಿಗೆ ನೀಡುವಂತೆ ಹೇಳಿದ್ದು, ತಂದೆ, ತಾಯಿ ತಮ್ಮ ಅಂತ್ಯ ಸಂಸ್ಕಾರ ಮಾಡಬಾರದು ಎಂದು ಬರೆದಿಟ್ಟಿದ್ದಾನೆ. ಅಲ್ಲದೆ, ತನಗೆ ಸೇರಬೇಕಾದ ಆಸ್ತಿಯ ವಿಚಾರವನ್ನೂ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಬರೆಯಲಾಗಿದೆ. ತನ್ನ ಸಾ*ವಿಗೆ ಯಾರೂ ಕಾರಣರಲ್ಲ ಎಂಬುದನ್ನೂ ಬರೆಯಲಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರಾಗಿದ್ದು, ಆಕೆಯ ಹೆತ್ತವರು ಬಂದ ಬಳಿಕವೇ ಪೋಸ್ಟ್ ಮಾರ್ಟಂ ನಡೆಸಲಾಗುವುದು ಎಂದು ಸ್ಥಳಕ್ಕೆ ಬಂದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
LATEST NEWS
ಪುತ್ತೂರು: ‘ಗೃಹಲಕ್ಷ್ಮಿ’ ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ ಪತ್ನಿ!
ಪುತ್ತೂರು: ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟ ಗೃಹಿಣಿಯೊಬ್ಬರು ಆ ಹಣದಿಂದ ತನ್ನ ಪತಿಗೆ ಸ್ಕೂಟರ್ ಕೊಡಿಸಿ ಗಮನಸೆಳೆದಿದ್ದಾರೆ.
ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ಎಂಬವರು ತನ್ನ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪತಿ ಸಲೀಂರಿಗಾಗಿ ಸ್ಕೂಟರ್ ಖರೀದಿಸಿದ್ದಾರೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಸಲೀಂ ನಿತ್ಯ ದೂರದ ಊರುಗಳಿಗೆ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಪತಿ ಕೆಲಸಕ್ಕೆ ತೆರಳಲು ಪತ್ನಿ ಮಿಸ್ರಿಯಾರ ಗೃಹಲಕ್ಷ್ಮಿ ಹಣ ಅನುಕೂಲ ಕಲ್ಪಿಸಿದೆ.
ಆರ್ಥಿಕ ನೆರವು ಗೃಹಲಕ್ಷ್ಮಿ!
ತನ್ನ ಸ್ಕೂಟರ್ ನಲ್ಲಿ ಸಲೀಂ ‘ಆರ್ಥಿಕ ನೆರವು ಗೃಹಲಕ್ಷ್ಮಿ’ ಎಂಬ ಭಿತ್ತಿಪತ್ರ ಅಂಟಿಸಿದ್ದು, ಅದರಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮರ್, ಲಕ್ಣ್ಮೀ ಹೆಬ್ಬಾಳ್ಕರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರ ಫೊಟೋ ಹಾಕಿದ್ದಾರೆ.
ಶಾಸಕರಿಂದ ಸನ್ಮಾನ
ಸಲೀಂ ತನ್ನ ಪತ್ನಿ ನೀಡಿದ ಸ್ಕೂಟರ್ ನೊಂದಿಗೆ ಶಾಸಕರನ್ನು ಭೇಟಿಯಾಗಿ ಸರಕಾರದ ಗೃಹಲಕ್ಷ್ಮೀ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ. ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ. ಸರಕಾರಕ್ಕೆ ಹಾಗೂ ಶಾಸಕರಿಗೆ ಸಲೀಂ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಶಾಸಕರು ಸಲೀಂರನ್ನು ಸನ್ಮಾನಿಸಿ ಗೌರವಿಸಿದರು.
FILM
ಚಿತ್ರರಂಗದ ಖ್ಯಾತ ಹಿರಿಯ ನಟ ಇ*ನ್ನಿಲ್ಲ; ಡೆಲ್ಲಿ ಗಣೇಶ್ ವಿ*ಧಿವಶ
ಡೆಲ್ಲಿ ಗಣೇಶ್ ಪುತ್ರ ಮಹದೇವನ್ ಈ ವಿಷಯ ಖಾತ್ರಿಪಡಿಸಿದ್ದು, ‘ಡೆಲ್ಲಿ ಗಣೇಶ್ ಅವರು, ನಿನ್ನೆ (ನ.9) ರ ತಡರಾತ್ರಿ 11 ಗಂಟೆ ಸುಮಾರಿಗೆ ಮೃ*ತಪಟ್ಟಿದ್ದಾರೆ’ ಎಂದಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, 40 ವರ್ಷಗಳಿಗಿಂತಲೂ ಹೆಚ್ಚು ಸಮಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗಣೇಶ್ ಅಭಿನಯಿಸಿದ್ದಾರೆ.
ಕೆ. ಬಾಲಚಂಧರ್ ಅವರಂಥಹಾ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್, ಹಲವು ಸ್ಟಾರ್ ನಟ-ನಟಿಯರೊಡನೆ ತೆರೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್ ಪಾತ್ರಗಳಲ್ಲಿ ನಟಿಸಿದ ಡೆಲ್ಲಿ ಗಣೇಶ್, ವಯಸ್ಸಾದಂತೆ, ತಂದೆ, ಮಾವ, ಚಿಕ್ಕಪ್ಪ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.
1976 ರಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಡೆಲ್ಲಿ ಗಣೇಶ್ ತಮಿಳು, ಮಲಯಾಳ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಎರಡು ವೆಬ್ ಸರಣಿಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ವಿಶೇಷವೆಂದರೆ ಶಂಕರ್ ನಾಗ್ ನಿರ್ದೇಶನ ಮಾಡಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ : ಪಂಚಭೂತಗಳಲ್ಲಿ ಲೀನರಾದ ಗುರುಪ್ರಸಾದ್; ಬ್ರಾಹ್ಮಣ ವಿಧಿಯಂತೆ ಅಂತ್ಯಸಂಸ್ಕಾರ.!
ಡೆಲ್ಲಿ ಗಣೇಶ್ ನಿ*ಧನದ ಬಗ್ಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
- LATEST NEWS3 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM4 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- LATEST NEWS6 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್