ಅತ್ತ ವಿದ್ಯಾರ್ಥಿ, ಮಧ್ಯೆ Zomato Delivery ಕೆಲ್ಸ, ಇತ್ತ ಸಿನಿಮಾ ಮಾಡಿಯೇ ಬಿಟ್ಟ ಹಠಯೋಗಿ..!
ಮಂಗಳೂರು: ಹಠ ಹಿಡಿದ್ರೆ ಯಾವುದು ಕೂಡಾ ಅಸಾಧ್ಯವಲ್ಲ.ಅದಕ್ಕೆ ಒಂದು ಉದಾಹರಣೆ ಈ ಬಿಸಿ ರಕ್ತದ ಯುವಕ. ಈತನ ಹೆಸರು ಹರ್ಷಿತ್ ಸೋಮೇಶ್ವರ.
ಮಂಗಳೂರಿನ ಕಾರ್ ಸ್ಟೀಟ್ ಕಾಲೇಜಿನ ಪದವಿ ವಿದ್ಯಾರ್ಥಿ ಈ ಹರ್ಷಿತ್. ಕಲಿಕೆ ಜೊತೆಗೆ ಏನಾದ್ರೂ ಸಾಧನೆ ಮಾಡಲೇ ಬೇಕೆಂಬ ಹಠ ಈತನಿಗೆ.
ಅದಕ್ಕಾಗಿ ಈತ ಆಯ್ಕೆ ಮಾಡಿಕೊಂಡದ್ದು ಸಿನಿಮಾ ಕ್ಷೇತ್ರವನ್ನು. ಯೋಚಿಸಿ ಸಂಕಲ್ಪ ಮಾಡಿದ್ದೇ ಹರ್ಷಿತ್ ಹಿಂತಿರುಗಿ ನೋಡದೆ ಒಂದು ಸಿನಿಮಾವನ್ನೇ ಮಾಡಿಯೇ ಬಿಟ್ಟಿದ್ದಾನೆ.
ವಿಶೇಷ ಎಂದರೆ ಹರ್ಷಿತ್ ಸೋಮೇಶ್ವರ ಪದವಿ ವಿದ್ಯಾಭ್ಯಾಸದ ಜೊತೆಗೆ ಎರಡು ಚಿತ್ರಗಳಿಗೆ ಸಹಾಯಕನಾಗಿ ಕೆಲಸ ಮಾಡಿದ್ದರು. ಇದು ಅವರಿಗೆ ಮುಂದಿನ ಮೆಟ್ಟಲುಗಳು ಏರಲು ಸಹಕಾರಿಯಾಗಿದೆ.
ಇದರಲ್ಲಿ ತುಳುವಿನ ‘ಪಮ್ಮಣ್ಣೆ ದಿ ಗ್ರೇಟ್’ ಮತ್ತು ಕನ್ನಡ ಸಿನಿಮಾಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಐದಿನೈದಕ್ಕೂ ಹೆಚ್ಚು ಅಲ್ಬಂ ಸಾಂಗ್ ಕೂಡಾ ಇವರು ಮಾಡಿದ್ದಾರೆ. ಇದರ ಜೊತೆಗೆ ಕಳೆದ ಒಂದು ವರ್ಷದಿಂದ Zomatoದಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಾರೆ.
ಅದರಲ್ಲಿ ಬಂದ ಸಂಬಳದಲ್ಲಿ ಹಣ ಉಳಿಕೆ ಮಾಡಿ ಹೊಸ ಟೆಲಿ ಫಿಲ್ಮ್ ನಿರ್ಮಾಣಕ್ಕಾಗಿ ಮುಂದಡಿ ಇಟ್ಟರು.ಇವರ ಕಠಿಣ ಪರಿಶ್ರಮದ ಫಲವೇ ‘ಗರ್ವ’ ಎಂಬ ಟೆಲಿಫಿಲ್ಮ್. ಕಳೆದ ಎರಡು ವರ್ಷಗಳಿಂದ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದರು.
ಇದೀಗ ‘ಗರ್ವ’ ಟೆಲಿಫಿಲ್ಮ್ ಸಿದ್ದವಾಗಿ ನಿಂತಿದ್ದು ಮಾರ್ಚ್ 15 ಕ್ಕೆ ಮಂಗಳೂರಿನ ಪುರ ಭವನದಲ್ಲಿ ರಿಲೀಸ್ ಆಗಲು ರೆಡಿಯಾಗುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ 100ಕ್ಕೂ ಹೆಚ್ಚು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ…!!
ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ಪೃಥ್ವಿ ಅಂಬರ್ ರ ಹಿನ್ನೆಲೆ ಧ್ವನಿ ಕೂಡಾ ಈ ಸಿನಿಮಾದಲ್ಲಿದೆ. ಒಟ್ಟಿನಲ್ಲಿ ತುಳುವಿನ ಮೊದಲ ಮಾಸ್ ಟೆಲಿ ಪಿಚ್ಚರ್ ಇದಾಗಿದ್ದು,ಮಾರ್ಚ್ 15 ರಂದು ವಿವಿಧ ಕಡೆ ರಿಲೀಸ್ ಆಗಲಿದೆ.
ಏನಾದರೂ ಜೀವನದಲ್ಲಿ ಮಾಡಬೇಕೆಂಬ ಛಲವಿರುವ ಬಿಸಿ ರಕ್ತದ ಯುವಕರಿಗೆ ಸ್ಪೂರ್ತಿಯಾಗಿರುವ ಈ ಹರ್ಷಿತ್ ಸೋಮೇಶ್ವರರಿಗೆ ಗುಡ್ ಲಕ್ ಹೇಳುವ ಮತ್ತು ಅವನ ಚಿತ್ರಕ್ಕೆ ಪ್ರಚಾರದ ಮೂಲಕ ಪ್ರೋತ್ಸಾಹ ನೀಡುವ..!
ಮಂಗಳೂರು/ಬೀಜಿಂಗ್ : ಸಾಮಾನ್ಯವಾಗಿ ಭಾರತೀಯ ಸೇನೆ ಮತ್ತು ಚೀನಾ ಸೇನೆಯ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಚೀನಾದ ಸೈನಿಕರ ತರಬೇತಿಯಲ್ಲಿ, ಯೋಧರ ಕೊರಳಪಟ್ಟಿಗಳ ಮೇಲೆ ಗುಂಡು ಪಿನ್ ಗಳನ್ನು ಅಂಟಿಸಿರುವುದು, ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
ಮಿಲಿಟರಿ ಸೇವೆಯಲ್ಲಿ ಸೈನಿಕರು ನಡೆಯುವ ರೀತಿ, ಚಲಿಸುವ ಅಥವಾ ನಿಂತಿರುವ ರೀತಿಯಲ್ಲಿ ವಿಶೇಷ ಗಮನ ಹರಿಸುತ್ತಾರೆ. ಸೈನಿಕರು ತಮ್ಮ ಎದೆಯನ್ನು ಮೇಲಕ್ಕೆತ್ತಿ, ಕುತ್ತಿಗೆಯನ್ನು ನೇರವಾಗಿ ಮತ್ತು ಕೈಗಳನ್ನು ನೇರವಾಗಿ ನಿಲ್ಲಬೇಕು ಎಂಬ ನಿಯಮ ಇದೆ. ಈ ನಿಯಮ ಚೀನಾದ ಸೇನೆಯಲ್ಲೂ ಇದೆ.
ಚೀನಾದ ಸೈನಿಕರ ಸಮವಸ್ತ್ರದ ಕೊರಳಪಟ್ಟಿಗಳ ಮೇಲೆ ಗುಂಡುಪಿನ್ ಗಳನ್ನು ಅಂಟಿಕೊಂಡಿರುವ ರೀತಿಯಲ್ಲಿ ಇರಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೂ ಇದೆ. 2009ರಲ್ಲಿ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ಗಟ್ಟಿಯಾಗಿರಿಸಲು ಈ ರೀತಿಯಾಗಿ ಪಿನ್ ಗಳನ್ನು ಧರಿಸುತ್ತಾರೆ ಎಂದು ಹೇಳಲಾಗಿದೆ.
ಕುತ್ತಿಗೆಯನ್ನು ಬಾಗಿಸಿದಾಗ ಪಿನ್ ಗಳು ಕುತ್ತಿಗೆಗೆ ಚುಚ್ಚುವ ರೀತಿಯಲ್ಲಿ ಕಾಲರ್ ನಲ್ಲಿ ಇರಿಸಲಾಗಿದೆ. ಸೈನಿಕರು ತಮ್ಮ ಕುತ್ತಿಗೆಯನ್ನು ಸದಾ ನೇರವಾಗಿರಿಸಲು ಈ ರೀತಿ ಮಾಡಲಾಗುತ್ತದೆ. ಅಲ್ಲದೆ, ಸದಾ ಅಲರ್ಟ್ ಆಗಿರಲು ಈ ರೀತಿ ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಪರೇಡ್ ಸಂದರ್ಭಗಳಲ್ಲಿ ಅನುಸರಿಸಲಾಗುತ್ತದೆ.
ಪ್ರತಿಯೊಬ್ಬ ಸೈನಿಕನಿಗೂ ಈ ವಿಧಾನ ಅನ್ವಹಿಸುವುದಿಲ್ಲ. ಬದಲಾಗಿ ಕುತ್ತಿಗೆ ನೇರವಾಗಿರಿಸದ ಸೈನಿಕರಿಗೆ ಇದನ್ನು ಬಳಸುತ್ತಾರೆ ಮತ್ತು ಇದರಿಂದ ಅವರ ಭಂಗಿಯನ್ನು ಸರಿಪಡಿಸಲಾಗುತ್ತದೆ.
ಮಂಗಳೂರು : ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು, ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತನಾಡಿ, ಅಂದು ಬೆಳಗ್ಗೆ 7 ರಿಂದ 8ರ ವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ 3ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.
ಶ್ರೀರಾಮನ ಕ್ಷೇತ್ರ ಅಯೋಧ್ಯೆಯಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ವರದಿಯಾಗಿದೆ. ವ್ಯಕ್ತಿಯೊಬ್ಬ ಕನ್ನಡಕದಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಿಕೊಂಡು ರಾಮಮಂದಿರಕ್ಕೆ ಎಂಟ್ರಿಯಾಗಿದ್ದ. ಕ್ಯಾಮೆರಾದಲ್ಲಿ ಗೌಪ್ಯವಾಗಿ ದೇಗುಲದ ಫೋಟೋವನ್ನು ತೆಗೆಯುತ್ತಿದ್ದ. ಇದು ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗ್ತಿದೆ.
ಹೆಚ್ಚಿನ ವಿಚಾರಣೆಗಾಗಿ ಆತನನ್ನು ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿ ಸೋಮವಾರ ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯೆಗೆ ಆಗಮಿಸಿದ್ದ. ಕ್ಯಾಮೆರಾ ಇರುವ ಕನ್ನಡಕ ಧರಿಸಿದ್ದ ಈತ, ದೇಗುಲದ ಎಲ್ಲಾ ಭದ್ರತಾ ಚೆಕ್ ಪಾಯಿಂಟ್ ದಾಟಿ ಬಂದರೂ ಸಿಬ್ಬಂದಿಗೆ ಗೊತ್ತಾಗಲಿಲ್ಲ.
ಅದೇ ರೀತಿ ರಾಮಮಂದಿರ ಸಂಕಿರ್ಣಕ್ಕೆ ಆಗಮಿಸಿದ್ದ ಆರೋಪಿ ಫೋಟೋ ತೆಗೆಯಲು ಆರಂಭಿಸಿದ್ದ. ಇದು ಅಲ್ಲಿರುವ ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಆತನನ್ನು ನೀಡಿದ್ದಾರೆ. ಆತ ಧರಿಸಿದ್ದ ಕನ್ನಡಕದ ಎರಡೂ ಬದಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು. ಅದರ ಮೂಲಕ ಗೊತ್ತಾಗದ ರೀತಿಯಲ್ಲಿ ಸುಲಭವಾಗಿ ಫೋಟೋಗಳನ್ನು ತೆಗೆಯಬಹುದು.
ಅಯೋಧ್ಯೆ ರಾಮಮಂದಿರದ ಭದ್ರತಾ ಜವಾಬ್ದಾರಿ ವಿಶೇಷ ಭದ್ರತಾ ಪಡೆ (ಎಸ್ಎಸ್ಎಫ್) ಬಳಿ ಇದೆ. ಯೋಗಿ ಆದಿತ್ಯನಾಥ ಸರ್ಕಾರ ವಿಶೇಷ ಭದ್ರತಾ ಪಡೆಯನ್ನು ನೇಮಿಸಿದೆ. ಪಿಎಸಿ ಮತ್ತು ಉತ್ತರ ಪ್ರದೇಶ ಪೊಲೀಸ್ನ ಅತ್ಯುತ್ತಮ ಸಿಬ್ಬಂದಿಯನ್ನು ಸಂಯೋಜಿಸುವ ಎಸ್ಎಸ್ಎಫ್ ಪಡೆ ರಚನೆ ಮಾಡಲಾಗಿದೆ.