Connect with us

LATEST NEWS

ಡ್ರಗ್ ಮಾಫಿಯಾಕ್ಕೆ ಗತಿ ಕಾಣಿಸದೆ ವಿರಮಿಸಲ್ಲ : ಡಿಜಿಪಿ ಪ್ರವೀಣ ಸೂದ್ ಘರ್ಜನೆ..!

Published

on

ಡ್ರಗ್ ಮಾಫಿಯಾ ಗತಿಕಾಣಿಸದೆ ವಿರಮಿಸಲ್ಲ : ಡಿಜಿಪಿ ಪ್ರವೀಣ ಸೂದ್ ಘರ್ಜನೆ..!

ಉಡುಪಿ : ರಾಜ್ಯದಲ್ಲಿ ಸಮಾಜ ಸ್ವಾಸ್ಥ್ಯವನ್ನು ಮತ್ತು ನೆಮ್ಮದಿಯನ್ನು ಹಾಳು ಮಾಡಿರುವ ಡ್ರಗ್ ಮಾಫಿಯಾ ಕೊನೆಗಾಣಿಸದೇ ವಿರಮಿಸಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಈ ಸಂಬಂಧ ಉಡುಪಿ ಎಸ್​​ಪಿ ಕಚೇರಿಯಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರವೀಣ್​ ಸೂದ್​​ ಡ್ರಗ್ಸ್ ವಿಚಾರದಲ್ಲಿ ‌ನಮ್ಮದು ಜೀರೋ‌ ಟಾಲರೆನ್ಸ್. ಸಮುದ್ರಮಾರ್ಗ, ಆಕಾಶಮಾರ್ಗ, ಭೂ ಮಾರ್ಗ ಎಲ್ಲಿಂದ ಬಂದರೂ ಡ್ರಗ್ಗನ್ನು ಪೊಲೀಸ್ ಇಲಾಖೆ ಮಟ್ಟ ಹಾಕುತ್ತೆ ಎಂದು ಎಚ್ಚರಿಕೆ ‌ನೀಡಿದ್ದಾರೆ.

ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ.‌ ಬೆಂಗಳೂರಲ್ಲಿ ಕಳೆದ ಹತ್ತು ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿದೆ. ನಮ್ಮ ಕಾರ್ಯಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ.

ಜತೆಗೆ ಬೆಳಗಾಂ, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಭಾಗದಲ್ಲೂ ಕಾರ್ಯಚರಣೆ ನಡೆಸಿದ್ದೇವೆ ಮತ್ತು ಅದು ಮುಂದುವರೆಯಲಿದ್ದು ದಕ್ಷ ಅಧಿಕಾರಿಗಳ ತಂಡ ಇದರ ನೇತೃತ್ವವನ್ನು ಹೊಂದಿದೆ, ಮತ್ತು ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನಯ ನೀಡಲಾಗಿದೆ ಎಂದರು.

ಸದ್ಯ ನಡೆಯುತ್ತಿರುವ ಕಾರ್ಯಾಚರಣೆಗಳಿಂದ ನಮಗೆ ಸಮಾಧಾನವಾಗಿಲ್ಲ. ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡ್ತೇವೆ.

ಚಾಕಲೇಟ್ ಡ್ರಿಂಕ್ಸ್​ಗಳಲ್ಲೂ ಡ್ರಗ್ಸ್ ಮಿಕ್ಸ್ ಮಾಡಿ ಕೊಡುವುದು ಕಂಡು ಬಂದಿದೆ. ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ- ಎಸ್‌ ಪಿ ಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಸೆಲೆಬ್ರಿಟಿಗಳ ಬಂಧನ ಇತ್ಯಾದಿ ವಿಚಾರ ಬೆಂಗಳೂರು ಕಮಿಷನರ್ ಮಾತಾಡ್ತಾರೆ.‌ ತನಿಖೆ ನಡೆಯುತ್ತಿರುವಾಗ ಪೊಲೀಸ್ ಅಧಿಕಾರಿಯಾಗಿ ಮಾತನಾಡುವುದು ಸರಿಯಲ್ಲ.

ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅಷ್ಟು ಮಾತ್ರವಲ್ಲ ಕಠಿಣ ಸೂಚನೆಯನ್ನು ನೀಡಿದ್ದಾರೆ. ರಾಜ್ಯವನ್ನು ಡ್ರಕ್ಸ್ ಮುಕ್ತ ಮಾಡುವ ಸೂಚನೆ ನೀಡಿದ್ದಾರೆ.‌

ಇದೀಗ ಬೆಂಗಳೂರು-ಮಂಗಳೂರು ದೊಡ್ಡ ಡ್ರಕ್ಸ್ ಹಬ್ ಆಗಿದೆ ಎಂದ ಅವರು ಈ ಬಾರಿ ಈ ದಂಧೆಗಳಿಗೆ ಪೂರ್ಣ ವಿರಾಮ ಹಾಕಿಯೇ ತೀರುತ್ತೇವೆ ಎಂದು ಖಡಾಖಂಡಿತವಾಗಿ ನುಡಿದರು.

LATEST NEWS

ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

Published

on

ಮಂಗಳೂರು/ಬೆಂಗಳೂರು : ಅತ್ಯಾ*ಚಾರ, ಅಶ್ಲೀ*ಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದೆ. ಈ ಮೂಲಕ ಹಲವು ತಿಂಗಳುಗಳ ಬಳಿಕ ಪ್ರಜ್ವಲ್ ರೇವಣ್ಣಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.

ಈ ಸಂದರ್ಭ ಆರೋಪ ನಿಗದಿ ಮಾಡದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ. ಮುಂದಿನ ಆದೇಶದ ವರೆಗೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿ, ಜ.16ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಅ*ತ್ಯಾಚಾರ ಆರೋಪ ಹಾಗೂ ಪೆನ್ ಡ್ರೈವ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಜನವರಿ 13ಕ್ಕೆ ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿ ಮಾಡುವುದಕ್ಕೆ ನಿಗದಿಯಾಗಿತ್ತು. ಇದನ್ನು ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಪ್ರಜ್ವಲ್‌ಗೆ ಸ್ವಲ್ಪ ರಿಲೀಫ್ ಕೊಟ್ಟಿದೆ.

ಇದನ್ನೂ ಓದಿ : ಫ್ರಿಡ್ಜ್‌ನಲ್ಲಿ ನಿಂಬೆಹಣ್ಣಿನ ತುಂಡನ್ನು ಇಟ್ಟರೆ ಏನಾಗುತ್ತೆ ಗೊತ್ತಾ..?

2024ರಲ್ಲಿ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದಂತೆ ಅಶ್ಲೀ*ಲ ವೀಡಿಯೋಗಳು ವೈರಲ್ ಆಗಿದ್ದವು. ಇದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.

 

Continue Reading

LATEST NEWS

ಕೊಡಗಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

Published

on

ಮಡಿಕೇರಿ: ಸುತ್ತಲೂ ಹಸಿರು ರಾಶಿ, ಬೆಟ್ಟ – ಗುಡ್ಡ, ಇಂತಹ ಪ್ರಕೃತಿ ಸೌಂದರ್ಯದ ಮಧ್ಯೆ ಕುಳಿತು ಅಂತಾರಾಷ್ಟ್ರೀಯ ಕ್ರೆಕೆಟ್ ಪಂದ್ಯಾವಳಿ ನೋಡುವ ಅವಕಾಶ ಸಿಕ್ಕರೆ ಅದೆಷ್ಟು ಮಜವಿರುತ್ತದೆ ಅಲ್ಲವೇ? ಹೌದು. ಮುಂದಿನ 3-4 ವರ್ಷಗಳಲ್ಲೇ ಕೊಡಗಿನ ಜನಕ್ಕೆ ಈ ಸದವಕಾಶ ಸಿಗಲಿದೆ. ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ ತಲೆ ಎತ್ತಲಿದ್ದು, ಈಗಾಗಲೇ ನಿರ್ಮಾಣ ಕಾರ್ಯ ಶುರುವಾಗಿದೆ.

ಜಿಲ್ಲೆಗೆ ಅಂತಾರಾಷ್ಟ್ರೀಯ ಕ್ರೀಡಾಂಗಣ ಬೇಕು ಅನ್ನೋದು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಹತ್ತಿರವಾಗಿದೆ. ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತುತ್ತಿದೆ. ಈಗಾಗಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಕ್ಕೆ ಜಿಲ್ಲಾಡಳಿತ 12 ಎಕರೆ ಜಾಗ ನೀಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣ ಮಾದರಿಯಲ್ಲೇ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಈ ಪ್ರದೇಶದಲ್ಲಿ ಬೆಟ್ಟವನ್ನು ಸಮತಟ್ಟುಗೊಳಿಸಲಾಗುತ್ತಿದೆ.

ಸದ್ಯ ಕ್ರೀಡಾಂಗಣ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದ್ದು, ಮುಂದಿನ 3-4 ವರ್ಷಗಳಲ್ಲಿ ಅಂಗಳ ನಿರ್ಮಾಣವಾಗಲಿದೆ. ಇದು ಸ್ಥಳೀಯ ಕ್ರೀಡಾಪಟುಗಳಿಗೂ ವರದಾನವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣವಿದೆ. ಆದರೆ, ಕನಿಷ್ಠ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸುವಂತಹ ಅಥ್ಲೆಟಿಕ್ ಕ್ರೀಡಾಂಗಣವಾಗಲಿ, ಕ್ರಿಕೆಟ್​​ ಮೈದಾನವಾಗಲಿ ಇಲ್ಲ. ಸದ್ಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದ್ದು, ಇದರೊಂದಿಗೆ ಕೊಡಗು ಜಿಲ್ಲೆ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading

International news

ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿ*ಚ್ಚು; ಐವರು ಸಜೀವದ*ಹನ, ಬೆಂ*ಕಿ ನಂದಿಸಲು ಹರಸಾಹಸ

Published

on

ಮಂಗಳೂರು/ನ್ಯೂಯಾರ್ಕ್ : ಲಾಸ್ ಏಂಜಲೀಸ್‌ನ ಪೆಸಿಫಿಕ್ ಪ್ಯಾಲಿಸೈಡ್ಸ್ ಮತ್ತು ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಹಬ್ಬಿರುವ ಕಾಳ್ಗಿಚ್ಚಿನಿಂದಾಗಿ ಅಪಾರ ಹಾ*ನಿ ಸಂಭವಿಸಿದೆ. ಕಾಡ್ಗಿಚ್ಚಿನ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ರಕ್ಷಣಾ ಸಿಬ್ಬಂದಿ ತೊಡಗಿದ್ದಾರೆ.

ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ರಕ್ಷಣಾ ಸಿಬ್ಬಂದಿ ಮಾಡುತ್ತಿದ್ದಾರೆ. ಯವರು ಸಜೀವ ದಹನವಾಗಿದ್ದಾರೆ. 1 ಲಕ್ಷ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಒಂದು ಸಾವಿರಕ್ಕೂ ಅಧಿಕ ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಯಾಗಿದೆ.

ಸನ್‌ಸೆಟ್ ಫೈರ್ ಎಂದು ಕರೆಯಲ್ಪಡುವ ಹೊಸ ಜ್ವಾಲೆಯು ಹಾಲಿವುಡ್ ಹಿಲ್ಸ್ ಕಾಣಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 112 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ‘ಸಾಂಟಾ ಅನಾ’ ಚಂಡಮಾರುತದಿಂದ ಪರಿಸ್ಥಿತಿ ತೀರ ಹದಗೆಟ್ಟಿದ್ದು, ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾರ್ಕ್ ಬೆಂಕಿಗಾಹುತಿಯಾಗಿದೆ.

ಒರೆಗಾನ್, ವಾಷಿಂಗ್ಟನ್ ಮತ್ತು ಉತಾಹ್ ಸೇರಿದಂತೆ ಹಲವು ರಾಜ್ಯಗಳಿಂದ ಸಾವಿರಾರು ಅ*ಗ್ನಿಶಾಮಕ ದಳದ ಸಿಬ್ಬಂದಿ ಕಾಡ್ಗಿ*ಚ್ಚು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.  ನೀರಿನ ಅಭಾವದಿಂದಾಗಿ ಬೆಂ*ಕಿ ನಂದಿಸುವ ಕಾರ್ಯಾಚರಣೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈಜುಕೊಳಗಳು, ಕೊಳಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Continue Reading

LATEST NEWS

Trending

Exit mobile version