ಅನೇಕಲ್: ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದ ಬಳಿಕ ದೇಶದಲ್ಲಿ ಮತ್ತೆ ಮತ್ತೆ ದೇಹ ತುಂಡರಿಸಿ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಿವಿಗೆ ಬೀಳುತ್ತಲೇ ಇವೆ.
ನಾಲ್ಕು ದಿನದ ಹಿಂದಷ್ಟೇ ಮಹಾರಾಷ್ಟ್ರದ ಥಾಣೆಯಲ್ಲಿ ಪ್ರಿಯತಮೆ ಕೊಂದು ಪೀಸ್ ಪೀಸ್ ಮಾಡಿ ಕುಕ್ಕರ್ನಲ್ಲಿ ಬೇಯಿಸಿ ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಇದೀಗ ನಮ್ಮ ರಾಜ್ಯದಲ್ಲೇ ಇಂತಹ ಬೀಭತ್ಸ ಘಟನೆ ನಡೆದಿದೆ.
ಮನೆ ಬಾಡಿಗೆಗೆಂದು ಬಂದಿದ್ದ ಯುವಕರು ಒಂಟಿ ಮಹಿಳೆಯೆಂದು ತಿಳಿಯುತ್ತಿದ್ದಂತೆ ಆಕೆಯ ಮನೆಯನ್ನು ತಮ್ಮ ಹೆಸರಿಗೆ ಬರೆಯುವಂತೆ ಹಿಂಸಿಸಿ ಕೊನೆಗೆ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ್ದರು. ಸದ್ಯ ಸಿಕ್ಕ ತುಂಡು ದೇಹದ ಜಾಲ ಹಿಡಿದು ಹೊರಟಿದ್ದ ಪೊಲೀಸರ ಕೈಗೆ ಓರ್ವ ಸಿಕ್ಕಿ ಬಿದ್ದಿದ್ದು ಘಟನೆಯ ರಹಸ್ಯ ಬಯಲಾಗಿದೆ.
ಮಹಿಳೆ ಕೊಂದು ತುಂಡು ತುಂಡಾಗಿ ಕತ್ತರಿಸಿದ ಯುವಕರು
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ವಾಸವಿದ್ದ ಐವತ್ನಾಲ್ಕು ವರ್ಷದ ಗೀತಾಮ್ಮ ಮೇ ತಿಂಗಳ ಅಂತ್ಯದಲ್ಲಿ ನಾಪತ್ತೆಯಾಗಿದ್ದರು.
ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗೀತಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಮದುವೆ ಮಾಡಿಕೊಟ್ಟು, ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದ ಗೀತಾಮ್ಮ, ಒಂದು ಮನೆಯಲ್ಲಿ ವಾಸವಿದ್ರೆ ಉಳಿದ ಎರಡು ಮನೆಗಳನ್ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದರು.
ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಾಮ್ಮರ ತುಂಡರಿಸಿದ ದೇಹ ಜೂನ್ 1ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ವಾಸನೆ ಬರಿತ್ತಿದ್ದ ಸ್ಥಳಕ್ಕೆ ಬಂದು ನೋಡಿದಾಗ ಕಾಲು, ಕೈ ಕತ್ತರಿಸಿದ ರುಂಡ ವಿಲ್ಲದ ದೇಹ ಪತ್ತೆಯಾಗಿತ್ತು.
ಬಳಿಕವೇ ನಾಪತ್ತೆಯಾಗಿದ್ದಾರೆ ಎಂದು ತಿಳಿದಿದ್ದ ಗೀತಾ ಬರ್ಬರವಾಗಿ ಕೊಲೆಯಾಗಿದ್ದಾರೆಂಬ ವಿಚಾರ ಬೆಳಕಿಗೆ ಬಂದಿತ್ತು.
ಇನ್ನು ದೇಹದ ತುಂಡುಗಳು ಪತ್ತೆಯಾಗುತ್ತಿದ್ದಂತೆ ತಂಡ ರಚಿಸಿ ಆರೋಪಿಗಳನ್ನು ಹಿಡಿಯಲು ಸಜ್ಜಾದ ಬನ್ನೇರುಘಟ್ಟ ಪೊಲೀಸರು ಮಹಿಳೆಯ ರುಂಡಾ ಪತ್ತೆಯಾದ ಕೇವಲ ಒಂದು ವಾರದಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಜನರ ಪೈಕಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಬಿಹಾರದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ನಾಲ್ಕು ಜನ ಯುವಕರು ಕೊಲೆಯಾದ ಗೀತಾ ಮನೆಯಲ್ಲಿ ಬಾಡಿಗೆಗೆ ಇದ್ದರು. ಗೀತಾ ಒಂಟಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡು ಮಹಿಳೆಯ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಾಗದ ಪತ್ರಗಳ ಮೇಲೆ ಸಹಿ ಹಾಕುಬಂತೆ ಬಲವಂತ ಮಾಡಿ, ನಂತರ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ.
ಕೊಲೆ ಮಾಡಿದ ಆರೋಪಿಗಳು, ಕೊಲೆ ವಿಚಾರ ಗೊತ್ತಾಗದಿರಲು ದೇಹ ಬಿಸಾಡಲು ಪ್ಲ್ಯಾನ್ ಮಾಡಿದ್ದಾರೆ. ಹಂತ ಹಂತವಾಗಿ ದೇಹ ಕತ್ತರಿಸಿ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸಾಗಿಸಿದ್ದಾರೆ. ಕೊಲೆಯಾದ ಒಂದು ದಿನದ ನಂತರವೂ ಕೆಲಸಕ್ಕೆ ತೆರಳಿದ್ದ ಕಿರಾತಕರು, ಒಟ್ಟು ಎರಡು ದಿನಗಳ ವರೆಗೂ ದೇಹ ಕಟ್ ಮಾಡಿ ಸಾಗಿಸಿದ್ದಾರೆ.
ಕಟ್ ಮಾಡಿದ ಶವದ ಮುಂದೆಯೇ ಊಟ ಮಾಡಿದ್ದು ಕೃತ್ಯ ನಡೆದ ಮೂರು ದಿನಗಳ ಬಳಿಕ ಆರೋಪಿಗಳಿಗೆ ಭಯ ಕಾಡಲು ಶುರುವಾಗಿದೆ. ಮನೆ ಸುತ್ತಾ ಸತ್ತ ದೇಹದ ವಾಸನೆ ಪಸರಿಸುತ್ತಿದ್ದಂತೆ ನಡುಕ ಶುರುವಾಗಿದೆ. ಅದಕ್ಕೆ ಮನೆಯ ಹಿಂಭಾಗದಲ್ಲಿ ದೇಹ ಬಿಸಾಡಿ ಎಸ್ಕೇಪ್ ಆಗಿದ್ದಾರೆ.
ಕಿ.ಮಿ ದೂರದಲ್ಲಿ ಸತ್ತ ಮಹಿಳೆಯ ತಲೆ, ಒಂದು ಕೈ ಪತ್ತೆಯಾಗಿದೆ. ಹಂತಕರು ಬನ್ನೇರುಘಟ್ಟ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಬಿಸಾಡಿದ್ದರು. ಇನ್ನು ಕೃತ್ಯದ ಮುಂಚೆ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು ಪೊಲೀಸರು ಪೋಸ್ಟ್ ಮಾರ್ಟಮ್ ರಿಪೋರ್ಟ್ ಪರಿಶೀಲನೆ ಮಾಡಲಿದ್ದಾರೆ. ಸದ್ಯಕ್ಕೆ ಆಸ್ತಿ ವಿಚಾರವಾಗಿಯೇ ಕೊಲೆ ನಡೆದಿರುವ ಶಂಕೆ ಇದ್ದು ಮತ್ತಷ್ಟು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗ ದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮತ್ತು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನ-2025’ ಕಾರ್ಯಕ್ರಮವು ಬುಧವಾರ ಗಂಜಿಮಠದ ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ನಡೆಯಿತು.
ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಡಾ.ಭರತ್ ಶೆಟ್ಟಿ, ದೀಪಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಯಕ್ಷಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಪ್ರಮುಖರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ದೇವದಾಸ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಯಕ್ಷಧ್ರುವ – ಯಕ್ಷಶಿಕ್ಷಣದಲ್ಲಿ ತರಬೇತಿ ಪಡೆದ ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ರಂಗ ಪ್ರವೇಶ ಮಾಡಿದರು. ಬಂಟ್ವಾಳ ಕ್ಷೇತ್ರದ 10 ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ 10 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತ್ಯೇಕ ಪ್ರತ್ಯೇಕವಾದ ಎರಡು ರಂಗಸ್ಥಳದಲ್ಲಿ ತಮ್ಮ ಪ್ರದರ್ಶನ ನೀಡಿದರು.
ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರದ 10 ಶಾಲೆಯ ವಿದ್ಯಾರ್ಥಿಗಳು ಹಾಗೂ ಕೀರ್ತಿಶೇಷ ಡಾ. ವೈ. ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಉತ್ತರ ಕ್ಷೇತ್ರದ 11 ಶಾಲೆಗಳ ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದರು.
ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಬಳಿ ಇರುವ ಹೊಸಬೆಟ್ಟು ಬೀಚ್ ನ ನಿರ್ಮಾಣ ಹಂತದ ಜೆಟ್ಟಿ ಬಳಿ ಇರುವ ಬೀಚ್ ಗೆ ಪ್ರವಾಸಕ್ಕೆ ಬಂದ ಮೂವರು ಯುವಕರು ನೀರುಪಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್(31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್, ಬೆಂಗಳೂರು ಜೆಪಿ ನಗರ ನಿವಾಸಿ ಸತ್ಯವೇಲು(30) ಹಾಗೂ ಬೀದರ್ ಜಿಲ್ಲೆ ಹಂಗಾರಗಾ ನಿವಾಸಿ ಪರಮೇಶ್ವರ್ (30 ) ಎಂಬವರು ಬೀಚಿಗೆ ತಿರುಗಾಡಲು ಬಂದಿದ್ದು, ಸಮುದ್ರದಲ್ಲಿ ಈಜಾಟಕ್ಕೆ ಇಳಿದ ವೇಳೆ ಈ ದುರಂತ ಸಂಭವಿಸಿದೆ.
ನಾಲ್ವರು ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಸ್ಥಳೀಯ ಮೀನುಗಾರರು ಹಂಗಾರಗಾ ನಿವಾಸಿ ವಿಶ್ವಂಬರ್ ಎಂಬವರ ಪುತ್ರ ಪರಮೇಶ್ವರ(30) ನನ್ನು ರಕ್ಷಿಸಿದ್ದಾರೆ. ಮೃತಪಟ್ಟವರನ್ನು ಚಿತ್ರದುರ್ಗ ಜಿಲ್ಲೆಯ ಮಂಜುನಾಥ ಎಸ್ ಮತ್ತು ಶಿವಮೊಗ್ಗದ ಶಿವಕುಮಾರ್ ಎಂದು ಗುರುತಿಸಲಾಗಿದೆ.
ಚಿತ್ರದುರ್ಗದ ಮಂಜುನಾಥ ನೀರುಪಾಲಾಗಿದ್ದು, ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಎರಡು ಶವಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು/ಒಟ್ಟಾವ : ಜಸ್ಟಿನ್ ಟ್ರುಡೊ ರಾಜೀನಾಮೆಯ ನಂತರ, ಭಾರತೀಯ ಮೂಲದ ಅನಿತಾ ಆನಂದ್ ಕೆನಡಾದ ಮುಂದಿನ ಪ್ರಧಾನ ಮಂತ್ರಿಯಾಗುವ ರೇಸ್ ನಲ್ಲಿದ್ದಾರೆ. ಆನಂದ್ ಅವರಿಗೆ ಭಾರತದೊಂದಿಗೆ ಆಳವಾದ ಸಂಬಂಧವಿದೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸುಮಾರು ಒಂದು ದಶಕದ ಆಡಳಿತ ನಂತರ ಸೋಮವಾರ (ಜ.6) ರಾಜೀನಾಮೆ ನೀಡಿದರು. ಇದರಿಂದಾಗಿ ರಾಜಕೀಯ ವಲಯದಲ್ಲಿ ಸಂಚಲನ ಜೋರಾಗಿದೆ. ಅವರ ಉತ್ತರಾಧಿಕಾರಿ ಬಗ್ಗೆ ಚರ್ಚೆ ಶುರುವಾಗಿದೆ.
ಕೆನಡಾದ ಮುಂದಿನ ಪ್ರಧಾನಿ ರೇಸ್ ನಲ್ಲಿ ಅನಿತಾ ಆನಂದ್, ಕ್ರಿಸ್ಟಿನಾ ಫ್ರೀಲ್ಯಾಂಡ್ ಮತ್ತು ಮಾರ್ಕ್ ಕೆರ್ನಿ ಅವರಂತಹ ಪ್ರಮುಖ ಹೆಸರುಗಳು ಹೊರಹೊಮ್ಮುತ್ತಿವೆ. ಇವರಲ್ಲಿ ಭಾರತೀಯ ಮೂಲದ ನಾಯಕಿ ಅನಿತಾ ಆನಂದ್ ಅವರ ಪರಿಣಾಮಕಾರಿ ಆಡಳಿತ ಮತ್ತು ಸಾರ್ವಜನಿಕ ಸೇವೆಯ ಉತ್ತಮ ದಾಖಲೆಯಿಂದಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಹಲವಾರು ಖಾತೆ ನಿರ್ವಹಣೆ
2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿದ್ದಾರೆ.
ಭಾರತದಿಂದ ಕೆನಾಡಾಗೆ ವಲಸೆ
ಅನಿತಾ ಆನಂದ್ ರವರ ತಂದೆ ಎಸ್.ವಿ.ಆನಂದ್ ತಮಿಳುನಾಡಿನವರು, ತಾಯಿ ಸರೋಜ್ ಡಿ ರಾಮ್ ಪಂಜಾಬಿನವರು. ಇಬ್ಬರು ವೈದ್ಯರಾಗಿದ್ದರು. 1960ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಗೆ ವಲಸೆ ಬಂದಿದ್ದರು. ವೈದ್ಯ ದಂಪತಿಯ ಪುತ್ರಿಯಾಗಿ 1967ರ ಮೇ 20ರಂದು ಜನಿಸಿದ ಅನಿತಾ, ವಿದ್ಯಾರ್ಥಿ ಜೀವನದಿಂದಲೂ ತಮ್ಮ ಪೋಷಕರಿಂದ ಮೌಲ್ಯಗಳನ್ನು ರೂಡಿಸಿಕೊಂಡಿದ್ದರು ಮತ್ತು ವೃತ್ತಿಸಂಹಿತೆಯನ್ನು ಅಳವಡಿಸಿಕೊಂಡಿದ್ದರು.
ಅನಿತಾರ ವಿದ್ಯಾಭ್ಯಾಸ
57 ವರ್ಷದ ಅನಿತಾ ಆನಂದ್ ಪ್ರಸ್ತುತ ಕೆನಡಾ ದೇಶದ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶೈಕ್ಷಣಿಕ ಮತ್ತು ರಾಜಕೀಯ ಹಿನ್ನೆಲೆಯಿಂದಾಗಿ, ಅವರು ಪ್ರಮುಖ ರಾಜಕೀಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅನಿತಾ ಆನಂದ್ ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಜ್ಯೂರಿಸ್ ಪ್ರೂಡೆನ್ಸ್, ಡಾಲ್ ಹೌಸಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಲಾಸ್ ಅನ್ನು ಹೊಂದಿದ್ದಾರೆ.
ಹೆಚ್ಚುವರಿಯಾಗಿ, ಅವರು ಯೇಲ್, ಕ್ವೀನ್ಸ್ ವಿಶ್ವವಿದ್ಯಾಲಯ ಮತ್ತು ವೆಸ್ಟರ್ಸ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿಸಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದರು.
ಸ್ಕೋಟಿಯಾದಿಂದ ಒಂಟಾರಿಯೊಗೆ ಸ್ಥಳಾಂತರ
ಅನಿತಾ ಅವರು ಓಕ್ ವಿಲ್ಲೆಯ ಸಂಸದೆಯಾಗಿದ್ದರು. ನೋವಾ ಸ್ಕೋಟಿಯಾದಲ್ಲಿ ಜನಿಸಿದ್ದ ಅನಿತಾ ಆನಂದ್, 1985ರಲ್ಲಿ ಒಂಟಾರಿಯೊಗೆ ಸ್ಥಳಾಂತರಗೊಂಡಿದ್ದರು. ಅನಿತಾ ಮತ್ತು ಪತಿ ಜಾನ್ ಅವರೊಂದಿಗೆ ನಾಲ್ವರು ಮಕ್ಕಳನ್ನು ಬೆಳೆಸಿದರು.
ವೃದ್ದಿಸುತ್ತಾ ಎರಡು ದೇಶಗಳ ಸಂಬಂಧ
ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮೂಲದ ಜನರಿದ್ದಾರೆ. ಈ ಕಾರಣಕ್ಕಾಗಿ, ಭಾರತೀಯ ಮೂಲದ ವ್ಯಕ್ತಿ ಪ್ರಧಾನಿಯಾಗುವುದು ಭಾರತಕ್ಕೆ ಒಳ್ಳೆಯ ಸಂಕೇತಗಳನ್ನು ನೀಡಬಹುದು. ಈ ಹಿಂದೆ, ಟ್ರುಡೊ ಅವರ ಆಳ್ವಿಕೆಯಲ್ಲಿ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಭಾರತದ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು, ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟವು.
ಈಗ ಭಾರತ ಮೂಲದವರೇ ಆದ ಅನಿತಾ ಆನಂದ್ ರವರು ಕೆನಡಾ ದೇಶದ ಪ್ರಧಾನಿಯಾದರೆ ಭಾರತ ಮತ್ತು ಕೆನಡಾ ದೇಶಗಳ ಸಂಬಂಧ ಇನ್ನಷ್ಟು ವೃದ್ದಿಯಾಗಲಿದೆ.