Monday, August 15, 2022

ಬೆಳ್ತಂಗಡಿಯಲ್ಲಿ ಶಾಸಕರ ವಿರುದ್ಧ ಯುವ ಕಾಂಗ್ರೆಸ್‌ನಿಂದ ‘ಚೀಲ ಚಳುವಳಿ 40%’

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಚೀಲದಲ್ಲಿ ಹಣ ಶೇಖರಣೆ ಮಾಡಿ ಹಂಚುತ್ತಿದ್ದಾರೆ ಎಂಬ ಗಂಭೀರ ಆರೋಪ ಮತ್ತು 40% ಕಮಿಷನ್ ದಂಧೆ ವಿರುದ್ಧ ‘ವಿಭಿನ್ನ ಚೀಲ ಚಳವಳಿ’ ಯುವ ಕಾಂಗ್ರೆಸ್ ಹಮ್ಮಿಕೊಂಡಿದೆ.


“ಬೆಳ್ತಂಗಡಿ ನಗರದಾದ್ಯಂತ ಶಾಸಕರು ತಾಲೂಕಿನಲ್ಲಿ ನಡೆಸುತ್ತಿರುವ ಭ್ರಷ್ಟಾಚಾರವನ್ನು ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪಾಸ್ಟಿಕ್ ಚೀಲದ ಮೇಲೆ “ಚೀಲ ಚಳುವಳಿ 40% ಬೆಳ್ತಂಗಡಿ” ಎಂದು ಬರೆದು ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿತ್ತು.

ಇದನ್ನು ಗಮನಿಸಿದ ಶಾಸಕರ ಹಿಂಬಾಲಕರು ಶಾಸಕರಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಪ್ರತಿಭಟನೆಯ ಭಾಗವಾಗಿ ಅಳವಡಿಸಲಾಗಿದ್ದ ಚೀಲವನ್ನು ಬಿಜೆಪಿ ನೇತೃತ್ವದ ಪಟ್ಟಣ ಪಂಚಾಯತ್ ಆಡಳಿತ ಕಿತ್ತೆಸೆಯುವ ಮೂಲಕ ಭೃಷ್ಟಾಚಾರ ವಿರುದ್ಧದ ಹೋರಾಟವನ್ನು ಹತ್ತಿಕ್ಕಿದೆ ಎಂದು ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅನಿಲ್ ಪೈ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿ ಜಿಲ್ಲಾಡಳಿತದಿಂದ ‘ಆಜಾದಿ ಕಾ ಅಮೃತ್‌ ಮಹೋತ್ಸವ’

ಉಡುಪಿ: ಉಡುಪಿ ಜಿಲ್ಲಾಡಳಿತದ ವತಿಯಿಂದ ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭ ಇಂದು ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ...

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...

ಬಿ.ಸಿ ರೋಡಿನ ಬಾನೆತ್ತರದಲ್ಲಿ ಹಾರಾಡಿದ ತ್ರಿವರ್ಣ ಧ್ವಜ

ಬಂಟ್ವಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳದ ಬಿ.ಸಿ ರೋಡಿನ ವಿಜಯಲಕ್ಮೀ ಗ್ರೂಪ್ ವತಿಯಿಂದ ಬಾನೆತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು.20×30 ಅಳತೆಯ ರಾಷ್ಟ್ರ ಧ್ವಜವನ್ನು ಕ್ರೇನ್ ಮೂಲಕ ಸುಮಾರು 174 ಅಡಿ ಎತ್ತರದಲ್ಲಿ...