Home ಪ್ರಮುಖ ಸುದ್ದಿ ಫೊಟೊ ತೆಗೆದ ವಿಚಾರ :ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವಕನ ಮೇಲೆ ಭದ್ರತಾ ದಳದಿಂದ ಹಲ್ಲೆ ಆರೋಪ..!

ಫೊಟೊ ತೆಗೆದ ವಿಚಾರ :ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವಕನ ಮೇಲೆ ಭದ್ರತಾ ದಳದಿಂದ ಹಲ್ಲೆ ಆರೋಪ..!

ಗಲ್ಫ್ ಗೆ ಪ್ರಯಾಣಿಸುತ್ತಿದ್ದ ಅಣ್ಣನ ಫೋಟೋ ತೆಗೆದ ವಿಚಾರ :ಯುವಕನ ಮೇಲೆ ಭದ್ರತಾ ದಳದಿಂದ ಹಲ್ಲೆ ಆರೋಪ..!

ಮಂಗಳೂರು : ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಮತ್ತೊಮ್ಮೆ ವಿವಾದಕ್ಕೆ ಗ್ರಾಸವಾಗಿದೆ.

ಗಲ್ಫ್ ಗೆ ಪ್ರಯಾಣಿಸುತ್ತಿದ್ದ ಅಣ್ಣನ ಫೋಟೋ ತೆಗೆದಿದ್ದಾನೆ ಅನ್ನೋ ಕಾರಣಕ್ಕೆ ತಾಯಿ ಹಾಗೂ ಸಹೋದರಿಯರ ಮುಂದೆಯೇ ಯುವಕನೊಬ್ಬನಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ 10 ಗಂಟೆಗೆ ವೇಳೆಗೆ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಹಲ್ಲೆ ನಡೆಸಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡತೊಡಗಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಅನಸ್ ಎಂಬ ಯುವಕನೇ ಭದ್ರತಾ ಸಿಬ್ಬಂದಿಗಳಿಂದ ಹಲ್ಲೆಗೊಳಗಾದವನು.

ಆತ ತನ್ನ ಅಣ್ಣನಾದ ಹಾರಿಸ್ ದುಬೈ ಗೆ ತೆರಳುವ ಸಂದರ್ಭ ವಿಮಾನ ನಿಲ್ದಾಣದ ಆವರಣದಲ್ಲಿ ಫೋಟೋ ಕ್ಲಿಕ್ಕಿಸಿದ್ದಾನೆ.

ಇದನ್ನು ಕಂಡ ಏರ್ ಪೋರ್ಟ್ ಭದ್ರತಾ ಸಿಬ್ಬಂದಿಗಳು ಏಕಾಏಕಿಯಾಗಿ ಯದ್ವಾತದ್ವಾ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

ಅಲ್ಲದೇ ತಾಯಿ ಹಾಗೂ ಸಹೋದರಿಯರು ಗೋಗರೆದರೂ ಹಲ್ಲೆ ನಡೆಸಿ ಬಳಿಕ ಬಜ್ಪೆ ಠಾಣಾ ಪೊಲಿಸರಿಗೆ ಹಸ್ತಾಂತರಿಸಿದ್ದಾಗಿಯೂ ಆರೋಪ ಕೇಳಿ ಬಂದಿದೆ..

ವಿಡಿಯೋಗಾಗಿ..

- Advertisment -

RECENT NEWS

 ಪಿ.ಯು.ಸಿ ಪರೀಕ್ಷೆ – ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಿಂಧೂ ರೂಪೇಶ್

 ಪಿ.ಯು.ಸಿ ಪರೀಕ್ಷೆ - ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಸಿಂಧೂ ರೂಪೇಶ್ ಮಂಗಳೂರು : ಮಾರ್ಚ್ 4 ರಿಂದ 23 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಪಿ.ಯು.ಸಿ. ಪರೀಕ್ಷೆಗಳು ನಡೆಯಲಿದ್ದು,  ಪರೀಕ್ಷೆಯನ್ನು...

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!

ಮಂಗಳೂರಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಚಿನ್ನ ಮತ್ತು US ಡಾಲರ್‌ ಬೇಟೆಯಾಡಿದ ಕಸ್ಟಮ್ಸ್‌ ಅಧಿಕಾರಿಗಳು..!   ಮಂಗಳೂರು :  ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಭೇಧಿಸಿದ್ದಾರೆ. ಗುದದ್ವಾರದಲ್ಲಿ ಚಿನ್ನವನ್ನು ಪೇಸ್ಟ್‌...

ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ನದಿಗೆ ಬಿದ್ದು 25 ಮಂದಿ ಸಾವು

ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ನದಿಗೆ ಬಿದ್ದು 25 ಮಂದಿ ಸಾವು ರಾಜಸ್ಥಾನ: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಗಾಯಗೊಂಡಿರುವ...

ವೈಭವದ ರಥೋತ್ಸವಕ್ಕೆ ಸಾಕ್ಷಿಯಾಯಿತು ಪಲಿಮಾರು ಶ್ರೀಮಹಾಲಿಂಗೇಶ್ವರ ದೇವಸ್ಥಾನ

ವೈಭವದ ರಥೋತ್ಸವಕ್ಕೆ ಸಾಕ್ಷಿಯಾಯಿತು ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡುಬಿದ್ರೆ: ವರ್ಷಾವಧಿ ರಥೋತ್ಸವ ಪ್ರಯುಕ್ತ ಪಡುಬಿದ್ರಿಯ ಪಲಿಮಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಸಂಭ್ರಮದ ರಥೋತ್ಸವ ನಡಯಿತು. ಊರ-ಪರವೂರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನಡೆದ...