Connect with us

LATEST NEWS

ಅಜ್ಜಿಗಾಗಿ 12 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮೊಮ್ಮಗ! Mclaren 675 LT

Published

on

ಕೇರಳ: ಮೊಮ್ಮಗ ತನ್ನ ಅಜ್ಜಿಯ ಮಾತನ್ನು ಕೇಳಿ ಮೆಕ್ಲಾರೆನ್ 765LT ( Mclaren 675 LT ) ಖರೀದಿಸಿದನು. ವೀಡಿಯೊದಲ್ಲಿ, ಕುಟುಂಬ ಮತ್ತು ಸ್ನೇಹಿತರು ಐಷಾರಾಮಿ ಸೂಪರ್‌ಕಾರ್ ಅನ್ನು ಖರೀದಿಸಿರುವ ದೃಶ್ಯಗಳು ವೈರಲ್ ಆಗಿವೆ.

ಅಜ್ಜಿಯೊಬ್ಬರು ತಮ್ಮ ಮೊಮ್ಮಗನ ಮುಂದೆ ಮೆಕ್ಲಾರೆನ್ 765LT ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

ಮೊಮ್ಮಗ ಅದನ್ನು ನಿಜ ಮಾಡಿದ್ದಾನೆ. ಮೆಕ್ಲಾರೆನ್ 765LT ರೂ. 12 ಕೋಟಿಗೂ ಅಧಿಕ ಮೌಲ್ಯದ ಸೂಪರ್ ಕಾರನ್ನು ಖರೀದಿಸಿ ಅಜ್ಜಿಗೆ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಂತರ್ಜಾಲದಲ್ಲಿ ಲಕ್ಷಾಂತರ ಜನರ ಮನ ಗೆದ್ದಿದೆ.

LATEST NEWS

ರೀಲ್ಸ್ ಪ್ರಿಯರಿಗೆ ಶಾ*ಕ್ ನೀಡಿದ ರೈಲ್ವೇ ಇಲಾಖೆಯ ಮಹತ್ವದ ನಿರ್ಧಾರ!

Published

on

ಮಂಗಳೂರು/ನವದೆಹಲಿ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಟ್ರೆಂಡಿಂಗ್ ನಲ್ಲಿರೋದು ಮುಖ್ಯ. ಅದಕ್ಕಾಗಿ ಅನೇಕ ಸರ್ಕಸ್ ಮಾಡಿ ರೀಲ್ಸ್ ಗಳನ್ನು ಮಾಡಿ, ಆ ಮೂಲಕ ಲೈಕ್ಸ್, ವ್ಯೂವ್ಸ್ ಗಿಟ್ಟಿಸಿಕೊಂಡು ಫೇಮಸ್ ಆಗೋ  ಬಯಕೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳ, ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ , ಹೀಗೆ ಎಲ್ಲೆಂದರಲ್ಲಿ ರೀಲ್ಸ್ ಹುಚ್ಚಾಟ ಜಾಸ್ತಿಯಾಗಿದೆ. ಇದಕ್ಕೆ ಬ್ರೇಕ್ ಹಾಕಲು ಭಾರತೀಯ ರೈಲ್ವೇ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದೀಗ ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೇ ಇಲಾಖೆ ಮುಂದಾಗಿದೆ. ಈಗಾಗಲೇ ಎಲ್ಲಾ ವಲಯಗಳಲ್ಲಿಯೂ ಸೂಚನೆ ನೀಡಿದೆ. ಇಲಾಖೆಯ ನಿಯಮದನುಸಾರ ಇನ್ಮುಂದೆ ಯಾರಾದರೂ ರೈಲುಗಳಲ್ಲಿ, ಸ್ಟೇಷನ್ ಗಳಲ್ಲಿ ರೀಲ್ಸ್ ಮಾಡಿ, ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಅಥವಾ ರೈಲ್ವೇ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ದ ಪ್ರಕರಣ (ಎಫ್ಐಆರ್) ದಾಖಲಿಸಲು ರೈಲ್ವೇ ಮಂಡಳಿ ಆದೇಶಿಸಿದೆ.

ಕೇಸ್ ಬೀಳುತ್ತೆ ಹುಷಾರ್!

ರೈಲ್ವೇ ಕೋಚ್ ಗಳು, ರೈಲು ನಿಲ್ದಾಣಗಳು ಮತ್ತು ರೈಲ್ವೇ ಆವರಣದಲ್ಲಿ ಇಂತಹ ರೀಲ್ಸ್ ಗಳನ್ನು ಮಾಡುವವರ ವಿರುದ್ದ ಕಠಿಣ ಕ್ರಮ ಕ್ಯಗೊಳ್ಳಲಾಗುವುದು ಎಂದು ತಿಳಿಸಿದೆ. ಅದೇ ರೀತಿ ರೈಲುಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ರೀಲ್ಸ್ ಮಾಡುವುದು ಅಥವಾ ಫೋಟೋ ತೆಗೆಯುವುದು ಕಂಡುಬಂದರೆ ರೈಲ್ವೇ ರಕ್ಷಣಾ ಪಡೆ (RPF), ಸರ್ಕಾರಿ ರೈಲ್ವೇ ಪೋಲಿಸ್ (GRP) ಪ್ರಕರಣ ದಾಖಲಿಸಿಕೊಳ್ಳುತ್ತದೆ.

ಇದನ್ನೂ ಓದಿ : IPL 2025 : ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗುತ್ತಾರಾ ಕರ್ನಾಟಕದ ಆಟಗಾರರು!

ಹಾಗಾದರೆ ನೀವು ಯೋಚನೆ ಮಾಡಬಹುದು, ಅಧಿಕಾರಿಗಳು ನೋಡದ ಹಾಗೆ ಗೌಪ್ಯವಾಗಿ ರೀಲ್ಸ್ ಮಾಡಬಹುದಲ್ವಾ ಅಂತ. ಹಾಗೊಂದು ವೇಳೆ ಮಾಡಿದ್ರೋ ತಗಲಾಕ್ಕೊಂತೀರಿ. ಅದು ಹೇಗೆ ಅಂದ್ರೆ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಬಳಿಕ ಅಧಿಕಾರಿಗಳು ಪರೀಶಿಲನೆ ನಡೆಸಿ ಸಂಬಂಧಪಟ್ಟವರನ್ನು ಹುಡುಕಿ ಬಂಧಿಸಲಿದ್ದಾರೆ. ಈ ಮೂಲಕ ರೈಲು ನಿಲ್ದಾಣ, ರೈಲ್ವೇ ಕೋಚ್ ಹಾಗೂ ರೈಲ್ವೇ ಆವರಣಗಳಲ್ಲಿ  ರೀಲ್ಸ್ ಮಾಡುವವರಿಗೆ ಭಾರತೀಯ ರೈಲ್ವೇ ಇಲಾಖೆ ರೀಲ್ಸ್ ಹಾಗೂ ಫೋಟೋ ತೆಗೆಯದಂತೆ  ಎಚ್ಚರಿಕೆ ಕೊಟ್ಟಿದೆ.

Continue Reading

LATEST NEWS

ಇಸ್ರೇಲ್‌ ವಿಸಾ ಹೆಸರಿನಲ್ಲಿ ಯುವಕರಿಗೆ ವಂಚನೆ. ಕೇರಳದ ಏಜನ್ಸಿ ವಿರುದ್ದ ಯುವಕರ ದೂರು

Published

on

ಇಸ್ರೇಲ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳದ ಕೆಲಸದ ಆಸೆಯಲ್ಲಿ ವಿಸಾ ಪಡೆಯಲು ಲಕ್ಷಾಂತರ ರೂಪಾಯಿ ಹಣ ನೀಡಿ ಯುವಕರು ಮೋಸ ಹೋಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನೂರ ಮೂವತ್ತು ಯುವಕರು ಇದೀಗ ಹಣ ಕಳೆದುಕೊಂಡಿದ್ದು ಮಾತ್ರವಲ್ಲದೇ ತಮ್ಮ ಪಾಸ್‌ ಪೋರ್ಟ್ ಹಿಂದಕ್ಕೆ ಸಿಗದೆ ಪರದಾಡುತ್ತಿದ್ದಾರೆ.

ಇಸ್ರೇಲ್‌ ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜನರು ಅಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಭಾರತೀಯರು ಹೆಚ್ಚಿನ ಸಂಬಳ ಸಿಗುತ್ತದೆ ಎಂಬ ಕಾರಣಕ್ಕೆ ಇಸ್ರೇಲ್‌ನಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೇರಳದ ಕೊಚ್ಚಿ ಮೂಲದ ಸ್ಪೇಸ್ ಇಂಟರ್ನ್ಯಾಷನಲ್ ಎಂಬ ಏಜೆನ್ಸಿಯೊಂದು ಯುವಕರಿಗೆ ಪಂಗನಾಮ ಹಾಕಿದೆ.

ಈ ಕಂಪೆನಿ ಮೂಲಕ ಇಸ್ರೇಲ್ ವಿಸಾ ಪಡೆಯಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಮುಂಗಡ ಹಣ ನೀಡಿ ಕೈ ಸುಟ್ಟುಕೊಂಡಿದ್ದಾರೆ. ತಮ್ಮ ಪಾಸ್‌ ಪೋರ್ಟ್‌ ಕೂಡಾ ನೀಡಿದ್ದು, ಇದೀಗ ಪಾಸ್‌ ಪೋರ್ಟ್ ನೀಡಬೇಕಾದರೆ 60 ಸಾವಿರ ಪಾವತಿಸುವಂತೆ ಡಿಮ್ಯಾಂಡ್ ಇಟ್ಟಿದೆ. ಇಸ್ರೇಲ್‌ನಲ್ಲಿ ನೌಕರಿ ಕನಸು ಕಂಡಿದ್ದ ಯುವಕರಿಗೆ ಇಸ್ರೇಲ್‌ನಲ್ಲಿನ ಯುವಕನೊಬ್ಬ ಈ ಏಜೆನ್ಸಿಯ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದ. ಏಜೆನ್ಸಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಕೋಹೆನ್ ಗ್ರೂಪ್ ಎಂಬ ಕಂಪೆನಿಯೇ ಇಸ್ರೇಲ್‌ನಲ್ಲಿ ಇಲ್ಲ ಎಂದು ಗೊತ್ತಾಗಿದೆ.

ಇಸ್ರೇಲ್‌ನಲ್ಲಿ ವಿಳಾಸ ಹುಡುಕಾಡಿದ ಯುವಕ ಆ ವಿಳಾಸದಲ್ಲಿ ಮನೆಯೊಂದು ಇರುವುದನ್ನು ಗುರುತಿಸಿದ್ದು, ಈ ವಿಚಾರವನ್ನು ಭಾರತದಲ್ಲಿನ ಸ್ನೇಹಿತರಿಗೆ ತಿಳಿಸಿದ್ದಾನೆ. ಹೀಗಾಗಿ ವಂಚನೆಯ ಬಗ್ಗೆ ಅರಿವಾದ 130 ಯುವಕರು ಒಟ್ಟಾಗಿ ತಾವು ನೀಡಿದ ಹಣ ಹಾಗೂ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಸ್ಪೇಸ್ ಇಂಟರ್ನ್ಯಾಷನಲ್ ಸಂಸ್ಥೆಯ ಜಸ್ಟಿಸ್ ಜೋಸ್ ಎಂಬಾತನಿಗೆ ಒತ್ತಡ ಹಾಕಿದ್ದಾರೆ. ಆದರೆ ಆತ ಪಾಸ್‌ಪೋರ್ಟ್‌ ವಾಪಾಸ್ ನೀಡಬೇಕಾದ್ರೆ 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.

ಈ ಹಿನ್ನಲೆಯಲ್ಲಿ ಮೋಸ ಹೋದ ಯುವಕನೊಬ್ಬ ಉಡುಪಿಯ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ದೂರು ನೀಡಿ ನ್ಯಾಯ ಒದಗಿಸುವಂತೆ ಕೋರಿದ್ದಾನೆ. ಕಾನೂನಿನ ತೊಡಕಿನ ಕಾರಣದಿಂದಾಗಿ ಸ್ಥಳೀಯವಾಗಿ ದೂರು ಸ್ವೀಕರಿಸಲು ಅಸಾಧ್ಯ ಎಂಬ ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದೀಗ ಶಿರ್ವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

Continue Reading

LATEST NEWS

ಮಣಿಪುರದಲ್ಲಿ ಭುಗಿಲೆದ್ದ ಹಿಂ*ಸಾಚಾರ; ಸಿಎಂ ಮನೆಗೆ ನುಗ್ಗಿದ ಆಕ್ರೋಶಿತರ ಗುಂಪು

Published

on

ಮಂಗಳೂರು/ಮಣಿಪುರ: ಮಣಿಪುರದಲ್ಲಿ ಮತ್ತೆ ಹಿಂ*ಸಾಚಾರ ಭುಗಿಲೆದ್ದಿದೆ. ಜಿರಿಬಾಮ್ ಜಿಲ್ಲೆಯಿಂದ ನಾಪತ್ತೆಯಾದ ಆರು ಜನರ ಪೈಕಿ ಮೂವರ ಶ*ವಗಳು ಶುಕ್ರವಾರ(ನ.15) ರಾತ್ರಿ ಮಣಿಪುರ-ಅಸ್ಸಾಂ ಗಡಿಯಲ್ಲಿರುವ ಜಿರಿ ಮತ್ತು ಬರಕ್ ನದಿಗಳ ಸಂಗಮದ ಬಳಿ ಪತ್ತೆಯಾಗಿವೆ. ಈ ಕೃ*ತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು,  ಇದೀಗ ಪ್ರತಿಭಟನೆ ಹಿಂಸಾಚಾರದತ್ತ ತಿರುಗಿದೆ.

ಆಕ್ರೋಶಿತರ ಗುಂಪು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಖಾಸಗಿ ನಿವಾಸದ ಮೇಲೆ ದಾ*ಳಿ ನಡೆಸಿದೆ. ಈ ವೇಳೆ ಸಿಎಂ ಮನೆಯಲ್ಲಿ ಇರಲಿಲ್ಲ. ಅವರ ಕಚೇರಿಯಲ್ಲಿದ್ದದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸಿಎಂ ಬಿರೇನ್ ಸಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾನ್‌ಫೆಲೆ ಸಂಕೇತೆಲ್‌ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್, ಗ್ರಾಹಕರ ವ್ಯವಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಎಲ್. ಸುಸಿಂದ್ರೋ ಸಿಂಗ್ ಮನೆ ಮೇಲೂ ದಾ*ಳಿ ನಡೆಸಿದೆ. ಅಲ್ಲದೇ, ಆರು ಶಾಸಕರ ಮನೆ ಮೇಲೆ ದಾ*ಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ನಡೆದಿದ್ದು, ಪ್ರತಿಭಟನಾಕಾರರನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ.

ಇದನ್ನೂ ಓದಿ : ಊಟ ಮಾಡುವಾಗ ಅನ್ನದಲ್ಲಿ ಪದೇ ಪದೇ ಕೂದಲು ಸಿಗುತ್ತಿದೆಯೇ? ಇದು ಶುಭನಾ? ಅಶುಭನಾ?

ಕರ್ಫ್ಯೂ ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ

ಹಿಂ*ಸಾಚಾರ ಕ್ಷಣದಿಂದ ಕ್ಷಣಕ್ಕೆ ಭುಗಿಲೇಳುತ್ತಿದ್ದಂತೆ ಪರಿಸ್ಥಿತಿಯ ಗಂ*ಭೀರತೆ ಅರಿತ ರಾಜ್ಯ ಸರ್ಕಾರ ಇಂಫಾಲ್ ನಲ್ಲಿ ಕರ್ಫ್ಯೂ ವಿಧಿಸಿದೆ.  ಪ್ರತಿಭಟನೆಯು ಹಿಂ*ಸಾಸ್ವರೂಪ ಪಡೆದ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

Continue Reading

LATEST NEWS

Trending

Exit mobile version