Monday, January 24, 2022

ವಿವಾಹ ನಿಶ್ಚಿತಾರ್ಥಗೊಂಡ ಯುವತಿ ನೇಣಿಗೆ ಶರಣು..!

ಪುತ್ತೂರು : ನೆಟ್ಟಣಿಗೆ ಗ್ರಾಮದ ಕುಳದಪಾರೆ ಸಮೀಪದ ನಿದಿಯಡ್ಕದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಬ್ಬಣ್ಣ ನಾಯ್ಕ ಅವರ ಪುತ್ರಿ ಪ್ರಿಯಾ(25 )ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ತಾಯಿ ಬೀಡಿ ಬ್ರೆಂಚ್‌ ಗೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಲಭಿಸಿದೆ.

ಪ್ರಿಯಾ ಅವರಿಗೆ ಈ ಹಿಂದೆಯಷ್ಟೆ ವಿವಾಹ ನಿಶ್ಚಿತಾರ್ಥವಾಗಿದ್ದು, ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ವಿವಾಹವು ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಇವರು ಬಡಗನ್ನೂರು ಸರಕಾರಿ ಹಿರಿಯ ಶಾಲೆಯಲ್ಲಿ  ಕೆಲಕಾಲ ಗೌರವ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ನಂತರ ಈಶ್ವರಮಂಗಲ ಜೆರಾಕ್ಸ್‌ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ.

Hot Topics

ನಾಪತ್ತೆಯಾಗಿದ್ದ ಬಸ್ ಮಾಲಕ ಶವವಾಗಿ ಪತ್ತೆ: ಸಾಲದಿಂದ ಬೇಸತ್ತು ಆತ್ಮಹತ್ಯೆ ಶಂಕೆ

ಶಿವಮೊಗ್ಗ: ಶನಿವಾರದಂದು ನಾಪತ್ತೆಯಾಗಿದ್ದ ಸಾಗರದ ಪ್ರಕಾಶ್ ಟ್ರಾವೆಲ್ಸ್​ನ ಮಾಲೀಕ ಇಂದು ಶವವಾಗಿ ಪತ್ತೆಯಾಗಿದ್ದಾರೆ.ಹೊಸನಗರ ತಾಲೂಕಿನ ಪಟಗುಪ್ಪೆ ಸೇತುವೆ ಬಳಿ ಶನಿವಾರದಂದು ಅವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿತ್ತು. ಅನುಮಾನಗೊಂಡು ಪಟಗುಪ್ಪ ಸೇತುವೆ ಬಳಿ...

ಕವಿ ಮುದ್ದಣ ಜನ್ಮದಿನಾಚರಣೆ ಪ್ರಯುಕ್ತ 150 ರೂ. ನಾಣ್ಯ ಬಿಡುಗಡೆಗೊಳಿಸಿದ ಸಂಸದ ನಳಿನ್‌

ಮಂಗಳೂರು: ಹೊಸಗನ್ನಡದ ಮುಂಗೋಳಿ ಎಂದು ಪ್ರಖ್ಯಾತರಾಗಿದ್ದ ಕವಿ ಮುದ್ದಣ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ 150 ರೂ. ಹೊಸ ನಾಣ್ಯವನ್ನು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅನಾವರಣ.ಬಳಿಕ...

ಕೋಟ ಲಾಠಿ ಚಾರ್ಜ್ ಪ್ರಕರಣ: ಹುಸಿಯಾದ ಗೃಹಸಚಿವರ ಭರವಸೆ- ಮತ್ತೆ ಪ್ರತಿಭಟನೆಗೆ ನಿರ್ಧಾರ

ಕೋಟ: ಇಲ್ಲಿನ ಕೋಟತಟ್ಟುವಿನ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್‌ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕೆಲವರ ಮೇಲಿನ ಪ್ರಕರಣ ಹಿಂಪಡೆಯುವುದಾಗಿ ಕಾಲೊನಿಗೆ ಭೇಟಿ ನೀಡಿದ್ದ ಗೃಹ ಸಚಿವರ ಭರವಸೆ ಅವರ ಹಿಂದೆಯೇ...