ಕೇರಳ : ಮಹಿಳೆ ಶವವೊಂದು ಕೊಲೆಯಾದ ಸ್ಥಿತಿಯಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಪಾತಿಪಾಲಂ ಬಳಿ ಸಿಕ್ಕಿದೆ.
ಕನ್ನಚಂಕಂಡಿಯ ವಿನೋದ್ ಎಂಬವರ ಪುತ್ರಿ ವಿಷ್ಣು ಪ್ರಿಯಾ (22) ತನ್ನ ಮನೆಯೊಳಗೆ ಕೊಲೆಯಾದ ದುರ್ದೈವಿಯಾಗಿದ್ದಾಳೆ.
ವಿಷ್ಣುಪ್ರಿಯಾ ಕಳೆದ ನಾಲ್ಕು ತಿಂಗಳಿನಿಂದ ಪಾನೂರ್ ನ್ಯೂಕ್ಲಿಯಸ್ ಆಸ್ಪತ್ರೆಯಲ್ಲಿ ಫಾರ್ಮಸಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಅವರ ಕೈಗೆ ಗಾಯವಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ.
ಆ ಸಮಯದಲ್ಲಿ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಳು. ಅವರ ಗಂಟಲನ್ನು ಸೀಳಿ ಮತ್ತು ಕೈಗಳನ್ನು ಸೀಳಿದ ರೀತಿಯಲ್ಲಿ ಶವ ಪತ್ತೆಯಾಗಿದೆ. ಪಾನೂರು ಪೊಲೀಸರು ತನಿಖೆ ಆರಂಭಿಸಿದ್ದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.