ಉಡುಪಿ: ಯುವಕನೋರ್ವ ಓರ್ವ ಹುಡುಗಿಯ ಜೊತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು ದೇವರ ಮೂರ್ತಿಯನ್ನು ಕೂಡಾ ಅಪವಿತ್ರಗೊಳಿಸಿದ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಒಡೆದು, ಒಳ ನುಗ್ಗಿದ ಯುವಕ ಕಳ್ಳತನಗೈಯ್ಯಲು ಏನೂ ಸಿಗದೇ ಇದ್ದುದರಿಂದ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ.
ಅಷ್ಟೇ ಅಲ್ಲದೆ ವರಾಹ ವಿಷ್ಣು ನಾರಸಿಂಹ ದೇವರ ಮೂರ್ತಿ ಮುಟ್ಟಿ ಅಪವಿತ್ರಗೊಳಿಸಿದ್ದಾನೆ.
ಕಳ್ಳನ ಮುಖ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.