Friday, March 31, 2023

ಕಾರ್ಕಳದಲ್ಲಿ ವಿಷ ಸೇವಿಸಿ ಯುವಕ ಜೀವಾಂತ್ಯ.!

ವಿಷ ಸೇವಿಸಿದ್ದ ಯುವಕ ಚಿಕಿತ್ಸಗೆ ಸ್ಪಂದಿಸದೇ ಇಹ ಲೋಕ ತ್ಯಜಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದೆ.

ಕಾರ್ಕಳ : ವಿಷ ಸೇವಿಸಿದ್ದ ಯುವಕ ಚಿಕಿತ್ಸಗೆ ಸ್ಪಂದಿಸದೇ ಇಹ ಲೋಕ ತ್ಯಜಿಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದೆ.

ಹಿರಿಯಂಗಡಿಯ ಪ್ರಜ್ವಲ್‌ ದೇವಾಡಿಗ(18) ಎಂಬ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಯುವಕನಾಗಿದ್ದಾನೆ.

ಮಾ. 12ರಂದು ರಾತ್ರಿ ಪ್ರಜ್ವಲ್‌ನ ಅಣ್ಣ ಉಜ್ವಲ್‌ ತಂದೆ ತಾಯಿ ಜತೆ ಕಾರ್ಕಳ ಮಾರಿಗುಡಿಯ ಕಾರ್ಯಕ್ರಮಕ್ಕೆ ಹೋಗಿದ್ದರು.

ಮನೆಯಲ್ಲಿ ಒಬ್ಬನೇ ಇದ್ದ ಪ್ರಜ್ವಲ್‌ ವಿಷ ಸೇವಿಸಿದ್ದ. ಪ್ರಜ್ವಲ್‌ನ ಗೆಳೆಯ ಮಲ್ಲಿಕಾರ್ಜುನ ಈ ಕುರಿತು ಕರೆ ಮಾಡಿ ಉಜ್ವಲ್‌ಗೆ ವಿಷಯ ತಿಳಿಸಿದ್ದರು.

ಪ್ರಜ್ವಲ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಪ್ರಜ್ವಲ್‌ ಮಂಗಳವಾರ ಅಸುನೀಗಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics