ತಮಿಳುನಾಡು: ಉಕ್ಕಿ ಹರಿಯುತ್ತಿರುವ ಜಲಪಾತದ ಹತ್ತಿರಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ದಿಂಡಿಗಲ್‌ನ ಪುಲ್ಲವೇಲಿಯಲ್ಲಿ ನಡೆದಿದೆ.
ಪರಮಕುಡಿಯ ಅಜಯ ಪಾಂಡಿಯನ್ ಎಂಬಾತ ಮೃತ ದುರ್ದೈವಿ.
ಈತ ಪುಲ್ಲವೇಲಿ ಜಲಪಾತ ನೋಡಲು ತನ್ನ ಸ್ನೇಹಿತರೊಂದಿಗೆ ತೆರಳಿದ್ದ ವೇಳೆ ಅವರಲ್ಲಿ ವೀಡಿಯೋ ತೆಗೆಯಲು ಹೇಳಿ ಫೋಸ್ ಕೊಟ್ಟಿದ್ದಾನೆ.
ಹೀಗೆ ಫೋಸ್ ಕೊಡುತ್ತಿದ್ದಂತೆ ಕಾಲು ಜಾರಿದ್ದು ನೂರು ಅಡಿ ಆಳಕ್ಕೆ ಬಿದ್ದಿದ್ದಾನೆ.
ಆತ ಉಕ್ಕಿ ಹರಿಯುತ್ತಿದ್ದ ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.